Wednesday 18th, May 2022
canara news

ಎಂಆರ್‍ಜಿ ಗ್ರೂಪಿನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರಿಗೆ ಭಾರತೀಯ ವ್ಯವಹಾರಗಳ ದೂರ ದೃಷ್ಠಿಯ ನಾಯಕ 2020 ಪ್ರಶಸ್ತಿ

Published On : 31 Jan 2021   |  Reported By : Rons Bantwal


ಮುಂಬಯಿ, ಜ.30: ಎಂಆರ್‍ಜಿ ಸಮೂಹದ ಆಡಳಿತ ನಿರ್ದೇಶಕ, ಉದ್ಯಮಿ ಪ್ರಕಾಶ್ ಶೆಟ್ಟಿ ಅವರು ಭಾರತೀಯ ವ್ಯವಹಾರಗಳ ದೂರದೃಷ್ಟಿಯ ನಾಯಕ 2020 ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನೆಟ್‍ವರ್ಕ್ ಮೀಡಿಯಾ ಗ್ರೂಪ್ ಇದರ ಪ್ರಧಾನ ಸಂಪಾದಕ ಹಾಗೂ 11ನೇ ವಾರ್ಷಿಕ ಭಾರತ ನಾಯಕತ್ವ ಕಾನ್ಕ್ಲೇವ್ ಮತ್ತು ಭಾರತೀಯ ವ್ಯವಹಾರಗಳ ನಾಯಕತ್ವ ಪ್ರಶಸ್ತಿಗಳ ತೀರ್ಪುಗಾರರ ಅಧ್ಯಕ್ಷ ಸತ್ಯ ಬ್ರಹ್ಮ ಅವರು ಈ ಮಾಹಿತಿ ನೀಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯದೇ ಅವರ ಕಚೇರಿಗೆ ಕಳುಹಿಸಲಿದ್ದಾರೆ.

ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿಯವರು ಭಾರತದಲ್ಲಿ 1993ರಿಂದ ರಿಯಲ್ ಎಸ್ಟೇಟ್ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಹಲವೆಡೆ ಶಾಖೆಗಳನ್ನು ಹೊಂದಿರುವ ಗೋಲ್ಡ್ ಫಿಂಚ್ ಹೋಟೆಲ್ಸ್, ಅಂತರಾಷ್ಟ್ರೀಯ ಮಟ್ಟದ ಕೋರ್ಟ್ ಯಾರ್ಡ್ ಬೈ ಮಾರಿಯೋಟ್ ಹೋಟೆಲ್, ಡಬ್ಬಲ್ ಟ್ರೀ ಬೈ ಹಿಲ್ಟನ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮುಂದೆ ಹಲವಾರು ಹೋಟೆಲ್‍ಗಳು, ಕಟ್ಟಡಗಳು ವಾಣಿಜ್ಯ ಕಾಂಪ್ಲೆಕ್ಸ್‍ಗಳನ್ನು ನಿರ್ಮಿಸಿ ಅನೇಕ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಯೋಜನೆ ಇವರದ್ದಾಗಿದೆ.

ದೇಶದ ಇತರ ಐದು ಕಂಪನಿಗಳ ಪ್ರಮುಖರು ಈ ಪ್ರಶಸ್ತಿಯ ಅಂತಿಮ ಆಯ್ಕೆಯಲ್ಲಿದ್ದು, ಸಾರ್ವಜನಿಕ ಮತದಾನ ಮತ್ತು ತೀರ್ಪುಗಾರರ ಮತದಾನದ ನಂತರ ಅವರು ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ಮೊದಲು ಈ ಪ್ರಶಸ್ತಿಯು ಹಲವು ಪ್ರಸಿದ್ಧ ಉದ್ಯಮಿಗಳಿಗೆ ದೊರಕಿದ್ದು ಅದರಲ್ಲಿ ರಥನ್ ಟಾಟ, ನಾರಾಯಣ ಮೂರ್ತಿ, ಮುಖೇಶ್ ಅಂಬಾನಿ, ಕಿರಣ್ ಮುಜುಮ್ ದಾರ್ ಶ್ವ, ಪ್ರಿಯಾಂಕ ಚೋಪ್ರಾ ಮೊದಲಾದವರು ಸೇರಿದ್ದಾರೆ.

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here