Saturday 20th, April 2024
canara news

ಅತ್ತ ಸಮಾಜ ಸೇವಕರ ಪಡಿತರ ಶೇಖರಿಸಲು ಅಮ್ಮನೊಬ್ಬಳೇ ಸಾಲಿನಲ್ಲಿ

Published On : 10 May 2020   |  Reported By : Rons Bantwal


ಇತ್ತ ಮದ್ಯ ಮಾರಾಟ ಖರೀದಿಸಲು ಅಪ್ಪ ಮಕ್ಕಳೇ ವೈನ್‍ಶಾಪ್ ಸರತಿಯಲ್ಲಿ
( ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.07: ಹೌದು ಸಾವಿರಾರು ಸಮಾಜ ಸೇವಕರು, ನೂರಾರು ಸಂಘಸಂಸ್ಥೆಗಳು, ಉದ್ಯಮಿಗಳು, ದಾನಿಗಳು ಕಳೆದ ಸುಮಾರು 45 ದಿನಗಳಿಂದಲೂ ಅವಿರತವಾಗಿ ದುಡಿದು ಬಡವ ಬಲ್ಲಿದರ ಕನಿಷ್ಟ ಒಪೆÇ್ಪತ್ತಿನ ಊಟವನ್ನೋ ನೀಡಿ ಮಾನವೀಯತೆ ಮೆರೆದರಲ್ಲದೆ ದಿನಸಿ ಪಡಿತರವನ್ನೋ ನೀಡಿ ಸಂತೈಸಿ ದಣಿವು ನಿವಾರಿಸಿದ್ದಾಯಿತು. ಜೊತೆಗೆ ಪಡಿತರ ಪಡಕೊಂಡ ಅನೇಕರ ಮನೆಗಳಲ್ಲಿ ಅಕ್ಕಿ, ಗೋಧಿಹಿಟ್ಟು, ಬೇಳೆ, ಸಕ್ಕರೆ ಇತ್ಯಾದಿಗಳಿಂದ ದಾಸ್ತಾನುಗೊಂಡು ಗೋಡಾನುವಾಗಿ ಪರಿಣಮಿಸಿದ್ದೂ ಆಯಿತು. ಆದರೆ ಜಿಜ್ಞಾಸೆ ಅಂದರೆ ವರ್ಷವಿಡೀ ಬಡತನ ಇಲ್ಲದ ಜನರಲ್ಲಿ ಏಕಾಏಕಿ ಬಡತನ ಕಾಡಿದ್ದಾದರೂ ಹೇಗೆ ಅಂದು ಕೊಂಡಾಗಲೇ ಕೊಡುವ ಕೈಗಳು ಕಂಡಾಗ ಕೊಳ್ಳುವ ಹಸ್ತಗಳೇ ಹೆಚ್ಚಾದವು ಅನ್ನುವುದನ್ನು ತಿಳಿದು ನಾವೇ ನಮಗೆ ಸಮಾಧಾನ ಪಟ್ಟು ಕೊಳ್ಳಬೇಕಾಯಿತು.

