Sunday 26th, June 2022
canara news

ಖಾಸಗಿ-ಸಹಕಾರಿ ಬ್ಯಾಂಕ್ ಸಿಬ್ಬಂದಿಗಳಿಗೆ ಸ್ಥಳೀಯ ರೈಲುಗ¼ ಪ್ರಯಾಣ ನಿಷೇಧ

Published On : 07 May 2021   |  Reported By : Rons Bantwal


ಬ್ಯಾಂಕು ಸೇವೆ ಅಂದರೆ ಖಾಸಾಗಿ ಯಾ ಸರಕಾರಿ ಒಂದೇ ತಾನೇ..?
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.04: ಕೊರೋನಾ ನಿರ್ಮೂಲನೆಗಾಗಿ ಉಭಯ ಸರಕಾರಗಳು ಒಂದಷ್ಟು ಕಟ್ಟುನಿಟ್ಟಾದ ಕಾನೂನು ಕಾಯ್ದೆಗಳನ್ನು ಜಾರಿ ಮಾಡಿವೆ. ಅವುಗಳಲ್ಲಿ ರೈಲು ಪ್ರಯಾಣವೂ ಒಂದಾಗಿದೆ. ಈ ಪೈಕಿ ಯಾವುದು ಇದೆ, ಯಾವುದು ಎಲ್ಲ ಎಂಬುವುದನ್ನು ಆಯಾ ಸರಕಾರಿ ಇಲಾಖೆಗಳು, ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ. ಬ್ಯಾಂಕ್ ನೌಕರರಿಗೆ ಇಲ್ಲಿ ಮುಕ್ತ ಅವಕಾಶವನ್ನು ಕಲ್ಪಿಸಿದೆ. ಆದರೆ ಇಲ್ಲೂ ಸರಕಾರಿ, ರಾಷ್ಟ್ರೀಯ ಮತ್ತು ಖಾಸಾಗಿ ಬ್ಯಾಂಕುಗಳ ನೌಕರರು ಎಂಬುವುದನ್ನು ವಿಭಾಗೀಸಿರುವುದು ಎಷ್ಟು ಸಮಂಜಸ ಅನ್ನುವುದನ್ನು ಸಹಕಾರಿ ಬ್ಯಾಂಕ್ ನೌಕರರು ಪ್ರಶ್ನಿಸಿದ್ದಾರೆ.

ಹಲವಾರು ವರ್ಷಗಳಿಂದ ರೈಲುಯಾನಗೈದು ಬ್ಯಾಂಕ್ ಸೇವೆಗೈಯುತ್ತಿದ್ದ ನನ್ನಲ್ಲಿ ಯಾವುದೇ ವಾಹನವಿಲ್ಲ. ವಾರ್ಷಿಕ ರೈಲುಪಾಸು ನನ್ನಲ್ಲಿರುತ್ತದೆ. ಇತ್ತೀಚೆಗೆ ಪಾಸು ಮುಕ್ತಾಯವಾಗಿದ್ದು ನಾನು ಚರ್ಚ್‍ಗೇಟ್ ನಿಲ್ದಾಣಕ್ಕೆ ಹೋದಾಗ ಅವರು ನೀವು ಕೋ.ಆಪ್ ಬ್ಯಾಂಕ್ ಉದ್ಯೋಗಿ ಆಗಿರುವುದರಿಂದ ನಾವು ನಿಮಗೆ ಪಾಸ್ ನೀಡಲು ಸಾಧ್ಯವಿಲ್ಲ ಎಂದರು. ನಾನು ಅಂಧೇರಿ ನಿಲ್ದಾಣಕ್ಕೆ ಮತ್ತು ಜೋಗೇಶ್ವರಿ ನಿಲ್ದಾಣಕ್ಕೆ ಹೋದರೂ ಅಲ್ಲೂ ಇದೇ ಉತ್ತರ. ಇದು ನ್ಯಾಯವೇ...? ನಾನು ದಿನಾ ಜೋಗೇಶ್ವರಿಯಿಂದ ಫೆÇೀರ್ಟ್ (ವಿಟಿ)ಗೆ ಟ್ಯಾಕ್ಸಿ ಮಾಡಿಕೊಂಡು ಹೋಗುವುದು ಸಾಧ್ಯವೇ..? ಹಣಕಾಸು ಸೇವೆ ಅಂದರೆ ಅದು ಕೋ.ಆಪ್ ಬ್ಯಾಂಕ್ ಆಗಿರಲಿ ಅಥವಾ ಪ್ರೈವೇಟ್ ಬ್ಯಾಂಕ್ ಆಗಿರಲಿ ಒಂದೇ ತಾನೇ ಈ ಮಧ್ಯೆ ತಾರತಮ್ಯ ಯಾಕೆ ತಿಳಿಯದು ಎಂದು ಖಾಸಾಗಿ ಬ್ಯಾಂಕ್‍ವೊಂದರ ಉದ್ಯೋಗಿ ರಾಯನ್ ಬ್ರಾನ್ಕೋ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮುಂಬಯಿ ಅಂತಹ ಮಹಾನಗರ ಮಾತ್ರವಲ್ಲ ರಾಷ್ಟ್ರದ ಆಥಿರ್üಕ ರಾಜಧಾನಿಯಲ್ಲಿ ಅದೆಷ್ಟೋ ರಾಜ್ಯ, ಖಾಸಾಗಿ ಮತ್ತು ಸಹಕಾರಿ ಬ್ಯಾಂಕ್‍ಗಳಿದ್ದಾವೆ. ಈ ಬ್ಯಾಂಕುಗಳ ಸಿಬ್ಬಂದಿಗಳು, ನೌಕರರು ಮುಂಬಯಿ ಮಹಾನಗರದ ಉದ್ದಗಲದಲ್ಲೋ, ಉಪನಗರಗಳಲ್ಲೋ ವಾಸವಾಗಿರುತ್ತಾರೆ. ಇವರಿಗೆ ಬ್ಯಾಂಕ್ ಆಡಳಿತ ಕೆಲವೊಂದು ಷರತ್ತುಗಳೊಂದಿಗೆ ಸೇವೆಗೆ ಅನುವು ಮಾಡಿ ಕೊಟ್ಟಿದೆ. ಆದರೂ ರೈಲು ಯಾನಕ್ಕೆ ಇವರು ವಂಚಿತರಾಗಿರುವುದು ಸೋಜಿಗವೇ ಸರಿ.

