Thursday 28th, March 2024
canara news

ಮುಂಬಯಿ ವಿಶ್ವವಿದ್ಯಾಲಯದಲ್ಲಿ ಶ್ರೀ ನಾರಾಯಣ ಗುರು ಅಧ್ಯಯನ ಶುಭಾರಂಭ

Published On : 26 Jan 2022   |  Reported By : Rons Bantwal


ನಾರಾಯಣ ಗುರು ತತ್ವಶಾಸ್ತ್ರ ಅಧ್ಯಯನಾರಂಭ ಆಶಾದಾಯಕ-ಸಚಿವ ವಿ.ಮುರಳೀಧರನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಜ.24: ದೆಹಲಿ ಅಲ್ಲಿನ ಜಾಗತಿಕ ಒಕ್ಕೂಟದ (ಎನ್‍ಎಸಿಸಿ-ನಾಕ್ ಮಾನ್ಯತೆಯ) ಶ್ರೀ ನಾರಾಯಣ ಗುರು ತತ್ವಶಾಸ್ತ್ರ ಅಭ್ಯಾಸ ಕೇಂದ್ರವು (ಎಸ್‍ಎನ್‍ಜಿಸಿ) ವಿಭಾಗವು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಶ್ರೀ ನಾರಾಯಣ ಗುರು ತತ್ವಶಾಸ್ತ್ರ ಅಧ್ಯಯನದ ಮೌಲ್ಯವರ್ಧಿತ ಪ್ರಮಾಣಪತ್ರ ಪಠ್ಯಕ್ರಮ ಪ್ರಾರಂಭಿಸಲ್ಪಟ್ಟಿತು.

ಕಳೆದ ಗುರುವಾರ (ಜ.20) ಬೆಳಿಗ್ಗೆ 11.00 ಗಂಟೆಗೆ ಮುಂಬಯಿ ವಿಶ್ವವಿದ್ಯಾಲಯ ವರ್ಚವಲ್ ವೇದಿಕೆಯಲ್ಲಿ, ರಾಷ್ಟ್ರದದ್ಯಾಂತದ ಗಣ್ಯರು, ಕೆಲವು ಯತಿಗಳು, ಆಸಕ್ತರು ಪಾಲ್ಗೊಂಡಿದ್ದು ಮುಂಬಯಿ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ| ಸುಹಾಸ್ ಪೆಡ್ನೇಕರ್ ಅಧ್ಯಕ್ಷತೆ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಉದ್ಘಾಟಿಸಿ ಇಂತಹ ಉಪಯುಕ್ತ ಅಧ್ಯಯನ ವಿಷಯ ಆರಂಭಿಸಿರುವುದು ತುಂಬ ಆಶಾದಾಯಕ ಎಂದು ಮುರಳೀಧರನ್ ಸಂತಸ ವ್ಯಕ್ತ ಪಡಿಸಿದರು.

ಶ್ರೀ ನಾರಾಯಣ ಗುರು ತತ್ವ ಸಂದೇಶಗಳ ಬಹುವ್ಯಾಪ್ತಿ ಪ್ರಸರಣ ಸೂಚನೆಯ ವಿನೂತನ ಶಕೆಯೊಂದು, ಪ್ರಚಲಿತ ವಿದ್ಯಮಾನಗಳ ನಡುವೆ ಸದ್ದಿಲ್ಲದೇ ತೆರೆದುಕೊಂಡಿದ್ದು ಮುಂಬಯಿ ವಿಶ್ವವಿದ್ಯಾನಿಲಯವು ಶ್ರೀ ನಾರಾಯಣ ಗುರು ಗಳ ತತ್ವ ಅಧ್ಯಯನಾಂಗವನ್ನು ಆರಂಭಿದ್ದುü ಇದು ನಮ್ಮ ಮುಂಬಯಿ ವಿಶ್ವವಿದ್ಯಾಲಯಕ್ಕೆ ಹೆಮ್ಮೆ ಎಂದು ಉಪ ಕುಲಪತಿ ಸಂಭ್ರಮಿಸಿದರು.

