Thursday 16th, September 2021
canara news

ಎಸ್‍ಡಿಎಂ ಕಾಲೇಜ್ ಉಜಿರೆ-ಜಾಗತಿಕ ಹಳೆ ವಿದ್ಯಾಥಿರ್ü ಸಂಘ ಅಸ್ತಿತ್ವಕ್ಕೆ

Published On : 27 Jul 2021   |  Reported By : Rons Bantwal


ಅಧ್ಯಕ್ಷರಾಗಿ ಅಬ್ದುಲ್ಲ ಮಾದುಮೂಲೆ ಅಬುಧಾಬಿ ಆಯ್ಕೆ

ಮುಂಬಯಿ (ಆರ್‍ಬಿಐ), ಜು.27: ಗಲ್ಫ್‍ರಾಷ್ಟ್ರ ಅಬುಧಾಬಿ ಇಲ್ಲಿನ ಯುವ ಸಂಘಟಕ ಅಬ್ದುಲ್ಲ ಮಾದುಮೂಲೆ ಇವರು ಎಸ್‍ಡಿಎಂ ಕಾಲೇಜ್ ಉಜಿರೆ ಇದರ ಜಾಗತಿಕ ಹಳೆ ವಿದ್ಯಾಥಿರ್ü ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಎಸ್‍ಡಿಎಂ ಕಾಲೇಜ್ ಉಜಿರೆ ಇದರ ಜಾಗತಿಕ ಹಳೆ ವಿದ್ಯಾಥಿ ಸಂಘದ (SDM College Ujire Global Alumni Association) ಪದಾಧಿಕಾರಿಗಳ ವಿವರ ಹೀಗಿದ್ದು, ಡಾ| ಡಿ.ವಿರೇಂದ್ರ ಹೆಗ್ಗಡೆ (ರಕ್ಷಾಧಿಕಾರಿ), ಡಾ| ಬಿ.ಯಶೋವರ್ಮ ಉಜಿರೆ (ಗೌರವಾಧ್ಯಕ್ಷ), ಅಬ್ದುಲ್ಲ ಮಾದುಮೂಲೆ ಅಬುಧಾಬಿ (ಅಧ್ಯಕ್ಷರು), ದಿನೇಶ್ ಹೆಗ್ಡೆ ಯುಎಸ್‍ಎ (ಉಪಾಧ್ಯಕ್ಷರು), ರಾಜೇಶ್ ಬೆಂಗ್ರೋಡಿ ದುಬಾಯಿ (ಪ್ರಧಾನ ಕಾರ್ಯದರ್ಶಿ), ರೋಶನ್ ಪಿಂಟೋ ದುಬಾಯಿ (ಕೋಶಾಧಿಕಾರಿ), ಕಿರಣ್ ಕುಮಾರ್ ಮಲೇಷಿಯಾ (ಕಾರ್ಯದರ್ಶಿ), ಶರತ್ ಪಲಿಗಿ ಜರ್ಮನಿ (ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ), ಅಬ್ದುಲ್ ರಸಾಕ್ ಉಜಿರೆ-ದುಬಾಯಿ (ಮಾಧ್ಯಮ ಸಂಪರ್ಕ ಸಂಚಾಲಕರು), ಮಹಮ್ಮದ್ ಕುತುಬುದ್ದೀನ್ ದುಬಾಯಿ, ಲಕ್ಷಿ ್ಮಕಾಂತ್ ಓಮನ್, ಶ್ರುತಿ ಆಸ್ಟ್ರೇಲಿಯ (ಕಾರ್ಯಕಾರಿ ಸದಸ್ಯರು) ಆಗಿರುವರು.

