Wednesday 24th, April 2024
canara news

ನನ್ನ ಸೇವಾ ತಂಡದ ಪಾತ್ರ ನನಕ್ಕಿಂತಲೂ ಮಿಗಿಲಾದದ್ದು

Published On : 06 Apr 2020   |  Reported By : Rons Bantwal


ಉಟೋಪಚರ ಸೇವಾಕರ್ತರ ಸಭೆಯಲ್ಲಿ ಬಿ.ಆರ್ ಶೆಟ್ಟಿ ಮುಂಬಯಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಎ.05: ಜಾಗತಿಕವಾಗಿ ತಾಂಡವವಾಡುತ್ತಿರುವ ಕೊರೊನಾ ಮಾರಕರೋಗ ಶೀಘ್ರವಾಗಿ ಶಮನಗೊಳ್ಳಲಿದೆ. ಶ್ರೀದೇವರು ಆದಷ್ಟು ಬೇಗ ಈ ಮಾರಕರೋಗ ಗುಣಮುಖ ಗೊಳಿಸುವ ಆಶಯ ನಮ್ಮಲಿದ್ದು ಅಲ್ಲಿಯ ತನಕ ನಮ್ಮ ಆಹಾರಸೇವೆ ಮುನ್ನಡೆಸಲು ನಿಶ್ಚಯಿಸಿದ್ದೇವೆ. ಮಹಾರಾಷ್ಟ್ರ ಸರಕಾರ, ಶಾಸನ, ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ), ವಿಶೇಷವಾಗಿ ಮುಂಬಯಿ ಪೆÇೀಲಿಸ್ ಆಯುಕ್ತರು ನಮ್ಮನ್ನು ಪೆÇ್ರೀತ್ಸಹಿಸುತ್ತಿದ್ದರೆ, ಶುಚಿತ್ವದೊಂದಿಗೆ ಅಡುಗೆ ತಯಾರಿಸಿ ಕೊಡುವ ಬಾಣಸಿಗರ ಶ್ರಮ ಇಲ್ಲದಿದ್ದರೆ ಈ ಸೇವೆ ಅಸಾಧ್ಯವೇ ಸರಿ. ವಿತರಣಾ ಸೇವೆಯಲ್ಲೂ ತಮ್ಮ ಸ್ವಜೀವದ, ಕುಟುಂಬದ ಹಂಗು ತೊರೆದು ಮಠಗಳ ಸಿಬ್ಬಂದಿಗಳು, ಹೊಟೇಲು ಕಾರ್ಮಿಕರು, ವಾಹನ ಚಾಲಕರ, ವಿತರಕರ ಶ್ರಮ ಅನುಪಮವಾದದು. ಎಲ್ಲಕ್ಕಿಂತಲೂ ನನ್ನ ಸೇವಾ ತಂಡದ ಪಾತ್ರ ನನ್ನಕ್ಕಿಂತ ಮಿಗಿಲಾಗಿದೆ ಎಂದು ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಭಾನುವಾರ ಮಧ್ಯಾಹ್ನ ಉಪನಗರ ಅಂಧೇರಿ ಪಶ್ಚಿಮದ ಇರ್ಲಾ ಇಲ್ಲಿನ ಶ್ರೀ ಅದಮಾರು ಮಠದ ಸಭಾಂಗಣದಲ್ಲಿ ಸೇವಾಕರ್ತರನ್ನುದ್ದೇಶಿಸಿ ಬಿ.ಆರ್ ಶೆಟ್ಟಿ ಮಾತನಾಡಿ ಮುಂಬರುವ ದಿನಗಳಲ್ಲಿ ಯಾರನ್ನೂ ಸಲುಗೆಯಲ್ಲಿ ಕಾಣದೆ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವ ಜೊತೆಗೆ ಕ್ಷಣಕ್ಷನಕ್ಕೂ ಕಡ್ಡಾಯವಾಗಿ ಕರಶುದ್ಧೀಕಾರಕ ದ್ರವ (ಸ್ಯಾನಿಟೈಸರ್) ಹಚ್ಚಿಕೊಳ್ಳುವ ಜೊತೆಗೆ ಮೊಗವಾಡ (ಮಾಸ್ಕ್) ಧರಿಸಿ ಕೊರೋನಾ ಹರಡದಂತೆ ಸ್ವತಃ ಜಾಗೃತರಾಗಿ ಎಚ್ಚರ ವಹಿಸುವಂತೆ ಸೇವಾಕರ್ತರಿಗೆ ಬಿ.ಆರ್ ಶೆಟ್ಟಿ ಸಲಹಿದರು.

