Sunday 2nd, October 2022
canara news

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಮಹಾಸಭೆ

Published On : 04 Sep 2022   |  Reported By : Rons Bantwal


ದೈವೀಶಕ್ತಿ ಬದುಕನ್ನೇ ಬದಲಾಯಿಸ ಬಲ್ಲದು : ನಿತ್ಯಾನಂದ ಕೋಟ್ಯಾನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.04: ಕರ್ನಾಟಕ ಕರಾವಳಿಯಲ್ಲಿ ಪ್ರಚಲಿತವಿರುವ ಜಾನಪದ ಧಾರ್ಮಿಕ ಆಚರಣೆಯಲ್ಲಿ ದೈವರಾಧನೆಯೂ ಒಂದಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಇಂತಹ ನಂಬಿಕೆಗಳನ್ನು ಕಟ್ಟುಪಾಡುವಾಗಿಸಿ ಬಂದ ಹಿರಿಯರ ನಂಬಿಕೆ ನಮ್ಮನ್ನೂ ಭಕ್ತಿಶ್ರದ್ಧೆಯಲ್ಲಿ ಬಲಪಡಿಸಿದೆ. ಆದುದರಿಂದ ನಾವು ನಂಬಿದ ದೈವದೇವರುಗಳ ಶ್ರದ್ಧೆಯಿಂದ ನಮ್ಮ ಬದುಕು ಹಸನಾಗಿದೆ. ನಮ್ಮ ಪೂರ್ವಜರು ರೂಢಿಸಿಕೊಂಡು ಬಂದಿರುವ ದೈವರಾಧನೆ ಬಗ್ಗೆ ನಮ್ಮ ಯುವಜನತೆಯೂ ವಿಶ್ವಾಸವಿರಿಸಿ ದೈವರಾಧನಾ ಶಕ್ತಿ ಮನವರಿಸಿ ಶ್ರದ್ಧಾಭಕ್ತಿಯಿಂದ ಮುನ್ನಡೆಸುವ ಅಗತ್ಯವಿದೆ. ಏಕೆಂದರೆ ದೈವೀಕೃತ ನಂಬಿಕೆ ಬದುಕನ್ನೇ ಬದಲಾಯಿಸ ಬಲ್ಲದು ಎಂದು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಮಾಲೋಚನಾ ಸಭಾಗೃಹದಲ್ಲಿ ಟ್ರಸ್ಟ್‍ನ ನಾಲ್ಕನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ನಿತ್ಯಾನಂದ ಕೋಟ್ಯಾನ್ ಮಾತನಾಡಿದರು.

ಗುರುಹಿರಿಯರ ಮಾರ್ಗದರ್ಶನ ಮತ್ತು ಸದಸ್ಯ ಭಾಂದವರ ಉಪಸ್ಥಿತಿಯಲ್ಲಿ ತೋನ್ಸೆ ಗರೋಡಿಯ ಅಭಿವೃದ್ಧಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಸೇವೆಯೊಂದಿಗೆ ಜನಹಿತ ಕೆಲಸಗಳಲ್ಲಿ ತೊಂಡಿಗಿಸಿಕೊಂಡ ಸೇವಾ ಟ್ರಸ್ಟ್‍ನ ಸೇವೆಗೆ ಸಹೃದಯಿ ಹಿತೈಷಿಗಳ, ಸೇವಾಕರ್ತರ ಸಹಯೋಗವೂ ಮಹತ್ವದಾಯಕವಾದುದು ಎಂದರು.