ಕೊರೋನಾ ಎರಡನೇ ಅಲೆಯ ಆರಂಭದಿಂದಲೇ ನಮಗೆ ಆರ್‍ಬಿಐ, ರಾಜ್ಯ ಸಹಕಾರಿ ಇಲಾಖೆಗಳಿಂದ ಕಟ್ಟುನಿಟ್ಟಿನ ಕ್ರಮಕ್ಕಾಗಿ ಬ್ಯಾಂಕ್ ಮಂಡಳಿಯಲ್ಲಿ ಸಹಯೋಗ ಕೋರಿದ್ದಾರೆ. ಅವರ ಆಜ್ಞೆಗಳನ್ನು ಪಾಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅವಶ್ಯ ಸೇವೆಗಳಲ್ಲಿನ ಕೆಲವೊಂದು ಕ್ಷೇತ್ರಗಳಿಗೆ ನಿರ್ಬಂಧ ಹೇರಿದ್ದಾರೆ. ಬರುವಂತಹ ನೌಕರರು ಆಟೋ ರಿಕ್ಷಾ, ಟ್ಯಾಕ್ಸಿ, ಕೆವವೊಂದುಕಡೆ ಬಸ್ಸು ಅಥವಾ ತಮ್ಮ ಖಾಸಾಗಿ ವಾಹನಗಳನ್ನು ಅಧಿಕ್ರುತ ಪರವಾನಿಗೆ ಪಡೆದು ಬರುವಂತೆ ತಿಳಿಸಿದ್ದಾರೆ. ಇದಕ್ಕೆ ಸರಿ ಹೊಂದುವಂತೆ ನಮ್ಮ ನೌಕರರನ್ನು ವ್ಯವಸ್ಥೆ ಮಾಡಿ ಬ್ಯಾಂಕನ್ನು ನಡೆಸುವುದು ಅನಿವಾರ್ಯವಾಗಿದೆ ಎಂದು ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ (ಯು.ಎಸ್ ಪೂಜಾರಿ) ತಿಳಿಸಿದರು.

ಸರಕಾರದ ಆದೇಶದಂತೆ ನಾವು ನೌಕರರನ್ನು ಪರ್ಯಾಯ ವ್ಯವಸ್ಥೆಯಾಗಿಸಿ ಸೇವೆಗೆ ಆಯ್ದುಕೊಂಡಿದ್ದೇವೆ. ನಮಗೆ ಆಗುವ ಅಸಹಾಯಕತೆ ಬಗ್ಗೆ ನಾವು ಬ್ಯಾಂಕ್ಸ್ ಎಸೋಸಿಯೇಶನ್ ಮತ್ತು ಬ್ಯಾಂಕ್ಸ್ ಫೆಡರೇಶನ್‍ಗೆ ಮನವಿ ಮಾಡಿದ್ದೇವೆ. ಈ ಸಂಸ್ಥೆಗಳೂ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವರು. ಆದರೆ ಇದೀಗಲೇ ದೀರ್ಘಾವಧಿ ರೈಲು ಪಾಸು ಇರುವಂತಹವರು ರೈಲುಗಳಲ್ಲಿ ಬರುತ್ತಿದ್ದಾರೆ. ಕೆಲವೊಮ್ಮ ಅವರನ್ನು ಟಿಸಿ, ರೈಲ್ವೇ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡು ವಾಪಾಸ್ಸು ಕಳುಹಿಸುತ್ತಿರುವ ಘಟನೆಗಳೂ ನಡೆಯುತ್ತಿವೆ. ಅಂತಹವರು ಪರ್ಯಾಯ ವ್ಯವಸ್ಥೆ ಮಾಡಿ ಸೇವೆಗೆ ಹಾಜರಾಗುತ್ತಾರೆ ಎಂದು ಅಭ್ಯುದಯ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಪ್ರೇಮನಾಥ ಎಸ್.ಸಾಲ್ಯಾನ್ ತಿಳಿಸಿದರು.

