Wednesday 24th, April 2024
canara news

ಹಿರಿಯ ಸಾಹಿತಿ, ಸಂಘಟಕ ಕರ್ನಾಟಕಶ್ರೀ ಹೆಚ್‍ಬಿಎಲ್ ರಾವ್ ನಿಧನ

Published On : 22 Apr 2020   |  Reported By : Rons Bantwal


ಮುಂಬಯಿ, ಎ.22: ಬೃಹನ್ಮುಂಬಯಿನಲ್ಲಿ ಹೆಚ್‍ಬಿಎಲ್ ರಾವ್ ಎಂದೇ ಪ್ರಸಿದ್ಧಿಯಲ್ಲಿದ್ದ ಹೆಜಮಾಡಿ ಬಾಗಿಲ್ತಾಯ ಲಕ್ಷಿ ್ಮೀನಾರಾಯಣ ರಾವ್ (87.) ಇಂದಿಲ್ಲಿ ಉಪನಗರದ ನವಿಮುಂಬಯಿ ವಾಶಿ ನೆರೂಳ್ ಇಲ್ಲಿನ ಎಂಜಿಎಂ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಸದ್ಯ ರಜತ ಮಹೋತ್ಸವ ಪೂರೈಸಿದ ಸಾಹಿತ್ಯ ಬಳಗ ಮುಂಬಯಿ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷರಾಗಿ ಪದವೀಧರ ಯಕ್ಷಗಾನ ಸಮಿತಿ (ರಿ.) ಮುಂಬಯಿ, ಶಿವಳ್ಳಿ ಪ್ರತಿಷ್ಠಾನ ಮುಂಬಯಿ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವುಗಳ ಅಧ್ಯಕ್ಷ, ಪ್ರವಚನ ಸಮಿತಿ ಮುಂಬಯಿ ಇದರ ಗೌರವ ಕಾರ್ಯದರ್ಶಿ, ಕರ್ನಾಟಕ ಗಮಕ ಕಲಾ ಪರಿಷತ್ ಮಹಾರಾಷ್ಟ್ರ ಘಟಕ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಅನುಪಮ ಸೇವೆಯನ್ನಿತ್ತ ಹೆಚ್‍ಬಿಎಲ್ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಜಮಾಡಿ ಇಲ್ಲಿನ ಆಯುರ್ವೇದ ಪಂಡಿತ ಮಾಧವ ರಾವ್ ಮತ್ತು ಭವಾನಿ ರಾವ್ ದಂಪತಿ ಸುಪುತ್ರ. 1957ರಲ್ಲಿ ಮುಂಬಯಿ ಸೇರಿ ಬಿಎ, ಮುಂಬಯಿ ವಿವಿಯಿಂದ ಕಾನೂನು ಪದವಿ ಅಧ್ಯಯನ ನಡೆಸಿ ಎಲ್‍ಎಲ್‍ಬಿ ಸನದುವಿನೊಂದಿಗೆ ವಕೀಲರೆಣಿಸಿ ತತ್ವಶಾಸ್ತ್ರದ್ದಲ್ಲಿ ಎಂಎಂ ಪದವಿಗೂ ಭಾಜನರಾಗಿದ್ದರು.

