Wednesday 24th, April 2024
canara news

32ನೇ ವಾರ್ಷಿಕ ಸಂತೋತ್ಸವ ಸಂಭ್ರಮಿಸಿದ ಸೈಂಟ್ ಪೀಟರ್ಸ್ ಅಸೋಸಿಯೇಶನ್ ಮುಂಬಯಿ

Published On : 03 Jul 2022   |  Reported By : Rons Bantwal


ಏಕತೆಯಿಂದ ಮಾತ್ರ ಸಾಮರಸ್ಯದ ಬಾಳು ಸಾಧ್ಯ : ಬೊನಿಫಸ್ ಸಿಕ್ವೇರಾ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಜೂ.03: ಸೈಂಟ್ ಪೀಟರ್'ಸ್ ಅಸೋಸಿಯೇಶನ್ ಬಾರ್ಕೂರು (ಮುಂಬಯಿ) ಸಂಸ್ಥೆಯು ತನ್ನ ಪೆÇೀಷಕಸಂತ ಸೈಂಟ್ ಪೀಟರ್ ಅವರ 32ನೇ ವಾರ್ಷಿಕ ಸಂತೋತ್ಸವವನ್ನು ಇಂದಿಲ್ಲಿ ಭಾನುವಾರ ಬೆಳಿಗ್ಗೆ ಉಪನಗರ ಅಂಧೇರಿ ಪೂರ್ವದ ಮರೋಳ್ ಇಲ್ಲಿನ ವಿನ್ಸೆಂಟ್ ಪಲ್ಲೋಟ್ಟಿ ಇಗರ್ಜಿಯ ಸಭಾಗೃಹದಲ್ಲಿ ಅದ್ದೂರಿಯಾಗಿ ಸಂಭ್ರಮಿಸಿತು. ದೇವತಾಶಾಸ್ತ್ರ ಮತ್ತು ಭಾರತೀಯ ಕ್ರಿಶ್ಚಿಯನ್ ಆಧ್ಯಾತ್ಮಿಕತೆಯ ಪ್ರಾಧ್ಯಾಪಕ ರೆ| ಫಾ| ಡಾ| ಐವಾನ್ ಅಲ್ಮೇಡಾ ಬಾರ್ಕೂರು (ಎಸ್‍ಎಫ್‍ಎಕ್ಸ್) ಅವರು ಸಂಭ್ರಮಿಕ ಅಭಿವಂದನಾ ಪೂಜೆ ನೆರವೇರಿಸಿ ಅನುಗ್ರಹಿಸಿದರು.

ವಾರ್ಷಿಕ ಉತ್ಸವದ ಅಂಗವಾಗಿ ಅಸೋಸಿಯೇಶನ್‍ನ ಅಧ್ಯಕ್ಷ ಬೊನಿಫಸ್ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗಿದ್ದು, ಅತಿಥಿüಗಳಾಗಿ ಉದ್ಯಮಿಗಳಾದ ರೆಜಿ ಕರ್ವಾಲೋ (ಬುಥೆಲ್ಲೋ ಮೋಟರ್ಸ್), ವಿಲ್ಬ್ರೇಡ್ ಡಿಸೋಜಾ ಬ್ರಹ್ಮವಾರ (ರೇಡಿಯಂಟ್), ಸಂಸ್ಥೆಯ ರಜತೋತ್ಸವ ಸಮಿತಿ ಕಾರ್ಯಧ್ಯಕ್ಷೆ ಐಡಾ ರೋಚ್ ಉಪಸ್ಥಿತರಿದ್ದು, ಅಸೋಸಿಯೇಶನ್ ಸದಸ್ಯರ ಮಕ್ಕಳಿಗೆ ವಾರ್ಷಿಕವಾಗಿ ಕೊಡಮಾಡುವ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ವಿತರಿಸಿ ಅಭಿನಂದಿಸಿದರು.


ಏಕತೆಯಿಂದ ಮಾತ್ರ ಸಾಮರಸ್ಯದ ಬಾಳು ಸಾಧ್ಯ. ಹಾಗಿದ್ದಾಗ ಮಾತ್ರ ಜನರು ಪರಸ್ಪರ ಸಹಾಯ ಮಾಡುತ್ತಾರೆ ಮತ್ತು ಅಗತ್ಯವಿರುವಾಗ ನೈತಿಕ ಮತ್ತು ಆಥಿರ್üಕ ಬೆಂಬಲವನ್ನು ನೀಡುತ್ತಾರೆ. ಮತ್ತೊಂದೆಡೆ, ಪ್ರತ್ಯೇಕವಾಗಿ ಬದುಕುವುದು ಯಾರಿಗಾದರೂ ಅಸುರಕ್ಷಿತವೂ ಹೌದು. ನಾವು ಒಗ್ಗಟ್ಟಾಗಿ ಬಾಳಿದಾಗ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಿಗೂ ಇತರರಿಂದ ಸುಲಭವಾಗಿ ಉತ್ತಮ ಮಾರ್ಗದರ್ಶನ ಪಡೆಯಬಹುದು ಎಂಬುದು ಸಾಬೀತಾಗಿರುವ ಸತ್ಯ. ನಾವು ಬಾರ್ಕೂರು ಸಂಬಂಧಿಗಳು ಸೈಂಟ್ ಪೀಟರ್ ಅವರ ಸಂತೋತ್ಸವಕ್ಕಾದರೂ ಸೇರಿಕೊಂಡು ಸಂಬಂಧಗ ಳನ್ನು ಭದ್ರಪಡಿಸಿದ್ದೇವು. ಆದರೆ ಕೊರೋನಾ ಅವಾಂತರದಲ್ಲಿ ನಮ್ಮ ಒಗ್ಗೂಡುವಿಕೆ ದೂರಸರಿದಿದ್ದು ಇನ್ನು ಹಾಗೆ ಆಗಲಾರದು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಅಧ್ಯಕ್ಷ ಬೊನಿಫಸ್ ಸಿಕ್ವೇರಾ ತಿಳಿಸಿದರು.

