Friday 29th, March 2024
canara news

ಅನಿತಾ ಪಿ.ತಾಕೊಡೆ ಅವರ `ಮೋಹನ ತರಂಗ' ಕೃತಿಗೆ

Published On : 01 Aug 2021   |  Reported By : Rons Bantwal


ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಗದು ಪುರಸ್ಕಾರ ಪ್ರಾಪ್ತಿ

ಮುಂಬಯಿ (ಆರ್‍ಬಿಐ), ಆ.01: ಮುಂಬಯಿ ಅಲ್ಲಿನ ಕವಯತ್ರಿ ಅನಿತಾ ಪಿ.ತಾಕೊಡೆ ಅವರು ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಕುರಿತು ಬರೆದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ `ಮೋಹನ ತರಂಗ' ಕೃತಿಗೆ 2019-20ನೇ ಸಾಲಿನ ಕರ್ನಾಟಕ ಸರಕಾರದಕನ್ನಡ ಮತ್ತು ಸಂಸ್ಕøತಿಇಲಾಖೆಯ ರೂಪಾಯಿ 25,000/- ನಗದು ಪುರಸ್ಕಾರ ಲಭಿಸಿದೆ.

ಪ್ರಸಿದ್ಧ ರಂಗ ಸಾಧಕ ಮೋಹನ್ ಮಾರ್ನಾಡ್ ಅವರ ಜೀವನ ಕಥನವಾಗಿ 2019ರಲ್ಲಿ ಪ್ರಕಟಗೊಂಡ ಈ ಕೃತಿಯು ಹಲವು ವಿಮರ್ಶಕರಿಂದ ವಿಮರ್ಶೆಗೊಳಪಟ್ಟು, ಒಳ ಮತ್ತುಹೊರ ನಾಡಿನ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಅನಿತಾ ಅವರ ಸೃಜನಶೀಲತೆ ಹಾಗೂ ಮಾರ್ನಾಡ್‍ರ ಜೀವನ ಸಾಧನೆಯ ಯಶಸ್ಸಿಗೆ ಪ್ರಸ್ತುತ ಸರಕಾರದ ಮೇರು ಪುರಸ್ಕಾರ ದೊರಕಿರುವುದು ಮುಂಬಯಿ ಕನ್ನಡ ಸಾಹಿತ್ಯಲೋಕಕ್ಕೆ ಹೊಸ ಹಿರಿಮೆಯನ್ನು ಮೂಡಿಸಿದೆ.

ಕರ್ನಾಟಕ ಕರಾವಳಿಯ ಮೂಡಬಿದರೆ ತಾಲೂಕು ತಾಕೊಡೆ ಮೂಲತಃ ಅನಿತಾ ಅವರು ಮೈಸೂರುನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಯಲ್ಲಿ ಪ್ರಥಮರ್ಯಾಂಕ್ ಪಡೆಯುವುದರ ಮೂಲಕ `ಎಂ.ಬಿ.ಕುಕ್ಯಾನ್ (2017-19)' ಬಂಗಾರದ ಪದಕ ಗಳಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಮುಂಬಯಿ ವಾಸಿಯಾಗಿರುವ ಇವರು ಪ್ರತಿಭಾವಂತಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಡಾ| ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಎಂ.ಎ ಪದವಿಗೆ, ಡಾ| ಬಿ.ಜನಾರ್ದನ ಭಟ್ ಅವರ `ಜೀವನ ಸಾಧನೆ ಶೋಧ' ಎಂಬ ವಿಷಯವಾಗಿ ಬರೆದ ಸಂಪ್ರಬಂಧ, `ಸವ್ಯಸಾಚಿ' ಕೃತಿಯಾಗಿ ಬೆಳಕು ಕಂಡಿದೆ.

ಅನಿತಾ ಅವರು, 2019ರಲ್ಲಿ ಮೈಸೂರುಅರಮನೆಯ ವಿಶ್ವ ವಿಖ್ಯಾತದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.

ಜಗಜ್ಯೋತಿ ಕಲಾ ವೃಂದ (ರಿ.) ದಿಂದ `ಶ್ರೀಮತಿ ಸುಶೀಲ ಶೆಟ್ಟಿ ಸ್ಮಾರಕಕಾವ್ಯ ಪ್ರಶಸ್ತಿ', ಶಿಕಾರಿಪುರದ ಜನ ಸ್ಪಂದನ ಟ್ರಸ್ಟ್ (ರಿ)ನ `ಅಲ್ಲಮ ಸಾಹಿತ್ಯ ಪ್ರಶಸ್ತಿ', ಪ್ರಜಾವಾಣಿ ಪತ್ರಿಕೆಯ `ಪ್ರೇಮಪತ್ರ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ À(2018) ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಇವರು ಏರ್ಪಡಿಸಿದ ಕೆ. ಎಸ್ ನೆನಪಿನ ಪ್ರೇಮಕಾವ್ಯ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರೇಮಕಾವ್ಯ ಪುರಸ್ಕಾರ (2011, 2015), 2017ರಲ್ಲಿ `ವಿಶ್ವ ಕವಿ ಕುವೆಂಪು ಕಾವ್ಯ ಪುರಸ್ಕಾರ' ಮಹಾರಾಷ್ಟ್ರ ನವಚಿಂತನ ಸಂಸ್ಥೆಯಿಂದ, `ಕವಿರತ್ನ ಪುರಸ್ಕಾರ (2012-13)' ಮುಂಬಯಿ ಕಲಾಜಗತ್ತು ಸಂಸ್ಥೆಯಿಂದ, `ದಿ| ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ (2013)', ಡೊಂಬಿವಲಿ ತುಳುಕೂಟದಿಂದ `ತುಳುಸಿರಿ' ಪ್ರಶಸ್ತಿ (2013)', `ಕಾವ್ಯಸಿರಿ ಪ್ರಶಸ್ತಿ (2019)' ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ `ಅಪ್ಪ ನೆಟ್ಟ ಸೀತಾಫಲದ ಮರ' ಕಥೆಗೆ ಸಂಕ್ರಮಣ ಸಾಹಿತ್ಯ ಬಹುಮಾನ (2017). ಅಂತರಂಗದ ಮೃದಂಗ ಕೃತಿಗೆ, ಕನ್ನಡ ಕಲರವ ಮತ್ತು ಅವ್ವ ಪುಸ್ತಕಾಲಯ ಸಾಹಿತ್ಯ ಸಂಸ್ಥೆಯಿಂದ `ಸೃಜನಶೀಲ ಸಾಹಿತಿ ಪ್ರಶಸ್ತಿ-2020' ಹೀಗೆ ಇವರ ಬರಹಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸೃಜನಾ ಲೇಖಕಿಯರ ಬಳಗ ಮುಂಬಯಿ ಇದರ ಜೊತೆ ಕೋಶಾಧಿಕಾರಿಯಾಗಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿ ಸದಸ್ಯೆ ಆಗಿ ಶ್ರಮಿಸುತ್ತಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here