ತುಳುನಾಡ ಸಾಂಸ್ಕೃತಿಕ ಸಾಮಾಜಿಕ ಬದುಕಿನಲ್ಲಿ ದೈವ ಮತ್ತು ದೇವರುಗಳನ್ನು ಭಿನ್ನ ನೆಲೆಯಲ್ಲಿ ನಂಬಿ ಬದುಕುತ್ತಿರುವ ನಮಗೆ ಗರೋಡಿಗಳೂ ಭಕ್ತಿಕೇಂದ್ರಗಳಾಗಿವೆ ದೈವಗಳನ್ನೂ ನಂಬಿದರೆ ಏನಾದರೂ ಒಳಿತಾಗಬಹುದೆಂದು ನಾವು ಈ ಶಕ್ತಿಗಳನ್ನೇ ಆರಾಧಿಸಿ ಬದುಕುತ್ತಿದ್ದು, ನಾವು ಆರಾಧಿಸಿಕೊಂಡು ಬಂದ ತೋನ್ಸೆ ಗರೋಡಿಯೂ ನಮ್ಮೆಲ್ಲರ ಬಾಳಿನ ಶಕ್ತಿಕೇಂದ್ರವಾಗಿವೆ. ಈ ಶಕ್ತಿಯೇ ನಮ್ಮನ್ನು ಪರಿವಾರದ ಸಾಂಘಿಕತೆಯಿಂದ ಒಗ್ಗೂಡಿಸಿದೆ. ಇದು ಬರೇ ಟ್ರಸ್ಟ್ ಅಲ್ಲ ಬದಲಾಗಿ ದೈವಾರಧನೆಯ ವಿಶ್ವಾಸ ತುಂಬುವ ಸಂಸ್ಥೆಯಾಗಿದೆ. ಆದ್ದರಿಂದ ನಮ್ಮಲ್ಲಿನ ಸದಸ್ಯರ ಸಂಪತ್ತೇ ಟ್ರಸ್ಟ್‍ನ ಶಕ್ತಿಯಾಗಿದೆ ಎಂದೂ ನಿತ್ಯಾನಂದ ಕೋಟ್ಯಾನ್ ಮನವರಿಸಿದರು.

ವೈವಾಹಿಕ ಬದುಕಿನ ಸ್ವರ್ಣಸಂಭ್ರಮ ಆಚರಿಸಿದ ತೋನ್ಸೆ ಎಸ್‍ಬಿಬಿಪಿಜಿಎಸ್ ಟ್ರಸ್ಟ್ ಮುಂಬಯಿ ಉಪಾಧ್ಯಕ್ಷ ಸಿ.ಕೆ ಪೂಜಾರಿ ಮತ್ತು ಭಾರತಿ ಸಿ.ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸೋಮ ಟಿ.ಸುವರ್ಣ ಮತ್ತು ಹೀರಾ ಎಸ್.ಸುವರ್ಣ ದಂಪತಿಗೆ ಸನ್ಮಾನಿಸಿ ಗೌರವಿಸಲಾಯಿತು. ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಭಾರತ್ ಬ್ಯಾಂಕ್‍ನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಡಿ.ಬಿ ಅಮೀನ್ ಇವರನ್ನೂ ಟ್ರಸ್ಟ್ ಪರವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾಥಿರ್üಗಳಾದ ಕು| ಸೌಂದರ್ಯ ಆರ್.ಪೂಜಾರಿ, ಮಾ| ಸಿದ್ಧಾರ್ಥ್ ಕೆ.ಪೂಜಾರಿ, ಮಾ| ಆರ್ಯಾನ್ ಕೋಟ್ಯಾನ್, ಕು| ಅನುಸೂಯ ಜಯ ಪೂಜಾರಿ, ಮಾ| ಆರ್ಯಾನ್ ಚಂದ್ರಶೇಖರ್ ಪೂಜಾರಿ ಹಾಗೂ ಅಂತರಾಷ್ಟ್ರೀಯ ವಿಜೇತ ಕ್ರೀಡಾಪಟು ಮಾ| ಆದಿ ರವಿ ಪೂಜಾರಿ ಇವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಲಾಯಿತು. ಮಾ| ಪ್ರತೀಕ್ ಪೂಜಾರಿ ಇವರಿಗೆ ಶೈಕ್ಷಣಿಕ ಧನ ಸಹಾಯ ಮತ್ತು ಮಾ| ನಾಗರಾಜ್ ಪೂಜಾರಿ ಇವರಿಗೆ ವೈದ್ಯಕೀಯ ಧನ ಸಹಾಯ ವಿತರಿಸಲಾಯಿತು.

