Wednesday 4th, October 2023
canara news

ದಿ| ಸದಾನಂದ ಕೆ.ಸಫಲಿಗ ಅವರಿಗೆ ಕಪಸಮ ವತಿಯಿಂದ ಶ್ರದ್ಧಾಂಜಲಿ ಸಭೆ

Published On : 04 Nov 2022   |  Reported By : Rons Bantwal


ಸದ್ಗುಣವಂತ ಸದಾನಂದರು ಸದಾ ಅಮರರು : ಕೃಷ್ಣಕುಮಾರ್ ಬಂಗೇರ

ಮುಂಬಯಿ, ಅ.30: ತೆರೆಮರೆಯ ಸಮಾಜ ಸೇವೆಗೆ ಸದಾನಂದ ಸಫಲಿಗರು ಆದರ್ಶಪ್ರಾಯರು. ಎಂದಿಗೂ ಪ್ರಚಾರ ಬಯಸದ ಇವರ ಸಮಾಜಸೇವೆ ಆಧುನಿಕ ಜಗತ್ತಿಗೆ ಅನುಕರಣೀಯ. ದೇವರು ಒಳ್ಳೆಯ ಮನುಷ್ಯರನ್ನು ಬೇಗನೇ ತನ್ನಲ್ಲಿಗೆ ಕರೆದೊಯ್ಯುತ್ತಾನೆ ಅನ್ನುವುದಕ್ಕೆ ಇವರ ಅಕಾಲಿಕ ಸಾವು ಸಾಕ್ಷಿಯಾಗಿದೆÉ. ಪ್ರಚಾರಪ್ರಿಯತೆಕ್ಕಿಂತ ಮೇಲ್ಪಂಕ್ತಿಯುಳ್ಳವರಾಗಿ ಬಾಳಿದ ಸದ್ಗುಣವಂತ ಸದಾನಂದರು ನಮ್ಮಲ್ಲಿ ಸದಾ ಅಮರರಾಗಿರುವರು ಎಂದು ಸಾಫಲ್ಯ ಸೇವಾ ಸಂಘ ಮುಂಬಯಿ ಉಪಾಧ್ಯಕ್ಷ ಕೃಷ್ಣಕುಮಾರ್ ಬಂಗೇರ ತಿಳಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ವಿಶೇಷ ಆಮಂತ್ರಿತ ಸದಸ್ಯ, ಸಾಫಲ್ಯ ಸೇವಾ ಸಂಘದ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದು ಇತ್ತೀಚೆಗೆ ಸ್ವರ್ಗಸ್ಥರಾದ ಸದಾನಂದ ಕೊರಗ ಸಫಲಿಗ (ಉಡುಪಿ ಶಿರ್ವಾ ಮಂಚಕಲ್) ಅವರಿಗೆ ಇಂದಿಲ್ಲಿ ಭಾನುವಾರ ಪೂರ್ವಾಹ್ನ ಅಂಧೇರಿ ಪೂರ್ವದ ಸಾಲೀಟರಿ ಕಾಪೆರ್Çೀರೆಟ್ ಪಾರ್ಕ್ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಆಯೋಜಿಸಿದ್ದ ನುಡಿ ನಮನ, ಶೋಕಸಭೆಯನ್ನು ಉದ್ದೇಶಿಸಿ ಕೃಷ್ಣಕುಮಾರ್ ಮಾತನಾಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ನೆರವೇರಿಸಲಾದ ಶೋಕಸಭಾ ಕಾರ್ಯಕ್ರಮದಲ್ಲಿ ಕೃಷ್ಣಕುಮಾರ್ ಬಂಗೇರ, ಕನ್ನಡ ಸಂಘ ಸಾಂತಕ್ರೂಜ್ ಇದರ ಅಧ್ಯಕ್ಷ್ಷೆ ಸುಜತಾ ಆರ್.ಶೆಟ್ಟಿ, ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಇದರ ಪಾರುಪತ್ಯಗಾರ ಮತ್ತು ಪತ್ರಕರ್ತರ ಸಂಘದ ವಿಶೇಷ ಆಮಂತ್ರಿತ ಸದಸ್ಯರಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ ವೇದಿಕೆಯಲ್ಲಿದ್ದು ನುಡಿ ನಮನ ಸಲ್ಲಿಸಿ ಸದಾನಂದ ಸಫಲಿಗ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ಬಾಷ್ಪಾಜಲಿ ಕೋರಿದರು.