ಯಕ್ಷಗಾನ, ತುಳು ಕನ್ನಡ ಸಾಹಿತ್ಯ, ಗಮಕ ಸಾಹಿತ್ಯ, ಸಾಮಾಜಿಕ, ಧಾರ್ಮಿಕ ಆಧ್ಯಾತ್ಮ ಕ್ಷೇತ್ರಗಳ ಕೊಡುಗೆ, ಮುದ್ರಣ ಮತ್ತು ಪ್ರಕಾಶಕರಾಗಿದ್ದು ಮಹಾರಾಷ್ಟ್ರದಾದ್ಯಂತ ಹಲವಾರು ಯಕ್ಷಗಾನ ತುಳು ಕನ್ನಡ ಸಾಹಿತ್ಯ ಸಮ್ಮೇಳನ, ತುಳು ಪರ್ಬ, ರಾಷ್ಟ್ರೀಯ ಹರಿದಾಸ ಸಾಹಿತ್ಯ ಸಮಾವೇಶ, ಗಮಕ ಕಲಾ ಸಮ್ಮೇಳನ, ಅನುಭವ ಸಾಹಿತ್ಯ ಸಮಾವೇಶ, ಮಹಾರಾಷ್ಟ್ರ ರಾಜ್ಯ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಾವೇಶಗಳನ್ನು ಇತ್ಯಾದಿಗಳನ್ನು ಹಮ್ಮಿಕೊಂಡು ಶ್ರೇಷ್ಟ ಸಂಘಟಕರಾಗಿ ಜನಾನುರೆಣಿಸಿದ್ದರು. ಎಪ್ಪತ್ತನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕಶ್ರೀ ಬಿರುದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಯಕ್ಷಗಾನ ಕಲಾ ಪ್ರಶಸ್ತಿ, ತುಳುಶ್ರೀ ಪ್ರಶಸ್ತಿ, ಎ.ಎಸ್ ನಾವಡ ಯಕ್ಷಗಾನ ಸಾಹಿತ್ಯ ಪ್ರಶಸ್ತಿ, ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯದ ಗೌರವ, ಜಯ ಸಿ.ಸುವರ್ಣ ತನ್ನ ಮಾತೃಶ್ರೀ ದಿ| ಅಚ್ಚು ಸಿ.ಸುವರ್ಣ ಸ್ಮರಣಾರ್ಥ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ `ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ', ಅಸೋಸಿಯೇಶನ್‍ನ ಮುಖವಾಣಿ ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ.ಬಿ ಕುಕ್ಯಾನ್ ಕೊಡಮಾಡುವ `ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ' ಹೀಗೆ ನೂರಾರು ಪುರಸ್ಕಾರ, ಪ್ರಶಸ್ತಿ, ಸನ್ಮಾನಗಳೊಂದಿಗೆ ಗೌರವಿಸಲ್ಪಟ್ಟ ಹೆಚ್‍ಬಿಎಲ್ ಯಶೋಗಾಥೆ ಇನ್ನು ನೆನಪು ಮಾತ್ರ.

ಮುಂಬಯಿ ಮರಾಠಿ ನೆಲದಲ್ಲಿ ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸದಾ ಕೇಳಿ ಬರುತ್ತಿದ್ದ ಮೂರಕ್ಷರಗಳ ಹೆಚ್‍ಬಿಎಲ್ ಓರ್ವ ಬಹುಮುಖಿ ವ್ಯಕ್ತಿತ್ವ ಅಭಿವ್ಯಕ್ತಿಗೊಂಡಿದ್ದು ಸ್ವಾತತ್ರ ್ಯ ಪೂರ್ವದಲ್ಲೇ ಸಕ್ರೀಯವಾಗಿ ಸೇವೆಯಲ್ಲಿ ತೊಡಗಿಸಿ ಕೊಂಡು ಕ್ರಮೇಣ ಕೇಂದ್ರ ಸರಕಾರದ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಬಿಎಸ್‍ಕೆಬಿ ಅಸೋಶಿಯೇಶನ್ (ಗೋಕುಲ) ದೇವಸ್ಥಾನ ನೂತನ ಸಮಿತಿಯ ಕಾರ್ಯಧ್ಯಕ್ಷರಾಗಿ, ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಪ್ರಶಸ್ತಿ ನಿರ್ಣಾಯಕ ಸಮಿತಿ ಕಾರ್ಯಧ್ಯಕ್ಷರಾಗಿದ್ದರು.

