Tuesday 6th, June 2023
canara news

ಸಾಂತಾಕ್ರೂಜ್ : ಪೇಜಾವರ ಮಠದ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ

Published On : 21 Aug 2022   |  Reported By : Rons Bantwal


ವಿಜೃಂಭನೆಯಿಂದ ಆಚರಿಸಲ್ಪಟ್ಟ ಶ್ರೀಕೃಷ್ಣ ಜನ್ಮಾಷ್ಟಮಿ-ಮೊಸರು ಕುಡಿಕೆ ಉತ್ಸವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಆ.19: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಮುಂಬಯಿ ಶಾಖೆ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯಲ್ಲಿನ (ಮಧ್ವ ಭವನ) ಶ್ರೀ ಪೇಜಾವರ ಮಠದಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ ಅನುಗ್ರಹ, ಮಾರ್ಗದರ್ಶನಗಳೊಂದಿಗೆ ಮಠದಲ್ಲಿನ ಶಿಲಾಮಯ ಮಂದಿರದಲ್ಲಿ ಪ್ರತಿಷ್ಠಾಪಿತÀ ಶ್ರೀ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗ ಳೊಂದಿಗೆ 2022ನೇ ಸಾಲಿನ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು.

ಶ್ರೀ ಕೃಷ್ಣೈಕ್ಯ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಸ್ಮರಿಸಿ ಗುರುವಾರ ಜನ್ಮಾಷ್ಟಮಿಗೆ ವಿಧಿವತ್ತಾಗಿ ಚಾಲನೆಯನ್ನೀಡಲಾಯಿತು. ಬಳಿಕ ಅಮಿತಾ ಜತಿನ್ ನಿರ್ದೇಶನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಪರಿಕಲ್ಪನೆಯ ಗೋಕುಲಾನಂದ ಗೋವಿಂದ ನೃತ್ಯ ರೂಪಕವನ್ನು ಕಲಾ ಜಗತ್ತು ಮುಂಬಯಿ ತಂಡವು ಪ್ರದರ್ಶಿಸಿತು. ಡಾ| ತೋನ್ಸೆ ವಿಜಯ ಕುಮಾರ್ ಶೆಟ್ಟಿ ದೀಪಹಚ್ಚಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿದರು.

ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಮಠ ಡೊಂಬಿವಿಲಿ ಇದರ ಮುಖ್ಯಸ್ಥ ವಿದ್ವಾನ್ ರಾಘವೇಂದ್ರ ಜಮದಗ್ನಿ, ಉದ್ಯಮಿಗಳಾದ ರತ್ನಾಕರ್ ಶೆಟ್ಟಿ (ಬಾನ್ಸೂರಿ), ರೀನಾ ಸುಭಾಷ್ ಶೆಟ್ಟಿ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ, ಪೇಜಾವರ ಮಠದ ಮುಂಬಯಿ ಇದರÀ ಮುಖ್ಯಸ್ಥರುಗಳಾದ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ವಿದ್ವಾನ್ ಶ್ರೀಹರಿ ಭಟ್ ಪುತ್ತಿಗೆ, ವಿದ್ವಾನ್ ಪ್ರಕಾಶ್ ಆಚಾರ್ಯ ರಾಮಕುಂಜ ವೇದಿಕೆಯಲ್ಲಿದ್ದರು. ಶ್ರೀ ಪೇಜಾವರ ಮಠದ ಹಿರಿಯ ವಿದ್ವಾನ್ ರಾಮದಾಸ ಉಪಾಧ್ಯಾಯ ರಾತ್ರಿ ಮಹಾಪೂಜೆ, ಕೃಷ್ಣ ಅರ್ಘ್ಯ ಪ್ರಧಾನ ನೆರೆವೇರಿಸಿ ಹರಸಿದರು.

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ (ಮುಂಬಯಿ) ಇದರ ವಿಶ್ವಸ್ಥರು, ಪದಾಧಿಕಾರಿಗಳು, ಪೇಜಾವರ ಮಠದ ಮುಂಬಯಿ ಶಾಖಾಧಿಕಾರಿ ನಿರಂಜನ್ ಜೆ.ಗೋಗ್ಟೆ, ವಿಷ್ಣುತೀರ್ಥ ಸಾಲಿ, ಪವನ್ ಅಣ್ಣಿಗೇರಿ ಹಾಗೂ ಇತರ ಪುರೋಹಿತರು ಸೇರಿದಂತೆ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜನ್ಮಾಷ್ಟಮಿ ಸಂಭ್ರಮಿಸಿದರು.