ಈಗಲೂ ಕೈಯಾರೆ ಸಾವಿರಾರು ಗಳಿಸುವ ಮಕ್ಕಳು, ಗಂಡಂದಿರು ವಾಟ್ಸಾಪ್, ಲ್ಯಾಪ್‍ಟಾಪ್‍ನಲ್ಲಿ ವರ್ಕ್ ಫ್ರಾಂ ಹೋಮ್ ಕೆಲಸದಲ್ಲಿ ಬ್ಯೂಸಿ ಆಗಿಸಿ ತಾಯಿ/ ಹೆಂಡತಿಯನ್ನೇ ಹೊರಕಳುಹಿಸಿ ರೇಷನ್ ಕಿಟ್ ಪಡೆದರೆ ಮೊದಲೇ ಹೆಸರು ದಾಖಲಿಸಿದ್ದ ರಿಕ್ಷಾ, ಟ್ಯಾಕ್ಸಿ ಚಾಲಕರು, ದೈನಂದಿನ ಕೂಲಿ ಕಾರ್ಮಿಕರು ಇಲ್ಲೂ ವಂಚಿತರಾಗಿ ನಿರಾಶೆಯಿಂದ ಬರಿಗೈಯಿಂದ ಮರಳುವಂತಾಯಿತು. ಕಾರಣ ಅತ್ಯವಶ್ಯಕವುಳ್ಳರು ತಮ್ಮ ಹೆಸರನ್ನು ಹೇಳಿ ಪಡಿತರ ಕಿಟ್ ಪಡೆದುಕೊಳ್ಳುವ ಮೊದಲೇ ಇಲ್ಲೂ ಇದ್ದವರೇ ಕಾಡಿಬೇಡಿ ಬಡವರ ಹೆಸರಿನ ಕಿಟ್‍ಗಳನ್ನು ಕಸಿದು ಕೊಂಡÀು ಮನೆಗಳನ್ನೇ ಗೋಡಾನು ಮಾಡಿಟ್ಟರು. ಮತ್ತನೇಕರು ಅಕ್ಕಿ ಮೂಟೆಗಳನ್ನೇ ಹಾಸಿಗೆಯನ್ನಾಗಿಸಿದ್ದೂ ಇದೆ. (ಮುಂದಿನ ದಿನಗಳಲ್ಲಿ ಪೆÇೀಲಿಸು ಪಡೆ ಇದನ್ನೇ ಪತ್ತೆ ಹಚ್ಚಲು ರೇಷನ್ ಸ್ಕಾಡ್/ ಬ್ರಾಂಚ್ ರಚಿಸಿದರೂ ಅಚ್ಚರಿ ಪಡಬೇಕಾಗಿಲ್ಲ) ಇಷ್ಟೇಲ್ಲಾ ನಡೆಯುತ್ತಿದ್ದಂತೆ ಒಂದುವರೆ ತಿಂಗಳು ಕಳೆದೇ ಹೋಯಿತು ಬಿಡಿ.

ಸ್ವಾತಂತ್ರÀ್ಯ ಪೂರ್ವದ ವಿಚಾರ ಬಿಡಿ, ನಂತರ ನಮ್ಮನ್ನಾಳಿದ ಸರಕಾರಗಳೆಲ್ಲವೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಅಪಾಯ ಎಂದು ಪದೇಪದೇ ಹೆÉೀಳುತ್ತಲೇ ಪ್ರಚಾರದ ಮೇಲೆ ಪ್ರಚಾರಕ್ಕೆ ಒತ್ತುನೀಡಿಯೇ ಮದ್ಯಪಾನವನ್ನು ಜನಪ್ರಿಯಗೊಳಿಸಿ ಜನರ ಜೀವನಾವಶ್ಯದ ಪ್ರಮುಖ ಭಾಗವನ್ನಗಿಸಿದ್ದಂತೂ ನಿಜ. ಒಂದೆಡೆ ಅದಕ್ಕಾಗಿಯೇ ಒಂದು ಸರ್ವೋತ್ಕೃಷ್ಟವಾದ ಅಬಕಾರಿ ಸಚಿವಾಲಯ, ಅದೂ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ, ಅತ್ಯಾಧಿಕ ಅಧಿಕಾರಿಗಳ ಇಲಾಖೆ ಬೇರೆ. ತೀರಾ ಗ್ರಾಮೀಣ ಪ್ರದೇಶದಲ್ಲೂ ಆರೋಗ್ಯ ಕೇಂದ್ರ ಇಲ್ಲದಿದ್ದರೂ ಸರಿ ವೈನ್‍ಶಾಪ್, ಸಾರಾಯಿ ಅಂಗಡಿಗಳನ್ನಂತೂ ಅಲ್ಲಲ್ಲಿ ತೆರೆದು ಶಾರಾಬು ಸಾಮ್ರಾಜ್ಯವನ್ನೇ ರೂಪಿಸಿದರು. ಈಮೂಲಕ ದಿನವೊಂದಕ್ಕೆ ಕೋಟಿಗಟ್ಟಲೆ ಆದಾಯ ಗಳಿಸಿದ್ದೇವಲ್ಲದೆ ಹೆಂಡ ದೊರೆಗಳÀನ್ನೇ ಸೃಷ್ಠಿಸಿ ಮುಗ್ಧಜನರನ್ನು ಸಾರಾಯಿ ಗುಲಾಮರನ್ನಾಗಿಸಿದರು. ಎಷ್ಟರ ಮಟ್ಟಿಗೆ ಅಂದರೆ ತೀವ್ರ ಸಂದಿಗ್ಧದಲ್ಲಿನ ಈ ಪರಿಸ್ಥಿತಿಯಲ್ಲೂ ಒಪೆÇ್ಪತ್ತಿನ ಊಟಕ್ಕೂ ಕೈಚಾಚುವ ಪರಿಸ್ಥಿತಿ ನಿರ್ಮಾಣ ಆದರೂ ಸದ್ಯ ಸರಕಾರದ ಬೊಕ್ಕಸಕ್ಕೆ ತುಂಬಲೂ ಸಾರಾಯಿಯೇ ಸುಲಭದ ಸಚಿವಾಲಯ ಆಗಿಸಿದ್ದಾರೆ. ಇದನ್ನು ಜನಜೀವನದ ಮೇಲೆ ಪರಿಣಾಮಕಾರಿ ಆಗಿಸಿದ್ದ ಕಾರಣ ಇಂದು ಸಾರಾಯಿ ಇಲ್ಲದೆ ಬದುಕ ಬಹುದು ಅಂತ ಪಾನಪ್ರಿಯರು ತೋರಿಸಿ ಕೊಟ್ಟರೂ ಮದುಸಾರ ಮಾರದೆ ಸರ್ಕಾರ ನಡೆಸಲು ಸಾಧ್ಯವಿಲ್ಲ ಅನ್ನುವುದನ್ನು ಸರಕಾರವೇ ಸಾಬೀತು ಪಡಿಸಿದೆ. ಸರಕಾರದ ಶ್ರೀರಕ್ಷೆಯಿಂದಲೇ ರೈತರು, ಬಡವರಿಂದ ಶ್ರೀಮಂತರೂ ಮದ್ಯಪಾನದ ವ್ಯಾಸನಿಗಳಾಗಿದ್ದಾರೆ. ಪಾನಪ್ರಿಯರ ನಶೆ ಇಳಿಸಲು ಮದ್ಯವರ್ಜನ ಶಿಬಿರಗಳು ಒಂದೆಡೆ ಪಣತೊಟ್ಟರೂ ಶಿಬಿರಗಳ ಉದ್ಘಾಟನೆಗೆ ಅದೇ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದೇಳುವ ಮಂತ್ರಿಗಳೇ ಅತಿಥಿüಗಳು ಅಂದಮೇಲೆ ಸ್ವಾತಂತ್ರÀ್ಯದ ಆದಿಯಿಂದಲೇ ಭಾರತೀಯರ ಜೀವನ ವ್ಯವಸ್ಥೆ ಅಸ್ಥವ್ಯಸ್ಥೆ ಆಗಿರುವುದಂತೂ ನಿಜ.

