Monday 15th, August 2022
canara news

ಜ.24: ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ-ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ 2020

Published On : 24 Jan 2021   |  Reported By : Rons Bantwal


ಸರ್ವೋತ್ಕೃಷ್ಟ ಸಂಸದ ಮಾನ್ಯತಾ ಗೋಪಾಲ ಸಿ.ಶೆಟ್ಟಿ ಅವರಿಂದ ಪ್ರಶಸ್ತಿ ಪ್ರದಾನ


ಮುಂಬಯಿ, ಜ.22: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆ ವಾರ್ಷಿಕವಾಗಿ ಕೊಡಮಾಡುವ ಚೊಚ್ಚಲ ದಿವಂಗತ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2020 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದೇ ಜ.24ರ ಆದಿತ್ಯವಾರ ಪೂರ್ವಾಹ್ನ 10.30 ಗಂಟೆಗೆ ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿನ ಎಂವಿಎಂ ಶ್ರೀಮತಿ ಶಾಲಿನಿ ಜಿ.ಶಂಕರ್ ಸಭಾಗೃಹದಲ್ಲಿ ನಡೆಯಲಿದೆ.

 Gopal C.Shetty (MP)

G K Ramesh

Rons Bantwal.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಸರ್ವೋತ್ಕೃಷ್ಟ ಸಂಸದ ಮಾನ್ಯತೆಗೆ ಪಾತ್ರರಾದ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಮುಖ್ಯ ಅತಿಥಿüಯಾಗಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ.ಎಲ್ ಬಂಗೇರ ಅತಿಥಿü ಅಭ್ಯಾಗತರಾಗಿ ಆಗಮಿಸಿ ಪತ್ರಕರ್ತರ ಸಂಘದ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿಯನ್ನು ಬೃಹನ್ಮುಂಬಯಿಯಲ್ಲಿನ ಹಿರಿಯ ಕನ್ನಡ ಪತ್ರಕರ್ತ, ಮೊಗವೀರ ಮಾಸಿಕದ ಮಾಜಿ ಸಂಪಾದಕ ಜಿ.ಕೆ ರಮೇಶ್ ಅವರಿಗೆ ಪ್ರದಾನಿಸಲಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ರಂಗ ಎಸ್.ಪೂಜಾರಿ ತಿಳಿಸಿದ್ದಾರೆ.

ಕೆ.ಟಿ ವೇಣುಗೋಪಾಲ್ ಅವರ ಸುಪುತ್ರ ವಿಕಾಸ್ ವೇಣುಗೋಪಾಲ್ (ಸ್ವರ್ಗೀಯ ತುಳಸೀ ವೇಣುಗೋಪಾಲ್) ಮತ್ತು ಪರಿವಾರದ ಪ್ರಧಾನ ಪ್ರಾಯೋಜಕತ್ವದಲ್ಲಿ ಕೊಡಮಾಡುವ ಈ ಪ್ರಶಸ್ತಿಯು ತಲಾ ರೂಪಾಯಿ 25,000/- ನಗದು, ಸ್ಮರಣಿಕೆ ಮತ್ತು ಪ್ರಶಸ್ತಿಪತ್ರ ಹೊಂದಿದ್ದು, ಪ್ರಶಸ್ತಿ ವಿತರಣಾ ಸಮಿತಿಗೆ ಸಂಘದ ಸಲಹಾ ಸಮಿತಿ ಸದಸ್ಯೆ ಡಾ| ಸುನೀತಾ ಎಂ.ಶೆಟ್ಟಿ ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಧ್ಯಕ್ಷೆ ಆಗಿದ್ದು ಸಂಘದ ವಿಶೇಷ ಆಮಂತ್ರಿತ ಸದಸ್ಯರುಗಳಾದ ಸಾ.ದಯಾ (ದಯಾನಂದ್ ಸಾಲ್ಯಾನ್) ಮತ್ತು ಹರೀಶ್ ಹೆಜ್ಮಾಡಿ ಆಯ್ಕೆ ಸಮಿತಿ ಸದಸ್ಯರಾಗಿದ್ದರು ಎಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ತಿಳಿಸಿದ್ದಾರೆ.

ಜಾಗತಿಕವಾಗಿ ಪಸರಿಸಿದ ಕೋವಿಡ್ ಸಾಂಕ್ರಮಿಕ ರೋಗದ ಮುನ್ನಚ್ಚರಿಕಾ ಕ್ರಮವಾಗಿ ಉಭಯ ಸರಕಾರಗಳ ಕಾನೂನು ಪಾಲನಾನುಸಾರವಾಗಿ ಈ ಬಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ತೀರಾ ಸರಳವಾಗಿ ನಡೆಸುವುದರಿಂದ ಸರ್ವರೂ ಸಹಕರಿಸುವಂತೆ ಸಂಘದ ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ ಮತ್ತು ಗೌರವ ಕಾರ್ಯದರ್ಶಿ ರವೀಂದ್ರ ಆರ್.ಶೆಟ್ಟಿ ತಾಳಿಪಾಡಿ ತಿಳಿಸಿದ್ದಾರೆ.

 
More News

ಮುಂಬಯಿಯಲ್ಲಿ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ
ಮುಂಬಯಿಯಲ್ಲಿ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ
ಮುಂಬಯಿ ಮಾರುಕಟ್ಟೆಗೆ `ಉಡುಪಿ ಕೇದಾರ ಕಜೆ ಅಕ್ಕಿ' ಬಿಡುಗಡೆ
ಮುಂಬಯಿ ಮಾರುಕಟ್ಟೆಗೆ `ಉಡುಪಿ ಕೇದಾರ ಕಜೆ ಅಕ್ಕಿ' ಬಿಡುಗಡೆ
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ  ಸಂಸ್ಥೆಯಿಂದ ರಾಷ್ಟ್ರದ ತ್ರಿವರ್ಣ ಧ್ವಜ ವಿತರಣೆ
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯಿಂದ ರಾಷ್ಟ್ರದ ತ್ರಿವರ್ಣ ಧ್ವಜ ವಿತರಣೆ

Comment Here