Sunday 26th, June 2022
canara news

ಜೆಸಿಐ ಮಂಗಳಗಂಗೋತ್ರಿ ವತಿಯಿಂದ ಮಧ್ಯಾಹ್ನದ ಊಟ ವ್ಯವಸ್ಥೆ

Published On : 04 May 2021   |  Reported By : Rons Bantwal


ಹಸಿದವರಿಗೆ ಅನ್ನ ನೀಡುವುದು ಎಲ್ಲರ ಜವಾಬ್ದಾರಿ : ಫ್ರಾಂಕಿ ಪ್ರಾನ್ಸಿಸ್ ಕುಟಿನ್ಹಾ

ಮುಂಬಯಿ (ಆರ್‍ಬಿಐ), ಜ.17: ರಾಜ್ಯದಾದ್ಯಂತ ಮತ್ತೆ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಉಳ್ಳಾಲ ಭಾಗದ ರಸ್ತೆ ಬದಿಯಲ್ಲಿ ಇರುವ ನಿರ್ಗತಿಕ, ಭಿಕ್ಷುಕ, ಪೌರ ಕಾರ್ಮಿಕರಿಗೆ ಜೆಸಿಐ ಮಂಗಳಗಂಗೋತ್ರಿ ವತಿಯಿಂದ ಮಧ್ಯಾಹ್ನದ ಊಟ ವಿತರಿಸಲಾಯಿತು. ಜೆಸಿಐ ಮಂಗಳಗಂಗೋತ್ರಿ ಸ್ಥಾಪಕ ಅಧ್ಯಕ್ಷ ತ್ಯಾಗಂ ಹರೇಕಳ ಊಟ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತ್ಯಾಗಂ ಹರೇಕಳ ಮಾತನಾಡಿ ಲಾಕ್‍ಡೌನ್ ಘೋಷಿಣೆಯಾಗಿ ಮುಗಿಯುವ ವರೆಗೆ ಜೆಸಿಐ ಮಂಗಳಗಂಗೋತ್ರಿ ವತಿಯಿಂದ ನಿರಂತರ ಮಧ್ಯಾಹ್ನದ ಊಟ ವಿತರಿಸಲಾಗುವುದು ಎಂದರು.

ಜೆಸಿಐ ಮಂಗಳಗಂಗೋತ್ರಿ ಅಧ್ಯಕ್ಷ ಫ್ರಾಂಕಿ ಪ್ರಾನ್ಸಿಸ್ ಕುಟಿನ್ಹಾ ಮಧ್ಯಾಹ್ನದ ಊಟ ವಿತರಿಸಿ ಮಾತನಾಡಿ ಹಸಿದವರಿಗೆ ಅನ್ನ ನೀಡುವುದು ಎಲ್ಲರ ಜವಾಬ್ದಾರಿ ಆಗಿದೆ.ಈ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ಲಾಕ್‍ಡೌನ್ ದಿನಗಳಲ್ಲಿ ನಿರಂತರವಾಗಿ ಅನ್ನದಾನ ಮಾಡಲಾಗುವುದು ಎಂದರು.


ಈ ವೇಳೆ ವಲಯ ಆಡಳಿತ ಮಂಡಳಿಯ ಸದಸ್ಯ ಬಾದ್ ಷಾ ಸಾಂಬಾರ್ ದೋಟ, ಪೂರ್ವ ಅಧ್ಯಕ್ಷ ಪೆÇ್ರ ಪ್ರಶಾಂತ್ ನಾಯ್ಕ್, ಮೋಹನ್ ಶಿರ್ಲಾಲ್, ಪವಿತ್ರ ಗಣೇಶ್, ಕಾರ್ಯದರ್ಶಿ ಪ್ರತಿಮಾ ಹೆಬ್ಬಾರ್, ಉಪಾಧ್ಯಕ್ಷ ಜಯಲಕ್ಷ್ಮಿ, ಹಿರಿಯ ಜೆಸಿ ಯು.ಆರ್ ಶೆಟ್ಟಿ , ಜೊತೆ ಕಾರ್ಯದರ್ಶಿ ಬಾಬು, ನಿರ್ದೇಶಕಿ ನಳಿನಿ ಗಟ್ಟಿ, ಜಮಾಅತೆ ಇಸ್ಲಾಂ ಹಿಂದ್ ಮಂಗಳೂರು ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್, ಮಹಿಳಾ ಸಂಚಾಲಕಿ ಝೀನತ್ ಹಸನ್, ಟೀಂ ವೆಲ್ಫೇರ್ ಪಾರ್ಟಿಯ ಉಳ್ಳಾಲ ವಿಧಾನ ಸಭಾ ಕ್ಷೇತ್ರ ಮುಖ್ಯಸ್ಥ ಅಬ್ದುಲ್ ಸಲಾಂ ಸಿ.ಹೆಚ್, ಪದಾಧಿಕಾರಿಗಳಾದ ಮನ್ಸೂರು ಸಿ.ಹೆಚ್, ಅಸ್ಗರ್, ತೌಸೀಫ್ ಮುಂತಾದವರು ಉಪಸ್ಥಿತರಿದ್ದರು

 

 
More News

ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ
ಜೂ.29: ಸಾಂತಾಕ್ರೂಜ್‍ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ
ಜೂ.29: ಸಾಂತಾಕ್ರೂಜ್‍ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ

Comment Here