Thursday 16th, September 2021
canara news

ಸಮಾಜ ಸೇವಕ ಮೌರಿಸ್ ಸಿಕ್ವೇರಾ ಕಿರೆಂ ನಿಧನ

Published On : 17 Jul 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜು.17: ಮೂಡಬಿದ್ರೆ ತಾಲೂಕು ಕಿನ್ನಿಗೋಳಿ ಐಕಳ ಕಿರೆಂ ಇಲ್ಲಿನ ಹೆಸರಾಂತ ಸಮಾಜ ಸೇವಕ, ಮೌರಿಸ್ ಕ್ಸೇವಿಯರ್ ಸಿಕ್ವೇರಾ (83.) ತೀವ್ರ ಹೃದಯಾಘಾತ ದಿಂದ ಕಳೆದ ಬುಧವಾರ (ಜು.14) ತಮ್ಮ ಮುರೋಡಿ ಇಲ್ಲಿನ ಫೆÇ್ಲಸ್ಸಿ ವಿಲ್ಲಾ ಸ್ವನಿವಾಸದಲ್ಲಿ ನಿಧನರಾದರು.

ಪ್ರತಿಷ್ಠಿತ ಹಾಗೂ ಪ್ರಸಿದ್ಧ ಮುರೋಡಿ ಮನೆತನದ ಕ್ಸೇವಿಯರ್ ಸಿಕ್ವೇರಾ ಮತ್ತು ಮಾಗ್ದೆಲೀನ್ ಸಿಕ್ವೇರಾ (ಸ್ವರ್ಗೀಯ) ದಂಪತಿ ಸುಪುತ್ರರಾಗಿದ್ದ ಮೃತರು ಮುಂಬಯಿನಲ್ಲಿ ಟ್ಯಾಕ್ಸಿ ಚಾಲಕರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ ಸುಮಾರು 36 ವರ್ಷಗಳ ಕಾಲ ವಿಹಾರ ನೌಕಾಯಾನದÀಲ್ಲಿ ಉದ್ಯೋಗಿ ಆಗಿ ಕ್ರಮೇಣ ತವರೂರು ಸೇರಿ ಇತ್ತೀಚಿಗಿನ ವರೇಗೆ ಸುಮಾರು 22 ವರ್ಷಗಳ ಕಾಲ ಕಿರೆಂ ಚರ್ಚ್ ಸಭಾಗೃಹದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು. ಸರ್ವ ಧರ್ಮಗಳೊಂದಿಗೆ ಸಾಮರಸ್ಯದಿಂದ ವ್ಯವಹರಿಸುತ್ತಿದ್ದು ಸ್ಥಾನೀಯ ಪ್ರಸಿದ್ಧ ಸಮಾಜ ಸೇವಕರಾಗಿ ಜನಾನುರೆಣಿಸಿದ್ದರು. ಕಿರೆಂ ಚರ್ಚ್‍ನ ಸೈಂಟ್ ವಿನ್ಸೆಂಟ್ ಪಾವ್ಲ್ ಸಭಾ, ಕಾಥೋಲಿಕ್ ಸಭಾ, ಚರ್ಚ್ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ನಾಡಿನಾದ್ಯಂತ ಜನಪ್ರಿಯ

ಮುಂಬಯಿ ವಿೂರಾರೋಡ್‍ನ ಜನಪ್ರಿಯ ಸಮಾಜ ಸೇವಕಿ ನ್ಯಾನ್ಸಿ ಇಗ್ನೇಷಿಯಸ್ ಸಿಕ್ವೇರಾ, ಭಗಿನಿ ಸಿ| ಫೆÇ್ಲಸ್ಸಿ ಸಿಕ್ವೇರಾ (ಚಾರ್ಲ್ಸ್ ಬೊರೋಮಿಯಾ, ತಂಝಾನಿಯಾ ಆಫ್ರಿಕಾ) ಸೇರಿದಂತೆ ಪತ್ನಿ, ಮೂವರು ಸುಪುತ್ರಿಯರು, ಮೂರು ಸುಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಸೋಮವಾರ (ಜು.19) ಸಂಜೆ 3.30 ಗಂಟೆಗೆ ಮುರೋಡಿ ನಿವಾಸದಿಂದ ಹೊರಟು ಅವರ್ ಲೇಡಿ ಆಫ್ ರಿಮಿಡಿಸ್ ಚರ್ಚ್ ಕಿರೆಂ ಐಕಳ ಇಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲವು ತಿಳಿಸಿದ್ದಾರೆ.

 
More News

ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021  ಪ್ರಶಸ್ತಿ ಪ್ರಕಟ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್

Comment Here