Wednesday 24th, April 2024
canara news

*ಭ್ರಷ್ಟಾಚಾರದಿಂದಲೇ ಸರಕಾರ ರಚಿಸಿ, ಕೋವಿಡ್ -19 ರ ನೆಪದಲ್ಲೂ ಲೂಟಿಹೊಡೆದ ಬಿಜೆಪಿ ಸರಕಾರ*

Published On : 21 Aug 2020   |  Reported By : Roshan Kinnigoli


ಶಾಸಕರ ಖರೀದಿ ಮೂಲಕ ಭ್ರಷ್ಟಾಚಾರದ ಸರಕಾರವನ್ನು ರಚಿಸಿ ಈಗ ಕೋರೋನಾ ನಿಯಂತ್ರಣದ ಹೆಸರಿನಲ್ಲಿ 3 ಸಾವಿರ ಕೋಟಿ ರೂಪಾಯಿಗಳ ಭ್ರಷ್ಟಾಚಾರವನ್ನು ಬಿಜೆಪಿ ಸರಕಾರವು ಮಾಡಿ ಜನರ ಹಣವನ್ನು ಲೂಟಿಹೊಡೆಯುತ್ತಿದ್ದಾರೆ ಎಂದು ಮಾಜಿ ಸಚಿವರಾದ ಕೆ. ಅಭಯಚಂದ್ರ ರವರು ಹೇಳಿದರು

 

ಅವರು ಗುರುವಾರ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಮತ್ತು ದಿ. ದೇವರಾಜ ಅರಸು ರವರ ಜನ್ಮ ದಿನಾವರಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ ಬಿಜೆಪಿ ನಾಯಕತ್ವದ ಕರ್ನಾಟಕ ಸರಕಾರ ಕೋರೋನಾ ನಿಯಂತ್ರಣದಲ್ಲಿ ನಡೆಸಿದ ಭ್ರಷ್ಟಾಚಾರ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೈಗಾರಿಕಾ ವಿವಾದ ಕಾಯ್ದೆ ತಿದ್ದುಪಡಿ ಬಗ್ಗೆ ಸುಗ್ರಿವಾಜ್ಞೆ ಹೊರಡಿಸಿರುವುದನ್ನು ವಿರೋಧಿಸಿ ಮತ್ತು ಅತಿವೃಷ್ಟಿ ನಿರ್ವಹಣೆಯಲ್ಲಿ ವೈಫಲ್ಯಗಳ ವಿರುದ್ಧ ಜನಧ್ವನಿ ಕಾರ್ಯಕ್ರಮದ ಮೂಲಕ ಮುಲ್ಕಿ ತಹಶೀಲ್ದಾರ್ ಕಚೇರಿಯ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

*ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧನಂಜಯ ಮಟ್ಟು ಬಿಜೆಪಿಯ ವೈಫಲ್ಯಗಳ ಬಗ್ಗೆ ಮಾತನಾಡಿ ಈ ಬಗ್ಗೆ ಮನವಿಯನ್ನು ಮಾನ್ಯ ರಾಜ್ಯಪಾಲರಿಗೆ ಸಲ್ಲಿಸಲು ಉಪತಹಶೀಲ್ದಾರರಿಗೆ ನೀಡಿದರು. ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಸದಸ್ಯರಾದ ಎಚ್. ವಸಂತ್ ಬೆರ್ನಾರ್ಡ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀಮತಿ ಶಾಲೆಟ್ ಪಿಂಟೋ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ ಶೆಟ್ಟಿ, ಯುವ ಇಂಟಕ್ ನ ಶ್ರೀ ಚಿರಂಜೀವಿ ಅಂಚನ್, ಶ್ರೀಮತಿ ಫಿಲೋಮಿನಾ ಲೋಬೋ, ಶ್ರೀ ಮಂಜುನಾಥ ಮಂಬಾರ, ಶ್ರೀ ಮೈಯ್ಯದಿ ಪಕ್ಷಿಕೆರೆ, ಶ್ರೀ ಬಶೀರ್ ಕುಳೈ, ಶ್ರೀ ಅನಿಲ್ ಪೂಜಾರಿ ಸಸಿಹಿತ್ಲು, ಶ್ರೀ ಅಬ್ದುಲ್ ಅಝೀಝ್, ಶ್ರೀ ಪ್ರಶಾಂತ್ ಸಸಿಹಿತ್ಲು, ಶ್ರೀ ಧರ್ಮಾನಂದ ಶೆಟ್ಟಿಗಾರ್, ಶ್ರೀ ಸುರೇಶ್ ಪಂಜ, ಶ್ರೀಮತಿ ವಹೀದಾ ಶಮೀರ್, ಶ್ರೀ ಸುಧಾಕರ್ ಏಳಿಂಜೆ, ಶ್ರೀ ಹರಿಯಪ್ಪ ಸಾಲ್ಯಾನ್ ಚೇಳಾಯರು, ಶ್ರೀ ಜೋಯಲ್ ಡಿಸೋಜ, ಶ್ರೀ ರಕ್ಷಿತ್ ಮುಲ್ಕಿ, ಶ್ರೀ ರಿತೇಶ್ ಸಸಿಹಿತ್ಲು, ಶ್ರೀ ಬಾಲಚಂದ್ರ ಕಾಮತ್, ಶ್ರೀ ಪ್ರಕಾಶ್ ಆಚಾರ್ಯ, ಶ್ರೀ ಸುಭಾಶ್ ಸಸಿಹಿತ್ಲು, ಶ್ರೀಮತಿ ಸುನೀತಾ ಕಿನ್ನಿಗೋಳಿ, ಶ್ರೀ ಜಾಕ್ಸನ್ ಪಕ್ಷಿಕೆರೆ ಮೊದಲಾದವರು ಭಾಗವಹಿಸಿದರು ಶ್ರೀ ಧನ್‍ರಾಜ್ ಕೋಟ್ಯಾನ್ ಸಸಿಹಿತ್ಲು ವಂದಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here