Friday 12th, July 2024
canara news

ಕಾರ್ಕಳದ ಸುರಕ್ಷಾ ಆಶ್ರಮದಲ್ಲಿ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್‍ನ ಸೇವೆ

Published On : 04 Nov 2021   |  Reported By : Rons Bantwal


ಪರಿಸ್ಥಿತಿಗನುಗುಣವಾಗಿ ತಬ್ಬಲಿಗರಾಗುವುದು ದುರದೃಷ್ಟ-ಶಿವರಾಮ ಕೆ.ಭಂಡಾರಿ

ಮುಂಬಯಿ (ಆರ್‍ಬಿಐ), ನ.03: ನಮ್ಮಲ್ಲಿ ಯಾರೂ ಅನಾಥರಲ್ಲ. ಆದರೂ ಪರಿಸ್ಥಿತಿಗನುಗುಣವಾಗಿ ತಬ್ಬಲಿಗರಾಗುವುದು ದುರದೃಷ್ಟ. ಮನುಜನಾಗಿ ಹುಟ್ಟು ಪಡೆದ ಪ್ರತಿಯೊಬ್ಬರಿಗೂ ತಮ್ಮವರೆಣಿಸಿದ ತಂದೆತಾಯಿ, ಒಡಹುಟ್ಟಿದವರು, ಬಂಧು ಬಳಗ, ಸ್ವಸಮುದಾಯ ಇದ್ದೂ ಆಶ್ರಮ ಸೇರುವಂತಿದ್ದರೆ ಅದು ಹಣೆಬರಹ ಅಷ್ಟೇ ಅನ್ನಬೇಕು. ಮನುಜನಾಗಿ ಹುಟ್ಟಿದ ಮೇಲೆ ಯಾವನೂ ನಿರಾಶ್ರಿತರೆಣಿಸಿ ಅನಾಥ ಅಂದೆಣಿಸುವುದು ಉಚಿತವಲ್ಲ. ಆಶ್ರಮಗಳಲ್ಲಿ ಅವರನ್ನು ಎಂದೂ ಅನಾಥರು ಎಂದು ಭಾವಿಸದೆ ತಮ್ಮವರು ಎಂದು ತಿಳಿದು ಅವರ ಸೇವೆಗೈಯುವುದೇ ಮಾನವಿಯತೆ ಇದು ದೇವರ ಕೆಲಸವೇ ಸರಿ ಎಂದು ಬಾಲಿವುಡ್ ರಂಗದಲ್ಲಿ ಹೇರ್ ಸ್ಟೈಲೋ ಮೂಲಕ ಸೆಲೆಬ್ರಟಿ ನಾಮಾಂಕಿತ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ತಿಳಿಸಿದರು.

ತನ್ನ ಮಾತೃಶ್ರೀ ಸ್ವರ್ಗೀಯ ಗುಲಾಬಿ ಕೃಷ್ಣ ಭಂಡಾರಿ ಅವರ ಪ್ರಥಮ ಸ್ಮೃತಿದಿನ' ಕಾರ್ಯಕ್ರಮವನ್ನು ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್‍ನ ಸೇವೆಯಾಗಿಸಿ ಕಳೆದ ಸೋಮವಾರ ಕಾರ್ಕಳ ಇಲ್ಲಿನ ಸಲ್ಮಾರ ಜರಿಗುಡ್ಡೇ ಇಲ್ಲಿನ ಸುರಕ್ಷಾ ಆಶ್ರಮದಲ್ಲಿ ನಡೆಸಲಾಗಿದ್ದ ಶಿವರಾಮ ಭಂಡಾರಿ ಮಾತನಾಡಿ ತಿಳಿಸಿದರು.

ಮನುಜನೆಂದರೆ ಬುದ್ಧಿಜೀವಿ ಎಂದರ್ಥ. ಆದ್ದರಿಂದಲೇ ಮನುಷ್ಯನು ಸಂಸ್ಕಾರಯುತನಾಗಿ ಬಾಳುವುದು ಪ್ರಕೃತಿ ನಿಯಮ. ಹೀಗಿದ್ದೂ ವಯೋವೃದ್ಧರಾದಾಗ, ಮಾನೋರೋಗಿಗಳದಾದ, ಅಸ್ವಸ್ಥರಾದಾಗ ಎಲ್ಲದ್ದಕ್ಕೂ ಮಿಗಿಲಾಗಿ ಆಥಿರ್üಕವಾಗಿ ಹಿನ್ನಡೆಯಾದಾಗ ನಮ್ಮವರು ನಮ್ಮವರನ್ನೇ ತೊರೆದು ಬಾಳಿದಾಗ ಇಂತಹ ನಿರ್ಗತಿ ಪರಿಸ್ಥಿತಿ ನಿರ್ಮಾಣವಾಗುವುದು. ಇದು ಉಚಿತವಲ್ಲ. ಆಶ್ರಮಗಳಿಗೆ ಸೇರಿಸುವುದು ಅಥವಾ ಸೇರುವ ಅವಸ್ಥೆ ಯಾರಿಗೂ ಬಾರದಿರಲಿ ಎಂದು ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೆÇ್ರಟೊಕಾಲ್ ಪೆÇೀಲಿಸ್ ಅಧಿಕಾರಿ ಗೋಪಾಲಕೃಷ್ಣ ಕುಂದರ್, ಶೋಭಾ ಸುರೇಶ್ ಭಂಡಾರಿ, ಅನುಶ್ರೀ ಶಿವರಾಮ ಭಂಡಾರಿ, ಕುಳೂರು ಮಾಧವ ಭಂಡಾರಿ, ವಿಶ್ವನಾಥ್ ಭಂಡಾರಿ, ಶಾರದಾ ಭಂಡಾರಿ, ದೀಪಕ್ ಡಿಮೆಲ್ಲೊ ಮುಂತಾದವರು ಉಪಸ್ಥಿತರಿದ್ದರು.

ಸ್ಮೃತಿದಿನ ಮತ್ತು ಪುಣ್ಯಸ್ಮರಣೆ ನಿಮಿತ್ತ ಬೆಳಿಗ್ಗೆ ದರೆಗುಡ್ಡೆ ಇಲ್ಲಿನ ಶ್ರೀ ದುರ್ಗಾ ನಿಲಯದಲ್ಲಿ ವಿದ್ವಾನ್ ಶ್ರೀ ನಾಗರಾಜ್ ಭಟ್ ಪೂಜೆಗಳನ್ನು ನೆರವೇರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಬಳಿಕ ಪರ್ಪಲೆ ಇಲ್ಲಿನ ಕ್ರಿಸ್ತ ಸೇವಕೀ ಆಶ್ರಮದಲ್ಲಿ ಅನ್ನಸಂತಾರ್ಪಣೆಗೈದರು. ಆಶ್ರಮದ ಮುಖ್ಯಸ್ಥೆ ಆಯಿಷಾ ಕಾರ್ಕಳ ಸ್ವಾಗತಿಸಿದರು. ಪತ್ರಕರ್ತ ರೋನ್ಸ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕಾಂಗ್ರೇಸ್ (ಐ) ಪಕ್ಷದ ಯುವನೇತಾರ ಮಿಥುನ್ ರೈ, ಭಂಡಾರಿ ಮಹಾ ಮಂಡಲದ ಗೌ| ಪ್ರ| ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ, ನವೀನ್ ಭಂಡಾರಿ ಉಡುಪಿ, ಮಾ| ರೋಹಿಲ್ ಭಂಡಾರಿ, ಕು| ಆರಾಧ್ಯ ಭಂಡಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here