ನಾವು ಕಳೆದ ಸುಮಾರು ಎರಡು ವಾರಗಳಿಂದ ರಾಷ್ಟ್ರದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವಿರುದ್ಧ ಹೋರಾಡುತ್ತಿದ್ದು ಈ ನಿಟ್ಟಿನಲ್ಲಿ ಸೇವಾನಿರತ ಮತ್ತು ನಿರಾಶ್ರಿತ ಜನತೆಗೆ ಊಟೋಪಚಾರ, ಆಹಾರ ಪೆÇಟ್ಟಣಗಳ ವಿತರಣಾ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದೇವೆ. ಆರಂಭದಲ್ಲಿ ದಿನಂಪ್ರತಿ ಸುಮಾರು ಎರಡು 5,000 ಆಹಾರ ಪೆÇಟ್ಟಣಗಳÀನ್ನು ಸಿದ್ಧಪಡಿಸುತ್ತಿದ್ದು ಇದೀಗ ಇದನ್ನು 20,000ಕ್ಕೆ ವಿಸ್ತರಿಸಿ ದೈನಂದಿನವಾಗಿ ನಗರದಾದ್ಯಂತ ಆಹಾರ ಪೂರೈಕೆ ಮಾಡುತ್ತಿದ್ದೇವೆ. ಆಹಾರವನ್ನು ಶ್ರೀಕೃಷ್ಣ ದೇವರ ಪ್ರಸಾದವಾಗಿಸಿ ವಿತರಿಸುತ್ತಿದ್ದು ಇದು ಪಾವಿತ್ರ್ಯತಾ ವಾಗಿದೆ. ಕಷ್ಟಪಟ್ಟು ತರಿಸಿಕೊಳ್ಳಲಾಗುತ್ತಿರುವ ಪ್ರತಿಯೊಂದು ದವಸ ಧಾನ್ಯಗಳು, ಅಕ್ಕಿಕಾಳುಗಳು ಕೂಡಾ ಬೆಲೆಬಾಳುವತಹದ್ದು. ನಾನು ಕೇವಲ ಆಹಾರವಸ್ತುಗಳನ್ನು ಒದಗಿಸಿ ವಿತರಣಾ ವ್ಯವಸ್ಥೆಯ ಉಸ್ತುವರಿ ವಹಿಸಿದ್ದೆ ಆದರೂ ಇದೊಂದು ಕೂಡುಗೆಲಸವಾಗಿದೆ. ತೆರೆಮರೆಯ ದ್ದು ಭಾರೀ ಶ್ರಮ ವಹಿಸುವ ತಂಡದ ಪಾತ್ರ ಮಹತ್ತರವಾದದು. ಸುಡುಕ ಉರಿತಾಪದ ಮಧ್ಯೆ ಇಷ್ಟು ಸಾವಿರ ಜನರ ಆಹಾರ ಬೇಯಿಸುವ ಬಾಣಸಿಗ ರ ಗೇಮೆ ಅದ್ಭುತವಾದದ್ದು. ಮುಂಬಯಿನಲ್ಲಿನ ಶ್ರೀ ಪೇಜಾವರ ಮಠ ಮತ್ತು ಶ್ರೀ ಅದಮಾರು ಮಠದ ವ್ಯವಸ್ಥಾಪಕರ ಮತ್ತು ಸಿಬ್ಬಂದಿಗಳ ಅತ್ಯಮೂಲ್ಯ ಸಹಕಾರದಿಂದ ಈ ಸೇವೆ ನಿರತರವಾಗಿ ಮುಂದುವರಿಸಲು ಸಾಧ್ಯವಾಗಿದೆ. ಹರೀಶ್ ಶೆಟ್ಟಿ ಎರ್ಮಾಳ್ ಈ ಸೇವೆ ಮೊದಲಾಗಿ ಆರಂಭಿಸಿದ್ದು ಇದನ್ನು ಅನುಕೂಲಕರವಾಗುವಲ್ಲಿ ಇದೀಗ ಸುಮಾರು ಎಂಟು ಕಡೆಗಳಲ್ಲಿ ವಿಸ್ತರಿಸಿದ್ದೇವೆ. ಎರ್ಮಾಳ್ ಹರೀಶ್ ಶೆಟ್ಟಿ (ಬೋರಿವಿಲಿ), ಅನೂಪ್ ಶೆಟ್ಟಿ ಮಂಗಳೂರು (ಪೇಜಾವರ ಮತ್ತು ಅದಮಾರು ಮಠ), ಸಚ್ಚಿದಾನಂದ ಶೆಟ್ಟಿ (ಸುಂದರ್'ಸ್ ಹೊಟೇಲ್ ಮಾಟುಂಗಾ), ನಿತೀಶ್ ಕೃಷ್ಣ ಶೆಟ್ಟಿ (ವಿಶ್ವಮಹಲ್ ದಾದರ್ ಪೂರ್ವ), ಎನ್.ಬಿ ಶೆಟ್ಟಿ (ಕ್ಲಾಸಿಕ್ ಹೊಟೇಲ್ ಮಾಟುಂಗಾ), ಸುಭಾಷ್ ತಲ್ವಾರ್ (ತಲ್ವಾರ್ ಕ್ಯಾಟರರ್ಸ್), ಅಜೇಯ್ ಯಾದವ್ ಇವರುಗಳ ಅವಿರತ ಮತ್ತು ಪ್ರಾಮಾಣಿಕ ಸಾರಥ್ಯದಲ್ಲಿ ಇದೆಲ್ಲಾ ಸಾಧ್ಯವಾಗುತ್ತಿದೆ. ದಿನವೊಂದರಂತೆ ನಾಸಿಕ್ ಮೂಲಕ ಕಾಯಿಪಲ್ಯ, ತರಕಾರಿ, ಅಕ್ಕಿ, ಕಾಳುಗಳನ್ನು ಎಸ್. ಮಂಗೇಶ್ ಸಮಯೋಚಿತವಾಗಿ ಒದಗಿಸುತ್ತಿದ್ದು ಅವುಗಳನ್ನು ತಾಜಾವಾಗಿ ನಾವು ಶೇಖರಿಸುತ್ತಿದ್ದೇವೆ.

ಸಭೆಯಲ್ಲಿ ಎರ್ಮಾಳ್ ಹರೀಶ್ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ ಮಾಟುಂಗಾ, ನಿತೀಶ್ ಕೃಷ್ಣ ಶೆಟ್ಟಿ ದಾದರ್, ಅನೂಪ್ ಶೆಟ್ಟಿ, ವಿಕ್ರಾಂತ್ ಉರ್ವಾಳ್ (ಐಐಟಿಸಿ), ನಿಲೇಶ್ ಶೆಟ್ಟಿ ಮುಂಡ್ಕೂರು, ವೆಂಕಟೇಶ್ ಭಟ್ ಕಟಪಾಡಿ (ಅದಮಾರು ಮಠ), ಪತ್ರಕರ್ತ ಎಸ್.ಆರ್ ಬಂಡಿಮಾರ್ ಮತ್ತಿತರರು ಉಪಸ್ಥಿತರಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here