ಮೃತರು ಪತ್ನಿ ಸುಧಾ ರಾವ್, ಸುಪುತ್ರಿ ಪದ್ಮಾವತಿ ಭಟ್, ಅಳಿಯ ಉದಯ ಭಟ್ ಮತ್ತು ಅಕ್ಕರೆಯ ಪ್ರಾಣಪ್ರಿಯ ಮೊಮ್ಮಗಳು ಶುಭಶ್ರೀ ಭಟ್ ಸೇರಿದಂತೆ ಅಪಾರ ಬಂಧು-ಬಳಗ, ಸಾಹಿತ್ಯ, ಕಲಾಭಿಮಾನಿಗಳÀನ್ನು ಅಗಲಿದ್ದು, ಮರಣೋತ್ತರ ಪರೀಕ್ಷೆಯ ನಂತರ ಹೆಚ್‍ಬಿಎಲ್ ಬಂಧು ಡಾ| ಧರೇಶ್ವರ್ ರಾವ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಸಂಘಟಕ, ಲೇಖಕ ಪೇತ್ರಿ ವಿಶ್ವನಾಥ್ ಶೆಟ್ಟಿ, ನಟ ಜಗದೀಶ್ ರೈ ಪಾಥಿರ್üವ ಶರೀರವನ್ನು ಅಪರಾಹ್ನ ವಾಶಿ ಸೆಕ್ಟರ್ 29ರಲ್ಲಿನ ಮನುಶುೃತಿ ರವಾನಿಸಿ ವಿಧಿವಿಧಾನಗಳನ್ನು ನಡೆಸಿದ್ದು ಧರ್ಮದರ್ಶಿ ಅಣ್ಣಿ ಶೆಟ್ಟಿ, ಜಗದೀಶ್ ಶೆಟ್ಟಿ ನಂದಿಕೂರು ಅಂತಿಮ ನಮನ ಸಲ್ಲಿಸಿ ತುರ್ಭೆಯಲ್ಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯಲ್ಲಿ ನೆರವೇರಿಸಿದರು.

ಸಂತಾಪದ ಸುರಿಮಳೆ:
ಸಾಹಿತ್ಯ ಲೋಕದ ಹಿರಿಯ ವಿದ್ವಾಂಸ, ಪರಮಾಪ್ತ ಹೆಚ್‍ಬಿಎಲ್ ರಾವ್ ನಿಧನಕ್ಕೆ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ.ಎಲ್ ಬಂಗೇರ, ಮೊಗವೀರ ಮಾಸಿಕದ ಸಂಪಾದಕ ಅಶೋಕ ಎಸ್.ಸುವರ್ಣ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಅಧ್ಯಕ್ಷ ರೋನ್ಸ್ ಬಂಟ್ವಾಳ್, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಕೆ.ಆರ್ ಪೇಟೆ ಶಾಸಕ ನಾರಾಯಣ ಆರ್.ಗೌಡ, ಮುಂಬಯಿ ವಿಶ್ವ ವಿದ್ಯಾಲಯ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ.ಬಿ ಕುಕ್ಯಾನ್, ಸಂಪಾದಕ ಡಾ| ಈಶ್ವರ ಅಲೆವೂರು, ಸಂಪಾದಕ ಹರೀಶ್ ಕೆ.ಹೆಜ್ಮಾಡಿ, ಡಾ| ಸುನೀತಾ ಎಂ.ಶೆಟ್ಟಿ, ಡಾ| ವ್ಯಾಸರಾಯ ನಿಂಜೂರು, ಸಾ.ದಯಾ, ಸುರೇಂದ್ರಕುಮಾರ ಹೆಗ್ಡೆ, ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ಜಿ.ಟಿ ಆಚಾರ್ಯ, ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಸೇರಿದಂತೆ ಅಗಲಿದ ಹಿರಿಯ ಚೇತನ ಹೆಚ್‍ಬಿಎಲ್ ರಾವ್ ನಿಧನಕ್ಕೆ ನೂರರು ಸಂಘಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಲಾಕ್‍ಡೌನ್‍ನಂತಹ ಸಂಧಿಗ್ಧ ಪರಿಸ್ಥಿತಿಯಲ್ಲೇ ಅಕಾಲಿಕವಾಗಿ ನಿಧನರಾದ ಕಾರಣ ಅಂತಿಮ ದರ್ಶನ ಪಡೆಯಲಾಗದ ಸಾವಿರಾರು ಅಭಿಮಾನಿಗಳು, ಬಂಧುಗಳು ಬಾರೀ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here