Saturday 20th, April 2024
canara news

ಜ.30 ಸಂಜೆ ಜೂಮ್ ವೇದಿಕೆಯಲ್ಲಿ `ವಚನ ಸಾಹಿತ್ಯದ ಅನನ್ಯತೆ' ಕಾರ್ಯಕ್ರಮ

Published On : 28 Jan 2022   |  Reported By : Rons Bantwal


ವಚನಾನುಭವಿ ವಾಗ್ಮಿ ಸುರೇಶ್ ಶೆಟ್ಟಿ ಗುರ್ಮೆ ಅವರಿಂದ ಪ್ರಧಾನ ಭಾಷಣ


ಮುಂಬಯಿ (ಆರ್‍ಬಿಐ), ಜ.28: ಗಾನಲೋಕದ ಗಾರುಡಿಗ ರಮೇಶ್ಚಂದ್ರ (ಬೆಂಗಳೂರು) ಸಾರಥ್ಯದಲ್ಲಿ `ವಚನ ಸಾಹಿತ್ಯದ ಅನನ್ಯತೆ' ವಿಷಯವಾಗಿಸಿ ಐಲೇಸಾ, ದಿ ವಾಯ್ಸ್ ಆಫ್ ಓಷನ್ (ರಿ.) ಜ.30 ರವಿವಾರ ಸಂಜೆ 7.30 ಗಂಟೆಗೆ ಜೂಮ್ ವೇದಿಕೆಯಲ್ಲಿ (ವರ್ಚ್ಯುವಲ್ ಕಾರ್ಯಕ್ರಮ) ಪ್ರಸ್ತುತ ಪಡಿಸಲಿದೆ. ನಾಡಿನ ಹೆಸರಾಂತ ಸಮಾಜ ಸೇವಕ, ವಚನಾನುಭವಿ ವಾಗ್ಮಿ ಸುರೇಶ್ ಶೆಟ್ಟಿ ಗುರ್ಮೆ (ಬಳ್ಳಾರಿ) ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ದ್ದು ವಚನ ಸಾಹಿತ್ಯದ ಅನನ್ಯತೆ' ವಿಷಯವಾಗಿ ಮಾತಾಡಲಿದ್ದಾರೆ ಎಂದು ಐಲೇಸಾ ತಿಳಿಸಿದೆ.

     

 Kemar Swamiji.                            Gurme Suresh Shetty                            Rameshchandra

ಸುಧಾಕರ್ ಶೆಟ್ಟಿ ಬೆಂಗಳೂರು ಕಾರ್ಯಕ್ರಮಕ್ಕೆ ಚಾಲನೆಯನ್ನೀಡಲಿದ್ದು ಕೇಮಾರು ಸಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ (ಮೂಡಬಿದ್ರಿ) ಕಾರ್ಯಕ್ರಮಕ್ಕೆ ಮೆರುಗು ನೀಡಿ ಪ್ರಸ್ತಾವನೆ ನಡೆಸಿ ಆಶೀರ್ವದಿಸಲಿದ್ದಾರೆ. ಸಾಹಿತಿ, ವಾಗ್ಮಿ ವಸಂತ ಗಿಳಿಯಾರ್ (ಉಡುಪಿ) ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ರಮೇಶ್ಚಂದ್ರ ಬೆಂಗಳೂರು ಮತ್ತು ಕಲಾವತಿ ದಯಾನಂದ್ ಉಡುಪಿ ಕಾರ್ಯಕ್ರಮದ ಮಧ್ಯೆ ವಚನ ಗೀತೆಹಾಡಿ ವಚನದ ಸಾರವನ್ನು ಹಾಡಿನ ಮೂಲಕ ತಿಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಊರ ಪರವೂರ, ಪರದೇಶದಿಂದ ಸಾಹಿತ್ಯ ಅಭಿಮಾನಿಗಳು ಪಾಲ್ಗೊಳ್ಳಲಿದ್ದು ಟೀಮ್ ಐಲೇಸಾದ ಸಕ್ರಿಯ ಕಾರ್ಯಕರ್ತೆ ಗೀತಾ ರಾಘವೇಂದ್ರ ಬೆಂಗಳೂರು ವಂದಿಸಲಿದ್ದಾರೆ.

ನೇರವಾಗಿ ಲಿಂಕ್ ಮೂಲಕ ಕಾರ್ಯಕ್ರಮಕ್ಕೆ ಸೇರಿ ಕೊಳ್ಳಬಹುದು ಅಥವಾ zoom iಜ: 89728778504 ಮತ್ತು ಠಿಚಿss ಛಿoಜe: vಚಿಛಿhಚಿಟಿಚಿ ಇದರ ಮೂಲಕ ಜಾಯಿನ್ ಆಗಬಹುದು. ನಾಡಿನಾದ್ಯಾಂತದ ವಚನ ಸಾಹಿತ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗುವಂತೆ ಟೀಂ ಐಲೇಸಾ ಮುಂಬಯಿ ಸಂಯೋಜಕ ಸೂರಿ ಮಾರ್ನಾಡ್ ವಿನಂತಿಸಿ ಕೊಂಡಿದ್ದಾರೆ.

ಸುರೇಶ್ ಶೆಟ್ಟಿ ಗುರ್ಮೆ:
ಮುಂಬಯಿ, ಬಳ್ಳಾರಿ ಇಲ್ಲಿನ ಪ್ರತಿಷ್ಠಿತ ಉದ್ಯಮಿಯಾಗಿದ್ದು ನೆರೆಮನೆಯವರ ಕಣ್ಣೀರಿಗೆ ಜೊತೆಯಾಗಿ ಅವರ ಜೊತೆ ಅಳುವುದಕ್ಕಿಂತ ಅವರಿಗೆ ಧೈರ್ಯ ತುಂಬಿ ದಾರಿ ತೋರಿ ಕಣ್ಣೊರೆಸುವವರಾಗಬೇಕು ನಾವು. ಆಗ ಆ ಕೂಡಲ ಸಂಗಮ ಕೂಡಾ ಮೆಚ್ಚುವ. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ ಪ್ರಕಾಶ್ ಅವರಿಂದ ಪ್ರಭಾವಿತರಾಗಿ ವಚನ ಸಾಹಿತ್ಯದ ಬಗ್ಗೆ ವಿಶೇಷ ಒಲವು ತೋರಿಕೊಂಡ ಗುರ್ಮೆ ಅವರು ವಚನ ಸಾಹಿತ್ಯದ ಸತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಬೆಳೆದವರು. ಬಡತನದ ಬಾಳಿಗೆ ಪುಸ್ತಕಗಳೇ ಆತ್ಮೀಯ ಸ್ನೇಹಿತರು ಎಂದು ಮೊದಲಿಂದ ನಂಬಿಕೊಂಡಿದ್ದ ಗುರ್ಮೆಯವರಿಗೆ ಓದು ಕಲಿ ಸಿದ್ದು ಬಹಳ.

ತನ್ನ ಪ್ರತೀ ಹೆಜ್ಜೆಯಲ್ಲಿ ವಚನ ಸಾಹಿತ್ಯದ ಸಾಲುಗಳನ್ನು ಅಳವಡಿಸಿಕೊಂಡಿರುವ ಗುರ್ಮೆ ಅವರು `ಹತ್ತೂರ ದೊರೆತನಕ್ಕಿಂತ ಹೆತ್ತೂರ ಊಳಿಗ ಮೇಲು' ಎಂದು ಹೇಳಿಕೊಳ್ಳುತ್ತಾ ತನ್ನಹುಟ್ಟೂರುಗೆ ಪ್ರಾಕೃತಿಕವಾಗಿ ಏನು ಕೊಡಲು ಸಾಧ್ಯ ವೆಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡು ತಾನು ಬಾಲ್ಯದಲ್ಲಿ ಕುಡಿದ ಭಾಗೀರಥಿ ಹಸುವಿನ `ಹಾಲಿನ' ಋಣಕ್ಕಾಗಿ `ಭಾಗೀರಥಿü ಗೋಗ್ರಹ' ಸ್ಥಾಪಿಸಿ ಯುವಕರನ್ನು ಸಹಜ ಕೃಷಿ ಮತ್ತು ಹೈನುಗಾರಿಕೆಯತ್ತ ಸೆಳೆಯಲು ಮಾದರಿ ರೈತನಾಗಿ ತನ್ನನ್ನು ತೊಡಗಿಸಿಕೊಂಡವರು.

ತೀರಾ ಸರಳ ಸಜ್ಜನ `ವಚನಾನುಭವಿ' ವಾಗ್ಮಿಯನ್ನು ಇವತ್ತಿನ ಕಾರ್ಯಕ್ರಮಕ್ಕೆ ಐಲೇಸಾ-ದಿ ವಾಯ್ಸ್ ಆಫ್ ಓಷನ್ ಆಯ್ಕೆ ಮಾಡಿಕೊಂಡು ತನ್ನನ್ನು ತಾನೇ ಸತ್ಕರಿಸಿಕೊಂಡಿದೆಯೆಂದು ಹೃದಯ ಪೂರ್ವಕವಾಗಿ ಆನಂದಿಸುತ್ತದೆ.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here