      

Abdulla Abhudhabhi Ujire                         Dr. B.Yashovarma                                Dr. Veerendra Heggade

ಶೈಕ್ಷಣಿಕ ಸೇವೆಯ ಮೂಲಕ ಇಂದು ವಿಶ್ವದೆಲ್ಲೆಡೆಯೂ ತನ್ನ ಹಳೆ ವಿದ್ಯಾಥಿರ್üಗಳ ಕೊಡುಗೆಯನ್ನು ನೀಡುತ್ತಿರುವ ಉಜಿರೆಯ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಜಾಗತಿಕ ಹಳೆಯ ವಿದ್ಯಾಥಿರ್üಗಳ ಸಂಘ (SDM College Ujire Global Alumni Association) ಅಸ್ತಿತ್ವಕ್ಕೆ ತಂದಿದ್ದು ಈ ಮೂಲಕ ತನ್ನ ಕಾರ್ಯನಿರ್ವಾಹಣೆಯನ್ನು ವಿಶ್ವದಾದ್ಯಂತ ವಿವಿದೆಡೆಗೆ ಪಸರಿಸಿದೆ. ಅಧ್ಯಕ್ಷರಾಗಿ ಅಬುಧಾಬಿ ಇಲ್ಲಿನ ಝಯೆದ್ ಫೌಂಡೇಶನ್‍ನ ಹಿರಿಯ ಆಥಿರ್üಕ ನಿಯಂತ್ರಕ ಆಗಿ ಶ್ರಮಿಸುತ್ತಿರುವ ಯುವ ಸಂಘಟಕ, ಕೊಡುಗೈದಾನಿ ಅಬ್ದುಲ್ಲಾ ಮಾದುಮೂಲೆ ಅವರನ್ನು ಆರಿಸಲಾಗಿದೆ.

ಡಾ| ಸತೀಶ್ಚಂದ್ರ (ಪ್ರಾಂಶುಪಾಲರು, ಎಸ್‍ಡಿಎಂಸಿ), ಡಾ| ಉದಯಚಂದ್ರ (ಡೀನ್, ವಾಣಿಜ್ಯ ವಿಭಾಗ ಎಸ್‍ಡಿಎಂಸಿ), ಡಾ| ಜಯಕುಮಾರ್ ಶೆಟ್ಟಿ (ಡೀನ್,ಕಲಾ ವಿಭಾಗ ಎಸ್‍ಡಿಎಂಸಿ), ಶಶಿಶೇಖರ ಎನ್.ಕಕಾತ್ಕ್ (ಡೀನ್, ವಿಜ್ಞಾನ ವಿಭಾಗ ಎಸ್‍ಡಿಎಂಸಿ) ಸಲಹೆಗಾರರು ಆಗಿರುತ್ತಾರೆ.

ಕಾಲೇಜ್‍ನ ವಿದ್ಯಾಥಿರ್üಗಳಿಗೆ ಜಾಗತಿಕ ಮಟ್ಟದ ಔದ್ಯೋಗಿಕ ಮಾಹಿತಿ, ತಂತ್ರಜ್ಞಾನ ಸ್ವ ಕೌಶಲ್ಯ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ವಿವಿದೆಡೆಯಲ್ಲಿರುವ ಸಾಧಕರಾದ ಹಳೆ ವಿದ್ಯಾಥಿರ್üಗಳೊಂದಿಗೆ ಸಂವಾದ ಏರ್ಪಡಿಸಿ ಜೀವನ ಮೌಲ್ಯ ನಿರ್ಣಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಸೋಶಿಯೇಶನ್ ತೀರ್ಮಾನಿಸಿದೆ ಎಂದು ವಿಜಯಕುಮಾರ್ ಶೆಟ್ಟಿ ಮಜಿಬೈಲ್ (ಯುಎಇ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.
More News

ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021  ಪ್ರಶಸ್ತಿ ಪ್ರಕಟ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ; ಸಾಹಿತ್ಯ ಸಂವಾದ-ಪದವಿ ಪ್ರದಾನ ಕಾರ್ಯಕ್ರಮ
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್
ಇಂಧನ ಇಲಾಖೆಯನ್ನು ಮಾದರಿ ಮಾಡುವ ಕನಸು - ಸುನೀಲ್ ಕುಮಾರ್

Comment Here