Tuesday 16th, April 2024
canara news

ಡಾ| ಶಕೀಲ್ ಚಾರಿಟೇಬಲ್ ಟ್ರಸ್ಟ್ ನಿಂದ ದೇರಳಕಟ್ಟೆಯ ಕುಟುಂಬಗಳಿಗೆ ಅಕ್ಕಿ ವಿತರಣೆ

Published On : 30 May 2021   |  Reported By : Rons Bantwal


ನಮ್ಮಲ್ಲಿ ಯಾರೂ ಹಸಿದಿರಬಾರದು : ಅಬ್ದುಲ್ ಶಕೀಲ್ ಮಂಗಳೂರು

ಮುಂಬಯಿ (ಆರ್‍ಬಿಐ), ಮೇ.30: ಮಂಗಳೂರು ಇಲ್ಲಿನ ಡಾ| ಶಕೀಲ್ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ ಇದರ ಆಶ್ರಯದಲ್ಲಿ ಇದಿಲ್ಲಿ ರವಿವಾರ ದೇರಳಕಟ್ಟೆ ಇಲ್ಲಿನ ನೇತಾಜಿ ಸುಬಾಶ್ಚಂದ್ರಬೋಸ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 3,000 ಅರ್ಹ ಬಡ ಕುಟುಂಬಗಳಿಗೆ ಅಕ್ಕಿ ವಿತರಿಸÀಲಾಯಿತು.

ಕೋವಿಡ್ ನ ಎರಡನೇ ಅಲೆಯ ಪರಿಣಾಮ ಅದೆಷ್ಟೋ ಜನ ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೋನ ಸಂಕಷ್ಟದ ನಡುವೆ ಯಾರೂ ಕೂಡಾ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಡಾ| ಶಕೀಲ್ ಚಾರಿಟೇಬಲ್ ಟ್ರಸ್ಟ್ ಮೂಲಕ 3000 ಬಡ ಕುಟುಂಬಗಳಿಗೆ ಮಸೀದಿ, ಚರ್ಚ್, ದೇವಸ್ಥಾನದ ಮೂಲಕ ಹಂಚಲಾಗಿದೆ ಎಂದು ಮಂಗಳೂರು ಇಲ್ಲಿನ ದೇರಳಕಟ್ಟೆ ರೆಂಜಡಿ ನಿವಾಸಿ ಡಾ| ಶಕೀಲ್ ಚಾರಿಟೇಬಲ್ ಟ್ರಸ್ಟ್‍ನ ಸಂಸ್ಥಾಪಕ ನಿರ್ದೇಶಕ ಡಾ| ಅಬ್ದುಲ್ ಶಕೀಲ್ ಮಂಗಳೂರು ತಿಳಿಸಿದರು.

ಕೊಣಾಜೆ ಪೆÇೀಲಿಸ್ ಠಾಣೆಯ ಅಧಿಕ್ಷಕ ಮಲ್ಲಿಕಾರ್ಜುನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅಕ್ಕಿ ವಿತರಿಸಿ ಮಾತನಾಡಿ, ಕೊರೊನ ಸಮಯದಲ್ಲಿ ಯಾರೂ ಕೂಡಾ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೆಲವು ಸಮಾಜ ಸೇವಾ ಸಂಘಟನೆಗಳು ಸೌಹಾರ್ದತೆಯೊಂದಿಗೆ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಆಯೋಜಿಸಿ ಅರ್ಹ ಕುಟುಂಬಗಳಿಗೆ ಅಕ್ಕಿ ವಿತರಿಸುತ್ತಿರುವುದು ಶ್ಲಾಘನೀಯ. ಇಂತಹ ಕೆಲಸಗಳು ಸಮಾಜದಲ್ಲಿ ಹೆಚ್ಚೆಚ್ಚು ನಡೆಯಬೇಕಿದೆ ಎಂದರು.

ಬೋಳಾ ನರಿಂಗಾನ ಚರ್ಚ್‍ನ ಧರ್ಮಗುರು ಫಾದರ್ ಮೈಕಲ್, ರೆಂಜಾಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಸಮಿತಿ ಅಧ್ಯಕ್ಷ ಜಗದೀಶ್ ರೈ ಪ್ರಧಾನವಾಗಿ ಉಪಸ್ಥಿತರಿದ್ದು ಈ ಆಹಾರ ಕನಿಜ ಪಡೆಯುವವರಿಗೂ ಕೊಡುವವರಿಗೂ ಶ್ರೀದೇವರು ಹರಸಲಿ ಎಂದÀು ಶುಭಶಂಸನೆಗೈದರು.

ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕೆ.ಶೆಟ್ಟಿ ಉಳಿದೊಟ್ಟು, ಬೆಳ್ಮ ಗ್ರಾಮ ಪಂಚಾಯತ್ ಆಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಎಸ್ ಕೆಎಸ್‍ಎಸ್‍ಫ್ ಉಳ್ಳಾಲ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ದಾರಿಮಿ, ದೇರಳಕಟ್ಟೆ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬೂಬಕ್ಕರ್, ಕಾರ್ಯದರ್ಶಿ ಆರ್.ಅಹ್ಮದ್ ಶೇಟ್, ಬೆಳ್ಮ ಗ್ರಾ.ಪಂ ಸದಸ್ಯರಾದ ಎಂ.ಎ ಅಬ್ದುಲ್ಲಾ ರೆಂಜಾಡಿ, ಇಬ್ರಾಹಿಂ ಬದ್ಯಾರ್, ಹನೀಫ್ ಬದ್ಯಾರ್, ಸತ್ತಾರ್ ರೆಂಜಾಡಿ, ಇಕ್ಬಾಲ್ ಎಚ್.ಆರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯೀಲ್ ಪನೀರ್, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಪುಷ್ಟಿ ಡಿ.ಎಂ ಮುಹಮ್ಮದ್, ಹಿದಾಯಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಶ್ರಫ್ ಡಿ.ಎಂ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಬ್ದಲ್ ಖಾದರ್.ಐ, ಹಮೀದ್ ಮೂನ್ನೂರು, ರವಿರಾಜ್ ಶೆಟ್ಟಿ, ರಮೀಝ್ ಮೀಝಾ, ಹರ್ಷದ್ ಮಂಗಳಪೇಟೆ ಉಪಸ್ಥಿತರಿದ್ದು ಅಕ್ಕಿ ವಿತರಿಸಿದರು. ಇಕ್ಬಾಲ್ ಹೆಚ್.ಆರ್ ಸ್ವಾಗತಿದರು. ನೌಫಲ್.ಬಿ ವಂದಿಸಿದರು. ಶಫೀರ್ ಕಾರ್ಯಕ್ರಮ ನಿರೂಪಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here