Friday 19th, April 2024
canara news

ಮುಂಬಯಿ ಟು ಮಂಗಳೂರು ರೈಲು ಯಾನಾರಂಭ ಸತ್ಯಕ್ಕೆ ದೂರವಾದ ವಿಷಯ

Published On : 10 May 2020   |  Reported By : Rons Bantwal


ಶಾಂತವಾಗಿದ್ದ ಮುಂಬಯಿವಾಸಿ ಕನ್ನಡಿಗರನ್ನು ಬೀದಿಗಿಳಿಸುವ ಪ್ರಯತ್ನ ಸಲ್ಲದು
(ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಮೇ.07: ಮುಂಬಯಿ ಟು ಮಂಗಳೂರು (ಪೆÇ್ರಪೆÇಸ್ಡ್ ಟ್ರೈನ್) ಅಂದುಬಿಟ್ಟು ಬಿಜೆಪಿ ಕರ್ನಾಟಕ ಸೆಲ್ ಮುಂಬಯಿ ಅಧ್ಯಕ್ಷ ಎಂದು ಸುರೇಶ್ ಅಂಚನ್ ತನ್ನ ಬಹುದೊಡ್ಡ ಭಾವಚಿತ್ರ, ಬಿಜೆಪಿ ಲಾಂಛಾನ ಹಾಕಿ ವಾಟ್ಸಾಪ್ ಮೂಲಕ ಇಂದಿಲ್ಲಿ ಪ್ರಕಟನೆಯಲ್ಲಿ ಮಾಹಿತಿ ರವಾನಿಸಿದ್ದರು. ಇದು ಕ್ಷಣಗಳೊಳಗೆ ದೇಶ ವಿದೇಶಗಳಲ್ಲಿ ಸುದ್ದಿ ಆಗುತ್ತಿದ್ದಂತೆಯೇ ಬಹುತೇಕರು ಮಾಧ್ಯಮ ವಿಶ್ವಾಸಿಗರು ಪತ್ರಕರ್ತರನ್ನು ಸಂಪರ್ಕಿಸಲು ಆರಂಭಿಸಿದ್ದರು. ಆ ಪತ್ರಕರ್ತರು ನನಗೂ (ರೋನ್ಸ್ ಬಂಟ್ವಾಳ್) ಮಾಹಿತಿ ತಿಳಿಸಿದ್ದು, ತಕ್ಷಣವೇ ನಾನು (ಮುಂಬಯಿವಾಸಿ ಕನ್ನಡಿಗರನ್ನು ತವರೂರಿಗೆ ಕಳುಹಿಸಿ ಕೊಡುವಲ್ಲಿ ಅವಿರತ ಹೋರಾಟದಲ್ಲಿರುವ) ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಮಾನ್ಯ ಗೋಪಾಲ್ ಸಿ.ಶೆಟ್ಟಿ ಇವರನ್ನೂ ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು-ಕನ್ನಡಿಗರ ಅಭಿಮಾನಿ ಬಳಗದ ಮುಖ್ಯಸ್ಥ, ಮಹಾನಗರದಲ್ಲಿನ ಹೆಸರಾಂತ ಸಂಘಟಕ, ಸಂಸದರ ಆಪ್ತ ಎರ್ಮಾಳ್ ಹರೀಶ್ ಶೆಟ್ಟಿ ಅವರನ್ನು ಸಂಪರ್ಕಿಸಿದೆ. ಎರ್ಮಾಳ್ ಕಾನ್ಫರೆನ್ಸ್ ಮೂಲಕ ಸುರೇಶ್ ಅಂಚನ್ ಅವರನ್ನು ನನ್ನೊಂದಿಗೆ ಮಾತನಾಡಿಸಿದಾಗ ವಿಚಾರ ಸತ್ಯಕ್ಕೆ ದೂರವಾದ ಸಂಗತಿ ಎಂದು ತಿಳಿಯಿತು. ಈ ಸಂಬಂಧಿ ರೈಲ್ವೇ ಸಚಿವರು, ಸಚಿವಾಲಯದ ಸುತ್ತೋಲೆ, ತಾವು ನೀಡಿದ ದಾಖಲೆ ಇತ್ಯಾದಿಗಳನ್ನು ನಾವು ಕೇಳಿದ ಯಾವುದೇ ಪ್ರಶ್ನೆಗೆ ಅವರು ಉತ್ತರವನ್ನೇ ನೀಡಲಾಗದೆ ಸುಮ್ಮಗಾಗಿದ್ದರು.

