Sunday 10th, December 2023
canara news

ಮುಂಬಯಿಯಲ್ಲಿ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ

Published On : 10 Aug 2022   |  Reported By : Rons Bantwal


ಧರ್ಮಕಾರ್ಯದಿಂದ ಆಶಯಗಳು ಸಕಾರಗೊಳ್ಳುವುದು : ಡಾ| ಆರ್.ಕೆ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಆ.07: ಧರ್ಮನಿಷ್ಠೆಯಿಂದ ಪುಣ್ಯಕಾರ್ಯಕ್ಕೆ ಸೇರುವುದೇ ಭಾಗ್ಯವಾಗಿದೆ. ಧರ್ಮ ಕಾರ್ಯದಲ್ಲಿ ತೊಡಗಿಸಿ ಕೊಂಡಾಗ ನಮ್ಮಲ್ಲಿನ ಆಶಯಗಳು ತನ್ನೀತಾನೇ ಸಕಾರಗೊಳ್ಳುವುದು. ಸೇವೆಗೆ ಇಂತಹದ್ದೇ ಊರಿನವ ಅನ್ನೋದು ಮುಖ್ಯವಲ್ಲ ಈ ಭೂಮಿಯೇ ನಮ್ಮೆಲ್ಲರ ಊರಾಗಿದ್ದು ಇಲ್ಲಿನ ಕ್ಷೇತ್ರಗಳ ಉದ್ಧಾರ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬಂಟ್ಸ್ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಕನ್ನಡ ಜಾನಪದ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ಘಟಕ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ತಿಳಿಸಿದರು.

 

ಇಂದಿಲ್ಲಿ ಭಾನುವಾರ ಸಂಜೆ ಮಂಗಳೂರು ಉಳ್ಳಾಲ ಇಲ್ಲಿನ ಶ್ರೀ ಉಳ್ಳಾಲ್ತಿ ಧರ್ಮ ಅರಸು ಕ್ಷೇತ್ರದ ಜೀರ್ಣೊದ್ಧಾರ ಸಮಿತಿಯು ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಸಂಘ ಮುಂಬಯಿ ಇದರ ಅನೇಕ್ಸ್ ಕಟ್ಟಡದ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಸಭಾಭವನದಲ್ಲಿ ಆಯೋಜಿಸಿದ್ದ ಕ್ಷೇತ್ರದ ಜೀರ್ಣೋದ್ಧಾರ ಸಭೆಯಲ್ಲಿ ಮುಖ್ಯ ಅತಿಥಿüಯಾಗಿದ್ದು ಆರ್.ಕೆ ಶೆಟ್ಟಿ ಮಾತನಾಡಿದರು.

ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷರೂ, ಶ್ರೀ ಉಳ್ಳಾಲ್ತಿ ಕ್ಷೇತ್ರದ ಜೀರ್ಣೋದ್ಧ್ದಾರ ಸಮಿತಿ ಕಾರ್ಯಾಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕ್ಷೇತ್ರದ ದೈವಜ್ಞರಾದ ವೇದಮೂರ್ತಿ ಶ್ರೀ ರಂಗ ಐತಾಳ್ ಕದ್ರಿ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತರು. ಶ್ರೀ ಕ್ಷೇತ್ರದ ಧರ್ಮದರ್ಶಿ, ದರ್ಶನ ಪಾತ್ರಿ ಶ್ರೀ ದೇವು ಮೂಲ್ಯಣ್ಣ ಇವರು ಸಾಫಲ್ಯ ಸೇವಾ ಸಂಘ ಮುಂಬಯಿ ಇದರ 82ನೇ ವಾರ್ಷಿಕೋತ್ಸವ ಸಡಗರದ ನಾಮಫಲ ಅನಾವರಣ ಗೊಳಿಸಿ ಆಶೀರ್ವದಿಸಿ ಕ್ಷೇತ್ರದ ನಿಧಿ ಸಂಚಯನ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಶ್ರೀ ಉಳ್ಳಾಲ್ತಿ ಕ್ಷೇತ್ರ ಸಮಿತಿ ಅಧ್ಯಕ್ಷ ಟಿ.ರಮೇಶ್ ಮೆಂಡನ್, ಪ್ರಧಾನ ಕಾರ್ಯದರ್ಶಿ ಸುಂದರ ಉಳಿಯ, ಕೋಶಾಧಿಕಾರಿ ರಾಜೇಶ್ ಉಳಿಯ, ಸೋಮನಾಥ ದೇವಸ್ಥಾನ ಮಂಗಳೂರು ಇದರ ಟ್ರಸ್ಟಿ ರಾಮದಾಸ್ ಸೋಮೇಶ್ವರ್, ಹರ್ಷ ಡೆವೆಲಪರ್‍ನ ಮಾಲಕ ಹರೀಶ್ ಕುಮಾರ್ ಕುತ್ತಾರ್, ಸಜ್ಜನ ಸಂಘ ಮುಂಬಯಿ ಅಧ್ಯಕ್ಷ ರಾಜೇಂದ್ರ ನಾಯಕ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ವಿಶೇಷ ಆಮಂತ್ರಿತ ಸದಸ್ಯ ಸದಾನಂದ ಕೆ.ಸಫಲಿಗ, ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಓಂ ಪ್ರಕಾಶ್ ರಾವ್, ಉಳ್ಳಾಲ ಗಾಣಿಗರ ಸಂಘದ ಅಧ್ಯಕ್ಷ ಹೆಚ್.ಪ್ರಕಾಶ್, ಶ್ರೀ ಉಳ್ಳಾಲ್ತಿ ಕ್ಷೇತ್ರ ಅಂತಗುರಿಕಾರ ರಾಜೇಶ್ ನಾಯ್ಕ್, ಉದ್ಯಮಿ ಧೀರಜ್ ವಿ.ರಮಣ್ ಅತಿಥಿü ಅಭ್ಯಾಗತರಾಗಿ ವೇದಿಕೆಯಲ್ಲಿದ್ದರು.