ಇದು ಬರೇ ನಮ್ಮ ಬ್ಯಾಂಕಿಗೆ ಅನ್ವಹಿಸಿದ ವಿಚಾರವಲ್ಲ ದೇಶದಾದ್ಯಂತದಲ್ಲಿನ ಖಾಸಾಗಿ, ಸಹಕಾರಿ ಬ್ಯಾಂಕುಗಳಿಗೆ ಅನ್ವಹಿಸಿದ ಕಾನೂನು. ಆದರೂ ಗ್ರಾಹಕರ ಸೇವಾದೃಷ್ಟಿಯಿಂದ ನಾವು ನೌಕರವೃಂದಕ್ಕೆ ಪೆÇ್ರೀತ್ಸಾಹಿಸಿ ಸೇವೆಗೆ ಅಡಚಣೆ ಆಗದಂತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಒಂದಿಷ್ಟು ದಿನಗಳಲ್ಲಿ ಇವೆಲ್ಲವೂ ಸರಿ ಆಗಲಿದ್ದು ಎಂದಿನಂತೆ ಗ್ರಾಹಕರ ಸೇವೆಗೆ ಬ್ಯಾಂಕನ್ನು ಅಣಿಗೊಳಿಸಲಿದ್ದೇವೆ ಎಂದು ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿಸೋಜಾ ತಿಳಿಸಿದರು.

ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಸರಕಾರದ ಸಹಕಾರಿ ಸಚಿವ ಬಾಳಸಾಹೇಬ್ ಪಾಟೀಲ್, ಮಹಾರಾಷ್ಟ್ರ ರಾಜ್ಯ ಸಹಕಾರಿ ಆಯುಕ್ತ, ಮಹಾರಾಷ್ಟ್ರ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ಸ್ ಎಸೋಸಿಯೇಶನ್ ಲಿಮಿಟೆಡ್ ಮುಂಬಯಿ, ದಿ.ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಇವುಗಳಲ್ಲೂ ಸಂಪರ್ಕದಲ್ಲಿದ್ದು ಬ್ಯಾಂಕ್ ಉದ್ಯೋಗಿಗಳಿಗೆ ಆಗುತ್ತಿರುವ ಅನ್ಯಾಯ ಶೀಘ್ರವಾಗಿ ಅಂತ್ಯವಾಗಲಿದೆ ಎಂದು ಬ್ಯಾಂಕ್ಸ್ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ.

ಬ್ಯಾಂಕಿಂಗ್ ಸೇವೆಯೂ ಅತ್ಯವಶ್ಯಕ ಸೇವೆಯೇ ಹೌದು. ಆದರೆ ಸರಕಾರವು ರೈಲಿನಲ್ಲಿ ಪ್ರಯಾಣಿಸಲು ಅನುಮತಿ ಇನ್ನೂ ಒದಗಿಸಿಲ್ಲ. ನಮಗೆ ಬರೇ ಸರ್ಕಾರಿ ಬ್ಯಾಂಕುಗಳ ಸುತ್ತೋಲೆ ರವಾನಿಸಿದ್ದು ಅದನ್ನಷ್ಟೇ ನಾವು ಸ್ವೀಕರಿಸಿದ್ದೇವೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೆ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿದೆ. ನಮ್ಮಲ್ಲಿ ಆ ಬ್ಯಾಂಕುಗಳ ಪಟ್ಟಿಯಿದೆ. ಅದರಂತೆ ಅವಶ್ಯಕ ಸೇವಾಕರ್ತರಿಗೆ ಪಾಸು ಒದಗಿಸುತ್ತಿದ್ದೇವೆ ಎಂದು ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.

More News

ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ
ಜೂ.29: ಸಾಂತಾಕ್ರೂಜ್‍ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ
ಜೂ.29: ಸಾಂತಾಕ್ರೂಜ್‍ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ

Comment Here