Wednesday 24th, April 2024
canara news

ಸಿಲ್ವರ್ ಬಟನ್ ಪ್ರಮಾಣಪತ್ರ ಮುಡಿಗೇರಿಸಿದ ವ್ಹೀವ್‍ಲೈವ್.ಟಿವಿ

Published On : 17 Aug 2021   |  Reported By : Rons Bantwal


ಹವ್ಯಾಸದಿಂದ ನಿಸ್ವಾರ್ಥ ಸೇವೆ ಸಾಧ್ಯ : ಪೆÇಲೀಸ್ ಆಯುಕ್ತ ಎನ್.ಶಶಿಕುಮಾರ್

ಮುಂಬಯಿ (ಆರ್‍ಬಿಐ), ಆ.16: ದಕ್ಷಿಣ ಕನ್ನಡ ಜಿಲ್ಲೆಯ ತರುಣನೊಬ್ಬನ ಮಾಧ್ಯಮ ಸಾಧನೆ ಅಭಿನಂದನೀಯ. ಉಳ್ಳಾಲದ ಯುವ ಉತ್ಸಾಹಿ ಪತ್ರಕರ್ತರು ಹವ್ಯಾಸವಾಗಿ ಆರಂಭಿಸಿದ ಚಾನೆಲ್ ಇಂದು ಲಕ್ಷಾಂತರ ಚಂದಾದಾರರನ್ನು ಕೋಟ್ಯಾಂತರ ವೀಕ್ಷಕರನ್ನು ತಲುಪಿ ಯಶಸ್ಸಿನ ಮೆಟ್ಟಿಲೇರಿದ್ದು ಅಭಿನಂದನೀಯ. ಅವಿಷ್ಕಾರದ ಮಾಧ್ಯಮ ಯುಗದಲ್ಲಿ ಈ ಚಾನೆಲ್ ಇನ್ನಷ್ಟು ಸಮಾಜಮುಖಿಯಾಗಿ ಕಾರ್ಯಾಚರಿಸುತ್ತಾ, ಶೋಷಿತ ವರ್ಗಕ್ಕೆ ನ್ಯಾಯ ಒದಗಿಸುವಂತಾಗಲಿ ಎಂದು ಮಂಗಳೂರು ಪೆÇಲೀಸ್ ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದರು.

ಕಳೆದ ನಾಲ್ಕು ದಶಕಗಳಿಂದ ಕಾರ್ಯಪ್ರವೃತ್ತವಾಗಿದ್ದು ದೇಶವಿದೇಶದಲ್ಲಿ ಲಕ್ಷಾಂತರ ಚಂದಾದಾರರು ಮತ್ತು ಕೋಟ್ಯಾಂತರ ವೀಕ್ಷಕರನ್ನು ಹೊಂದಿರುವ ಮಂಗಳೂರು ಮೂಲದ ಯೂಟ್ಯೂಬ್ ಚಾನೆಲ್ ವ್ಹೀವ್‍ಲೈವ್.ಟಿವಿಗೆ ಗೂಗಲ್ ಪ್ರದಾನಿಸಿರುವ ಸಿಲ್ವರ್ ಬಟನ್ ಪ್ರಮಾಣಪತ್ರವನ್ನು ರಾಷ್ಟ್ರದ 75ನೇ ಸ್ವಾತಂತ್ರ್ಯೋತ್ಸವದ ಶುಭಾವಸರದಲ್ಲಿ ಪೆÇೀಲಿಸ್ ಕಮೀಷನರ್ ಕಚೇರಿಯಲ್ಲಿ ಅನಾವರಣ ಗೊಳಿಸಿ ಶಶಿಕುಮಾರ್ ಮಾತನಾಡಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷÀ ರೋನ್ಸ್ ಬಂಟ್ವಾಳ್ ಲೋಕಾರ್ಪಣೆಗೊಳಿಸಿ ಚಾನೆಲ್‍ನ ನೂತನ ವೆಬ್‍ಸೈಟ್ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರ ತಂಡದ ಶ್ರಮ ಯಶಸ್ಸಿನತ್ತ ಮುನ್ನಡೆದಿರುವುದು ಶ್ಲಾಘನೀಯ. ಸಂಸ್ಥೆ ಕಟ್ಟುವ ಮೂಲಕ ಸಮಾಜದ ಆಗುಹೋಗುಗಳನ್ನು ಜಾಗತಿಕವಾಗಿ ಪಸರಿಸಿರುವ ನಮ್ಮ ಮಂದಿಗೆ ತಿಳಿಸುವ ಕಾರ್ಯದ ಜೊತೆಗೆ ಉತ್ತಮ ಸಮಾಜವನ್ನು ಕಟ್ಟುವ ಕಾರ್ಯಕ್ಕೆ ಚಾನೆಲ್ ಮುನ್ನುಗ್ಗಲಿ ಎಂದರು.

