Wednesday 18th, May 2022
canara news

ಬಿಎಸ್‍ಕೆಬಿಎಯಿಂದ ಸ್ವರ್ಗೀಯ ಬಾಲಚಂದ್ರ ರಾಯರ ನಿಧನಕ್ಕೆ ಸಂತಾಪ ಸೂಚಕ ಸಭೆ

Published On : 07 Nov 2020   |  Reported By : Rons Bantwal


ಬಿ.ಬಿ ರಾವ್ ಅಪ್ಪಟ ಕನ್ನಡಾಭಿಮಾನಿ : ಡಾ| ಸುರೇಶ್ ಎಸ್.ರಾವ್

ಮುಂಬಯಿ (ಆರ್‍ಬಿಐ),ನ.04: ಇತ್ತೀಚೆಗೆ ಪ್ರಾತಃ ಸ್ಮರಣೀಯರಾದ ಬೈಲೂರು ಬಾಲಚಂದ್ರ ರಾಯ ಅವರ ಸ್ಮರಣಾರ್ಥ ಸಂತಾಪ ಸೂಚಕ ಹಾಗೂ ಪ್ರಾರ್ಥನಾ ಸಭೆಯನ್ನು ಕಳೆದ ಭಾನುವಾರ ಬಿಎಸ್‍ಕೆಬಿ ಎಸೋಸಿಯೇಶನ್ (ಗೋಕುಲ) ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳ ಉಪಸ್ಥಿತಿಯಲ್ಲಿ, ಕೊರೋನಾ ಸಂಕಟ ಸಮಯದ ನಿಮಿತ್ತ ಜೂಮ್ ಜಾಲತಾಣದ ಮುಖೇನ ಜರಗಿಸಲಾಯಿತು.

ಡಾ| ಸುರೇಶ್ ರಾವ್ ಮಾತನಾಡಿ ಬಾಲಚಂದ್ರ ರಾವ್ ರವರನ್ನು ತುಂಬು ಹೃದಯದಿಂದ ಸ್ಮರಿಸುತ್ತಾ, 45 ವರ್ಷಗಳ ಸುದೀರ್ಘ ಕಾಲ, ಗೋಕುಲದಲ್ಲಿ, ಕಾರ್ಯಕಾರಿ ಸಮಿತಿ ಸದಸ್ಯ, ಪದಾಧಿಕಾರಿ, ಗೌರವ ಕಾರ್ಯದರ್ಶಿ, ಉಪಾಧ್ಯಕ್ಷ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ, ಗೋಕುಲವಾಣಿ ಸಂಪಾದಕ ಮಂಡಳಿ ಸದಸ್ಯ, ಸಂಪಾದಕ ಹೀಗೆ ಹಲವಾರು ಪ್ರತಿಷ್ಠಿತ ಹುದ್ದೆಗಳಲ್ಲಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿ, ಬಿ.ಬಿ.ರಾವ್ ಎಂದೇ ಖ್ಯಾತರಾಗಿದ್ದ ಅವರು ಬೈಬಾರಾ ಎಂಬ ನಾಮಾಂಕಿತದಿಂದ ಗೋಕುಲವಾಣಿಗೆ ಬರೆಯುತ್ತಿದ್ದ ರಂಜನೀಯ ಲೇಖನಗಳು ಅತ್ಯಂತ ಪ್ರಸಿದ್ಧಿಯಾಗಿವೆ. ಉತ್ತಮ ಲೇಖಕನಾಗಿ, ನಾಟಕಕಾರನಾಗಿ ಅವರು ಬರೆದು ನಿರ್ದೇಶಿಸಿದ ನಾಟಕಗಳು ಹಲವಾರು. ಅದರಲ್ಲಿಯೂ ಜಗದ್ಗುರು ಆದಿ ಶಂಕರಾಚಾರ್ಯ ನಾಟಕ ನಲುವತ್ತಕ್ಕೂ ಮಿಕ್ಕಿ ಕಲಾವಿದರನ್ನೊಳಗೊಂಡು ಮುಂಬಯಿ ಮಾತ್ರವಲ್ಲದೆ ಕರ್ನಾಟಕದ ಹಲವೆಡೆ ಪ್ರದರ್ಶಿಸಲ್ಪಟ್ಟಿದೆ ಎನ್ನುವುದು ನಮಗೆ ಅಭಿಮಾನದ ಸಂಗತಿ ಎಂದರು.

