Thursday 25th, April 2024
canara news

ಕಟೀಲು ಕ್ಷೇತ್ರದ ಭಕ್ತಾದಿಗಳ ಅನುಮಾನ: ದೇವರಿಗೆ ದುಡ್ಡು..ಬೇಕೆ.! ಭಕ್ತಿ ಸಾಕೆ.?

Published On : 05 Jul 2020   |  Reported By : Rons Bantwal


ದೇವಸ್ಥಾನದ ಆಡಳಿತ ವ್ಯವಸ್ಥೆ-ಪೂಜಾವಿಧಿಗಳಲ್ಲಿ ಭ್ರಷ್ಟಾಚಾರದ ಆರೋಪ

ಮುಂಬಯಿ, ಜು.05: ದೈವ ದೇವರುಗಳ ನೆಲೆಬೀಡು ತುಳುನಾಡು ಇಲ್ಲಿನ ಅತ್ಯಂತ ಕಾರಣಿಕ ಕ್ಷೇತ್ರ ಎಂದೇ ಪ್ರಸಿದ್ಧಿಯ ಕ್ಷೇತ್ರ ಕಟೀಲು. ಇಲ್ಲಿ ಇತ್ತೀಚಿಗೆ ಕಟೀಲು ಅಸ್ರಣ್ಣ ಅವರ ಮತ್ತು ದೇವಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಹಾಗೂ ಪೂಜಾವಿಧಿ ವಿಧಾನಗಳಲ್ಲಿ ಸಾಕ್ಷಿಗಳ ಮತ್ತು ದಾಖಲೆಗಳ ಸಮೇತ ಭ್ರಷ್ಟಾಚಾರದ ಆರೋಪಗಳನ್ನು ಕೇಳಿ ಕೇಳಿ ಸಾಕಾಗಿದೆ. ಮೇಲ್ನೋಟಕ್ಕೆ ಈ ಆರೋಪದಲ್ಲಿ ಎಲ್ಲ ಸತ್ಯವಿದೆ ಅನ್ನಿಸುತ್ತದೆ, ಕಟೀಲು ಭ್ರಾಮರಿ ಮುಂಬಯಿ ತುಳು-ಕನ್ನಡಿಗರ ಆರಾಧ್ಯದೇವತೆ ಅವಳ ಹೆಸರೆತ್ತದೆ ನಾವು ಯಾವುದೇ ವ್ಯಾಪಾರ ವ್ಯವಹಾರ ಮಾಡುವುದಿಲ್ಲ ಅವಳಿಗೆ ಹೇಳಿದಷ್ಟು ಹರಕೆ ಭಂಡಾರ ಇನ್ಯಾವುದೇ ದೇವರಿಗೆ ಸಲ್ಲುವುದಿಲ್ಲ. ಮುಂಬಯಿಯ ಪ್ರತಿ ಹೋಟೆಲಿನಲ್ಲಿ ಕಟೀಲು ದೇವಿಗೆ ಪೂಜೆ ಸಲ್ಲುತ್ತದೆ. ಮುಂಬಯಿಗರು ಇಂತಹ ಭಯಭಕ್ತಿಯಲ್ಲಿ ಇದ್ದುಕೊಂಡು ದೇವಿಯ ಆರಾಧನೆಯೊಂದಿಗೆ ಊರಿಗೆ ಬಂದಾಗ ತಪ್ಪದೆ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಆಸ್ರಣ್ಣ ಬಂಧುಗಳನ್ನು ದೇವರ ಪ್ರತಿರೂಪದಂತೆ ಭಯಭಕ್ತಿಗಳಿಂದ ಮರ್ಯಾದಿ ಕೊಟ್ಟು ಮಾನಾದಿಗೆ ಸಲ್ಲಿಸುತ್ತಿರುವುದು ವಾಡಿಕೆ ಎಂದು ಮುಂಬಯಿ ಮಹಾನಗರದ ಹೆಸರಾಂತ ಸಂಘಟಕ, ಸಮಾಜ ಸೇವಕ, ಉತ್ತರ ಮುಂಬಯಿಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಗೋಪಾಲ್ ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗ ಮುಂಬಯಿ ಇದರ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಕಟೀಲು ಕ್ಷೇತ್ರದ ಅವ್ಯವಸ್ಥೆಗಳನ್ನು ತಿಳಿಪಡಿಸಿ ನ್ಯಾಯಕ್ಕಾಗಿ ಮೊರೆಹೋದ ಪಣಿಯೂರು ಗುತ್ತು ಸುಶೀನ್ ಶೆಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಎರ್ಮಾಳ್ ಹರೀಶ್ ಶೆಟ್ಟಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಕಟೀಲಿಗೆ ಭೇಟಿ ಕೊಟ್ಟರೆ ಮೂರು ಸುತ್ತು ಬರುವಾಗ ಒಂದು ಸಾವಿರಕ್ಕಿಂತ ಹೆಚ್ಚು ಹಣವನ್ನು ಅಲ್ಲಿದ್ದ ಕಾವಲುಗಾರ ನಿಂದ ಹಿಡಿದು ಅಸ್ರಣ್ಣ ಬಂಧುಗಳ ತಟ್ಟೆಗೆ ಸುರಿದು ಒಂದು ತುಂಡು ಮಲ್ಲಿಗೆಯನ್ನು ಹೆಗಲಿಗೆ ಹಾಕಿಸಿ ಕೊಂಡು ದೇವಿಯ ದರ್ಶನವನ್ನು ಹತ್ತಿರದಿಂದ ಕಾಣುವ ಭಾಗ್ಯವನ್ನು ತನ್ನದಾಗಿಸಿ ಕೊಂಡು ಮುಂಬೈಯ ದಾರಿ ಹಿಡಿಯುತ್ತಾರೆ. ಇದು ಸರಿಯೋ ತಪೆÇ್ಪೀ ನನಗೆ ಗೊತ್ತಿಲ್ಲ ನನ್ನ ಪ್ರಕಾರ ದೇವರು ಅಂತರ್ಯಾಮಿ ಎಲ್ಲರಿಗೂ ಸಮಾನತೆಯನ್ನು ನೀಡುವವರು ಹಾಗಾದರೆ ಕಟೀಲಿನಲ್ಲಿ ಜನ ನೋಡಿ ದರ್ಶನ ನೀಡುವ ಪದ್ಧತಿ ಯಾಕೆ ಇದನ್ನು ಆರಂಭಿಸಿದವರು ಯಾರು? ಇದನ್ನು ಕೂಲಂಕುಶವಾಗಿ ಪರಿಶೀಲಿಸಿದರೆ ಇದರ ಹಿಂದೆ ಆಸ್ರಣ್ಣ ಬಂಧುಗಳ ದೊಡ್ಡ ವ್ಯವಹಾರವೇ ಅಡಗಿದೆ ಈಗ ನಡೆಯುವ ರಂಗಪೂಜೆಯಂತೆ ಮೊದಲು ಹೂವಿನ ಪೂಜೆ ಕಟೀಲಿನಲ್ಲಿ ನಡೆಯುತ್ತಿತ್ತು.

