Thursday 25th, April 2024
canara news

ಕೋವಿಡ್ ಲಸಿಕೆ ಅಭಿಯಾನಗೈದ ಬಂಟರ ಸಂಘ ಮುಂಬಯಿ-ಅಂಧೇರಿ ಬಾಂದ್ರ ಸಮಿತಿ

Published On : 08 Apr 2021   |  Reported By : Rons Bantwal


ಕೊರೋನಾ ; ಸ್ವತಃ ಸುರಕ್ಷಿತರಾಗಿ ಇತರರ ಕಾಳಜಿ ವಹಿಸಿ: ಚಂದ್ರಹಾಸ ಕೆ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.04: ಜಾಗತಿಕವಾಗಿ ಸೇರಿದಂತೆ ಎರಡನೇ ಅಲೆಯಾಗಿ ರಾಷ್ಟ್ರವ್ಯಾಪಿಸಿದ ಕೊರೋನಾದ ಆರ್ಭಟ, ಅಬ್ಬರಿಸುವಿಕೆ ಎಣಿಸಲಸಾಧ್ಯ. ಇದನ್ನು ತಡೆಯುವಲ್ಲಿ ಜನರ ಉದಾಸೀನ ಸಲ್ಲದು. ತಿಳಿದೋ, ತಿಳಿಯದೆನೋ ಜನರು ತೋರುವ ಅಸಡ್ಡೆಯಿಂದಲೇ ಕೊರೋನಾ ತೀವ್ರಗತಿಯಲ್ಲಿ ಹಬ್ಬುತ್ತಿರುವುದು ಶೋಚನೀಯ. ಕೊರೋನಾ ನಿವಾರಣೆಗೆ ಮಾಸ್ಕ್ ಧಾರಣೆಯೇ ಪ್ರಥಮ ಮತ್ತು ಅತ್ಯಗತ್ಯ ಅಸ್ತ್ರವಾಗಿದೆ. ಕೊರೋನಾ ನಿವಾರಣೆಗೆ ಬಂಟರ ಸಂಘದ ಸೇವಾ ಶ್ರದ್ಧೆ ಸ್ತುತ್ಯಾರ್ಹ. ಸಂಘದ ಒಂಭತ್ತು ಪ್ರಾದೇಶಿಕ ಸಮನ್ವಯ ಸಮಿತಿಗಳನ್ನೊಳಗೊಂಡು ಶ್ರಮಿಸುತ್ತಿರುವ ಸೇವೆಯೂ ಶ್ಲಾಘನೀಯ ಎಂದು ಬಂಟರ ಸಂಘ ಮುಂಬಯಿ ಇದರ ಬಂಟ್ಸ್ ಹೆಲ್ತ್ ಸೆಂಟರ್‍ನ ಕಾರ್ಯಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ ಕರೆಯಿತ್ತರು.

