Wednesday 24th, April 2024
canara news

ಗೃಹ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಸ್ಯಾನಿಟೈಝೆರ್ ಮತ್ತು ಸಾಬೂನು ವಿತರಣೆ

Published On : 05 Jul 2020   |  Reported By : Rons Bantwal


ಕರ್ತವ್ಯದಲ್ಲೂ ಸ್ವಸ್ವಸ್ಥತೆ ಗಮನವಿರಲಿ: ಎಎಸ್ ಐ ಜಗನಾಥ್.ಕೆ

ಮುಂಬಯಿ (ಮಂಗಳೂರು), ಜು.02: ಕೊರೋನ ನಿಯಂತ್ರಿಸುವುದರಲ್ಲಿ ಗೃಹಕಾರ್ಮಿಕರ ಸೇವೆ ಶ್ಲಾಘನೀಯ ಕಾವೂರ್ ಠಾಣಾಧಿಕಾರಿ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಜಗನಾಥ್.ಕೆ ಅಭಿಪ್ರಾಯಪಟ್ಟರು.

ಅವರು ಅಂತರಾಷ್ಟ್ರೀಯ ಗೃಹ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಲೇಬರ್ ಕಚೇರಿ ಮಂಗಳೂರು ಮತ್ತು ಸ್ತ್ರೀ ಜಾಗೃತಿ ಸಮಿತಿ ಮಂಗಳೂರು ವತಿಯಿಂದ ಸ್ಥಳೀಯ ಗೃಹ ಕಾರ್ಮಿಕರಿಗೆ ಸ್ಯಾನಿಟೈಝೆರ್ ಮತ್ತು ಸಾಬೂನು ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಭಾಗವಹಿಸಿ ಮಾತನಾಡಿ ಕೊರೋನದಿಂದ ನಾವೆಲ್ಲರೂ ಜಾಗೃತರಾಗಬೇಕು ವಿಶೇಷವಾಗಿ ಗೃಹ ಕಾರ್ಮಿಕರು ಕರ್ತವ್ಯ ನಿರ್ವಹಿಸುವಾಗ ತಮ್ಮ ರಕ್ಷಣಾ ಕವಚಗಳನ್ನು ಬಳಸಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಸ್ತ್ರೀ ಜಾಗೃತಿ ಸಮಿತಿ ಮಂಗಳೂರು ಇದರ ಸಂಚಾಲಕಿ ಡಾ| ಸಂಸದ್ ಕುಂಜತ್ತಬೈಲ್ ಮಾತನಾಡಿ ಗೃಹ ಕಾರ್ಮಿಕರು ಸ್ವಯಂ ಸ್ವಚ್ಛತೆಯಿಂದ ಇದ್ದು ಇತರರ ಸೇವೆ ಮಾಡಬೇಕು. ಗೃಹ ಕಾರ್ಮಿಕರ ಅರೋಗ್ಯ ಕೂಡ ಪ್ರಾಮುಖ್ಯವಾಗಿದೆ ಎಂದರು.

ಕುಂಜತ್ತಬೈಲ್ ಅಂಗನವಾಡಿ ಕಾರ್ಯಕರ್ತೆ ಶಾಮಲತಾ ಕುಂಜತ್ತಬೈಲ್, ಗೃಹ ಕಾರ್ಮಿಕ ಹಕ್ಕುಗಳ ಒಕ್ಕೂಟದ ಕಾರ್ಯದರ್ಶಿ ಸೀತಾ ಉಪಸ್ಥಿತರಿದ್ದರು. ಹರ್ಷಿದ್ ಸ್ವಾಗತಿಸಿದರು. ಸದಸ್ಯೆ ಹೊನ್ನಮ್ಮ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here