Thursday 25th, April 2024
canara news

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ದ್ವಿತೀಯ ಮಹಾಸಭೆ ನಝೀರ್ ಹುಸೈನ್ ಮಂಚಿಲ (ಅಧ್ಯಕ್ಷ)-ಸಫ್ವಾನ್ ಕಲಾಯಿ (ಪ್ರಧಾನ ಕಾರ್ಯದರ್ಶಿ)

Published On : 28 Jun 2020   |  Reported By : Rons Bantwal


ಮುಂಬಯಿ (ಉಳ್ಳಾಲ), ಜೂ.23: ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ಸಂಸ್ಥೆಯ ದ್ವಿತೀಯ ವಾರ್ಷಿಕÀ ಮಹಾಸಭೆಯು ಕಳೆದ ಭಾನುವಾರ ತೊಕ್ಕೊಟ್ಟು ಎ.ಕೆ ಇಂಟರ್‍ನ್ಯಾಷನಲ್ ಹೋಟೆಲ್ ಸಭಾಗೃಹದಲ್ಲಿ ಅಧ್ಯಕ್ಷರಾದ ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಧಾನ ಕಾರ್ಯದರ್ಶಿ ಸತ್ತಾರ್ ಪುತ್ತೂರು ಕಳೆದ ಸಾಲಿನ ವರದಿಯನ್ನು ಮಂಡಿಸಿದರು. ಸಂಸ್ಥೆಯ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಮುಖ್ಯ ಸಲಹೆಗಾರ ಶೇಖ್ ಫಯಾಝ್ ಅಲಿ ಬೈಂದೂರು ತಿಳಿಸಿದರು. ವ್ಯವಸ್ಥಾಪಕ ಸಂಶುದ್ದೀನ್ ಬಳ್ಕುಂಜೆ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಅಧ್ಯಕ್ಷರ ಅನುಮತಿಯ ಮೇರೆಗೆ ಇತರ ವಿಷಯಗಳ ಬಗ್ಗೆ ಚರ್ಚಿಸಲಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ನಡೆಸಲಾಯಿತು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ನಝೀರ್ ಹುಸೈನ್ ಮಂಚಿಲ ಉಪಸ್ಥಿತರಿದ್ದರು. ಸಂಚಾಲಕರಾದ ನವಾಝ್ ಉಳ್ಳಾಲ ಸ್ವಾಗತಿಸಿ, ಖಜಾಂಜಿ ಸಫ್ವಾನ್ ಕಲಾಯಿ ವಂದಿಸಿದರು. ಮಾಧ್ಯಮ ಕಾರ್ಯದರ್ಶಿ ಸಫ್ವಾನ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ: ಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಸಂಸ್ಥೆಯ ಗೌರವಾಧ್ಯಕ್ಷರಾಗಿ ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ, ಅಧ್ಯಕ್ಷರಾಗಿ ನಝೀರ್ ಹುಸೈನ್ ಮಂಚಿಲ, ಪ್ರಧಾನ ಕಾರ್ಯದರ್ಶಿಯಾಗಿ ಸಫ್ವಾನ್ ಕಲಾಯಿ, ಜೊತೆ ಕಾರ್ಯದರ್ಶಿಗಳಾಗಿ ಬಶೀರ್ ಕೃಷ್ಣಾಪುರ ಮತ್ತು ತಸ್ಲೀಂ ಹರೇಕಳ ನೇಮಕಗೊಂಡರು. ಸಂಚಾಲಕರಾಗಿ ಸಂಶುದ್ದೀನ್ ಬಳ್ಕುಂಜೆ, ವ್ಯವಸ್ಥಾಪಕರಾಗಿ ನವಾಝ್ ಉಳ್ಳಾಲ, ಖಜಾಂಜಿಯಾಗಿ ಸತ್ತಾರ್ ಪುತ್ತೂರು, ನಿರ್ದೇಶಕರಾಗಿ ಅಲ್ಮಾಝ್ ಉಳ್ಳಾಲ, ಮುಖ್ಯ ಸಲಹೆಗಾರರಾಗಿ ಶೇಖ್ ಫಯಾಝ್ ಅಲಿ ಬೈಂದೂರು ಆಯ್ಕೆಗೊಂಡರು. ಅದೇ ರೀತಿ ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥರಾಗಿ ಮುಸ್ತಫಾ ಕೆ.ಸಿ ರೋಡ್, ಸಂವಹನ ಕಾರ್ಯದರ್ಶಿಯಾಗಿ ಬಾತಿಶ್ ತೆಕ್ಕಾರು, ಮಾಧ್ಯಮ ಕಾರ್ಯದರ್ಶಿಗಳಾಗಿ ಜಲೀಲ್ ಉಳ್ಳಾಲ ಮತ್ತು ಸಫ್ವಾನ್ ಸವಣೂರು, ರಕ್ತದಾನ ಶಿಬಿರಗಳ ಮೇಲ್ವಿಚಾರಕರಾಗಿ ಇಮ್ತಿಯಾಝ್ ಬಜ್ಪೆ ಹಾಗೂ ಶಿಬಿರದ ಉಸ್ತುವಾರಿಗಳಾಗಿ ಖಾದರ್ ಮುಂಚೂರು, ಸಿರಾಜ್ ಉಳಾಯಿಬೆಟ್ಟು, ರಾಫಿಝ್ ಕೃಷ್ಣಾಪುರ ಆಯ್ಕೆಯಾದರು. ಇನ್ನುಳಿದ ಸದಸ್ಯರನ್ನು ಕಾರ್ಯನಿರ್ವಾಹಕರನ್ನಾಗಿ ನೇಮಕ ಮಾಡಲಾಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here