ಬಿ.ಬಿ ರಾವ್ ಅವರೊಬ್ಬ ಅಪ್ಪಟ ಕನ್ನಡಾಭಿಮಾನಿ, ಸಮಾಜ ಸೇವಕ, ರಂಗಕರ್ಮಿ, ನಟ, ನಿರ್ದೇಶಕ, ಸಂಘಟಕ, ಕಲೋಪಾಸಕರಾಗಿದ್ದ ರಾಯರು ಸಾಂಸ್ಕೃತಿಕ ರಾಯಭಾರಿಯಾಗಿದ್ದರು, ಇಂತಹ ಬಹುಮುಖ ಪ್ರತಿಭೆಯ ಬಾಲಚಂದ್ರ ರಾಯರು ಗೋಕುಲದವಾರು ಎಂದು ಹೇಳಲು ನಮಗೆ ಅತ್ಯಂತ ಹೆಮ್ಮೆಯೆನಿಸುತ್ತಿದೆ. ಅವರ ಅಗಲುವಿಕೆ ಗೋಕುಲಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಪರಮಾತ್ಮ ನೀಡಲಿ, ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಶ್ರೀ ಗೋಪಾಲಕೃಷ್ಣನಲ್ಲಿ ಪ್ರಾಥಿರ್üಸುತ್ತೇವೆ ಎಂದÀು ಡಾ| ರಾವ್ ನುಡಿನಮನಗಳನ್ನು ಸಲ್ಲಿಸಿದರು.

ಸಂಘದ ಉಪಾಧ್ಯಕ್ಷರಾದ ವಾಮನ್ ಹೊಳ್ಳ ಹಾಗೂ ಶೈಲಿನಿ ರಾವ್, ಗೌ| ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಕಾರ್ಯದರ್ಶಿ ಎ.ಎಸ್ ರಾವ್, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಾ ರಾವ್, ರಂಗಕರ್ಮಿಗಳಾದ ಡಾ| ಭರತ್ ಕುಮಾರ್ ಪೆÇಲಿಪು, ವಿ.ಕೆ ಸುವರ್ಣ, ಬಿ.ಬಿ ರಾಯರ ನಿಕಟ ವರ್ತಿಗಳಾದ ವಿಜಯ ಆಚಾರ್ಯ, ಮತ್ತು ವಸಂತ್ ಹೆರ್ಲೆ, ಯಕ್ಷಗಾನ ಕಲಾವಿದೆ ಗೀತಾ ಎಲ್ ಭಟ್, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್, ನೃತ್ಯ ಕಲಾವಿದೆ ಪ್ರಿಯಾಜಲಿ ರಾವ್ ರವರು ಶ್ರೀ ಬಾಲಚಂದ್ರ ರಾಯರೊಂದಿಗಿನ ತಮ್ಮ ಒಡನಾಟ, ಅವರ ಬಹುಮುಖ ವ್ಯಕ್ತಿತ್ವ ತಮ್ಮ ಮೇಲೆ ಬೀರಿದ ಪ್ರಭಾವ, ರಂಗಭೂಮಿಯೊಂದಿಗಿನ ನಂಟುಗಳನ್ನು ಸ್ಮರಿಸಿಕೊಂಡು ನುಡಿನಮನ ಸಲ್ಲಿಸಿದರು.

ಸಂಘದ ಪರವಾಗಿ ಬಾಲಚಂದ್ರ ರಾವ್ ರ ಧರ್ಮಪತ್ನಿ ಪ್ರಭಾವತಿ ರಾವ್ ಮತ್ತು ಪರಿವಾರದವರಿಗೆ ನೀಡುವ ಸಂತಾಪ ಸೂಚಕ ಪತ್ರವನ್ನು ಪ್ರೇಮಾ ರಾವ್ ವಾಚಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಎರಡು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ದಿವಂಗತರ ಮಗ ನವನೀತ್ ರಾವ್ ಮತ್ತು ಮಗಳು ಅನುಪ್ರೀತ ರಾವ್, ತಮ್ಮ ಈ ದುಃಖದ ಸಮಯದಲ್ಲಿ ಸಹಭಾಗಿಯಾಗಿ, ಸಾಂತ್ವನ ಹೇಳಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಯು ಟ್ಯೂಬ್ ಮಾಧ್ಯಮದ ಮೂಲಕ ನೇರ ಪ್ರಸಾರಗೊಂಡ ಪ್ರಾರ್ಥನಾ ಸಭೆಯಲ್ಲಿ, ನೂರಾರು ಸದಸ್ಯ ಬಾಂಧವರು ಹಾಗೂ ಬಾಲಚಂದ್ರ ರಾಯರ ಅಭಿಮಾನಿ ಬಳಗದವರು ಪಾಲ್ಗೊಂಡು ವೀಕ್ಷಿಸಿ, ಅಗಲಿದ ದಿವ್ಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here