Friday 29th, March 2024
canara news

ಆರ್‍ಟಿ-ಪಿಸಿಆರ್ ; ಮಂಗಳೂರುನಲ್ಲಿ ಕೋವಿಡ್ ನೆಪದಲ್ಲಿ ಅಕ್ರಮ ವಸೂಲಿ

Published On : 22 May 2021   |  Reported By : Rons Bantwal


ಒಂದು ಪರೀಕ್ಷೆ-ಮೂರು ಬಿಲ್.! ಇದು ನ್ಯಾಯಸಮ್ಮತವೇ ಸಿಎಂ ಸಾಹೇಬ್ರೆ ..?

(ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.21: ಭಾರತದ ವಿವಿಧ ರಾಜ್ಯಗಳಲ್ಲಿನ ಆರ್‍ಟಿ-ಪಿಸಿಆರ್ ಪರೀಕ್ಷೆಯ ವೆಚ್ಚದಲ್ಲಿ ಕಂಡುಬರುವ ಅಕ್ರಮಗಳ ಬಗ್ಗೆ ಗಮನ ಸೆಳೆಯುವಂತೆ ಮತ್ತು ಕರ್ನಾಟಕದ ಆರ್‍ಟಿ-ಪಿಸಿಆರ್ ಪರೀಕ್ಷೆಗೆ ಖಾಸಗಿ ಲ್ಯಾಬ್‍ಗಳು ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ದಕ್ಷಿಣ ಕನ್ನಡ ಜಿಲಾಧಿಕಾರಿ ಇವರಿಗೆ ಮುಂಬಯಿವಾಗಿ ಸಾಮಾಜಿಕ ಕಾರ್ಯಕರ್ತ ಉದಯಕುಮಾರ್ ಶೆಟ್ಟಿ ಶಿಮಂತೂರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ಮುಂಬಯಿವಾಸಿ ಉದಯಕುಮಾರ್ ಇದೇ ಮೇ.07 ರಂದು ತನ್ನ ತವರೂರು ಕರ್ನಾಟಕಕ್ಕೆ (ಉಡುಪಿ) ಆಗಮಿಸಲು ದಿನಾಂಕ ಮೇ.05ರಂದು ಮಹಾನಗರದ ಖಾಸಗಿ ಪರೀಕ್ಷಾ ಕೇಂದ್ರದಿಂದ (ಉಪನಗರ ಡಯಾಗ್ನೋಸ್ಟಿಕ್ಸ್) ರೂಪಾಯಿ 600 ಪಾವತಿಸಿ ಆರ್‍ಟಿ-ಪಿಸಿಆರ್ ಪರೀಕ್ಷೆ ಮಾಡಿಸಿದ್ದರು. ಅಂತೆಯೇ ಮಹಾರಾಷ್ಟ್ರ ಸರ್ಕಾರ ಮೇ.13 ರಂದು ಘೋಷಿಸಿದಂತೆ ಮುಂಬಯಿಗೆÉ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕನಿಗೂ ಕಡ್ಡಾಯ ಆರ್‍ಟಿ-ಪಿಸಿಆರ್ ಪರೀಕ್ಷೆಯ ಋಣಾತ್ಮಕ (ನೆಗೆಟಿವ್) ಪ್ರಮಾಣಪತ್ರ ಖಡ್ಡಾಯವಾಗಿ ಬೇಕು ಅನ್ನುವ ಆದೇಶ ಪಾಲಿಸಿ ನಾನು ಮಂಗಳೂರು ಸುರತ್ಕಲ್ ಅಲ್ಲಿನ ಶ್ರೀನಿವಾಸ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ತೆರಳಿದ್ದು ಅಲ್ಲಿ ನನಗೆ ನಿರ್ದಾಕ್ಷಿಣ್ಯವಾಗಿ ಆರ್‍ಟಿ-ಪಿಸಿಆರ್ ಪರೀಕ್ಷೆಗೆ ರೂ.1,220 ಮೊತ್ತ ಪಡೆದರು. ಈ ಬಗ್ಗೆ ಆಶ್ಚರ್ಯಚಕಿತÀನಾಗಿ ಒಂದು ತಪಸನಾ ವರದಿಗೆ ಮೂರು ಬಿಲ್‍ಗಳನ್ನು ಮಾಡಿರುವುದಕ್ಕೆ ತೀವ್ರ ಆಕ್ಷೇಪ ಪಡಿಸಿದೆ. ಆರ್‍ಟಿ-ಪಿಸಿಆರ್ ಪರೀಕ್ಷೆಗೆ ಮಹಾರಾಷ್ಟ್ರ ಸರಕಾರ ರೂಪಾಯಿ 600 ನಿಗದಿ ಪಡಿಸಿದೆ. ಆದರೂ ಕರ್ನಾಟಕ ಸರಕಾರ ರೂಪಾಯಿ 800 ನಿಗದಿ ಪಡಿಸಿದ್ದೂ ಅಲ್ಲದೆ ಮತ್ತೆ ಹೆಚ್ಚುವರಿ ಶುಲ್ಕ ವಿಧಿಸುವುದಕ್ಕೆ ಸ್ಪಷ್ಟೀಕರಣ ಕೇಳಿದರಎ ಆಸ್ಪತ್ರೆ ಮೂಲಗಳಿಂದ ಸೂಕ್ತ ಉತ್ತರ ಸಿಗದ ಕಾರಣ ಇದಕ್ಕೆ ಸರಕಾರವೇ ಉತ್ತರಿಸುವಂತೆ ಪತ್ರದ ಮೂಲಕ ಕೋರಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಒಂದು ಆರ್‍ಟಿ-ಪಿಸಿಆರ್ ಪರೀಕ್ಷಾ ನೆಪದಲ್ಲಿ ಮೂರು ನಮೂನೆಯ ಮೊತ್ತವನ್ನು ಸಂಗ್ರಹಿಸಿ 3 ಬಿಲ್‍ಗಳನ್ನು ಮಸೂದೆಗಳಾಗಿ ಮಾಡಲಾಗಿದೆ (ಆರ್‍ಟಿ-ಪಿಸಿಆರ್ ಪರೀಕ್ಷಾ ಶುಲ್ಕ ರೂ.800, ಸೇವಾ ಶುಲ್ಕ ರೂ.400, ನೋಂದಣಿ ಶುಲ್ಕ ರೂ.20 ಅಂದರೆ ಒಟ್ಟಾರೆಯಾಗಿ ರೂ.1,220). ಮುಂಬಯಿನಲ್ಲಿ ನನಗೆ ಒಟ್ಟಾಗಿ ಈ ಪರೀಕ್ಷೆಗೆ ಬರೇ ರೂಪಾಯಿ 800 ಶುಲ್ಕ ವಿಧಿಸಲಾಗಿದೆ. ಇಂತಹ ಅಕ್ರಮ ವಸೂಲಿ ನ್ಯಾಯಸಮ್ಮತವೇ..? ಎಂದು ಪ್ರಶ್ನಿಸಿ ಸ್ಪಷ್ಟೀಕರಣ ನೀಡುವರೇ ಸರ್ಕಾರಗಳಿಗೆ ಮೊರೆ ಹೋಗಿದ್ದಾರೆ.