ಈಗ ಕಟೀಲಿನ ಹೂವಿನ ಪೂಜೆಗೆ ಯಾವುದೇ ಆದ್ಯತೆ ಇಲ್ಲವೇ ಇಲ್ಲ. ಒಂದು ಚೀಟಿ ಮಾಡಿಸಿದರೆ ಹೂವಿನ ಪೂಜೆ ಮುಗಿದುಹೋಗುತ್ತದೆ ದೇವರಿಗೆ ಈ ಸೇವೆ ಹೇಗೆ ಸಂದಾಯವಾಗುತ್ತದೋ ನನಗಂತೂ ಗೊತ್ತಾಗುವುದಿಲ್ಲ. ರಂಗಪೂಜೆ ಲೆಕ್ಕ ಮೊದಲು ದಿನಕ್ಕೆ ಒಂದರಿಂದ ಮೂರು ಮೂರರಿಂದ ಆರು ನಂತರ 9 ಈಗ ದಿನಕ್ಕೆ 12ಕ್ಕೆ ಬಂದು ನಿಂತಿದೆ. ಯಾಕೋ ಇಲ್ಲಿನ ಲೆಕ್ಕಗಳು ತಲೆಕೆಳಗಾಗಿವೆ ಭಕ್ತಿ ಎಂದೋ.. ಕಳೆದುಹೋಗಿ ವ್ಯವಹಾರ ಮಾತ್ರ ಇಲ್ಲಿ ಕಾಣುತ್ತಿದೆ. ಲಕ್ಷಗಟ್ಟಲೆ ಖರ್ಚು ಮಾಡಿ ಮಾಡುವ ಯಕ್ಷಗಾನ, ಚಂಡಿಕಾಯಾಗ ಮತ್ತು ಚಿನ್ನದ ರಥೋತ್ಸವದ ಲೆಕ್ಕಪತ್ರಗಳು ಅರ್ಥವಾಗದೆ ಗೋಜಲು ಗೋಜಲಾಗಿದೆ.
ಇದರ ಹಿಂದೆ ಯಾವ ಕೈಗಳು ಕೆಲಸ ಮಾಡುತ್ತಿವೆ ಎಂದು ಸಾಮಾನ್ಯ ಜನರಿಗೂ ಅರ್ಥವಾಗುತ್ತಿದೆ.

ಈ ಸಲ ನಡೆದ ಬ್ರಹ್ಮಕಲಶದ ಸಮಯದಲ್ಲಿ ಮುಂಬೈ ಸಮಿತಿ ಹಾಗೂ ಇತರ ಸಮಿತಿಗಳು ಕೂಡಿ ಕೋಟ್ಯಾಂತರ ಹಣವನ್ನು ಜನರ ಭಕ್ತಿಯ ಪ್ರತಿರೂಪವಾಗಿ ಕಟೀಲಿಗೆ ಸಂದಾಯ ಮಾಡಿದ್ದಾರೆ. ಇಷ್ಟೇ ಅಲ್ಲದೆ ಮುಂಬೈಯ ಪ್ರತಿ ಮೀಟಿಂಗಿನಲ್ಲಿ ಆಸ್ರಣ್ಣ ಬಂಧುಗಳು ಉಪಸ್ಥಿತಿ ಇದ್ದು. ಇವರು ಮುಂಬೈಯಲ್ಲಿ ಬ್ರಹ್ಮಕಲಶ ಸಮಿತಿ ಬಿಟ್ಟು ಇತರರಿಂದ ಲಕ್ಷಗಟ್ಟಲೆ ಹಣವನ್ನು ಬ್ರಹ್ಮಕಲಶೋತ್ಸವಕ್ಕೆ ಅಂತ ಸಂಗ್ರಹಿಸಿದ್ದಾರೆ ಇದರ ಲೆಕ್ಕಪತ್ರ ಎಲ್ಲಿದೆಯೋ ನಮಗಂತೂ ಗೊತ್ತಿಲ್ಲ ಅಷ್ಟೇ ಏಕೆ 12ವರ್ಷದ ಮೊದಲು ನಡೆದ ಬ್ರಹ್ಮ ಕಲಶದಲ್ಲಿ ಮುಂಬೈ ಸಮಿತಿ, ಬೆಂಗಳೂರು ಸಮಿತಿ, ಪೂನಾ ಸಮಿತಿ, ಮತ್ತು ಸ್ಥಳೀಯ ಸಮಿತಿಗಳು ಹಲವು ಕೋಟಿ ಹಣವನ್ನು ಕಟೀಲಿಗೆ ಅರ್ಪಿಸಿದ್ದಾರೆ. ಅದರಲ್ಲಿ 35ಲಕ್ಷ ಮಾತ್ರ ಬಂಗಾರದ ಕಳಶಕ್ಕೆ ವಿನಿಯೋಗಿಸಲಾಗಿದೆ ನಂತರ ಉಳಿದ ಹಣದ ಲೆಕ್ಕ ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಪ್ರಶ್ನಸಿದಾಗ, ಪ್ರಶ್ನಿಸಿದವರನ್ನೇ ಬಾಯಿ ಮುಚ್ಚಿಸುವ ಕೆಲಸ ಇಲ್ಲಿ ನಡೆಯುತ್ತಿದೆ ಮುಂಬೈ ಮಂದಿ ಈ ಬಗ್ಗೆ ರೋಷಿ ಹೋಗಿದ್ದೇವೆ, ಕಟೀಲು ಯಕ್ಷಗಾನದಲ್ಲಿ ಮಿಂಚುತ್ತಿದ್ದ ಪಟ್ಲ ಅಂತಹ ಭಾಗವತರು ಹೊಸ ತಲೆಮಾರಿನ ಜನರನ್ನು ಆಕರ್ಷಿಸಿ ಯಕ್ಷರಂಗಕ್ಕೆ ಸೇವೆ ಸಲ್ಲಿಸಿದವರು. ಅವರು ಪ್ರಾರಂಭಿಸಿದ `ಪಟ್ಲ ಫೌಂಡೇಶನ್' ಬಡ ಕಲಾವಿದರ ಆಶಾಕಿರಣವಾಗಿದೆ. ಮನೆ ಇಲ್ಲದವರಿಗೆ ಮನೆ ಕೊಟ್ಟು ಅಸೌಖ್ಯದ ಸಮಯದಲ್ಲಿ ವೈದ್ಯಕೀಯ ವೆಚ್ಚಗಳನ್ನು ಭರಿಸಿ ಕಣ್ಣಿರು ಒರೆಸಿದವರು. ಕೊರೋನ ಸಂಕಷ್ಟದಲ್ಲಿ ಮನೆಮನೆಗೆ ತೆರಳಿ ಕಲಾವಿದರಿಗೆ ಆಹಾರದ ಕಿಟ್ ಗಳನ್ನು ಪೂರೈಸಿ ಮಾನವೀಯತೆ ಮೆರೆದವರು ಇಂತಹ ವ್ಯಕ್ತಿತ್ವವನ್ನು ನಾವು ಗೌರವಿಸುತ್ತೇವೆ. ಆದರೆ ಕೆಲವು ಸಮಯದ ಹಿಂದೆ ಪಟ್ಲ ಅವರು ಭಾಗವತಿಕೆಗಾಗಿ ರಂಗಸ್ಥಳ ಏರಿದ ನಂತರ ಅವರನ್ನು ಕೆಳಗಿಳಿಸಿ ಅವಮಾನ ಮಾಡಿದ ಸಂದರ್ಭ ಈಗಲೂ ನೆನಪಾಗುತ್ತದೆ. ಸಮಸ್ಯೆಗಳು ಏನಿದ್ದರೂ ನಂತರ ಚರ್ಚಿಸ ಬಹುದಿತ್ತು ಕಲಾಭಿಮಾನಿಗಳ ಮುಂದೆ ಇಂಥ ಅವಮಾನ ಸಲ್ಲದು.