ಸುಜತಾ ಶೆಟ್ಟಿ ಅವರು ಬಾಷ್ಪಾಂಜಲಿ ಅರ್ಪಿಸಿ ಸದಾನಂದರು ಮತ್ತು ನಮ್ಮದು ಭಾತೃತ್ವದ ಸಂಬಂಧ. ಓರ್ವ ಧಾರ್ಮಿಷ್ಠರಾಗಿದ್ದ ಅವರು ನಮ್ಮ ಸಂಘದಲ್ಲೂ ಒಡನಾಡಿಗಳಾಗಿ ಸೇವೆಗೆ ಪೆÇ್ರೀತ್ಸಹಿಸುತ್ತಿದ್ದರು. ಅವರ ಸಜ್ಜನಶೀಲ, ಸದ್ಗುಣಗಳಲ್ಲೇ ದೇವರನ್ನು ಕಾಣುವಾಗಿದ್ದವು. ಇಹಲೋಕ ತ್ಯಜಿಸಿದ ಇಂತಹ ಮಹಾನ್ ಚೇತನದ ಆಕಾಲಿಕ ಅಗಲಿಕೆ ಅಭಿಘಾತವೇ ಸರಿ ಎಂದರು.

ಸಾವು ಯಾವಾಗ, ಎಲ್ಲಿ, ಹೇಗೆ, ಯಾವ ರೀತಿಯಲ್ಲಿ ಬರುತ್ತದೆ ಅನ್ನುವಂತಹದ್ದು ನಮಗೆ ಮುಂಚಿತವಾಗಿ ತಿಳಿದುಕೊಳ್ಳಲು ಆಸಾಧ್ಯ ಅನ್ನುವುದಕ್ಕೆ ಸದಾನಂದ ಅವರ ಮರಣವೇ ದೃಷ್ಟಾಂತ. ಕಷ್ಟಕರ ಜೀವನದೊಂದಿಗೆ ಶ್ರಮಜೀವಿಯಾಗಿ ಬೆಳೆದು ನೂರಾರು ಅನಕ್ಷರಸ್ಥರಿಗೆ ವಿದ್ಯಾದಾನಗೈದ ತೆರೆಮರೆಯ ಕೊಡುಗೈದಾನಿ. ಯಾರಿಗೂ ಗೊತ್ತಾಗದ ರೀತಿಯಲ್ಲಿ ವಿದ್ಯಾರ್ಜನೆಗೆ ಸಹಾಯಸ್ತ ಚಾಚಿದ ಪ್ರಾಮಾಣಿಕ, ವಿಶಿಷ್ಟ್ಯ ಸದ್ಗುಣವುಳ್ಳ ವ್ಯಕ್ತಿ ಆಗಿದ್ದರು. ನೆರವು ಅರಸಿಕೊಂಡು ಬಂದವರಿಗೆ ಬರಿಕೈಯಲ್ಲಿ ಕಳುಹಿಸಿ ಕೊಟ್ಟವರಲ್ಲ. ಇಂತಹ ಯಥೇಚ್ಛ ಸಹೃದಯಿಶೀಲ ವ್ಯಕ್ತಿಯ ಅಗಲಿಗೆ ಸಮಾಜಕ್ಕೆ ಭರಿಸಲಾಗದ ನಷ್ಟ ಎಂದು ಸುರೇಂದ್ರ ಸಾಲ್ಯಾನ್ ತಿಳಿಸಿದರು.

ರೋನ್ಸ್ ಬಂಟ್ವಾಳ್ ಮಾತನಾಡಿ ಸದಾನಂದರ ಸರಳತೆಯ ಬದುಕು ನಮ್ಮೆಲ್ಲರಿಗೆ ಸ್ಫೂರ್ತಿಯಾಗಿತ್ತು. ಅವರ ಸಮಾಜಸೇವಾ ಕಾಳಜಿ ಮತ್ತು ನಿಸ್ವಾರ್ಥ ಸ್ವಭಾವ ಎಲ್ಲರೂ ಮೆಚ್ಚುವಂತಹದ್ದು. ಅವರ ಅಗಲಿಕೆ ಅದರಲ್ಲೂ ಹಠತ್ ನಷ್ಟಕ್ಕೆ ಪತ್ರಕರ್ತರ ಸಂಘವು ವಿಷಾಧಿಸುತ್ತದೆ. ಶ್ರೀದೇವರ ಪಾದಕಮಲಗಳಲ್ಲಿ ಅವರ ಆತ್ಮವು ಮೋಕ್ಷವನ್ನು ಪಡೆಯಲಿ ಅನ್ನುತ್ತಾ ಅವರು ಸಂಸ್ಥೆಗೆ ನೀಡಿದ ಗೌರವ, ಪ್ರೀತಿಗೆ ಸದಾ ಸ್ಮರಿಸುವೆವು ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸುವೆವೆ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಗೌರವ ಕೋಶಾಧಿಕಾರಿ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಂಗ ಎಸ್.ಪೂಜಾರಿ, ಅನಿತಾ ಪಿ.ಪೂಜಾರಿ ತಾಕೋಡೆ, ಕರುಣಾಕರ್ ವಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಪರವಾಗಿ ಶ್ರದ್ಧಾಂಜಲಿ ಅರ್ಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಾ.ದಯಾ (ದಯಾನಂದ್) ಕಾರ್ಯಕ್ರಮ ನಿರೂಸಿದರು.

 

 

 

 
More News

ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ
ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ
ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ
ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ
ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ

Comment Here