ರಂಗ ಐತಾಳ್ ಶುಭ ನುಡಿಗಳನ್ನಾಡಿ ಕರ್ತವ್ಯವು ಪ್ರವೃತ್ತಿಯಾಗಿ ಸಿದ್ಧಿಯಾಗಬೇಕಾದರೆ ಮಾನವನಿಗೆ ಶ್ರದ್ಧೆ ಮತ್ತು ಭಕ್ತಿ ಅತ್ಯವಶ್ಯವಾಗಿದೆ. ಕಾರಣ ಮತ್ತು ಕಾರ್ಯವಿಲ್ಲದೆ ಯಾವುದೇ ಕೆಲಸ ನಡೆಯದು. ನಾವು ದೈವ ನಿರ್ಣಾಯವನ್ನು ಯಾವಾಗ ದಾಟಿ ಹೋದರೆನೇ ಸಮಾಜದ ವ್ಯವಸ್ಥೆ ಕೆಡುವುದು. ಆದ್ದರಿಂದ ನಾವು ಬೇಧಭಾವ ಬಿಟ್ಟು ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಕಾರಣೀಭೂತರಾದರೆ ದೈವದೇವಗಳೂ ನಮಗೆ ಒಲಿಯುವರು. ಜೀರ್ಣ ಆಗಿರುವುದನ್ನು ಉದ್ಧಾರ ಮಾಡುವುದೇ ಜೀರ್ಣೋದ್ಧಾರ ಆಗಿದೆ. ಇದಕ್ಕೆ ತಮ್ಮಿಂದಾದ ಸೇವೆ ಮಾಡಿದಾಗ ದೇವರೂ ಶ್ರೀರಕ್ಷೆ ನೀಡುವನು ಎಂದರು.

ನಮ್ಮ ಶ್ರೀನಿವಾಸ ಪಿ.ಸಾಫಲ್ಯರು ನಡೆದಾಡುವ ಮಹಾನ್ ಪುಸ್ತಕ ಭಂಡಾರವಾಗಿದ್ದು ಸಮಾಜದ ಅನರ್ಘ್ಯ ರತ್ನವಾಗಿದ್ದಾರೆ. ಇಂತಹ ಸಹೃದಯಿಗಳ ಸೇವಾನಿಷ್ಠೆ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಸಹಕಾರಿಯಾಗಿದೆ. ಪೌರಾಣಿಕಹಿನ್ನಲೆಯ ಈ ಕ್ಷೇತ್ರವು ಭಕ್ತರ ಇಷ್ಟಾರ್ಥಗಳನ್ನು ನಡೆಸಿಕೊಂಡ ನೆಲೆಯಾಗಿದೆ. ಇಂತಹ ಕೇತ್ರಗಳ ಜೀರ್ಣೋದ್ಧಾರ ಸೇವೆ ಕ್ಷೇತ್ರದ ಲೆಪ್ಪು ಮಾರ್ಯಾದೆಯೇ ಸರಿ. ತಾವೂ ಸೇವಾಥಿರ್üಗಳಾಗಿ ಕೃತಾರ್ಥರಾಗುವರೇ ಕೋರುತ್ತಾ ದೇವು ಮೂಲ್ಯಣ್ಣ ಅನುಗ್ರಹಿಸಿದರು.