ಮುಂಬಯಿ ಕನ್ನಡಿಗರೆಲ್ಲರೂ ಇದನ್ನು ಇಂದೂ ಕೂಡ ಖಂಡಿಸುತ್ತಾರೆ. ಇಲ್ಲಿಯ ಒಳ ಜಗಳಗಳಿಗೆ ಪಟ್ಲರಂತಹ ಪ್ರತಿಭೆಗಳು ಮೂಲೆಗುಂಪಾಗಬಾರದಿತ್ತು. ಇದು ಅಕ್ಷಮ್ಯ ಅಪರಾಧ. ಸದ್ಯ ಹಿಂದೂ ಧಾರ್ಮಿಕ ಸ್ಥಳಗಳು ಬ್ರಷ್ಟಾಚಾರದ ಕೇಂದ್ರವಾಗುತ್ತಿರುವುದು ಬೇಸರ ವೆನಿಸುತ್ತದೆ, ಕೊರೋನ ಮಹಾಮಾರಿಯ ಈ ಸಂದರ್ಭದಲ್ಲಿ ಮುಂಬೈ ಕನ್ನಡಿಗರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಹೋಟೆಲು ಉದ್ಯಮ ನೆಲಕಚ್ಚಿ ಮೇಲೆ ಬರದಂತಹ ದುರ್ಗಮ ಪರಿಸ್ಥಿತಿಯಲ್ಲಿದೆ. ಸಾವು ಬದುಕಿನ ನಡುವೆ ಬದುಕುತ್ತಿರುವ ಕನ್ನಡಿಗರು ಊರಿಗೆ ಬರಲಾರದ ಪರಿಸ್ಥಿತಿಯಲ್ಲಿ ಭ್ರಮರಾಂಬಿಕೆಗೆ ಹರಕೆ ಹೊತ್ತು ನಮ್ಮನ್ನು ಕಾಪಾಡಮ್ಮ ಎಂದು ಗೋಗರೆಯುತ್ತಿದ್ದಾರೆ. ಆದರೆ ಈ ಪುಣ್ಯಸ್ಥಳ ಕಟೀಲಿನಿಂದ ಮುಂಬೈ ಮಂದಿಗೆ ಇಷ್ಟರವರೆಗೆ ಯಾವುದಾದರೂ ಸಹಾಯ ಆಗಿದೆಯೇ? ಹಿಂದೊಮ್ಮೆ ಕ್ವರಿಂಟೀನ್ ಆದವರಿಗೆ ಊಟ ಆರಂಭಿಸುವ ವಿಷಯದಲ್ಲಿ ಚರ್ಚೆಯಾಗಿ ಅದು ಕೂಡ ನಿಂತು ಹೋಗಿದೆ.

ದೇವಸ್ಥಾನದ ಹೆಸರಿನಲ್ಲಿ ಇರುವ ಶಾಲೆ ಮತ್ತು ಕಾಲೇಜುಗಳಲ್ಲಿ ಮುಂಬೈ ಮಂದಿಗೆ ಕ್ವಾರಂಟಾಯ್ನ್ ವ್ಯವಸ್ಥೆಯಾದರೂ ಮಾಡಬಹುದಿತ್ತು ದೇವರ ಪ್ರಸಾದವೆಂದು ಏರಡು ಹೊತ್ತು ಅನ್ನ ನೀಡಿ ಪುಣ್ಯ ಕಟ್ಟಿ ಕೊಳ್ಳಬಹುದಿತ್ತು. ಇಂತಹ ಪುಣ್ಯ ಕೆಲಸಗಳಿಗೆ ಆಸ್ರಣ್ಣ ಬಂಧುಗಳಿಗೆ ಭ್ರಮರಾಂಬಿಕೆ ಆಶೀರ್ವಾದ ಆದರೂ ಕೊಡುತ್ತಿದ್ದರು.ಆದರೆ ಇವರ ಬಾಯಿಂದ ಮುಂಬಯಿಗರ ಬಗ್ಗೆ ಒಂದು ಒಳ್ಳೆಯ ಹೇಳಿಕೆ ಕೂಡ ಬರಲಿಲ್ಲ. ಮುಂಬಯಿಯಿಂದ ಬಂದ ಹಣದ 10% ಆದರೂ ಕಷ್ಟಕಾಲದಲ್ಲಿ ಅವರಿಗೆ ಸಹಾಯ ಮಾಡಬಹುದಿತ್ತು ಆದರೆ ಮಾಡಲೇ ಇಲ್ಲ. ನಮ್ಮ ಜನರಿಗೆ ಇವರ ತಂತ್ರ ಕುತಂತ್ರಗಳು ದೇವಿಯ ಭಕ್ತಿಯ ಮುಂದೆ ಅರ್ಥವಾಗಲಿಲ್ಲ. ಆಸ್ರಣ್ಣರು