Thursday 28th, March 2024
canara news

ಮಂಗಳೂರು ವಿಶ್ವವಿದ್ಯಾನಿಲಯದ 43ನೇ ಸಂಸ್ಥಾಪನಾ ದಿನಾಚರಣೆ

Published On : 02 Oct 2022   |  Reported By : Rons Bantwal


ಡಾ| ಆರ್.ಕೆ ಶೆಟ್ಟಿ-ಡಾ| ಶಿವರಾಮ ಭಂಡಾರಿ-ರೋನ್ಸ್ ಬಂಟ್ವಾಳ್‍ಗೆ ವಿವಿ ಗೌರವ


ಮಂಗಳೂರು, ಸೆ.29: ಭಾರತ ರಾಷ್ಟ್ರ ಸೇರಿದಂತೆ ಜಾಗತಿಕ ಭೂಪಟದಲ್ಲಿ ಒಂದು ವಿಭಿನ್ನ ಸ್ಥಾನವನ್ನು ಪಡೆದಿರುವ ಮಂಗಳೂರು ವಿಶ್ವವಿದ್ಯಾನಿಲಯವು 43ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಿದ್ದು ಈ ಶುಭಾವಸರದಲ್ಲಿ ಸಮಾಜಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸೇವೆ ಸಾಧನೆ ಮಾಡಿದ ಹತ್ತಾರು ಗಣ್ಯರಿಗೆ ವಿವಿ ಗೌರವಾರ್ಪಣೆಗೈದು ಸನ್ಮಾನಿಸಿ ಅಭಿನಂದಿಸಿತು.

ಇಂದಿಲ್ಲಿ ಗುರುವಾರ ಕೋಣಾಜೆ ಇಲ್ಲಿನ ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪೆÇ್ರ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಇವರ ಘನಾಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಜರುಗಿದ ಸಂಸ್ಥಾಪನಾ ದಿನಾಚರಣೆಯಲ್ಲಿ ಸಮಾರಂಭದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ಘಟಕದ ಅಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಆರ್.ಕೆ ಶೆಟ್ಟಿ, ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪ್ರಸಿದ್ಧಿಯ ಕೇಶ ವಿನ್ಯಾಸಕಾರ, ಲಂಡನ್ ಇಲ್ಲಿನ ಬ್ರಿಟೀಷ್ ಪಾರ್ಲಿಮೆಂಟ್ ಹೌಸ್‍ನಲ್ಲಿ `ಭಾರತ ಗೌರವ ಜೀವಮಾನ ಪ್ರಶಸ್ತಿ' ಪುರಸ್ಕೃತ ಶಿವಾಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ, ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಬೆಂಗಳೂರು ಇದರ `ಕರ್ನಾಟಕ ಮಾಧ್ಯಮ ಅಕಾಡೆಮಿ 2014ನೇ ವಾರ್ಷಿಕ ಪ್ರಶಸ್ತಿ', `ಶ್ರೇಷ್ಠ ಭಾರತೀಯ ಪತ್ರಕರ್ತ' ಪುರಸ್ಕಾರ, ನಾಡಿನ ಪ್ರಸಿದ್ಧ ಪತ್ರಕರ್ತ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಇವರನ್ನು ಸೇರಿದಂತೆ ಸುಮಾರು ಇಪ್ಪತ್ತೈದು ಸಾಧಕರಿಗೆ ಮುಖ್ಯ ಅತಿಥಿüಯಾಗಿದ್ದ ಶಾಸಕ (ಎಂಎಲ್‍ಸಿ) ಎಸ್.ಎಲ್ ಭೋಜೆ ಗೌಡ ಸಂಪ್ರದಾಯಿಕವಾ ಗಿ ಸನ್ಮಾನಿಸಿ ಅಭಿನಂದಿಸಿದರು.

ಸಮಾರಂಭದಲ್ಲಿ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ, ಅಂತರಾಷ್ಟ್ರೀಯ ತರಬೇತುದಾರ ಡಾ| ಭರತ್ ಚಂದ್ರ, ಕುಲ ಸಚಿವರುಗಳಾದ ಸಿ.ಕೆ.ಕಿಶೋರ್ ಕುಮಾರ್, ಪೆÇ್ರ| ಪಿ.ಎಲ್ ಧರ್ಮ, ಪೆÇ್ರ| ಕೆ.ಎಸ್ ಜಯಪ್ಪ, ಸಂಯೋಜಕ ಪೆÇ್ರ| ಮಂಜುನಾಥ ಪಟ್ಟಾಬಿ, ಪೆÇ್ರ| ಅನುರಾಧ ಎಸ್.ಯಡಪಡಿತ್ತಾಯ, ನ್ಯಾಯವಾದಿ ಅರುಣಾ ಕಿಶೋರ್ ಉಪಸ್ಥಿತರಿದ್ದು ಸಾಧಕರನ್ನು ಗೌರವಿಸಿ ಶುಭಕೋರಿದÀರು.