ಮನುಕುಲದ ಶ್ರೇಷ್ಠವಾದ ಜೀವನದಲ್ಲಿ ಬರೇ ಕೌಟುಂಬಿಕ ಜೀವನವಾದರೆ ಅದು ಶೂನ್ಯವಾದುದು. ಬದಲಾಗಿ ಶ್ರೇಷ್ಠ ಜೀವನ ಪರಿಪಕ್ವ ಆಗಬೇಕಾದರೆ ಸಮಾಜ ನಮ್ಮ ಸೇವೆಯನ್ನು ಗುರುತಿಸಿ ಕೊಳ್ಳಬೇಕು. ಇಂತಹ ಗುರುತಿಸುವಿಕೆಗೆ ನಾನು ನಮ್ಮನ್ನೇ ತ್ಯಾಗಿಗಳಾಗಿಸಿ ಸಮಾಜ ಸೇವೆ, ಇಂತಹ ಕ್ಷೇತ್ರದ ಸೇವೆಗಳಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಳ್ಳಬೇಕು. ಆವಾಗ ಬದುಕು ಹಸನಾಗುವುದು ಎಂದು ಶ್ರೀನಿವಾಸ ಪಿ.ಸಾಫಲ್ಯ ಅಧ್ಯಕ್ಷೀಯ ಭಾಶಣದಲ್ಲಿ ಹಿತನುಡಿಗಳನ್ನಾಡಿದರು.

ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಮುಂಬಯಿ ಸಮಿತಿಯ ಪ್ರಧಾನ ಸಂಚಾಲಕರಾದ ರಾಜೇಂದ್ರ ಬಿ.ನಾಯ್ಕ್, ಧೀರಜ್ ವಿ.ರಮಣ್, ಓಂ ಪ್ರಕಾಶ್ ರಾವ್, ಭಾಸ್ಕರ್ ಅಮೀನ್, ದುರ್ಗಾ ಪ್ರಸಾದ್, ಸೇವಾಕರ್ತರಾದ ಮನೋಜ್ ಬಿ.ನಾಯಕ್, ಶೋಭಾ ಬಂಗೇರ, ಹೇಮಂತ್ ಸಪಳಿಗ, ಕಲಾ ಬಂಗೇರ, ಕು| ಸಂಧ್ಯಾ ಪುತ್ರನ್ ಸೇರಿದಂತೆ ಕ್ಷೇತ್ರದ ಗುರಿಕಾರರು, ಸಾಫಲ್ಯ ಸೇವಾ ಸಂಘದ ಸದಸ್ಯರು, ಭಕ್ತರನೇಕರು ಹಾಜರಿದ್ದರು.

ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಮಹಿಳೆಯರು ಪ್ರಾರ್ಥನೆಯನ್ನಾಡಿದರು. ಕೃಷ್ಣ ಕುಮಾರ್ ಬಂಗೇರÀ ಸ್ವಾಗತಿಸಿದರು. ರಂಗ ಐತಾಳ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಕ್ಷೇತ್ರದ ಧರ್ಮದರ್ಶಿ, ದೈವಜ್ಞರನ್ನು ರತಿಕಾ ಶ್ರೀನಿವಾಸ ಸಾಫಲ್ಯ ದಂಪತಿ ಗೌರವಿಸಿದರು. ಹೇಮಂತ್ ಸಪಳಿಗ, ಮಹೇಶ್ ಬಂಗೇರ, ಲೀಲಾಧರ್ ಬಂಗೇರ, ಕಿರಣ್ ಸಪಳಿಗ, ದೀಪಕ್ ಕುಂದರ್, ಜಗನ್ನಾಥ್ ಕರ್ಕೇರಾ, ಭಾಸ್ಕರ್ ಬಿ.ಸಫಲಿಗ, ರಾಜೇಶ್ ಪುತ್ರನ್, ಸತೀಶ್ ಕುಂದರ್ ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಉಷಾ ಸಫಲಿಗ ಸಭಾ ಕಲಾಪ ನಿರೂಪಿಸಿದರು. ಭಾಸ್ಕರ್ ಟಿ.ಸಫಲಿಗ ವಂದನಾರ್ಪಣೆಗೈದರು.

 

 
More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here