ಆರಂಭದಲ್ಲಿ ಅಸೋಸಿಯೇಶನ್‍ನ16ನೇ ವಾರ್ಷಿಕ ಮಹಾಸಭೆ ನಡೆಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಐವಾನ್ ರೆಬೆಲ್ಲೋ, ಉಪಾಧ್ಯಕ್ಷ ಆ್ಯಂಟನಿ ಗೊನ್ಸಾಲ್ವಿಸ್, ಕಾರ್ಯದರ್ಶಿ ಎರಿಕ್ ಕರ್ವಾಲೋ, ಜೊತೆ ಕಾರ್ಯದರ್ಶಿ ಆರ್ಥರ್ ಮೆಂಡೋನ್ಸಾ, ಕೋಶಾಧಿಕಾರಿ ಜೋನ್ ಗೊನ್ಸಾಲ್ವಿಸ್ ಹಾಗೂ ವಿಲ್ಫ್ರೇಡ್ ಸಿಕ್ವೇರಾ, ತಿಮೋಥಿü ಡಿಸೋಜಾ, ವಿನ್ಸೆಂಟ್ ಫುರ್ಟಾಡೊ, ಆ್ಯಂಟನಿ ಗೊನ್ಸಾಲ್ವಿಸ್, ಜೋಸೆಫ್ ಡಿಅಲ್ಮೇಡಾ ಆಸೀನರಾಗಿದ್ದು ಸಭಾಕಲಾಪ ನಡೆಸಲಾಯಿತು.

ಸಭೆಯಲ್ಲಿ ಅಸೋಸಿಯೇಶನ್‍ನ 2022-2026ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ನೂತನ ಅಧ್ಯಕ್ಷರಾಗಿ ಬೊನಿಫಸ್ ಸಿಕ್ವೇರಾ, ಉಪಾಧ್ಯಕ್ಷರುಗಳಾಗಿ ವಿಲ್ಫ್ರೇಡ್ ಸಿಕ್ವೇರಾ, ಎರಿಕ್ ಕರ್ವಾಲೋ, ಕಾರ್ಯದರ್ಶಿ ಆರ್ಥರ್ ಮೆಂಡೋನ್ಸಾ, ಕೋಶಾಧಿಕಾರಿ ವಿನ್ಸೆಂಟ್ ಫುರ್ಟಾಡೊ, ಜೊತೆ ಕಾರ್ಯದರ್ಶಿ ಜೋಸೆಫ್ ಡಿಅಲ್ಮೇಡಾ, ಅಂತರಿಕ ಲೆಕ್ಕಪರಿಶೋಧಕ ತಿಮೋಥಿü ಡಿಸೋಜಾ, ಜನ ಸಂಪರ್ಕಾಧಿಕಾರಿ ಜೊಲ್ವಿನ್ ಫುರ್ಟಾಡೊ, ಸಂಯೋಜಕ ಐವಾನ್ ರೆಬೆಲ್ಲೋ ಹಾಗೂ ವಿನ್ಸೆಂಟ್ ಅಲ್ಮೇಡಾ (ಯುಎಸ್‍ಎ), ಜೋನ್ ಗೊನ್ಸಾಲ್ವಿಸ್ (ಮಂಗಳೂರು), ಆರ್ಚಿಬೊಲ್ಡ್ ಗೊನ್ಸಾಲ್ವಿಸ್ (ಮಸ್ಕತ್) ಸರ್ವಾನುಮತದಿಂದ ಆಯ್ಕೆಯಾಗಿದ್ದು ನಿರ್ಗಮನ ಅಧ್ಯಕ್ಷ ಐವಾನ್ ರೆಬೆಲ್ಲೋ ಅವರು ನೂತನ ಅಧ್ಯಕ್ಷ ಬೊನಿಫಸ್ ಸಿಕ್ವೇರಾ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭಾರೈಸಿದರು.
ಕಾರ್ಯಕ್ರಮದಲ್ಲಿ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷರುಗಳಾದ ಫೆÉಲಿಕ್ಸ್ ಬಾರ್ನ್ಸ್, ರಿಚಾರ್ಡ್ ಕರ್ವಾಲೋ, ಹಿರಿಯ ಸದಸ್ಯರುಗಳಾದ ಐವನ್ ರೆಬೆಲ್ಲೊ, ಜೋನ್ಸನ್ ಮಾರ್ಟಿಸ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಗತ ಸಾಲಿನಲ್ಲಿ ಸ್ವರ್ಗಸ್ಥರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಐವಾನ್ ರೆಬೆಲ್ಲೋ ಸಂಸ್ಥೆಯ ಕಾರ್ಯವೈಖರಿಯನ್ನು ತಿಳಿಸಿದರು. ಮನೋರಂಜನೆಯ ಅಂಗವಾಗಿ ಸದಸ್ಯರು ನೃತ್ಯ, ಕೊಂಕಣಿ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಕಿರಣ್ ಆರ್.ಕರ್ವಾಲೋ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಜೊಯ್‍ಲನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಆರ್ಥರ್ ಮೆಂಡೋನ್ಸಾ ಸ್ವಾಗತಿಸಿ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here