ಈಚೆಗೆ ಪ್ರಾರಂಭಿತ ಶ್ರೀನಾರಾಯಣಗುರು ಮುಕ್ತ ವಿಶ್ವವಿದ್ಯಾಲಯ ಕೇರಳ ಇದರ ಉಪ ಕುಲಪತಿ ಡಾ| ಮುಬಾರಕ್ ಪಾಷಾ, ಶ್ರೀ ನಾರಾಯಣ ಇಂಟರ್‍ನೇಶನ ಸ್ಟಡಿ ಸೆಂಟರ್ ಕೇರಳ ಇದರ ನಿರ್ದೇಶಕಿ ಡಾ| (ಶ್ರೀಮತಿ) ಬಿ.ಎಂ.ಸಂಗೀತ, ಶ್ರೀನಾರಾಯಣ ಗುರು ಧರ್ಮ ಸಂಗಮ ಮಠ ಶಿವಗಿರಿ ಕೇರಳ ಅಧ್ಯಕ್ಷ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಜಿ, ಶ್ರೀ ನಾರಾಯಣ ಗುರುಕುಲಮ್ ವರ್ಕಳ ಇದರ ಅಧ್ಯಕ್ಷ ಬ್ರಹ್ಮಶ್ರೀ ಗುರು ಮುನಿರಾಯಣ ಪ್ರಸಾದ್, ಎವಿಎ ಸಮೂಹ ಸಂಸ್ಥೆ ಚೆನ್ನೈ ಇದರ ಆಡಳಿತ ನಿರ್ದೇಶಕ ಡಾ| ಎ.ವಿ.ಅನೂಪ್, ಶ್ರೀ ನಾರಾಯಣ ಮಂದಿರ ಸಮಿತಿ ಮುಂಬಯಿ ಅಧ್ಯಕ್ಷ ಎಂ.ಐ ದಾಮೋದರನ್, ಶ್ರೀನಾರಾಯಣ ಗುರು ಸಂಸ್ಥೆಗಳು (ದೆಹಲಿ) ಸಾರ್ವತ್ರಿಕ ಒಕ್ಕೂಟ ಅಧ್ಯಕ್ಷ ವಿ.ಕೆ ಮೊಹಮದ್, ವೇದಾಂತಿ ಶ್ರೀನಾರಾಯಣ ಗುರು ಪ್ರಬೋಧನ ಸಂಸ್ಥೆಯ ಅಧ್ಯಕ್ಷ ಮುರಳೀಧರನ್ ಪಿ.ಎನ್, ಮುಂಬಯಿ ವಿವಿಯ ಡಾ| ವಿ.ಎಸ್ ಕುರ್ಹಾಡೆ, ಮುಂತಾದವರು ಗುರುಗಳು ಮತ್ತು ಅಧ್ಯಯನನೆಲೆಯಲ್ಲಿ ಮಾತನಾಡಿದರು.

ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರದ ಕಾರ್ಯಸಾಧನೆಯನ್ನು ಉಲ್ಲೇಖಿಸಿದ ಶಿವಗಿರಿ ಮಠಾಧೀಶರು ವಿಶ್ವವಿದ್ಯಾಲಯದ ಈ ಕಾರ್ಯವೈಖರಿ ಶ್ಲಾಘಿಸಿದರು.

