Saturday 20th, April 2024
canara news

ಶ್ರೀ ಗೋಪಾಲಕೃಷ್ಣ ಮಂದಿರ ಪುನ:ಪ್ರತಿಷ್ಠೆ-ಬ್ರಹ್ಮಕಲಶೋತ್ಸವÀ-ಹೊರೆಕಾಣಿಕೆ

Published On : 10 Apr 2022   |  Reported By : Rons Bantwal


ಗೋಕುಲ ಸಭಾಗೃಹದಲ್ಲಿ ನಡೆಸಲ್ಪಟ್ಟ ಪೂರ್ವಭಾವಿ ಸಭೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.09: ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳಿಂದ ನಿರ್ಮಾಣಗೊಂಡ ಗೋಕುಲ ಭವನ ಮತ್ತು ಗೋಕುಲ ಶ್ರೀ ಗೋಪಾಲಕೃಷ್ಣ ಮಂದಿರದ ಪುನ:ರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ, ಹೊರೆಕಾಣಿಕೆ ನಿಮಿತ್ತ ಪೂರ್ವಭಾವಿ ಸಭೆಯು ಬಿಎಸ್‍ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಜರುಗಿತು.

ಇಂದಿಲ್ಲಿ ಶನಿವಾರ ಶನಿವಾರ ಸಂಜೆ ಸಯಾನ್ ಪೂರ್ವದ ಗೋಕುಲ್ ಮಾರ್ಗ್‍ನಲ್ಲಿನ ನವೀಕೃತ ಗೋಕುಲ ಸಭಾಗೃಹದ ಸಭಾಗೃಹದಲ್ಲಿ ನಡೆಸಲಾದ ಸಭೆಯಲ್ಲಿ ಇದೇ ಮೇ.08ರಿಂದ ಮೇ.16ರ ತನಕ ಸಯಾನ್‍ನ ಗೋಕುಲದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪ್ರದಾಯಿಕ ಹಾಗೂ ವಿಧಿವತ್ತಾಗಿ ನೆರವೇರಿಸಲಾಗುವುದು. ದಿನಾ ವಿವಿಧ ಪೂಜಾಧಿಗಳು, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಿದ್ದು ರಾಷ್ಟ್ರದ ಹಾಗೂ ರಾಜ್ಯಗಳ ಘಟಾನುಘಟಿ ಧುರೀಣರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಪಾಲ್ಗೊಂಡು ಒಟ್ಟಾಗಿ ಈ ಮಂದಿರವನ್ನು ಜಗತ್ತಿನ ಪ್ರತಿಯೊಬ್ಬ ಶ್ರೀಕೃಷ್ಣನ ಭಕ್ತರಿಗೆ ಸಮರ್ಪಿಸಲಿದ್ದಾರೆ. ಇವೆಲ್ಲವುಗಳ ಯಶಸ್ಸಿಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಬ್ರಹ್ಮಕಲಶೋತ್ಸವದ ವಿಶೇಷ ಸೇವೆಗಳ ಬಗ್ಗೆ ಡಾ| ಸುರೇಶ್ ರಾವ್ ತಿಳಿಸಿದರು.

ಸಯಾನ್ ಪೂರ್ವದಲ್ಲಿ ಅತ್ಯಾಧುನಿಕ ನವಕಾಲೀನ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿ ಗೊಳಿಸಲಾದ ಈ ಭವ್ಯ ಕಟ್ಟದದ ವಿಶೇಷತೆಗಳನ್ನು ತಿಳಿಸಿದ ಡಾ| ಸುರೇಶ್ ರಾವ್, ದೇಶವಿದೇಶಗಳಲ್ಲಿನ ಶ್ರೀಕೃಷ್ಣನ ಎಲ್ಲಾ ಭಕ್ತರು, ಕೊಡುಗೈದಾನಿಗಳು, ಮುಂಬಯಿಯಲ್ಲಿನ ಎಲ್ಲಾ ಸಂಘಸಂಸ್ಥೆಗಳ ಮುಖ್ಯಸ್ಥರು, ಪ್ರತಿಯೊಬ್ಬ ಸದಸ್ಯರು ಪಾಲ್ಗೊಂಡು ಆಗಮಿಸಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಉಭಯ ಸಂಸ್ಥೆಗಳ ಪರವಾಗಿ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಿದರು.