ಇಂದಿಲ್ಲಿ ಶುಕ್ರವಾರ ವೈವಿಧ್ಯತೆಯಿಂದ ಕೂಡಿದ ವೇಷಭೂಷಣ, ಬ್ಯಾಂಡು ವಾದ್ಯದ ನೀನಾದದೊಂದಿಗೆ ವೈಭವೋಪೇತ ಶ್ರೀ ಕೃಷ್ಣನ ಮೆರವಣಿಗೆ ಜರುಗಿತು. ಈ ಶೋಭಾಯಾತ್ರೆಯಲ್ಲಿ ವಿದ್ವಾನ್ ಆರ್.ಎಲ್ ಭಟ್ ಶ್ರೀದೇವರ ಮೂರ್ತಿಯ ದರ್ಶನಗೈದರು. ಮೊಸರು ಕುಡಿಕೆಯೊಂದಿಗೆ ವಿಟ್ಲ ಪಿಂಡಿ ಉತ್ಸವ ಅದ್ದೂರಿಯಾಗಿ ಸಂಭ್ರಮಿಸಲ್ಪಟ್ಟಿತು. ಸಂಜೆ ಕು| ಲಾವಣ್ಯ ಮೈಸೂರು ಇವರು ಸ್ಯಾಕ್ಸೋಫೆÇೀನ್ ವಾದನ ಬಳಿಕ ಶ್ರೀಮತಿ ಪ್ರಫುಲ್ಲಾ ಎಸ್.ಉರ್ವಾಳ್ (ಐಐಟಿಸಿ) ಮತ್ತು ಬಿ.ಆರ್ ಶೆಟ್ಟಿ (ಬಿ.ಆರ್ ರೆಸ್ಟೋರೆಂಟ್ ಸಮೂಹ ಮುಂಬಯಿ) ಪರಿವಾರ ದ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ಯಾನಿಧಿ ಡಾ| ವಿದ್ಯಾಭೂಷಣ ಇವರು ಭಕ್ತಿ ಲಹರಿ ಸಂಗೀತ ಕಚೇರಿ ಸಾದರ ಪಡಿಸಿದರು. ರಾತ್ರಿ ಶ್ರೀ ಕೃಷ್ಣನ ಮಹಾಪೂಜೆಯೊಂದಿಗೆ ಪ್ರಸಾದ ವಿತರಣೆ ನಡೆಸಲಾಯಿತು. ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿ ಶ್ರೀ ಕೃಷ್ಣ ದೇವರ ಕೃಪೆಗೆ ಪಾತ್ರರಾಗಿದ್ದು ವಾರ್ಷಿಕ ಶ್ರೀಕೃಷ್ಣ ಜನ್ಮಾಷ್ಟಮಿ ಅಂತ್ಯಕಂಡಿತು. ವಿಷ್ಣುತೀರ್ಥ ಸಾಲಿ ಶ್ರೀ ದೇವರಿಗೆ ಅಲಂಕರಿಸಿದರು.

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ (ಮುಂಬಯಿ) ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ ಪ್ರತಿಷ್ಠಾನದ ವಿಶ್ವಸ್ಥರು, ಪದಾಧಿಕಾರಿಗಳು, ಐಐಟಿಸಿ ನಿರ್ದೇಶಕರಾದ ವಿಕ್ರಾಂತ್ ಉರ್ವಾಳ್, ಕಿಶನ್ ಜೆ.ಶೆಟ್ಟಿ, ಹರೀಶ್ ಶೆಟ್ಟೀ, ಐಐಟಿಸಿ ಪರಿವಾರದ ಶ್ರೀಧರ್ ರಾವ್ ಜೋಕಟ್ಟೆ, ಶೇಖರ್ ಜೆ.ಸಾಲಿಯಾನ್, ನ್ಯಾ| ಗೀತಾ ಆರ್.ಎಲ್.ಭಟ್, ಪೇಜಾವರ ಮಠದ ಶಾಖಾಧಿಕಾರಿ ನಿರಂಜನ್ ಜೆ.ಗೋಗ್ಟೆ, ಮುಕುಂದ್ ಬೈತಮಂಗಲ್‍ಕರ್, ರಾಧಾಕೃಷ್ಣ ಭಟ್, ಪವನ್ ಅಣ್ಣಿಗೇರಿ ಹಾಗೂ ಇತರ ಪುರೋಹಿತರು ಸೇರಿದಂತೆ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜನ್ಮಾಷ್ಟಮಿ ಸಂಭ್ರಮಿಸಿದರು.

 

 

 

 




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here