Friday 19th, April 2024
canara news

ಶ್ರೀ ಸಾಯಿನಾಥ ಮಿತ್ರ ಮಂಡಳಿ ಪೂರೈಸಿದ ವಾರ್ಷಿಕ ಕೊಲಾಬಾ ಜಾತ್ರೆ

Published On : 28 Jan 2022   |  Reported By : Rons Bantwal


ಸುರೇಶ್ ಭಂಡಾರಿ ಸಾರಥ್ಯದ ಶ್ರೀ ಸಾಯಿಬಾಬಾ-ಶ್ರೀ ಸತ್ಯನಾರಾಯಣ ಮಹಾಪೂಜೆ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.27: ದಕ್ಷಿಣ ಮುಂಬಯಿ ಕೊಲಾಬಾ ಕಫ್‍ಪರೇಡ್ ಪರಿಸರದಲ್ಲಿ ಕಳೆದ ಸುಮಾರು ಮೂವತ್ತ ನಾಲ್ಕು ವರ್ಷಗಳಿಂದ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳೊಂದಿಗೆ ಸಕ್ರೀಯವಾಗಿ ಸೇವಾ ನಿರತ ವಾರ್ಷಿಕ `ಕೊಲಾಬಾ ಜಾತ್ರೆ' ಎಂದೇ ಜನಜನಿತ ಶ್ರೀ ಸಾಯಿನಾಥ ಮಿತ್ರ ಮಂಡಳಿ (ರಿ.) ಸಂಸ್ಥೆಯ ತ್ರಿದಶಕ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ಶ್ರೀ ಸಾಯಿಬಾಬಾ ಪೂಜೆ ಇಂದಿಲ್ಲಿ ಗುರುವಾರ ಸಂಜೆ ಕಪ್ ಪರೇಡ್‍ನ ಸಾಯಿಸದನ್ ಕೇಂದ್ರದÀಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗÀಳೊಂದಿಗೆ ಸಂಪನ್ನಗೊಂಡಿತು.

ಸಾಯಿನಾಥ್ ಮಿತ್ರ ಮಂಡಳ್ ಕಪ್‍ಪರೇಡ್ ಮುಂಬಯಿ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ, ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ, ನಾಗೇಶ್ವರ ಸಿನಿ ಕ್ರಿಯೇಷನ್ಸ್‍ನ ಆಡಳಿತ ನಿರ್ದೇಶಕ, ಚಲನಚಿತ್ರ ನಿಮಾಪಕ ಕಡಂದಲೆ ಸುರೇಶ್ ಎಸ್.ಭಂಡಾರಿ ಸಂಸ್ಥಾಪಣೆಯ ಶ್ರೀ ಸಾಯಿನಾಥ ಮಿತ್ರ ಮಂಡಳಿ ಏರ್ಪಾಡಿಸಿದ್ದ ವಾರ್ಷಿಕ ಮಹಾಪೂಜೆಯಲ್ಲಿ ಭಾಂಡೂಪ್ ಪಶ್ಚಿಮದ ಶ್ರೀ ನಿತ್ಯಾನಂದ ಮಂದಿರದ ಪ್ರಧಾನ ಅರ್ಚಕ ವಿದ್ವಾನ್ ಶ್ರೀ ಲಕ್ಷಿ ್ಮೀ ನಾರಾಯಣ ಭಟ್ ಅವರು ಶ್ರೀ ಸಾಯಿ ಅಭಿಷೇಕ ಮತ್ತು ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಸಾಯಿ ಮಹಾರತಿ, ಇತ್ಯಾದಿ ಪೂಜಾಧಿಗಳೊಂದಿಗೆ ವಿಧಿವತ್ತಾಗಿ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ನೆರದ ಭಕ್ತಾಭಿಮಾನಿಗಳಿಗೆ ಅನುಗ್ರಹಿಸಿದರು. ಸುರೇಶ್ ಭಂಡಾರಿ, ಶೋಭಾ ಸುರೇಶ್ ಭಂಡಾರಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದು ಸೌರಭ್ ಎಸ್.ಭಂಡಾರಿ ಮತ್ತು ಮೇಘಾ ಎಸ್.ಭಂಡಾರಿ, ಮಾ| ಆರ್ಯಮಾನ್ ಎಸ್.ಭಂಡಾರಿ ಸಹಭಾಗಿಗಳಾಗಿದ್ದು

ಈ ಸಂದರ್ಭದಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ, ಮಾಜಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್.ಭಂಡಾರಿ, ಎಂಎಲ್‍ಎ ಕ್ಯಾಂಟೀನ್‍ನ ನವೀನ್ ಶೆಟ್ಟಿ, ಜಯ ಪೂಜಾರಿ ಕಪ್‍ಪರೇಡ್, ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ, ಗೋಪಾಲ ಭಂಡಾರಿ, ಎಂ.ಹುಸೈೀನ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಸುರೇಶ್ ಭಂಡಾರಿ ಮಂಗಳಾರತಿಗೈದು ಉಪಸ್ಥಿತ ಸಾಯಿ ಭಕ್ತರನ್ನು ಗೌರವಿಸಿದರು.

 

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here