Wednesday 18th, May 2022
canara news

ಬರೋಡಾದಲ್ಲಿನ ವಿಶ್ವದÀ ಏಕೈಕ ತುಳು ಚಾವಡಿಲ್ಲಿ ನೆರವೇರಿದ ಯುಗಾದಿ ಸಂಭ್ರಮ

Published On : 16 Apr 2022   |  Reported By : Rons Bantwal


ಪರಂಪರೆ ರೂಢಿಸಿ ಸಂಸ್ಕೃತಿ ಉಳಿಸೋಣ : ರಾಧಾಕೃಷ್ಣ ಶೆಟ್ಟಿ ಸೂರತ್

ಮುಂಬಯಿ (ಆರ್‍ಬಿಐ) ಬರೋಡ, ಎ.14: ಆಧುನಿಕ ಕಾಲಘಟ್ಟದಲ್ಲಿ ಏಕತೆಗೆ ಮಹತ್ವ ನೀಡುವ ಅಗತ್ಯವಿದೆ. ತ್ಯಾಗಮಯಿ ತುಳುವರು ಹೊರನಾಡ ಗುಜರಾತ್‍ನಲ್ಲಿ ಸಂಘಟಿತರಾಗಿದ್ದು ಸಮಸ್ತ ಜನತೆಗೆ ಆದರ್ಶರಾಗಿದ್ದಾರೆ. ಇಂತಹ ಐಕ್ಯತೆಯ ಪರಂಪರೆಯನ್ನು ರೂಢಿಸಿ ನಮ್ಮ ಪಾವಿತ್ರ ್ಯತಾ ಸಂಸ್ಕೃತಿ ಉಳಿಸಿ, ಸಂಸ್ಕಾರ ಬೆಳೆಸಿ ಭಾವೀ ಜನಾಂಗಕ್ಕೆ ಮಾದರಿ ಆಗೋಣ ಎಂದು ಸೂರತ್‍ನ ಹಿರಿಯ ಉದ್ಯಮಿ, ಹೆಸರಾಂತ ಸಮಾಜ ಸೇವಕ ರಾಧಾಕೃಷ್ಣ ಶೆಟ್ಟಿ ತಿಳಿಸಿದರು.

ತುಳು ಸಂಘ ಬರೋಡಾ ಇಂದಿಲ್ಲಿ ಯುಗಾದಿ ಶುಭಾವಸರದಲ್ಲಿ ಗುಜರಾತ್ ರಾಜ್ಯದ ಬರೋಡಾ ಮಹಾನಗರದಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‍ನಲ್ಲಿ ಸ್ಥಾಪಿತ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿಯಲ್ಲಿ ತುಳುವರ ಹೊಸವರ್ಷ ಬಿಸು ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದ್ದು ರಾಧಾಕೃಷ್ಣ ಶೆಟ್ಟಿ ಮುಖ್ಯ ಅತಿಥಿüಯಾಗಿದ್ದು ದೀಪ ಪ್ರಜ್ವಲಿಸಿ ಸಾಂಪ್ರದಾಯಿಕ ಬಿಸುಪರ್ಬಕ್ಕೆ ಚಾಲನೆಯನ್ನಿತ್ತು ತುಳು-ಕನ್ನಡಿಗರು ಭಾರತೀಯ ಸಂಸ್ಕೃತಿಯ ಸಂರಕ್ಷಕ ಪ್ರಜ್ಞವಂತರು ಅನ್ನುವುದೇ ನಮ್ಮ ವೈಶಿಷ್ಟ ್ಯ ಎಂದರು.

ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಬಿಸುಕಣಿ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಗೌ| ಪ್ರ| ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ, ಗೌ| ಪ್ರ| ಕೋಶಾಧಿಕಾರಿ ವಾಸು ವಿ.ಪೂಜಾರಿ, ಮಹಿಳಾ ವಿಭಾಧ್ಯಕ್ಷೆ ಡಾ| ಶರ್ಮಿಳಾ ಎಂ.ಜೈನ್ ಪ್ರಮುಖರಾ ವೇದಿಕೆಯಲ್ಲಿದ್ದರು.

ಮನುಕುಲದ ಬದುಕಿಗೆ ಸಂಸ್ಕಾರ ಅನ್ನೋದು ಮುಖ್ಯವಾಗಿದೆ. ಇದನ್ನೇ ಯುವ ಪೀಳಿಗೆಗೆ ಕಲಿಸಿ ನಮ್ಮತನವನ್ನು ಮೆರೆಯಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ. ಇಲ್ಲಿ ನಾವೆಲ್ಲರೂ ಹೊರನಾಡ ಜನÀರು. ಆದ್ದರಿಂದ ಎಲ್ಲರೂ ಎಂದು ಸಮುದಾಯವಾಗಿಸಿ ಬಾಳುವ ಅಗತ್ಯವಿದೆ. ನಮ್ಮಲ್ಲಿನ ಒಗ್ಗಟ್ಟು, ಒಮ್ಮತದ ನಿರ್ಧಾರಗಳು ಎಲ್ಲರಿಗೂ ಶಕ್ತಿಯಾಗುವುದು. ಆವಾಗಲೇ ಸಮಾಜವನ್ನು ಸಶಕ್ತವಾಗಿ ಮುನ್ನಡೆಸಲು ಸಾಧ್ಯ. ಇದು ಸಹೋದರತ್ವದ ಬಾಳ್ವೆಗೆ ಪೂರಕವೂ, ಪ್ರೇರಣೆಯೂ ಆಗಲಿದೆ ಎಂದು ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಮಹಾವೀರ ಬಿ.ಜೈನ್, ಕೆ.ಮಾಧವ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಶಾಂತ್ ಹೆಗ್ಡೆ, ಸಂಘದ ಪ್ರಮುಖರಾದ ಮದನ್ ಕುಮಾರ್ ಗೌಡ, ವಾಸು ವಿ.ಸುವರ್ಣ, ಸುಜಾತಾ ಕೆ.ಶೆಟ್ಟಿ, ಸತೀಶ್ ಶೆಟ್ಟಿ ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದು ಸಂಘದ ಸದಸ್ಯರು, ಮಹಿಳೆಯರು ಭಜನೆಯನ್ನಾಡಿದರು.

ತುಳು ಸಂಘ ಬರೋಡಾ ಇದರ ಸಂಚಾಲಕ ಎಸ್.ಕೆ ಹಳೆಯಂಗಡಿ, ಮಾಜಿ ಅಧ್ಯಕ್ಷರುಗಳಾದ ಎಸ್.ಜಯರಾಮ ಶೆಟ್ಟಿ, ಇಂದುದಾಸ್ ವಿ.ಶೆಟ್ಟಿ ಹಿರಿಯ ಮುತ್ಸದ್ಧಿ ರತ್ನಾಕರ್ ಡಿ.ಶೆಟ್ಟಿ, ಸಂಜೀವ ಶೆಟ್ಟಿ (ಮಕರಪುರ), ಆನಂದ್ ಅಮೀನ್, ರಾಜಾ ಎಸ್.ಸಾಲ್ಯಾನ್ ಇವರ ಅಗಲಿಕೆಯನ್ನು ವಿಶೇಷವಾಗಿ ಸ್ಮರಿಸಿ ಮೌನ ಪ್ರಾರ್ಥನೆಯೊಂದಿಗೆ ದಿವ್ಯಾತ್ಮಗಳಿಗೆ ಸದ್ಗತಿ ಕೋರಲಾಯಿತು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಶಿಧರ ಬಿ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ದಯಾನಂದ ಬೋಂಟ್ರಾ ತುಳುವರ ಸಂಪ್ರ್ರದಾಯಿಕ ತೆನೆಹಬ್ಬ ಬಗ್ಗೆ ಮಾಹಿತಿಯನ್ನಿತ್ತರು. ಪದಾಧಿಕಾರಿಗಳು ಉಪಸ್ಥಿತ ಅತಿಥಿüಗಳು, ವಿವಿಧ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದರು. ಬಾಲಕೃಷ್ಣ ಎ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಗುಜರಾತ್‍ನಾದ್ಯಂತದ ವಿವಿಧ ತುಳು-ಕನ್ನಡ, ಸಮುದಾಯ ಸಂಘಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಮುನ್ನರಕ್ಕೂ ಅಧಿಕ ಜನರು ಹಾಜರಿದ್ದು ತುಳು ಸಂಪ್ರ್ರದಾಯಿಕ ತೆನೆಹಬ್ಬ (ಪುದ್ಧಾರ್)ವನ್ನೂ ಅದ್ದೂರಿಯಿಂದ ಆಚರಿಸಿದರು. ಕೊನೆಯಲ್ಲಿ ಕಣಿ ಸಂಬಂಧಿ ಫಲ ಇನ್ನಿತರ ವಸ್ತುಗಳ ಹಾರಾಜು ಪ್ರಕ್ರಿಯೆ ನಡೆಸಲಾಗಿದ್ದು ಇದೇ ಮನೋರಂಜನೆಯಂತೆ ಮೂಡಿತು.
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here