ಕರ್ನಾಟಕ ಸರ್ಕಾರವು ಆರ್‍ಟಿ ಪಿಸಿಟಿ ಪರೀಕ್ಷಾ ಶುಲ್ಕವನ್ನು ಆರ್‍ಎಸ್‍ಗೆ ಸ್ಪಷ್ಟವಾಗಿ ನೀಡಿದಾಗ. 800 ಮಾತ್ರ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜು ಪ್ರಯೋಗಾಲಯಗಳಲ್ಲಿ ಈ ಸಮಸ್ಯೆಯನ್ನು ಎದುರಿಸಲಾಗುತ್ತಿದೆ. ನಿಮ್ಮ ಉಲ್ಲೇಖಕ್ಕಾಗಿ ನಾನು ರಶೀದಿಯನ್ನು ಲಗತ್ತಿಸುತ್ತಿದ್ದೇನೆ. ದಯವಿಟ್ಟು ಈ ಸಮಸ್ಯೆಯನ್ನು ತನಿಖೆ ಮಾಡಿ ಮತ್ತು ಅದನ್ನು ಶೀಘ್ರವಾಗಿ ಪರಿಹರಿಸಿ ರಾಜ್ಯದ ಜನತೆಗೆ ಆಗುವ ಅನ್ಯಾಯಕ್ಕೆ ಶೀಘ್ರವಾಗಿ ನ್ಯಾಯ ಒದಗಿಸಲು ಈ ಮೂಲಕ ಮನವಿ ಮಾಡುವೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಪ್ರಯೋಗಾಲಯಗಳಲ್ಲಿ ಈ ಸಮಸ್ಯೆ ಜನತೆ ಎದುರಿಸುತ್ತ್ತಿದೆ. ಸರಕಾರದ ಮನವರಿಕೆಗಾಗಿ ನಾನು ವಸೂಲಾತಿಯ ಮೂರೂ ರಶೀದಿಗಳನ್ನು ಲಗತ್ತಿಸುತ್ತಿದ್ದೇನೆ. ದಯವಿಟ್ಟು ಈ ಸಮಸ್ಯೆಯನ್ನು ತನಿಖೆ ಮಾಡಿ ಮತ್ತು ಅದನ್ನು ಶೀಘ್ರವಾಗಿ ಪರಿಹರಿಸಲು ವಿನಂತಿಸಿ ಎಂದು ಉದಯಕುಮಾರ್ ಶೆಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಂತಹ ಸಂಧಿಗ್ದ ಕಾಲದಲ್ಲಿ ಅದೂ ಆರೋಗ್ಯದ ಕಾಳಜಿಯಲ್ಲಿ ಮಂಗಳೂರುನವರು ಮಾನವಿಯತೆ ಮರೆತು ವ್ಯಾಪಾರೀಕರಣದಿಂದ ಮೆರೆಯುತ್ತಿರುವುದು ಶೋಚನೀಯ. ಸರಕಾರಿ ಆಸ್ಪತ್ರೆಗಳು 48 ತಾಸುಗಳ ಒಳಗಾಗಿ ಪರೀಕ್ಷಾ ವರದಿ ನೀಡಿದರೆ ಇಂತಹ ವಸೂಲತಿ ಹಾವಳಿ ತಪ್ಪಿಸಬಹುದು ಮತ್ತು ಇದು ವಿದೇಶಿ, ಅಂತರಾಜ್ಯ ಪ್ರಯಾಣಿಕರಿಗೂ ಅನುಕೂಲಕರ ಆಗಬಹುದು. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಎಂದು
ರಾಜ್ಯ, ಜಿಲ್ಲೆ, ತಾಲೂಕುಗಳಿಗೊಂದು ಕಾನೂನು ರೂಪಿಸಿ ಸ್ವದೇಶಿಯ ಜನರನ್ನು ಸತಾಯಿಸುತ್ತಿರುವುದು ಕಂಡಾಗ ಕರ್ನಾಟಕ ಅದೂ ವಿಶೇಷವಾಗಿ ಬುದ್ಧಿವಂತರ ನಾಡು ಎಂದೇ ಪ್ರಸಿದ್ಧ ಮಂಗಳೂರು ಭಾರತ ರಾಷ್ಟ್ರದ ಹೊರಗೆ ಇದೆಯೋ ಅನ್ನುವ ಅಚ್ಚರಿ ಇಲ್ಲಿನ ಜನತೆ ವ್ಯಕ್ತ ಪಡಿಸುತ್ತಿದ್ದಾರೆ.

