Friday 19th, April 2024
canara news

ಕಾರ್ಮಿಕ ಕುಟುಂಬಗಳಿಗೆ ನೆರವಾದ ಗಾಯತ್ರಿ ಪರಿವಾರ ಬರೋಡ

Published On : 15 May 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಮೇ.15: ಮಾರಣಾಂತಿಕ ಕೋವಿಡ್-19ರ ಈ ಸಂಕಷ್ಟದ ದಿನಗಳಲ್ಲಿ ಕಾರ್ಮಿಕ ಕುಟುಂಬಗಳು ಕೆಲಸವಿಲ್ಲದೆ ಕಂಕಲಾಗಿದ್ದು, ಅವರಲ್ಲಿನ ಸಂಪಾದನೆಗೈದು ಸಂಸಾರ ನಡೆಸುತ್ತಿದ್ದವರಲ್ಲಿ ಅನೇಕರು ಕೊರೋನಾದಿಂದ ಮೃತರಾಗಿರುವರು. ಇಂತಹ ಪರಿವಾರ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಗಾಯತ್ರಿ ಪರಿವಾರ ಬರೋಡ ಇವರು ಇಂದಿಲ್ಲಿ 3-4 ತಿಂಗಳ ವರೆಗೆ ಬೇಕಾಗುಷ್ಟು ಆಹಾರ ಮತ್ತು ಗೃಹೋಪಯೋಗಿ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆಯಿತು.

ಬರೋಡಾ ಮತ್ತು ಸುತ್ತಮುತ್ತಲಿನ ಸುಮಾರು 250 ಕುಟುಂಬಗಳಿಗೆ ಇದುವರೆಗೆ ಬರೋಡದಲ್ಲಿನ ಗಾಯತ್ರಿ ಪರಿವಾರ ಇಂತಹ ಸೇವಾ ಕೈಂಕರ್ಯದಲ್ಲಿ ನಿತ್ಯ ಕೈಜೋಡಿಸಿದ್ದು ಅದೆಷ್ಟೋ ದೈನಂದಿನ ಕಾರ್ಮಿಕ ಪರಿವಾರಗಳಿಗೆ ಪ್ರಯೋಜನಕಾರಿ ಆಗಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇನ್ನಷ್ಟು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ವಿಶ್ವ ಪ್ರಸಿದ್ಧ ಗಾಯತ್ರಿ ಶಕ್ತಿ ಪೀಠ ದೇಗುಲದ ಪ್ರಮುಖ, ಗಾಯತ್ರಿ ಪರಿವಾರ ಬಂಧು, ಕೊಡುಗೈದಾನಿ ದಯಾನಂದ ಬೋಂಟ್ರಾ (ಬೆಳಣ್ಣು-ಕಾರ್ಕಳ) ತಿಳಿಸಿದ್ದಾರೆ. ಮಾತಾ ಗಾಯತ್ರಿ ಕೊರೋನಾ ಮಹಾಮಾರಿ ಸಾಂಕ್ರಮಿಕ ಸೋಂಕಿನಿಂದ ಮುಕ್ತಗೊಳಿಸಿ ದೇಶದ ಸರ್ಮ ಕುಟುಂಬಗಳನ್ನು ಮತ್ತು ಎಲ್ಲರನ್ನೂ ಕಾಪಾಡಲಿ ಎಂದರು

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here