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಚಾನೆಲ್‍ನ ನೂತನ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ದ.ಕ ಜಿಲ್ಲೆಯ ಪ್ರಥಮ ಲೈವ್ ಕೊಡುವ ಚಾನೆಲ್ ಆಗಿ ಹೊರಹೊಮ್ಮಿದ ವೀವ್‍ಲೈವ್.ಟಿವಿ ಲಕ್ಷಾಂತರ ಅಭಿಮಾನಿ ಬಳಗ ಹೊಂದಿದೆ. ಅಶಕ್ತರ ಕುರಿತ ವರದಿಗೆ ವಿದೇಶಗಳಿಂದ ದೊರೆತಿರುವ ಸ್ಪಂದÀನೆಯಿಂದ ಅನೇಕರ ಕಣ್ಣೀರು ಒರೆಸುವ ಕಾಯಕ ಈ ಚಾನೆಲ್‍ನಿಂದ ಆಗಿರುವುದು ಶ್ಲಾಘನೀಯ ಎಂದÀು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭ ಪಿಂಗಾರ ಪತ್ರಿಕೆಯ ಸಂಪಾದಕ ರೆಮಂಡ್ ಡಿಕುನ್ಹಾ ತಾಕೋಡೆ, ದ ಹಿಂದೂ ಪತ್ರಿಕೆಯ ರಾಘವ್, ಪ್ರಜಾವಾಣಿ ದೈನಿಕದ ಮೋಹನ್ ಕುತ್ತಾರ್, ವಾಯ್ಸ್ ಆಫ್ ಕರಾವಳಿ ಇದರ ಕೀರ್ತನ್ ದೇವಾಡಿಗ, ವ್ಹೀವ್‍ಲೈವ್.ಟಿವಿ ಮಾಧ್ಯಮದ ಹರ್ಷನ್ ಉಳ್ಳಾಲ್ ಉಪಸ್ಥಿತರಿದ್ದರು.

ವ್ಹೀವ್‍ಲೈವ್.ಟಿವಿ ಮತ್ತು ಉದಯವಾಣಿ ದೈನಿಕದ ವಸಂತ್ ಎನ್.ಕೋಣಾಜೆ ಸ್ವಾಗತಿಸಿದರು. ಸಫ್ವಾನ್ ಕಲಕಟ್ಟಾ, ಇರ್ಷಾದ್ ಕಲಕಟ್ಟಾ ಅತಿಥಿüಗಳಿಗೆ ಗೌರವಿಸಿದರು. ಡಾ| ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಪ್ರಥಮ ದರ್ಜೆ ಕಾಲೇಜ್‍ನ ಡಾ| ನವೀನ್ ಎನ್.ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು. ವ್ಹೀವ್‍ಲೈವ್.ಟಿವಿ ಪ್ರವರ್ತಕ ಆರೀಫ್ ಹರೇಕಳ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here