Thursday 28th, March 2024
canara news

ಬಜ್ಜೋಡಿ ಇನ್ಫೆಂಟ್ ಮೇರಿ ಚರ್ಚ್‍ನಲ್ಲಿ ಮೊಂತಿ ಹಬ್ಬ ಆಚರಣೆ

Published On : 04 Sep 2020   |  Reported By : Rons Bantwal

ಮುಂಬಯಿ (ಆರ್‍ಬಿಐ) ಮಂಗಳೂರು, ಸೆ.09: ಮಾತೆಮರಿಯಮ್ಮನ ಹುಟುಹಬ್ಬದ ನಿಮಿತ್ತ ಕಳೆದ ಮಂಗಳವಾರ ಬಜ್ಜೋಡಿ ಇಲ್ಲಿನ ಇನ್ಫೆsÉಂಟ್ ಮೇರಿ ಚರ್ಚ್‍ನಲ್ಲಿ ಸಂಭ್ರಮದ ಬಲಿಪೂಜೆಯನ್ನು ಪ್ರಧಾನ ಯಾಜಕ ವಂ. ಫಾ| ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ನೆರವೇರಿಸಿ ನೆರೆದ ಸದ್ಭಕ್ತರಿಗೆ ಹರಸಿದರು.

ಚರ್ಚ್‍ನ ಗುರುಗಳಾದ ವಂ| ಫಾ| ಐವನ್ ಡಿಸೋಜಾ, ಫಾ| ಪ್ಯಾಟ್ರಿಕ್ ಲೋಬೊ, ಫಾ| ರಾಯನ್ ಪಿಂಟೊ, ಫಾ| ಬಾರ್ನಬಾಸ್ ಮೊನಿಸ್ ಪೂಜಾಧಿಗಳಲ್ಲಿ ಸಹಭಾಗಿತ್ವ ವಹಿಸಿದ್ದರು. ಪೂಜೆಯ ಆದಿಯಲ್ಲಿ ಫಾ| ಆರ್ಚಿಬಾಲ್ಡ್ ಹೊಸ ತೆನೆಯನ್ನು ಆರ್ಶೀವದಿಸಿದರು. ತದನಂತರ ಭಕ್ತಾದಿಗಳು ಮಾತೆ ಮರಿಯಮ್ಮರ ಪುಸ್ಥಳಿಗೆ ಪುಷ್ಪಾರ್ಚನೆಗೈದು ಮಾತೆಗೆ ಆರಾಧಿಸಿ ನಮಿಸಿ ಕೋವಿಡ್ ಸಂಕಷ್ಟದ ಕಾಲದಲ್ಲೂ ಮಾತೆ ಮರಿಯಮ್ಮರ ಮುಖಾಂತರ ದೊರೆತ ಎಲ್ಲಾ ಉಪಕಾರಗಳಿಗೆ ದೇವರಿಗೆ ಸ್ಮರಿಸಿದರು. ಪೂಜೆಯ ನಂತರ ಆರ್ಶೀವದಿಸಿದ ಭತ್ತದ ಕದಿರನ್ನು ಭಕ್ತಾದಿಗಳಿಗೆ ವಿತರಿಸಿಲಾಯಿತು.

More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here