ಸುರೇಶ್ ಅಂಚನ್ ಈ ಜಾಹೀರಾತಿನಲ್ಲಿ ತನ್ನ ಸಂಪರ್ಕ ಸಂಖ್ಯೆ ಎಲ್ಲೂ ಸಾರ್ವಜನಿಕವಾಗಿ ಬಹಿರಂಗ ಪಡಿಸÀದೆ ತಾನು ಸಾಬೀತಾಗಿದ್ದು ಮುಂಬಯಿನ 12 ವಲಯಗಳನ್ನಾಗಿಸಿ ಸುಮಾರು 24 ಜನರ ಹೆಸರುಗಳನ್ನು ಅವರವರ ಮೊಬಾಯ್ಲ್ ಸಂಖ್ಯೆಗಳೊಂದಿಗೆ ಪ್ರಕಟಿಸಿದ್ದಾರೆ. (ಅಚ್ಚರಿ ಎಂದರೆ ಅಂಚನ್‍ಗೆ ಇವರಲ್ಲಿನ ಅನೇಕರ ಪರಿಚಯವೇ ಇಲ್ಲ) ನಾನು ಪ್ರಕಟನೆಯಲ್ಲಿನ ನನ್ನ ಪರಿಚಯಿತರನ್ನು ಸಂಪರ್ಕಿಸಿದಾಗ ಇವರ್ಯಾರಿಗೂ ಈ ಬಗ್ಗೆ (ಕನಿಷ್ಟ ಅಂಚನ್‍ರ ಪರಿಚಯವೇ ಇಲ್ಲ) ಅರಿವೇ ಇಲ್ಲ ಅಂದಮೇಲೆ ನೇತಾರ ಅಂದುಕೊಳ್ಳುವವರು ಇವರೆಲ್ಲರನ್ನೂ ಬಕ್ರ ಕಾ ಬಲಿ ಮಾಡಿದ ವಿಷಯ ಬೆಳಕಿಗೆ ಬಂದಿದೆ.

ಕರಾವಳಿ ಪ್ರದೇಶದ ಜನರು ಊರಿಗೆ ಹೋಗಲು ರೈಲ್ವೇ ವ್ಯವಸ್ಥೆ ಮಾಡಲಾಗಿದೆ ಎಂದು ಮೊನ್ನೆ ಹರೀಶ್ ಪೂಜಾರಿ, ಬಿಜೆಪಿ ಕರ್ನಾಟಕ ಘಟಕ ನವಿಮುಂಬಯಿ ಎಂದು ಮೊಬಾಯ್ಲ್ ಸಂಖ್ಯೆ ನೀಡಿದ್ದರು. ನಮ್ಮ ಪತ್ರಕರ್ತರ ಬಳಗವು ಈ ವ್ಯಕ್ತಿಗೂ ಹಲವಾರು ಬಾರಿ ಕರೆ ಮಾಡಿದರೂ ಮೊಬಾಯ್ಲ್ ಸ್ಥಗಿತವಾಗಿದೆ. ಮನುಕುಲದ ಜೀವನವನ್ನೇ ನುಂಗಿ ಕಂಗಾಲಾಗಿಸಿರುವ ಇಂತಹ ಸಂದಿಗ್ಧ ಸಮಯದಲ್ಲೂ ಜನತೆಯನ್ನು ಮತ್ತಷ್ಟು ಕಂಗಲಾಗಿಸುವ ಇವರಿಗೆ ಏನನ್ನಬೇಕೋ ತಿಳಿಯದು.