ಹೇಳಿದಂತೆ ದೊಡ್ಡ ದೊಡ್ಡ ಯಾಗ ಯಜ್ಞಗಳನ್ನು ಮಾಡಿ ಪುಣ್ಯ ಕಟ್ಟಿಕೊಳ್ಳುವ ಬದಲು ಯಾವುದಾದರೂ ಅನಾಥಾಶ್ರಮಕ್ಕೆ ದಾನ ಮಾಡಿ, ಮದುವೆಯಾಗದೇ ಉಳಿದ ಹೆಣ್ಣಿನ ಮಾಂಗಲ್ಯಕ್ಕೆ ಸಹಾಯ ಮಾಡಿ, ಮನೆ ಇಲ್ಲದೆ ವಾಸಿಸುವ ಬಡ ಜನರ ಸೂರು ಆಗಿ, ಉಣ್ಣಲು ಅನ್ನವಿಲ್ಲದ ಜನರ ಹಸಿವಿನ ಅನ್ನವಾಗಿ, ಸಂಕಷ್ಟದಲ್ಲಿ ಜೀವಿಸುವ ಜನರ ಕಣ್ಣೀರು ಒರೆಸುವ ಕೆಲಸ ಮಾಡಿ, ಭ್ರಮರಾಂಬಿಕೆ ಗೆ ಇದಕ್ಕಿಂತ ಹೆಚ್ಚಿನ ಸೇವೆ ಬೇಡವೇ ಬೇಡ.

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ?
ಕಲಿಯುಗದಲ್ಲಿ ಕರ್ಮಫಲಾಪೇಕ್ಷೆಯಿಲ್ಲದೇ ಜೀವಿಸುವವರು ಸಿಗುವುದು ತುಂಬಾ ಕಷ್ಟ. ಆದರೆ ಈ ಫಲಾಪೇಕ್ಷೆಗೂ ಒಂದು ಇತಿ-ಮಿತಿಯನ್ನು ಇಟ್ಟುಕೊಂಡು ಜೀವಿಸಿದರೆ ಮುಕ್ತಿಯ ದಾರಿಯತ್ತ ಸಾಗಬಹುದು. ನಮ್ಮ ಕರ್ಮವನ್ನು ನಾವು ಮಾಡಬೇಕು ಫಲ ಕೊಡುವ ಕೆಲಸ ದೇವರದ್ದು . ಅಮ್ಮನ ಆಶೀರ್ವಾದದ ಕೈಗಳು ಸದಾ ನಮ್ಮ ಮೇಲೆ ಇರುವುದು ಇದು ಖಂಡಿತ. ಕಟೀಲಿನ ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಕರ್ನಾಟಕ ರಾಜ್ಯದ ವಿೂನುಗಾರಿಕೆ, ಬಂದರು ಮತ್ತು ಮುಜರಾಯಿ, ಮಂತ್ರಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಮೂಡಬಿದರೆ ಶಾಸಕ ಉಮಾನಾಥ್ ಕೋಟ್ಯಾನ್, ಕಟೀಲಿನ ಆಡಳಿತ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್‍ಕುಮಾರ್ ಶೆಟ್ಟಿ ಇವರೆಲ್ಲ ಕೂಡಿ ಈ ಅವ್ಯವಸ್ಥೆಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂಬುವುದೇ ಮುಂಬಯಿ ತುಳು ಕನ್ನಡಿಗರ ಒತ್ತಾಸೆ ಆಗಿದೆ ಎಂದು ಎರ್ಮಾಳ್ ಹರೀಶ್ ಶೆಟ್ಟಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here