ಮೈಸೂರು ವಿಶ್ವವಿದ್ಯಾನಿಲಯದ ಸ್ವಾತಕೋತ್ತರ ಕೇಂದ್ರದಿಂದ 1968ರಲ್ಲಿ ಕೊಣಾಜೆ ಇಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಆರಂಭವಾಗಿತ್ತು. ಜ್ಞಾನವೇ ಬೆಳಕು ಎಂಬ ಧ್ಯೇಯವಾಕ್ಯದೊಂದಿಗೆ 1980ರ ಸೆ.10ರಂದು ಸ್ವತಂತ್ರ ವಿಶ್ವ ವಿದ್ಯಾನಿಲಯವಾಗಿ ಸಂಸ್ಥಾಪನೆಗೊಂಡು ಆರಂಭದ ದಿನಗಳಿಂದಲೂ ಅವಿಭಜಿತ ದಕ್ಷಿಣ ಕನ್ನಡ (ಇಂದಿನ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು) ಮತ್ತು ಕೊಡಗು ಜಿಲ್ಲೆಗಳಲ್ಲಿ ಜನರ ಉನ್ನತ ಶಿಕ್ಷಣದ ಅಶೋತ್ತರಗಳನ್ನು ವಿಶ್ವ ವಿದ್ಯಾನಿಲಯವು ಯಶಸ್ವಿಯಾಗಿ ಈಡೇರಿಸುತ್ತಾ ಬಂದಿದೆ. ಶೈಕ್ಷಣಿಕ, ಸಂಶೋಧನೆ, ಸಾಂಸ್ಕೃತಿಕ, ಕ್ರೀಡೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉನ್ನತ ಸಾಧನೆಗಳನ್ನು ಮಾಡಿರುವ ಮಂಗಳೂರು ವಿಶ್ವವಿದ್ಯಾನಿಲಯವು ಭಾರತ ಮಾತ್ರವಲ್ಲ, ಜಾಗತಿಕ ಭೂಪಟದಲ್ಲಿ ಒಂದು ವಿಭಿನ್ನ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪೆÇ್ರ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದರು.

ವಿಶ್ವವಿದ್ಯಾನಿಯಲದ ಹುಟ್ಟು ಅಭಿವೃದ್ಧಿ ಸಾಧನೆಗಳಿಗೆ ಶ್ರಮಿಸಿದವರೆಲ್ಲರನ್ನು ಸ್ಪಂದಿಸುವ ಸದುದ್ದೇಶದಿಂದ ನಮ್ಮ ವಿಶ್ವ ವಿದ್ಯಾನಿಯಲವು ಪ್ರತಿವರ್ಷ ಸಂಸ್ಥಾಪನಾ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದೆ. ಈ ಕಾರ್ಯಕ್ರಮದ ಮುಖ್ಯ ಭಾಗವಾಗಿ ಶಿಕ್ಷಣ, ಕಲೆ, ಕ್ರೀಡೆ, ಪರಿಸರ, ಸಂಶೋಧನೆ, ಸಮಾಜಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸೇವೆ ಸಾಧನೆ ಮಾಡಿದವರನ್ನು ಗಣ್ಯತಿಗಣ್ಯ ವ್ಯಕ್ತಿಗಳ ಉಪಸ್ಥಿತಯಲ್ಲಿ ಸನ್ಮಾನಿಸುವುದು ನಮ್ಮ ಸಂಪ್ರದಾಯ. ಅಂತೆಯೇ ಈ ಬಾರಿ ವಾಣಿಜ್ಯ ಮತ್ತು ಸಮಾಜ ಸೇವೆಗೆ ಅನನ್ಯ ಕೊಡುಗೆ ನೀಡಿರುವ ಸಾಧಕರನ್ನು ಒಮ್ಮತದಿಂದ ಅಯ್ಕೆಗೊಳಿಸಿ ಸಂಸ್ಥಾಪನಾ ದಿನಾಚರಣೆಯ ಸುಸಂದರ್ಭದಲ್ಲಿ ಸನ್ಮಾನಿಸಿದ್ದೇವೆ ಎಂದೂ ಉಪ ಕುಲಪತಿ ಪೆÇ್ರ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದರು.

ಕಾರ್ಯಕ್ರಮದ ಆದಿಯಲ್ಲಿ ನಾಡಗೀತೆ, ರಾಷ್ಟ್ರಗೀತೆ, ವಿಶ್ವ ವಿದ್ಯಾಲಯ ನಮನ ಗೀತೆಯನ್ನಾಡಿದರು. ಅಂತರಾಷ್ಟ್ರೀಯ ತರಬೇತುದಾರ ಡಾ| ಭರತ್ ಚಂದ್ರ, ಸಂಯೋಜಕ ಪೆÇ್ರ| ಮಂಜುನಾಥ ಪಟ್ಟಾಬಿ ಸ್ವಾಗತಿಸಿದರು. ಡಾ| ಧನಂಜಯ ಕುಂಬ್ಳೆ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ಪೆÇ್ರ| ಪ್ರೀತಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಸಮಾಪನ ಕಂಡಿತು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here