ಬಂಟರ ಸಂಘ ಮುಂಬಯಿ ಮತ್ತು ಬಿಎಸ್‍ಎಂ ಅಂಧೇರಿ ಬಾಂದ್ರ ಸಮಿತಿಗಳು ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಗುರುವಾರ ಬೆಳಿಗ್ಗೆ ಅಂಧೇರಿ ಪೂರ್ವದ ಮರೋಲ್ ಮರೋಶಿ ಇಲ್ಲಿನ ಬಿಎಂಸಿ ಸಂಚಾಲಿತ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಎಲ್ಲಾ ಫಲಾನುಭವಿಗಳಿಗೆ ಧರ್ಮಾರ್ಥ ಕೋವಿಡ್ ಲಸಿಕೆ (ಕೋವಿ-ಶೀಲ್ಡ್) ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮವನ್ನುದ್ದೇಶಿಸಿ ಡಾ| ಸತ್ಯಪ್ರಕಾಶ್ ಶೆಟ್ಟಿ ಮಾತನಾಡಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಇವರ ಸಾರಥ್ಯದಲ್ಲಿ ಬಿಎಸ್‍ಎಂ ಗೌ| ಪ್ರ| ಕಾರ್ಯದರ್ಶಿ, ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ ನಿಕಟಪೂರ್ವ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಬಿಎಸ್‍ಎಂ ಮಹಿಳಾ ವಿಭಾಗಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗಧ್ಯಕ್ಷ ಸಾಗರ್ ದಿವಾಕರ ಶೆಟ್ಟಿ, ಮಧ್ಯ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿಗಳ ಸಮನ್ವಯಕ ಗುಣಪಾಲ್ ಆರ್.ಶೆಟ್ಟಿ ಐಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೋವಿಡ್ ಮುಕ್ತ ಸಮಾಜಕ್ಕಾಗಿ ತ್ರಿಬಲ್-ಟಿ ಗೈಡ್‍ಲೆನ್ಸ್ ಪಾಲಿಸಲೇಬೇಕು. ಟ್ರ್ಯಾಕ್, ಟೆಸ್ಟ್, ಟ್ರೀಟ್ ಈ ಜವಾಬ್ದಾರಿ ಸರಕಾರದ ಮೇಲಿದೆ. ಕೋವಿಡ್ ಸೂಕ್ತ ನಡವಳಿಕೆ ಮತ್ತು ವ್ಯಾಕ್ಸಿನೇಷನ್ ಕೂಡಾ ಮತ್ತೆರಡು ಜವಾಬ್ದಾರಿಗಳಾಗಿವೆ. ಇವುಗಳ ಅನುಸರಣೆ ಪ್ರತೀಯೊಬ್ಬ ನಾಗರಿಕರ ಮೇಲಿದೆ. ಸೂಕ್ತ ನಡವಳಿಕೆ ಅಂದರೆ ಸರಿಯಾಗಿ ಮಾಸ್ಕ್ ಧರಿಸುವಿಕೆ. ಮಾಸ್ಕ್ ತೊಡುಸುವುದು ಕೋವಿಡ್‍ಗೆ ಬುಲೆಟ್ ಫ್ರೂಪ್ ಜಾಕೇಟ್ ಇದ್ದಂತೆ. ಆದ್ದರಿಂದ ಮಾಸ್ಕ್ ಧರಿಸುವಲ್ಲಿ ರಾಜಿ ಮಾಡದಿರಿ. ಮಾಸ್ಕ್‍ಧಾರಣೆಯೇ ಅಸ್ತ್ರವೆಂದರೆ ಆಗಿದೆ. ಈ ಬಗ್ಗೆ ಜನರಲ್ಲಿ ಅರಿವು ತುಂಬಾ ಕಡಿಮೆಯಿದೆ. ಮಾಸ್ಕ್ ಧರಿಸಿದರೂ ಮೂಗಿನ ಕೆಳಗಿರಿಸುವುದು. ಗಂಟಲತ್ತಿನ ಸಿಕ್ಕಿಸಿ ತಮಾಷೆಯಾಗಿಸುವುದು ಇಂತಹದ್ದೇ ಜಾಸ್ತಿಯಾಗಿದೆ. ಉಚ್ಚನ್ಯಾಯಲಯವೂ ಆದೇಶ ನೀಡಿದಂತೆ ವಾಹನದ ಒಳಗಿದ್ದರೂ ಮಾಸ್ಕ್ ಧರಿಸಬೇಕು ಅಂದಮೇಲೆ ಇಂತಹ ಆದೇಶಗಳನ್ನು ತಪ್ಪದೇ ಪಾಲಿಸಿ ಕೊರೋನಾವನ್ನು ಒದ್ದೋಡಿಸಿ ಎಂದೂ ಡಾ| ಸತ್ಯಪ್ರಕಾಶ್ ಶೆಟ್ಟಿ ಹಿತನುಡಿಗಳನ್ನಾಡಿದರು.

ಚಂದ್ರಹಾಸ ಕೆ.ಶೆಟ್ಟಿ ಮಾತನಾಡಿ ಈ ವಿಶ್ವದಾದ್ಯಂತ ಆರೋಗ್ಯದ ಸಮಸ್ಯೆಯಾಗಿದೆ. ಇದೊಂದು ಒಳ್ಳೆಯ ಮತ್ತು ದೇವರು ಮೆಚ್ಚುವ ಕೆಲಸವಾಗಿದೆ. ಸದ್ಯದ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವತಃ ಕಾಳಜಿ ವಹಿಸಿ ಇತರರ ಸುರಕ್ಷತೆ ಬಗ್ಗೆ ನಿಗಾವಹಿಸುವುದು ಎಲ್ಲರ ಪರಮ ಕರ್ತವ್ಯವಾಗಿದೆ. ನಾವೆಲ್ಲರೂ ಸಮಾನಮನಸ್ಕರಾಗಿ ಎಲ್ಲರ ಒಳಿತಿಗಾಗಿ ಸ್ವಸ್ಥ ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸೋಣ ಎಂದರು.

