Friday 19th, April 2024
canara news

ಆನಂದ್ ಟ್ರಾವೆಲ್ಸ್‍ನಿಂದ ಮಂಗಳೂರು-ಮುಂಬಯಿ ಮತ್ತೆರಡು ಬಸ್‍ಗಳ ಸೇವಾರಂಭ

Published On : 02 Sep 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.31: ಕೊರೋನಾ ಮಹಾಮಾರಿಯಿಂದ (ಕೋವಿಡ್ ಸಾಂಕ್ರಾಮಿಕ ರೋಗ) ಸ್ಥಗಿತಗೊಂಡಿದ್ದ ಅಂತರ್‍ರಾಜ್ಯ ಬಸ್ ಸೇವೆ ಇದೀಗ ಪುನಾರಂಭ ಗೊಂಡಿದ್ದು ಇದೀಗ ಪ್ರಯಾಣಿಕರ ಹೆಚ್ಚುವರಿ ಸೇವೆಗಾಗಿ ಸದ್ಯ ಮುಂಬಯಿ ಮಂಗಳೂರು ಮುಂಬಯಿ ನಡುವೆ ಇನ್ನೆರಡು ನಾನ್ ಎಸಿ ಸ್ಲೀಪರ್ ಬಸ್‍ಗಳನ್ನು ಬಸ್ ಸೇವೆಯನ್ನು ಆನಂದ್ ಟ್ರಾವೆಲ್ಸ್ ಆರಂಭಿಸಿದೆ.

ಇದೀಗ ಒಂದು ಬಸ್ ದಿನಾ ಮಂಗಳೂರು ಮಲ್ಲಿಕಟ್ಟೆ ಕಚೇರಿಯಿಂದ ಪೂರ್ವಾಹ್ನ 11.30 ಗಂಟೆಗೆ ಪ್ರಯಾಣ ಆರಂಭಿಸಿ ಗುರುಪುರ ಕೈಕಂಬ, ಮೂಡಬಿದ್ರೆ (12.30 ಗಂಟೆಗೆ), ಕಾರ್ಕಳ, ಬೆಳ್ಮಣ್, ಉಡುಪಿ ಮಾರ್ಗವಾಗಿ ಮಾರನೆ ದಿನ ಬೆಳಿಗ್ಗೆ 6.30 ಗಂಟೆಗೆ ನೆರೂಳ್, ಐರೋಲಿ, ಕಲ್ವಾ, ಥಾಣೆ, ಮುಲುಂಡ್, ಸಯಾನ್ ಮಾರ್ಗವಾಗಿ ಬೇಂಡಿ ಬಜ್ಹಾರ್, ವಿಟಿ ಸೇರಲಿದೆ ಅಂತೆಯೇ ಪೂರ್ವಾಹ್ನ 10.30 ಗಂಟೆಗೆ ವಿಟಿಯಿಂದ ಹೊರಟು ಸಯಾನ್ ಮಾರ್ಗವಾಗಿ ಮಾರನೇ ದಿನ ಬೆಳಿಗ್ಗೆ ಮಂಗಳೂರು ಸೇರಲಿದೆ.

ಮತ್ತೊಂದು ದಿನಂಪ್ರತಿ ಮಂಗಳೂರು ಮಿಲಾಗ್ರಿಸ್‍ನಿಂದ ಪ್ರತೀದಿನ ಮಧ್ಯಾಹ್ನ 1.00 ಗಂಟೆಗೆ ಪ್ರಯಾಣ ಆರಂಭಿಸಿ ಕೊಟ್ಟಾರ, ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಬೆಳಗಾಂ ಮಾರ್ಗವಾಗಿ ಮಾರನೆ ದಿನ ಬೆಳಿಗ್ಗೆ 5.00 ಗಂಟೆಗೆ ಸಿಬಿಡಿ ಬೇಲಾಪುರ (ನವಿ ಮುಂಬಯಿ), ವಾಶಿ, ಚೆಂಬೂರು, ಸಯಾನ್, ಬಾಂದ್ರಾ, ಅಂಧೇರಿ, ಬೋರಿವಿಲಿ ಮಾರ್ಗವಾಗಿ ಬೆಳಿಗ್ಗೆ 8.00 ಗಂಟೆಗೆ ವಿೂರಾರೋಡ್ (ಸೀತಲ್‍ನಗರ್) ಸೇರಲಿದೆ ಅಂತೆಯೇ ಪೂರ್ವಾಹ್ನ 10.00 ಗಂಟೆಗೆ ವಿೂರಾರೋಡ್‍ನಿಂದ ಹೊರಟು ಅದೇ ಮಾರ್ಗವಾಗಿ ಮಾರನೇ ದಿನ ಬೆಳಿಗ್ಗೆ ಮಂಗಳೂರು ಸೇರಲಿದೆ.

ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸಾಮಾಜಿಕ ಅಂತರ ಕಾಪಾಡುವಿಕೆಗಾಗಿ ಬಸ್‍ವೊಂದರಲ್ಲಿ ಕೇವಲ 20 ಪ್ರಯಾಣಿಕರಿಷ್ಟೇ ಅವಕಾಶ ಒದಗಿಸುತ್ತಿದ್ದು, ಪ್ರಯಾಣಿಕರು ಕಟ್ಟುನಿಟ್ಟಾಗಿ ಸರಕಾರದ ಸೇವಾಸಿಂಧೂ ಇ-ಪಾಸ್ ಹೊಂದಿರ ತಕ್ಕದ್ದು ಆದ್ದರಿಂದ ಪ್ರಯಣಿಕರ ಅನುಕೂಲಕ್ಕಾಗಿ ಟಿಕೇಟು ಕಾಯ್ದಿರಿಸುವ ಸಮಯ ಪ್ರತೀಯೋರ್ವ ಪ್ರಯಾಣಿಕ ಪ್ರತ್ಯೇಕವಾಗಿ ತಮ್ಮ ಉಭಯ ವಾಸಗಳ ಸಂಪೂರ್ಣ ವಿಳಾಸ ಮತ್ತು ಮೊಬಾಯ್ಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ನೀಡ ತಕ್ಕದ್ದು. ಷರತ್ತುಗಳ ಅನ್ವಯನುಸಾರ ಇ-ಪಾಸ್‍ನ್ನು ವ್ಯವಸ್ಥೆ ಮಾಡಲಾಗುವುದು ಎಂದು ಆನಂದ್ ಟ್ರಾವೆಲ್ಸ್ ತಿಳಿಸಿದೆ.


ಪಾರ್ಸೆಲ್ ಸೇವೆಯನ್ನೂ ಸ್ವೀಕರಿಸಲಾಗುತ್ತಿದ್ದು, ಟಿಕೇಟು ಬುಕ್ಕಿಂಗ್‍ಗಾಗಿ ತಮ್ಮ ಸಮೀಪದ ಬಸ್ ಏಜೆಂಟರನ್ನು ಅಥವಾ ಆನಂದ್ ಟ್ರಾವೆಲ್ಸ್ ಮಂಗಳೂರು (0824) 2447737 ಯಾ 9821664359, ಮುಂಬಯಿ ಕಛೇರಿ 9821664359, 7977223039 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಆನಂದ್ ಟ್ರಾವೆಲ್ಸ್‍ನ ವಲೇರಿಯನ್ ಡಿಸೋಜಾ ಮತ್ತು ಮ್ಯಾಥ್ಯೂ ಡಿಸಿಲ್ವಾ ಈ ಮೂಲಕ ತಿಳಿಸಿದ್ದಾರೆ.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here