ಕೊರೋನಾ ಯುಗದ ಈ ದಿನಗಳಲ್ಲಿ ದಕ್ಷ ಸಮಾಜ ಸೇವಕರು ಮಾತ್ರ ತಮ್ಮ ಬಾಯಿ, ಮೂಗುಗಳನ್ನು ಕೋಣಗಳ ಚರ್ಮಗಳನ್ನಾಗಿಸಿ ಜೀವದ ಹಂಗನ್ನು ತೊರೆದು ಆರೋಗ್ಯ, ಕುಟುಂಬದ ಗೋಚಾರಗೈಯದೆ, ಬಡವ ಬಲ್ಲಿದರೆಂದು ಅದೂ ಉಚಿತವಾಗಿ ಪಡಿತರ (ಒಂದೆರಡು ತಿಂಗಳುಗಳಿಗೆ ಬೇಕಾದಷ್ಟು) ಆಹಾರ ಪೆÇಟ್ಟಣಗಳು ನೀಡಿ ಹಸಿವು ನೀಗಿಸುವಲ್ಲಿ ಶ್ರಮಿಸಿದರು. ಆವಾಗ ಕನಿಷ್ಟ ಅರ್ಧ ಲೀಟರ್ ಹಾಲು ತರಲು ಕೈಯಲ್ಲಿ ನೂರುಇನ್ನೂರು ರೊಕ್ಕವಿಲ್ಲ ಅಂದವರೇ ಇಂದು ಸಾರಾಯಿಗಾಗಿ ಮದ್ಯ ಅಂಗಡಿಗಳ ಮುಂದೆ ಜನಸರತಿ ಸಾಲಿನಲ್ಲಿ ನಿಂತದ್ದನ್ನು ಕಂಡದ್ದು ಪ್ರಾಮಾಣಿಕರನ್ನು ಮೂರ್ಛೆ ಗೊಳಿಸುವಂತಾಗಿದೆ. ಅಂದು ಹೊಟ್ಟೆಗೆ ಹಿಟ್ಟು ತರಲು ಮನೆಯಲ್ಲಿ ಹಣವಿಲ್ಲವರು, ಕೆಮ್ಮು, ಸೀನುವರ ಮುಂದೆ ಬಂದರೆÉ ಕೊರೊನಾ ಬರುತ್ತೆ ಅಂದು ದೈನಂದಿನ ತರಕಾರಿ ಹಾಲು, ಪಡಿತರ ಸ್ವೀಕರಿಸಲೂ ಹೊರಬಾರದೇ ತಮ್ಮ ಮಡದಿ, ಹೆಣ್ಮಕ್ಕÀಳನ್ನು ಕಳುಹಿಸುತ್ತಿದ್ದÀವರು, ಇಂದು ಅವೆಲ್ಲವನ್ನೂ ಗಾಳಿಗೆ ತೂರಿ ಸುಡುವ ಉರಿಬಿಸಿಲನ್ನೂ ಲೆಕ್ಕಿಸದೆ ಕನಿಷ್ಟ ಸಾಮಾಜಿಕ ಅಂತರದ ಗೋಜಿಗೆನೇ ಹೋಗದ ಅಪ್ಪ ಮಕ್ಕಳು ವೈನ್‍ಶಾಪ್ ಮುಂದೆ ಸಾರಾಯಿಗಾಗಿ 4-5 ಗಂಟೆ ಸರತಿಯಲ್ಲಿ ನಿಂತುಕೊಂಡರು. ಈ ಪೈಕಿನ ಬಹುತೇಕ ಪಾನಪ್ರಿಯರು ಕೊಡುಗೈಗಳಿಂದ ಪಡಿತರ ಪಡೆದವರೇ ಹೆಚ್ಚಾಗಿದ್ದರು. ಸರಕಾರ ಬಡತನ ನಿವಾರಣೆಗಾಗಿ ರೈತರ ಸಹಿತ ಬಡವರಿಗೆ ಬಿಪಿಎಲ್, ಎಪಿಎಲ್ ಕಾರ್ಡ್ ಒದಗಿಸಿ ಬಡತನ ಗುರುತಿಸಿದ್ದಾಗಿದೆ. ನಾವು ಬಳಸುವ ಮೊಬಾಯ್ಲ್ ಕೂಡಾ ಆಧಾರ್ ಕಾರ್ಡ್‍ಗೆ ಒಳಪಡಿಸಿದೆ. ಆದರೆ ಇಂತಹ ಸಂಧಿಗ್ಧ ಕಾಲದಲ್ಲಿ ಮದ್ಯ ಖರೀದಿಗೂ ಆಧಾರ್ ಕಾರ್ಡ್ ಅಥವಾ ಕನಿಷ್ಟ ರೇಷನ್ ಕಾರ್ಡ್ ಕಡ್ಡಾಯ ಅಂತ ಘೋಷಿಸುತ್ತಿದ್ದರೆ ಬಡವರು ಯಾರೆಂದು ಮತ್ತು ಬಡತನದ ಸಂಖ್ಯೆ ತನ್ನೀತಾನೇ ಸರಕಾರದ ಮತ್ತು ಎಲ್ಲರ ಅರಿವಿಗೆ ಬರುತ್ತಿತ್ತು. ಜೊತೆಗೆ ಯಾರು ಅಸ್ವಸ್ಥರು ಯಾರ ಕಾಲಿಗೆ ದೇಹಕ್ಕೆ ಬಲವಿದೆ ಎಂದೂ ತಿಳಿಯಬಹುದಿತ್ತು.

ಈ ಶಾರಾಬುಶಾಹಿಗಳಿಗೆ ಮನೆಮಂದಿ, ಮನೆ ಬಾಡಿಗೆ, ಪಡಿತರಕ್ಕಿಂತ ಕ್ಷಣಾರ್ಧದ ಅಮಲುಶಕ್ತಿಯೇ ಜೀವನ ಅನ್ನುವುದಂತೂ ನಿಜವಾಗಿದೆ. ಅಂದಮೇಲೆ ಇನ್ನೇನು ಹೇಳಲಿ..? ಮದ್ಯ ಖರೀದಿಗೆ ಮೈಲುಗಟ್ಟಲೆ ದೂರದಿಂದಲೇ ಸಾಲುಗಟ್ಟಿ ಮುಗಿಬಿದ್ದದ್ದನ್ನು ಕಂಡಾಗ ನಮ್ಮ ಸೇವೆ ಎಲ್ಲವೂ ಮಣ್ಣುಪಾಲಾಗಿದ್ದು ಎಲ್ಲಾ ಬಣ್ಣ ಮಸಿ ನುಂಗಿತು ಅಂದಾಗಿದೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here