ತಮ್ಮೂರನ್ನು ಹೇಗಾದರೂ ತಲುಪಲೇ ಬೇಕೆನ್ನುವ ಉತ್ಸುಕ ಸಾವಿರಾರು ಜನರು (ಎ.14) ಬಾಂದ್ರಾ ಪಶ್ಚಿಮದ ರೈಲು ನಿಲ್ದಾಣದಲ್ಲಿ ಜಮಾಯಿಸಿ ಉಂಟಾದ ಪರಿಸ್ಥಿತಿ ಎಲ್ಲರೂ ತಿಳಿದಿರುವಿರಿ. ಅಸಂಖ್ಯಾತ ಪ್ರಯಾಣಿಕರನ್ನು ಹತೋಟಿಯಲ್ಲಿ ತರಲು ಮುಂಬಯಿ ಪೆÇೀಲಿಸರು ಲಾಠಿ ಪ್ರಹಾರವನ್ನೇ ಮಾಡುವಂತಾಗಿತ್ತು. ಘಟನೆಗೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಧುರೀಣರು ಕಿತ್ತಾಡಿದ್ದೂ ಆಯಿತು. ಇದೂ ಬರೇ ವಾಟ್ಸಾಪ್ ಮೂಲಕ ತಪ್ಪು ಮಾಹಿತಿ ರವಾನಿಸಿ ವದಂತಿ ಹಬ್ಬಿಸಿದ ಕಾರಣ ಸೃಷ್ಠಿಯಾದ ಪ್ರಸಂಗ. ಈ ಘಟನೆಗೆ ಕಾರಣಕರ್ತನಾದವರನ್ನು ಬಂಧಿಸಿ ಐಪಿಎಸ್ ಸೆಕ್ಷನ್ 117, 153ಂ, 188, 269, 270, 505 (2) ಮತ್ತು ಸೆಕ್ಷನ್ 3ರ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ ಪ್ರಕಾರ ಕೇಸುಗಳನ್ನು ದಾಖಲಿಸಿದ್ದೂ ಆಗಿದೆ. ಆದರೆ ಬುದ್ಧಿವಂತ ತುಳುಕನ್ನಡಿಗರಾದ ನಮ್ಮವರಿಗೆ ಇಂತಹದ್ದು ಅನಿವಾರ್ಯ ಆಗದಿರಲಿ.

ಬಾಂದ್ರಾದಲ್ಲಾದ ಘಟನೆ ಮಾಸಿಹೋಗುವ ಮುನ್ನ ಮುಂಬಯಿನಲ್ಲಿ ಶಾಂತವಾಗಿದ್ದ ತುಳು ಕನ್ನಡಿಗರನ್ನು ಬೀದಿಗಿಳಿಸುವ ಪ್ರಯತ್ನ ಮಾಡುವ ಪ್ರಚಾರಪ್ರಿಯರು ಇನ್ನಾದರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಉಡುಪಿ, ಮಂಗಳೂರು ಜಿಲ್ಲಾ ಸಂಸದರೇ ಯಾ ಮುಂಬಯಿ ಸಂಸದ ಗೋಪಾಲ್ ಸಿ.ಶೆಟ್ಟಿ ಅವರೇ ಮುಂಬಯಿ ಟು ಮಂಗಳೂರುಗೆ ರೈಲು ಬಿಡುವ ಬಗ್ಗೆ ಸದ್ಯ ಚಿಂತನೆಯಾಗಿಲ್ಲ ಅಂದ ಮೇಲೆ ಚಿಕ್ಕಪುಟ್ಟ ಘಟಕಗಳ ಮುಖ್ಯಸ್ಥರು ಅದೂ ಅವರದ್ದೇ ಪಕ್ಷದ ಕೆಳಮಟ್ಟದ ಕಾರ್ಯಕರ್ತರೇ ಹೇಳಿಕೆ ನೀಡಿ ಸಂಸದರ ಘನತೆಗೆ ಅಳಿವು ತರುವುದು ಶೋಭೆಯಲ್ಲ ಎಂದು ಹಿರಿಯ ಬಿಜೆಪಿ ಧುರೀಣರು ಅಭಿಪ್ರಾಯ ಪಟ್ಟಿದ್ದಾರೆ.

 

https://www.freepressjournal.in/mumbai/who-is-vinay-dubey-the-man-that-threatened-a-foot-march-from-mumbai-to-north-india-if-train-services-werent-resumed

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here