Thursday 25th, April 2024
canara news

ಡಾಕ್ಟರ್ ಶ್ರುತಿ ಆರ್ ಪೂಜಾರಿಗೆ ಎಂಡಿಎಸ್ ದ್ವಿತೀಯ ಸ್ಥಾನ

Published On : 21 Aug 2021   |  Reported By : Rons Bantwal


ಮುಂಬಯಿ (ಆರ್ ಬಿಐ), ಆ.20: ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಸ್ ಬೆಂಗಳೂರು ಕರ್ನಾಟಕ ನಡೆಸಿದ ಉನ್ನತ ಶಿಕ್ಷಣದ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ಫೈನಲ್ ಪರೀಕ್ಷೆಯಲ್ಲಿ ಡಾಕ್ಟರ್ ಶ್ರುತಿ ಆರ್.ಪೂಜಾರಿ ತನ್ನ ಕಾಲೇಜಿನಲ್ಲಿ ದ್ವಿತೀಯ ಸ್ಥಾನ ಪಡೆದು ತೇರ್ಗಡೆಯಾಗಿ ಹೆತ್ತವರು ಮತ್ತು ಸಮಾಜ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಡಾಕ್ಟರ್ ಶ್ರುತಿ ಆರ್. ಪೂಜಾರಿ ಮುಂಬಯಿ ಸಾಂತಾಕ್ರೂಜ ನ ಸೈಂಟ್ ತೆರೆಸಾ ಕಾನ್ವೆಂಟ್ ಹೈಸ್ಕೂಲಿನಲ್ಲಿ ತಮ್ಮ ಆರಂಭಿಕ ಶಿಕ್ಷಣ ಪೂರೈಸಿ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕುಂದಾಪುರದ ಕೋಟ ವಿವೇಕ ಜೂನಿಯರ್ ಕಾಲೇಜಿನಲ್ಲಿಪದವಿಪೂರ್ವ ಕಾಲೇಜು ಶಿಕ್ಷಣವನ್ನು ಮುಗಿಸಿದರು. ನಂತರ ಬೆಂಗಳೂರಿನ ಎಸ್ ಜಿಆರ್ ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್ ಪದವಿ ಪಡೆದರು. ಆ ಬಳಿಕ ರಾಜೀವ್ ಗಾಂಧಿ ಕಾಲೇಜ್ ಆಫ್ ಡೆಂಟಲ್ ಸಾಯನ್ಸ್ ಸ್ ಅಂಡ್ ಹಾಸ್ಪಿಟಲ್ ಬೆಂಗಳೂರು ಇಲ್ಲಿ .
ಡಿ ಎಸ್ ಉನ್ನತ ಶಿಕ್ಷಣ ಪಡೆದರು.

ಡಾ. ಶ್ರುತಿ ಇವರು ಮಹಾರಾಷ್ಟ್ರ ಸರ್ಕಾರದ ಸೆನ್ಸಾರ್ ಮಂಡಳಿಯ ಸದಸ್ಯ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಮುಂಬಯಿ ಇದರ ಉಪಾಧ್ಯಕ್ಷ, ಪ್ರೀತಿ ಫೌಂಡೇಶನ್ (ರಿ) ಇದರ ಸಂಸ್ಥಾಪಕ ಹಾಗೂ ಅನೇಕ ಸಂಘ ಸಂಸ್ಥೆಗಳ ಸಕ್ರೀಯ ಸದಸ್ಯ ರಂಗ ಎಸ್. ಪೂಜಾರಿ ಹಾಗೂ ಸಮಾಜ ಸೇವಕಿ ಸಂಘಟಕಿ ವಾಕ್ಚತುರೆ ಹವ್ಯಾಸಿ ರಂಗಭೂಮಿ ಕಲಾವಿದೆ ಶ್ರೀಮತಿ ಬೇಬಿ ರಂಗ ಪೂಜಾರಿ ಇವರ ಸುಪುತ್ರಿ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here