ಎರಡನೇ ಅಲೆಯಾಗಿ ಜಾಗತಿಕವಾಗಿ ಪಸರಿಸಿರುವ ಕೋವಿಡ್ ರೋಗದ ಬಗ್ಗೆ ಎಚ್ಚರವಾಗಿದ್ದು ಎಲ್ಲರೂ ಜಾಗೃತರಾಗುವ ಅಗತ್ಯವಿದೆ. ಮಕ್ಕಳಿಂದ ವೃದ್ಧಾಪ್ಯರೂ ಈ ಬಗ್ಗೆ ಕಾಳಜಿ ವಹಿಸಿ ಒಟ್ಟಾರೆ ರೋಗಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಕಾರ್ಯಪ್ರವೃತ್ತರಾಗೋಣ ಎಂದು ಗುಣಪಾಲ್ ಶೆಟ್ಟಿ ತಿಳಿಸಿದರು.

ಜನತೆಯ ಆರೋಗ್ಯ ಕಾಪಾಡುವ ಬಹುದೊಡ್ಡ ಜವಾಬ್ದಾರಿ ಎಲ್ಲಾ ಸಂಸ್ಥೆಳದ್ದಾಗಿದೆ. ಕೋಟ್ಯಾಂತರ ಜನತೆ ಇಂದು ಲಸಿಕೆ ಹಾಕಿಸುವಲ್ಲಿ ಸಜ್ಜಾದರೂ ಸರಕಾರದ ಆದೇಶಾನುಸಾರವೇ ಲಸಿಕೆ ಚುಚ್ಚಿಸಿಕೊಳ್ಳ ಬೇಕಾಗುವುದು. ನಾವು ಅಪೇಕ್ಷಿಸಿದಕ್ಕಿಂತಲೂ ಅಧಿಕ ಜನರು ಆಗಮಿಸಿದ್ದು ಸಾಧ್ಯವಾದಷ್ಟು ಜನರಿಗೆ ಇಂದು ಲಸಿಕೆ ನೀಡಲಾಗುವುದು. ಬಾಕಿ ಜನರಿಗೂ ಒಂದೆರಡು ದಿನಗಳಲ್ಲಿ ಲಸಿಕೆ ಹಾಕಿಸುವಲ್ಲಿ ನಾವು ಸಹಕರಿಸುತ್ತೇವೆ. ನಾವು ನೀಡಿದ ಭರವಸೆಯಂತೆ ನಿಮ್ಮೆಲ್ಲರಿಗೂ ಸ್ಪಂದಿಸುತ್ತೇವೆ ಎಂದು ಬಿಎಸ್‍ಎಂ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಆರ್.ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸೆವೆನ್ ಹಿಲ್ಸ್ ಆಸ್ಪತ್ರೆಯ ಮುಖ್ಯಸ್ಥ (ಡೀನ್) ಡಾ| ಬಾಲಕೃಷ್ಣ ಅಡ್ಸೂಲ್, ತಜ್ಞ ಡಾ| ಭುಜಂಗ ಪೈ, ಸಿಇಒ ಡಾ| ಶಂಕರ್ ಕೃಷ್ಣಮೂರ್ತಿ, ಮಾಜಿ ನಗರ ಸೇವಕ ಜಗದೀಶ್ ಬಿ.ಅವಿೂನ್, ಬಿಎಸ್‍ಎಂ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಯಶವಂತ ಶೆಟ್ಟಿ ಕಾರ್ಯದರ್ಶಿ ಪ್ರಸಾದ್ ವಿ.ಶೆಟ್ಟಿ, ಕೋಶಾಧಿಕಾರಿ ಕರುಣಾಕರ ವಿ.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ವಜ್ರಾ ಪೂಂಜ, ಯುವ ವಿಭಾಗಧ್ಯಕ್ಷ ಅಭಿಷೇಕ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸೂರಜ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾಕರ್ ಶೆಟ್ಟಿ, ಆರೋಗ್ಯ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಬಿಎಸ್‍ಎಂ ಮಾಜಿ ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದು ಲಸಿಕೆ ಸ್ವೀಕೃತರಿಗೆ ಸಹಕರಿಸಿದರು.

ಬಿಎಸ್‍ಎಂ ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ ಸಂಚಾಲಕ ನ್ಯಾಯವಾದಿ ಆರ್.ಜಿ ಶೆಟ್ಟಿ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು. ಉಪ ಕಾರ್ಯಾಧ್ಯಕ್ಷ ರಮೇಶ್ ಡಿ.ರೈ ಕಯ್ಯಾರ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here