Friday 19th, April 2024
canara news

*ಮಂಗಳೂರು ಹಾರ್ಟ್ ಆಫ್ ಸಿಟಿಯಲ್ಲಿರುವ ಸೆಂಟ್ರಲ್ ಚಿತ್ರಮಂದಿರ ಇನ್ನೂ ಬರೀ ನೆನಪು ಮಾತ್ರ*

Published On : 23 Aug 2020   |  Reported By : Roshan Kinnigoli


ಇದು ಅಂಥಿಂಥ ಥಿಯೇಟರ್ ಅಲ್ಲ..ಒಂದು ಕಾಲದಲ್ಲಿ ಕರಾವಳಿ ಕರ್ನಾಟಕದ ನಂಬರ್ ಒನ್ ಥಿಯೇಟರ್... ಮಂಗಳೂರಿಗರಿಗೆ ಅತ್ಯಂತ ಮೆಚ್ಚಿನ ಸಿನೆಮಾ ಮಂದಿರ ಸೆಂಟ್ರಲ್.. ಸಾಲು ಸಾಲು ಹಿಟ್ ಚಿತ್ರಗಳು ಬಿಡುಗಡೆಯಾಗುತ್ತಿದ್ದದ್ದು ಇದೇ ಚಿತ್ರ ಮಂದಿರದಲ್ಲಿ..ಶಿವರಾಜ್ ಕುಮಾರ್ ಅಭಿನಯದ ಓಂ ಚಿತ್ರ ಸಿಲ್ವರ್ ಜುಬ್ಳಿ ಆಚರಿಸಿದ್ದು ಇದೇ ಚಿತ್ರಮಂದಿರದಲ್ಲಿ..ಆಗ ಶಿವಣ್ಣ ಜೊತೆಯಲ್ಲಿ ಡಾ.ರಾಜ್ಕುಮಾರ್ ಕೂಡ ಆಗಮಿಸಿದರು..ಅಂಬರೀಷ್ ಅಭಿನಯದ ಅತ್ಯಂತ ಯಶಸ್ವಿ ಚಿತ್ರ ಇಂದ್ರಜಿತ್ 100 ದಿನಗಳ ಕಾಲ ಓದಿದ್ದು ಕೂಡ ಇದೇ ಟಾಕೀಸ್ ನಲ್ಲಿ.. ಅಸಲಿಗೆ ಆ ಚಿತ್ರವನ್ನು ನಿರ್ಮಿಸಿದ್ದು ಕೂಡ ಇದರ ಮಾಲಕರು.

ಮಂಗಳೂರಿಗೆ ಮಲ್ಟಿಪ್ಲೆಕ್ಸ್ ಕಾಲಿಡುವ ಮುಂಚೆ ಚಿತ್ರಪ್ರೇಮಿಗಳ ಪಾಲಿಗೆ ಸುಂದರ ಮತ್ತು ಸುಸ್ಸಜಿತ ಥಿಯೇಟರ್ ಅಂದರೆ ಸೆಂಟ್ರಲ್. ರಿಕ್ಷಾಡ್ರೈವರ್,ತೇಲಿಕೆದ ಬೊಳ್ಳಿ ಮೊದಲಾದ ತುಳುಚಿತ್ರಗಳು ತೆರೆಕಂಡು ಯಶಸ್ವಿ ಪ್ರದರ್ಶನ ನೀಡಿದ್ದು ಕೂಡ ಇದೇ ಚಿತ್ರಮಂದಿರದಲ್ಲಿ... ಮಂಗಳೂರಿನ ಹಾರ್ಟ್ ಆಫ್ ಸಿಟಿ ಯಲ್ಲಿ ಸುಂದರವಾಗಿ ರಾರಾಜಿಸುತ್ತಿದ್ದ ಸೆಂಟ್ರಲ್ ಥಿಯೇಟರ್ ಕ್ಲೋಸ್ ಆಗಿ 2 ವರ್ಷ ಕಳೆದಿದೆ..ಯಾವಾಗ ಮತ್ತೆ ಚಿತ್ರಮಂದಿರ ತೆರೆಯುತ್ತೆ ಅಂತ ಕಾಯುತ್ತಿದ್ದ ಪ್ರೇಕ್ಷಕರಿಗೆ ಇನ್ನು ಯಾವತ್ತೂ ಈ ಚಿತ್ರ ಮಂದಿರ ತೆರೆಯೋದಿಲ್ಲ ಅಂತ ಸೂಚನೆ ನೀಡಿದೆ..ಸಧ್ಯ ಥಿಯೇಟರ್ ಡೆಮೋಲಿಸ್ ಕೆಲಸ ಶುರುವಾಗಿದೆ..

ಈ ಸ್ಥಳದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ತಲೆ ಎತ್ತಲಿದೆ...ಬಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಗಳು ಅಭಿನಯದ ಸೂಪರ್ ಹಿಟ್ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಸೆಂಟ್ರಲ್ ಇನ್ನೂ ನೆನಪು ಮಾತ್ರ




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here