ಸರಕಾರದ ಆದೇಶದಂತೆ ಎಲ್ಲಾ ಯಾನಗಳ (ವಿಮಾನ, ರೈಲು, ಬಸ್-ಖಾಸಾಗಿ ವಾಹನ) ಪ್ರಯಾಣಿಕರಿಗೆ 76 ಗಂಟೆಗಳ ಆರ್‍ಟಿ-ಪಿಸಿಆರ್ ಪರೀಕ್ಷಾ ವರದಿ ಮಾತ್ರ ಊರ್ಜಿತವಾಗಿರುತ್ತದೆ (ಮಾನ್ಯ) ಎಂದಾದರೆ ಅಂತರಾಜ್ಯದ ಪ್ರಯಾಣಿಕರಿಗೆ 48 ತಾಸುಗಳ ಒಳಗಾಗಿ ಪರೀಕ್ಷಾ ವರದಿ ಒದಗಿಸಬೇಕು. ಒಂದೆಡೆ ಸಂಪೂರ್ಣ ಲಾಕ್‍ಡೌನ್ ಎಂದು ಬೋರ್ಗರೆಯುವ ಸರಕಾರ, ಅಧಿಕಾರಿಗಳು ರಿಪೆÇೀರ್ಟ್ ಮಾಡಿಸಲು ಖುದ್ಧಾಗಿ ವ್ಯಕ್ತಿ ಬಂದರೆ ಮತ್ತೆ ಅದರ ಫಲಿತಾಂಶ ಸಂಗ್ರಹಿಸಲೂ ಆತನೇ ಪದೇಪದೇ ಬರುವುದನ್ನೂ ತಪ್ಪಿಸಬೇಕು. ಆತ ಮತ್ತೆಮತ್ತೆ ಅದೇಷ್ಟೋ ದೂರದಿಂದ ಪೆÇೀಲಿಸರ ಭಯದಿಂದ ಕದ್ದುಮುಚ್ಚಿ ಅದೇ ಅರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ಹೋಗಿ ತಪಸನಾ ವರದಿ ಪಡೆಯುವುದಕ್ಕಿಂತ ವಾಟ್ಸಾಪ್, ಇ-ಮೇಯ್ಲ್ ಮೂಲಕ ರವಾನಿಸಿ ಸಹಕರಿಸಿದರೆ ಅನುಕೂಲಕರ ಆಗಬಲ್ಲದೇ..? ಆವಾಗ ಪದೇಪದೇ ಸುತ್ತಾಡುವುದಕ್ಕೆ ಕಡಿವಾಣ ಹಾಕಲೂ ಸಾಧ್ಯ ಎಂದು ಹೊರನಾಡ ಕನ್ನಡಿಗರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here