Thursday 28th, September 2023
canara news

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ: ಧರ್ಮಸ್ಥಳದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆ

Published On : 07 Oct 2021   |  Reported By : Rons Bantwal


ಎಸ್‍ಎಎಸ್‍ಎಸ್ (ಸಾಸ್) ಪ್ರಧಾನ ಪೆÇೀಷಕರಾಗಿ ಡಾ| ವೀರೇಂದ್ರ ಹೆಗ್ಗಡೆ

ಮುಂಬಯಿ (ಆರ್‍ಬಿಐ), ಅ.05: ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ (ಎಸ್‍ಎಎಸ್‍ಎಸ್) ಪ್ರಧಾನ ಪೆÇೀಷಕರಾಗಿದ್ದಾರೆ.

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಕಳೆದ ಭಾನುವಾರ (ಅ.03) ನಡೆದ ಸಾಸ್‍ನ ವಾರ್ಷಿಕ ಸಾಮಾನ್ಯ ಸಭೆಯ ಮುಕ್ತಾಯ ಹಂತದಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಮುಖ್ಯ ಪೆÇೀಷಕರಾಗಿ ನಮ್ಮ ಆಹ್ವಾನವನ್ನು ಡಾ| ಡಿ.ವೀರೇಂದ್ರ ಹೆಗ್ಗಡೆ ಸ್ವೀಕರಿಸಿದ್ದಾರೆ ಎಂದು ಸಾಸ್ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಘೋಷಿಸಿದರು.

73 ವರ್ಷ ವಯಸ್ಸಿನ ಡಾ| ವೀರೇಂದ್ರ ಹೆಗ್ಗಡೆ ಓರ್ವ ಸಮಾಜ ಸುಧಾರಕರು, ಶಿಕ್ಷಣ ತಜ್ಞರು ಮತ್ತು ಲೋಕೋಪಕಾರಿ ಸೇವಾಂಕ್ಷಿಯಾಗಿದ್ದು ಸಮಾಜಕ್ಕೆ ಅನುಪಮ ಕೊಡುಗೆಗಳನ್ನಿತ್ತವರು. 2015 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಸೇರಿದಂತೆ ವಿವಿಧ ಪ್ರಶಸ್ತಿಗಳು ಮತ್ತು ಪ್ರಶಂಸೆಗೆ ಭಾಜನರಾದ ಡಾ| ಹೆಗ್ಗಡೆ ಅವರು 20ನೇ ವಯಸ್ಸಿನಲ್ಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ್ದು ಇದೀಗ ಸಾಸ್ ಮುಖ್ಯಸ್ಥರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಸ್ವಾಗತರ್ಹ ಎಂದು ಸಾಸ್ ರಾಷ್ಟ್ರೀಯ ಆಡಳಿತ ಕಾರ್ಯದರ್ಶಿ ಪಿ. ಶಾಮುಗಾನಂದನ್ ತಿಳಿಸಿದ್ದಾರೆ. ಡಿ| ವೀರೇಂದ್ರ ಹೆಗ್ಗಡೆ ಅವರು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಷ್ಟ್ರೀಯ ಸಮಿತಿಯ ಮಹಾಪೆÇೀಷಕ ಆಗಿರುವುದಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಧರ್ಮಾಧಿಕಾರಿ ಅವರನ್ನು ಅಭಿನಂದಿಸಿದರು.




More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here