Friday 29th, March 2024
canara news

ಯುವಕ ಮಂಡಲ (ರಿ.) ಪಡುಮಾರ್ನಾಡು ಮಹೋತ್ಸವ ಸಮಿತಿ

Published On : 03 Feb 2022


ರಾಘು ಸಿ.ಪೂಜಾರಿ (ಗೌರವ ಅಧ್ಯಕ್ಷ)- ಮೋಹನ್ ಮಾರ್ನಾಡ್ ಮುಂಬಯಿ (ಅಧ್ಯಕ್ಷ)

ಮುಂಬಯಿ (ಆರ್‍ಬಿಐ), ಫೆ.03: ಕರ್ನಾಟಕ ಕರಾವಳಿಯ ಮೂಡಬಿದ್ರೆ ಇಲ್ಲಿನ ಯುವಕ ಮಂಡಲ (ರಿ.) ಪಡುಮಾರ್ನಾಡು ಇದರ ಸುವರ್ಣ ಮಹೋತ್ಸವ ಸಮಿತಿ ಸಭೆಯು ಯುವಕ ಮಂಡಲದ ಅಧ್ಯಕ್ಷ ರಮೇಶ್ ಎಸ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಇತ್ತೇಚೆಗೆ ನಡೆಯಿತು.

Raghu Poojari.

Mohan Marnad

Hemraj Rao

50ರ ಸವಿನೆನಪಿಗಾಗಿ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಮಹಾವೀರ ಹಿರಿಯ ಪ್ರಾಥಮಿಕ ಶಾಲೆಗೆ ಕಬ್ಬಿಣದ ರೀಪು ಪಕ್ಕಾಸು ಹಾಕಿ ದುರಸ್ತಿ ಮಾಡುವುದೆಂದು ಹಾಗೂ ಸುವರ್ಣ ಮಹೋತ್ಸವ ಸಮಾರಂಭವನ್ನು 2022ರ ಮೇ.22ರ ರವಿವಾರ ಜರುಗಿಸುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಸುವರ್ಣ ಮಹೋತ್ಸವಕ್ಕಾಗಿ ಸಮಿತಿ ಆಯ್ಕೆ ಮಾಡಲಾಯಿತು.

ರಾಘು ಸಿ ಪೂಜಾರಿ ಕುವೈತ್ (ಗೌರವಾಧ್ಯಕ್ಷರು), ಮೋಹನ್ ಮಾರ್ನಾಡ್ ಮುಂಬಯಿ (ಅಧ್ಯಕ್ಷ), ವಸಂತ್ ಹೆಗ್ಡೆ ಅಮನಬೆಟ್ಟು ಕುವೈತ್ ಹಾಗೂ ಝಾಕೀರ್ ಹುಸೈನ್ ಕುವೈತ್ (ಉಪಾಧ್ಯಕ್ಷರುಗಳು), ಹೇಮರಾಜ್ ರಾವ್ ಬೆಂಗಳೂರು ಮತ್ತು ಪ್ರದೀಪ್ ಪೂಜಾರಿ ಕಪೆÇ್ರೀಟ್ಟು (ಕಾರ್ಯದರ್ಶಿ), ಸಂತೋಷ್ ಪೂಜಾರಿ ಹವಾಲ್ದರಬೆಟ್ಟು (ಜೊತೆ ಕಾರ್ಯದರ್ಶಿ), ದೀಪಕ್ ಶೆಟ್ಟಿ ಕುಡ್ಡ (ಕೋಶಾಧಿಕಾರಿ) ಹಾಗೂ ಸಂಘಕ್ಕೆ ಸಹಕಾರ ನೀಡುತ್ತಿರುವ ಹಲವಾರು ಹಿರಿಯ ಮಹನೀಯರನ್ನು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಮಂಡಲದ ಗೌರವಾಧ್ಯಕ್ಷರುಗಳಾದ ಕೆ.ಯತೀಂದ್ರ ರಾವ್ ಪಾಡಿಮನೆ ಹಾಗೂ ಜಯ ಬಿ.ಟೀಚರ್ ಸಲಹೆ ಸೂಚನೆಗಳನ್ನು ನೀಡಿದರು. ನಿತೇಶ್ ಪೂಜಾರಿ ಮಾರ್ನಾಡ್ ಕಾರ್ಯಕ್ರಮದ ಯಶಸ್ಸಿಗೆ ತುಂಬು ಸಹಕಾರ ನೀಡುದಾಗಿ ತಿಳಿಸಿದರು. ಕಾರ್ಯದರ್ಶಿ ವೈಷ್ಣವ್ ಹೆಗ್ಡೆ ಧನ್ಯವಾದವಿತ್ತರು.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here