ಬ್ರಹ್ಮಕಲಶೋತ್ಸವದ ಸಲುವಾಗಿ ವಿಶೇಷವಾಗಿ ಹೊರೆಕಾಣಿಕೆ ಸಮಿತಿ ರಚಿಸಿದ್ದು ಇದರ ಸಾರಥ್ಯವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಇವರಿಗೆ ವಹಿಸಲಾಯಿತು. ಉಭಯ ಸಂಸ್ಥೆಗಳ ಪರವಾಗಿ ಡಾ| ಸುರೇಶ್ ರಾವ್ ಮತ್ತು ಪದಾಧಿಕಾರಿಗಳು ಐಕಳ ಹರೀಶ್ ಅವರಿಗೆ ಪೇಟ ತೊಡಿಸಿ, ಅಡಿಕೆ ವೀಳ್ಯೆದೆಲೆಯನ್ನಿತ್ತು ಸಂಪ್ರದಾಯಿಕವಾಗಿ ಜವಾಬ್ದಾರಿಯನ್ನು ವಹಿಸಿ ಬೃಹನ್ಮುಂಬಯಿ ಹಾಗೂ ಮಹಾರಾಷ್ಟ್ರದದ್ಯಾಂತದ ವಿಶೇಷವಾಗಿ ತುಳುಕನ್ನಡಿಗರ ಎಲ್ಲಾ ಸಂಘ-ಸಂಸ್ಥೆಗಳು ಹೊರೆಕಾಣಿಕೆ, ಶುಭಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಐಕಳ ಹರೀಶ್ ಮಾತನಾಡಿ ಮುಂಬಯಿಯಲ್ಲಿ ತುಳುಕನ್ನಡಿಗರು ಯಾವುದೇ ವಿಷಯಕ್ಕೆ ಒಟ್ಟಾಗಿ ಐಕ್ಯತೆ ತೋರಿಸುವ ಖುಷಿಯೇ ವೈಶಿಷ್ಟ ್ಯಮಯವಾದುದು. ಅಂತೆಯೇ ಸಮಾಜಕ್ಕೆ ನೀಡುವ ಋಣವನ್ನು ಪೂರೈಸಲು ಇಂತಹ ಸೇವೆಗಳು ಅವಕಾಶವಾಗಿದೆ. ಡಾ| ಸುರೇಶ್ ರಾವ್ ಈ ಮಂದಿರ ನಿರ್ಮಾಣದ ಮೂಲಕ ಇತಿಹಾಸವನ್ನು ಸುವರ್ಣ ಅಕ್ಷರಗಳಲ್ಲಿ ಬರೆದು ಆಗಿದೆ. ಇವರ ಆತ್ಮಶಕ್ತಿಯೇ ಧೀಶಕ್ತಿ ಆಗಿದ್ದು ಎಲ್ಲರ ಸಹಯೋಗದಿಂದ ಬ್ರಹ್ಮಕಲಶವು ಖಂಡಿತಾವಾಗಿಯೂ ವೈಭವೋಪೇತವಾಗಿ ನಡೆಯುವುದು. ಎಲ್ಲಕ್ಕಿಂತ ಧೀಶಕ್ತಿ ಕೃಷ್ಣ ದೇವರು ಆದ್ದರಿಂದ ಅವರೇ ಎಲ್ಲವನ್ನು ಸುಸಾಂಗವಾಗಿ ಮಾಡಿಸುತ್ತರೆ. ಆದರೂ ದೇವರ ಸೇವೆಗಳಲ್ಲಿ ಎಲ್ಲರೂ ನೇತೃತ್ವ ವಹಿಸಬೇಕು ಎಂದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿೂನ್, ದೇವಾಡಿಗರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಜಿಎಸ್‍ಬಿ ಸೇವಾ ಮಂಡಳಿ ಮುಂಬಯಿ ಇದರ ಸತೀಶ್ ರಾಮ ನಾಯಕ್, ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾ| ಆರ್.ಎಂ.ಭಂಡಾರಿ, ಫೈನ್ ಆರ್ಟ್ಸ್ ಎಂಡ್ ಸಂಗೀತ ಸಭಾ (ಶ್ರೀ ಷಣ್ಮುಖಾನಂದ) ಇದರ ಗೌರವ ಕೋಶಾಧಿಕಾರಿ ಆರ್.ಶ್ರೀಧರ್, ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ತುಳು ಕೂಟ ಫೌಂಡೇಶನ್ (ರಿ.) ನಲಸೋಫರಾ ಇದರ ಗೌರವಾಧ್ಯಕ್ಷ ಶಶಿಧರ್ ಕೆ.ಶೆಟ್ಟಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಸದಸ್ಯ ವಿದ್ವಾನ್ ಎಸ್.ಎನ್ ಉಡುಪ ಜೆರಿಮೆರಿ, ಬಿಎಸ್‍ಕೆಬಿಎ ಉಪಾಧ್ಯಕ್ಷೆ ಶೈಲಿನಿ ಎ.ರಾವ್, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್ ವೇದಿಕೆಯಲ್ಲಿದ್ದರು.

ಸಭೆಯಲ್ಲಿ ಬಿಎಸ್‍ಕೆಬಿಎ ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಡಾ| ಸದಾನಂದ ಆರ್.ಶೆಟ್ಟಿ ಸಯಾನ್, ಜಯರಾಮ ಬಿ.ಶೆಟ್ಟಿ ಇನ್ನ (ಅಜಂತಾ), ಸುಧೀರ್ ಆರ್.ಎಲ್ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಬಿಎಸ್‍ಕೆಬಿಎ ಉಪಾಧ್ಯಕ್ಷ ವಾಮನ ಹೊಳ್ಳ ಸ್ವಾಗತಿಸಿ ಅತಿಥಿüಗಳಿಗೆ ಶಾಲು ಹೊದೆಸಿ ಪುಷ್ಫಗುಪ್ಚ ನೀಡಿ ಗೌರವಿಸಿದರು. ಕೋಶಾಧಿಕಾರಿ ಸಿಎ| ಹರಿದಾಸ ಭಟ್ ಆಭಾರ ಮನ್ನಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here