Thursday 25th, April 2024
canara news

ಸುರತ್ಕಲ್ ಕಾನ-ಕಟ್ಲ ಕತ್ತಲೆಯಲ್ಲಿದ್ದ ಮನೆಗೆ ಬೆಳಕಿನ ಭಾಗ್ಯ

Published On : 23 Apr 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಎ.22: ಸುರತ್ಕಲ್ ಕಾನ-ಕಟ್ಲ ಬಳಿಯ ಆಶ್ರಯ ಕಾಲನಿಯಲ್ಲಿ ವಿದ್ಯುತ್ ದೀಪ ಇಲ್ಲದೆ ಕತ್ತಲೆಯಲ್ಲಿದ್ದ ಬಡ ಕುಟುಂಬದ ಮನೆಗೆ ವಿದ್ಯುತ್ ದೀಪ ಅಳವಡಿಸಿ ಆ ಮನೆಗೆ ಬೆಳಕು ನೀಡಲಾಗಿದೆ.

ಕಟ್ಲ ಆಶ್ರಯ ಕಾಲನಿಯ ನಿವಾಸಿ ಮಂಜುನಾಥ ಮತ್ತು ದಿವ್ಯಾ ದಂಪತಿಗಳು ಆಥಿರ್üಕವಾಗಿ ಬಲಾಡ್ಯರಾಗಿಲ್ಲ, ತೀರಾ ಬಡವರಾಗಿದ್ದ ಅವರ ಮನೆಗೆ ವಿದ್ಯುತ್ ದೀಪ ಇರಲಿಲ್ಲ. ಇದನ್ನು ಮನಗಂಡ ಸಮಾಜ ಸೇವಕಿ ಶೈಲಾ ಮಾಬೆನ್ ಈ ವಿಚಾರವನ್ನು ಬಿಜೆಪಿ ಮುಖಂಡ ಪ್ರಶಾಂತ್ ನಾಕ್ ಮುಡಾಯಿಕೊಡಿ ಮತ್ತು ಸ್ಥಳೀಯ ಕಾಪೆರ್Çೀರೇಟರ್ ಸರಿತಾ ಅವರ ಗಮನಕ್ಕೆ ತಂದರು.

ಬಳಿಕ ಅವರೆಲ್ಲರೂ ಮುತುವರ್ಜಿ ವಹಿಸಿ ಮಂಜುನಾಥ-ದಿವ್ಯಾ ದಂಪತಿಯ ಮನೆಗೆ ವಿದ್ಯುತ್ ದೀಪವನ್ನು ಅಳವಡಿಸಲು ನೆರವಾದರು. ಮೊನ್ನೆ ಮನೆಗೆ ವಿದ್ಯುತ್ ಸಂಪರ್ಕವನ್ನೂ ನೀಡಲಾಯಿತು.

ಈ ಸಂದರ್ಭದಲ್ಲಿ ಕಾಪೆರ್Çೀರೇಟರ್ ಸರಿತಾ, ಪ್ರಶಾಂತ್ ನಾಕ್ ಮುಡಾಯಿ ಕೊಡಿ, ಉರ್ಬನ್, ಶೈಲಾ ಮಾಬೆನ್, ನಾರಾಯಣ ಪಾಟಾಳಿ, ಲೋಕಯ್ಯ ಪೂಜಾರಿ, ಪದ್ಮನಾಭ, ವಿಘ್ನೇಶ್, ಪುರುಷೋತ್ತಮ, ಕೃಷ್ಣ, ನವೀನ್‍ಚಂದ್ರ, ಮೊದಲಾದವರು ಉಪಸ್ಥಿತರಿದ್ದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here