Friday 29th, March 2024
canara news

ಕಡಂದಲೆ ಸುರೇಶ್ ಎಸ್.ಭಂಡಾರಿ ಷಷ್ಠಿಪೂರ್ತಿ ಶಾಂತಿ ಸಂಭ್ರಮದ ಪೂರ್ವಭಾವಿ ಸಭೆ

Published On : 30 Jan 2022   |  Reported By : Rons Bantwal


ಆಪದ್ಭಂವರ ಸಂಭ್ರಮ ಚಾರಿತ್ರಿಕವಾಗಿಸೋಣ : ಡಾ| ಶಿವರಾಮ ಭಂಡಾರಿ

ಮುಂಬಯಿ, ಜ.29: ಭಂಡಾರಿ ಮಹಾ ಮಂಡಲ ಇದರ ಸ್ಥಾಪಕಾಧ್ಯಕ್ಷ, ತುಳು ಸಾಹಿತ್ಯ ಅಕಾಡೆಮಿಯ ನಾಮ ನಿರ್ದೇಶನ ಸದಸ್ಯ, ಕನ್ನಡಿಗ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯ ಕಡಂದಲೆ ಸುರೇಶ್ ಎಸ್.ಭಂಡಾರಿ ಇವರ ಜನ್ಮದ ಷಷ್ಠಿಪೂರ್ತಿ ಶಾಂತಿ ಸಂಭ್ರಮ ನಿಮಿತ್ತ ಪೂರ್ವಭಾವಿ ಸಭೆಯು ಇಂದಿಲ್ಲಿ ಶನಿವಾರ ಸಂಜೆ ಘಾಟ್ಕೋಪರ್ ಪಶ್ಚಿಮದ ಮನಿಫೆÇೀಲ್ಡ್ ಕಚೇರಿಯಲ್ಲಿ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿತು.

ಜನ್ಮಭೂಮಿ ಕರ್ಮಭೂಮಿಯಲ್ಲಿ ಆಪÀದ್ಭಂವರಾಗಿ ಮೆರೆದು ಸೌಹಾರ್ದತೆಯೊಂದಿಗೆ ಸಾಮರಸದ ಪ್ರತೀಕರೆಣಿಸಿ ಎಲ್ಲರ ಪಾಲಿನ ಸುರೇಣ್ಣರಾಗಿರುವ ಇವರ ಈ ಸಂಭ್ರಮವು ಚಾರಿತ್ರಿಕ ಕಾರ್ಯಕ್ರಮ ಆಗಿಸೋಣ ಎಂದು ಶಿವರಾಮ ಭಂಡಾರಿ ಅಧ್ಯಕ್ಷೀಯ ನುಡಿಯಲ್ಲಿ ಆಶಯವ್ಯಕ್ತಪಡಿಸಿದರು.

ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಕಾರ್ಯಾಧ್ಯಕ್ಷ ಆಗಿದ್ದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರ, ಅಧ್ಯಕ್ಷರಾಗಿ, ಅನಘಾ ಇಂಟರ್‍ನೇಶನಲ್ ಸಂಸ್ಥೆಯ ಮಾಲೀಕರೂ, ಎಸ್.ಬಿ ರಿಯಾಲಿಟಿ ಇದರ ಆಡಳಿತ ನಿರ್ದೇಶಕರಾಗಿ, ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಹಾಗೂ ಸಾಯಿನಾಥ್ ಮಿತ್ರ ಮಂಡಳ್ ಕಪ್‍ಪರೇಡ್ ಮುಂಬಯಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ನಾಗೇಶ್ವರ ಸಿನಿ ಕ್ರಿಯೇಷನ್ಸ್‍ನ ಆಡಳಿತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ, ಉದಾರ ಕೊಡುಗೈದಾನಿ, ಸಮಾಜ ಸೇವಕರೆಣಿಸಿ ಮುಂಬಯಿ ಕಂಡ ಅಪ್ರತಿಮ ವಾಗ್ಮಿ, ಜನನಾಯಕರೆಣಿಸಿದ ಬಹುಮುಖಿ ವ್ಯಕ್ತಿತ್ವದ ಸುರೇಶ್ ಭಂಡಾರಿ ಇವರ ಮೇರು ವ್ಯಕ್ತಿತ್ವವು ಆದರಣೀಯವಾಗಿದ್ದು ಇವರು ಇದೀಗಲೇ ತಮ್ಮ ಜೀವನದ ಸಾರ್ಥಕ 60 ಸಂವತ್ಸರಗಳನ್ನು ಪೂರೈಸಿದ್ದು ಇವರ ಷಷ್ಠಿಪೂರ್ತಿ ಶಾಂತಿ ಸಂಭ್ರಮವನ್ನು ಅರ್ಥಪೂರ್ಣ ಮತ್ತು ಹೆಗ್ಗುರುತುವಾಗಿ ಸಂಭ್ರಮಿಸಬೇಕು ಎಂದು ಹೆಸರಾಂತ ಸಂಘಟಕ ಜಿ.ಟಿ ಆಚಾರ್ಯ ಪ್ರಸ್ತಾವನೆಗೈದು ಕಾರ್ಯಕ್ರಮದ ಹಿನ್ನಲೆ ತಿಳಿಸಿದರು.

ಸಭೆಯಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ, ಶೋಭಾ ಸುರೇಶ್ ಭಂಡಾರಿ, ಸೌರಭ್ ಸುರೇಶ್ ಭಂಡಾರಿ, ಹೇಮಾ ಎಸ್. ಅವಿೂನ್, ವಿಶ್ವನಾಥ ದೊಡ್ಡಮನೆ, ಶಶಿಧರ ಡಿ.ಭಂಡಾರಿ, ಪ್ರಕಾಶ್ ಶೆಟ್ಟಿ ಸುರತ್ಕಲ್, ಸಾ.ದಯಾ, ಗಣೇಶ್ ಕುಮಾರ್, ಕರ್ನೂರ್ ಮೋಹನ್ ರೈ, ಅಶೋಕ ಪಕ್ಕಳ, ಸುಧಾಕರ ಭಂಡಾರಿ ಐರೋಳಿ, ಜಯಶೀಲ ಭಂಡಾರಿ ಮತ್ತಿತರರು ಉಪಸ್ಥಿತರಿದ್ದು ಕಡಂದಲೆ ಸುರೇಶ್ ಭಂಡಾರಿ ಅಭಿನಂದನಾ ಸಮಿತಿ ರಚಿಸಲಾಯಿತು.

ಪದ್ಮನಾಭ ಸಸಿಹಿತ್ಲು ಪ್ರಾರ್ಥನ್ನಾಡಿದರು. ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ ಮಾತನಾಡಿ ಇದೊಂದು ದಾಖಲೆಯ ಕಾರ್ಯಕ್ರಮ ಆಗಬೇಕು. ಮುಂದಿನ ಜನಾಂಗಕ್ಕೆ ಮಾದರಿ ಆಗುವಂತಿರಬೇಕು ಎಂದು ತಿಳಿಸಿ ವಂದಿಸಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here