ಈ ಝೂಮ್ ಸಮಾವೇಶದಲ್ಲಿ ಸಹ ಉಪಕುಲಪತಿ ಪೆÇ್ರ| ರವೀಂದ್ರ ಕುಲಕರ್ಣಿ, ಶ್ರೀ ನಾರಾಯಣ ಗುರು ತತ್ವಶಾಸ್ತ್ರ ಅಧ್ಯಯನದ ಮೌಲ್ಯವರ್ಧಿತ ಪ್ರಮಾಣಪತ್ರ ಸಂಯೋಜಕ ಡಾ| ನಾರಾಯಣ ಶಂಕರ್ ಗಡಡೆ, ಕುಲಸಚಿವರು, ಪ್ರಭಾರ ಅಧಿಕಾರಿಗಳು, ಗಣ್ಯ ಅತಿಥಿüಗಳಾಗಿದ್ದು ನೋಂದಾಯಿತ ಪ್ರತಿನಿಧಿಗಳಾಗಿ ಮಹಾರಾಷ್ಟ್ರ ಬಿಎಸ್‍ಎನ್‍ಡಿಪಿ ಅಧ್ಯಕ್ಷ ಡಾ| ಹರೀಶ್ ಪೂಜಾರಿ, ಪ್ರಮೋದ್ ಕರ್ಕೇರ, ಅಡ್ವೋಕೇಟ್ ಸೌಮ್ಯ ಪೂಜಾರಿ, ಮುಂಬಯಿ ವಿವಿ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥೆ ಮತ್ತು ಪ್ರಾಧ್ಯಾಪಕಿ ಡಾ| ಕಾಂಚನಾ ಮಹದೇವನ್ ಗಡಡೆ, ಕುಸುಮ ಪೂಜಾರಿ, ಅಕ್ಷಯ್ ಪೂಜಾರಿ, ವಿಶ್ವನಾಥ್, ಬಿಬಿನ್ ಶ್ಹಾ, ಸ್ನೇಹಾ ಕುಂಬಾರ್, ಪಿ.ಕೆ ಬಾಲಕೃಷ್ಣನ್, ಮಂಗಳೂರು ವಿವಿ ನಾರಾಯಣ ಗುರು ಅಧ್ಯಯನ ಪೀಠದ ಪೂರ್ವ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಭಾರತ್ ಬ್ಯಾಂಕ್‍ನ ನಿರ್ದೇಶಕ ಸೂರ್ಯಕಾಂತ್ ಜೆ.ಸುವರ್ಣ, ಜಗನ್ನಾಥ್ ಅವಿೂನ್ ಉಪ್ಪಳ (ಮುಂಬಯಿ) ಸೇರಿದಂತೆ 400ಕ್ಕೂ ಮಿಕ್ಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು

ಮುಂಬಯಿ ವಿವಿ ತತ್ವಶಾಸ್ತ್ರ ವಿಭಾಗದ ಅಂಗ ಸಂಸ್ಥೆಯಾಗಿ ಅಸ್ತಿತ್ವ ಪಡೆದ ಶ್ರೀ ನಾರಾಯಣ ಗುರು ಇಂಟರ್ನ್ಯಾಷನಲ್ ಸ್ಟಡಿ ಸೆಂಟರ್ ನಿರ್ದೇಶಕ ಪೆÇ್ರ| ಆರ್.ಡಿ ಕುಲಕರ್ಣಿ ಅವರು ಕೋರ್ಸ್ ಬಗ್ಗೆ ಸ್ಥೂಲ ಮಾಹಿತಿ ನೀಡಿ, ಮುಂಬಯಿ ವಿವಿಯ 750 ಸಂಯೋಜಿತ ಕಾಲೇಜುಗಳಲ್ಲಿ ಗುರು ತತ್ವಶಾಸ್ತ್ರ ಬೋಧೀಸಲಾಗುವುದು. ಮೊದಲ ಹಂತದಲ್ಲಿ ಈಗ ನಾರಾಯಣ ಗುರು ಜೀವನಾಧಾರಿತ ತತ್ವಶಾಸ್ತ್ರ ü-ಸಿದ್ಧಾಂತ ಮತ್ತು ಅಭ್ಯಾಸವನ್ನು ಸುಧಾರಿತ ಆನ್‍ಲೈನ್ ಡಿಪೆÇ್ಲಮಾ ಕೋರ್ಸ್‍ನ್ನು ಆನ್‍ಲೈನ್‍ನಲ್ಲಿ ಆಸಕ್ತರಿಗೆ ಬೋಧಿಸಲಾಗುವುದು ಎಂದರು.

ಈ. ಮುರಳೀಧರನ್ ಅವರ ದೈವ ದಶಕಂ ಪಠಣದೊಂದಿಗೆ ಸಮಾರಂಭ ಆರಂಭಗೊಂಡಿತು. ಪೆÇ್ರ| ಎಂ.ಎನ್ ಕುರಾಡೆ ಸ್ವಾಗತಿಸಿದರು. ಪೆÇ್ರ| ಕಾಂಚನ ಮಹಾದೇವನ್ ವಂದಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here