Monday 15th, August 2022
canara news

ದಿ| ಕು.ಐಶ್ವರ್ಯ ಆನಂದ್ ಜತನ್ ಸ್ಮರಣಾರ್ಥ ನಡೆಸಲ್ಪಟ್ಟ ರಕ್ತದಾನ ಶಿಬಿರ

Published On : 05 Jan 2021   |  Reported By : Rons Bantwal


ಮುಂಬಯಿ, ಜ.04: ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ಸೇವಾ ಟ್ರಸ್ಟ್ (ಕಲ್ಯಾಣ್ಫುರ, ಉಡುಪಿ) ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯ, ನಗರದ ಹೆಸರಾಂತ ಉದ್ಯಮಿ, ಕೊಡುಗೈದಾನಿ ಆನಂದ್ ಜತ್ತನ್ ತನ್ನ ಸ್ವರ್ಗೀಯ ಸುಪುತ್ರಿ ದಿ| ಕು.ಐಶ್ವರ್ಯ ಎ.ಜತನ್ ಇವರ ಅಗಲಿಕೆಯ 9ನೇ ವಾರ್ಷಿಕ ಸ್ಮರಣಾರ್ಥ ಇಂದಿಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಸಂಕಲ್ಪ ಬ್ಲಡ್ ಬ್ಯಾಂಕ್ ಕಲ್ಯಾಣ್ ಇದರ ಸಹಯೋಗದಲ್ಲಿ ಮುಂಬಯಿ ನಾಸಿಕ್ ರಾಷ್ಟ್ರೀಯ ಹೆದ್ದಾರಿ ಭಿವಂಡಿ ಪಡ್ಗಾ ಇಲ್ಲಿನ ಹೊಟೆಲ್ ಪಾಲ್ವಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಕಸ್ತೂರಿ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪಡ್ಗಾ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಮಾಧವ್ ವಾಘ್ ರಕ್ತದಾನ ಶಿಬಿರ ನಡೆಸಿದ್ದು ಆನಂದ್ ಜತ್ತನ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೂಪೇಶ್ ಪೂಜಾರಿ, ಹರೀಶ್ ಜತನ್, ಸುಶಾಂತ್ ಪೂಜಾರಿ, ಪ್ರೇಮನಾಥ್ ಪೂಜಾರಿ, ವಿಷ್ಣು ಪೂಜಾರಿ, ಸ್ಥಾನೀಯ ಅನೇಕರು, ಹೊಟೇಲ್ ಪಾಲ್ವಿ ಸಿಬ್ಬಂದಿಗಳು ಮತ್ತು ಬಂಧು-ಮಿತ್ರರು, ಹಿತಚಿಂತಕರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನಗೈದಿದ್ದು, 40 ಯೂನಿಟ್ ಗಳಷ್ಟು ರಕ್ತ ಶೇಖರಿಸಲಾಯಿತು. ವೈದ್ಯಾಧಿಕಾರಿ ಡಾ| ವಾಘ್ ಸರ್ವರ ಸಹಕಾರಕ್ಕೆ ಅಭಿವಂದಿಸಿದರು.

 

 
More News

ಮುಂಬಯಿಯಲ್ಲಿ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ
ಮುಂಬಯಿಯಲ್ಲಿ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ
ಮುಂಬಯಿ ಮಾರುಕಟ್ಟೆಗೆ `ಉಡುಪಿ ಕೇದಾರ ಕಜೆ ಅಕ್ಕಿ' ಬಿಡುಗಡೆ
ಮುಂಬಯಿ ಮಾರುಕಟ್ಟೆಗೆ `ಉಡುಪಿ ಕೇದಾರ ಕಜೆ ಅಕ್ಕಿ' ಬಿಡುಗಡೆ
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ  ಸಂಸ್ಥೆಯಿಂದ ರಾಷ್ಟ್ರದ ತ್ರಿವರ್ಣ ಧ್ವಜ ವಿತರಣೆ
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯಿಂದ ರಾಷ್ಟ್ರದ ತ್ರಿವರ್ಣ ಧ್ವಜ ವಿತರಣೆ

Comment Here