ಸಭೆಯಲ್ಲಿ ಲೆಕ್ಕ ಪರಿಶೋಧಕ ಎಸ್.ಎನ್ ಪೂಜಾರಿ ಎಂಡ್ ಕಂಪೆನಿ ಇದರ ಸಚಿನ್ ಎನ್.ಪೂಜಾರಿ ಸಲಹಾಗಾರರಾದ ಶಂಕರ ಸುವರ್ಣ, ವಿಠ್ಠಲ್ ಸಿ.ಪೂಜಾರಿ, ಸೋಮ ಸುವರ್ಣ, ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರಾದ ವಿಠ್ಠಲ್ ಎಸ್.ಪೂಜಾರಿ, ಉದಯ ಎನ್.ಪೂಜಾರಿ, ವಿದ್ಯಾ ಉಪಸಮಿತಿ ಮುಖ್ಯಸ್ಥೆ ಭಾರತಿ ಸುವರ್ಣ, ಮಹಿಳಾ ವಿಭಾಗದ ಮುಖ್ಯಸ್ಥರಾದ ಲಕ್ಷ್ಮೀ ಡಿ.ಅಂಚನ್, ಕಸ್ತೂರಿ ಆರ್. ಕಲ್ಯಾಣ್ಫುರ್, ಭಾರತಿ ಸುವರ್ಣ, ಮೃದುಲಾ ಅರುಣ್ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಶೋಕ್ ಎಂ.ಕೋಟ್ಯಾನ್, ಸದಾನಂದ ಬಿ.ಪೂಜಾರಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಸಭಿಕ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಟ್ರಸ್ಟ್‍ನ ಸೇವೆಯನ್ನು ಪ್ರಶಂಸಿಸಿ ಇನ್ನೂ ಯಶಸ್ವಿಯಾಗಿ ಶ್ರಮಿಸಲು ಸಲಹಿದರು.

ಕುಲದೇವರು ಕೋಟಿಚೆನ್ನಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ, ಪಂಚ ಧೂಮಾವತಿ ಹಾಗೂ ದೈವದೇವರುಗ ಳಿಗೆ ಪೂಜೆ ಸಲ್ಲಿಸಿ ಮಹಾಸಭೆಗೆ ಚಾಲನೆಯನ್ನೀಡಲಾಯಿತು. ಸಲಹಾಗಾರರಾಗಿದ್ದು ಇತ್ತೀಚೆಗೆ ಸ್ವರ್ಗೀಯರಾದ ಗೋಪಾಲ್ ಪಾಲನ್ ಕಲ್ಯಾಣ್ಫುರ್ ಹಾಗೂ ಮತ್ತಿತರರಿಗೆ ಸಭೆಯಲ್ಲಿ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಲಕ್ಷ್ಮೀ ಡಿ.ಅಂಚನ್ ಪ್ರಾರ್ಥನೆಯನ್ನಾಡಿದರು. ಕರುಣಾಕರ್ ಬಿ.ಪೂಜಾರಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ವಿಜಯ್ ಸನಿಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಿಶ್ವನಾಥ ತೋನ್ಸೆ ವಿದ್ಯಾಥಿರ್ü ವೇತನದ ಬಗ್ಗೆ ಪ್ರಸ್ತ್ತಾಪಿಸಿ ಪುರಸ್ಕೃತರನ್ನು ಪರಿಚಯಿಸಿದರು. ಸಂಜೀವ ಪೂಜಾರಿ ತೋನ್ಸೆ ಸುಖಾಗಮನ ಬಯಸಿ ಆಭಾರ ಮನ್ನಿಸಿದÀರು.

 
More News

ಮಂಗಳೂರು ವಿಶ್ವವಿದ್ಯಾನಿಲಯದ 43ನೇ ಸಂಸ್ಥಾಪನಾ ದಿನಾಚರಣೆ
ಮಂಗಳೂರು ವಿಶ್ವವಿದ್ಯಾನಿಲಯದ 43ನೇ ಸಂಸ್ಥಾಪನಾ ದಿನಾಚರಣೆ
 ವಿಜಯ್ ಎಸ್.ಶೆಟ್ಟಿ ಪಣಕಜೆ ಇವರಿಗೆ ಬೆಳ್ತಂಗಡಿಯಲ್ಲಿ ಹುಟ್ಟೂರ ಸನ್ಮಾನ
ವಿಜಯ್ ಎಸ್.ಶೆಟ್ಟಿ ಪಣಕಜೆ ಇವರಿಗೆ ಬೆಳ್ತಂಗಡಿಯಲ್ಲಿ ಹುಟ್ಟೂರ ಸನ್ಮಾನ
ದಾಸು ಕೆ.ಸುವರ್ಣ ನಿಡಂಬಳಿ ನಿಧನ
ದಾಸು ಕೆ.ಸುವರ್ಣ ನಿಡಂಬಳಿ ನಿಧನ

Comment Here