Thursday 25th, April 2024
canara news

ಕಾಪು ಕ್ಷೇತ್ರದಿಂದ ಸ್ಪರ್ಧೆಗೆ ಹಲವು ಆಕಾಂಕ್ಷಿಗಳು-ಮುಂಚೂಣಿಯಲ್ಲಿ ಸುರೇಶ್ ಶೆಟ್ಟಿ ಗುರ್ಮೆ

Published On : 03 Dec 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ನ.03: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕ ಕರಾವಳಿಯ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯು ಅಭ್ಯಥಿರ್üಗಳನ್ನು ಬದಲಿಸುವ ಸುಳಿವುವಿದ್ದು, ಆ ಪೈಕಿ ಕಾಪು ಕ್ಷೇತ್ರ ಕೂಡಾ ಒಂದು ಎಂದು ತಿಳಿದು ಬಂದಿದೆ. ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಹಲವಾರು ಪ್ರಮುಖ ಮುಖಂಡರು ಪ್ರಯತ್ನಿಸುತ್ತಿದ್ದು, ಆ ಪೈಕಿ ಹಿರಿಯ ನಾಯಕ ಸುರೇಶ್ ಶೆಟ್ಟಿ ಗುರ್ಮೆ ಹೆಸರು ಗಟ್ಟಿಯಾಗಿ ಕೇಳಿ ಬರುತ್ತಿದೆ. ಇವರ ಹೆಸರು ಕಳೆದ ಬಾರಿಯೇ ಕೇಳಿ ಬಂದಿದ್ದು, ಕೊನೆ ಕ್ಷಣಕ್ಕೆ ಬದಲಾದ ಬೆಳವಣಿಗೆಯಲ್ಲಿ ಹಿಂದಿನ ಶಾಸಕ ಲಾಲಾಜಿ ಆರ್.ಮೆಂಡನ್ ಅವರಿಗೇ ಟಿಕೆಟ್ ನೀಡಲಾಗಿತ್ತು ಎನ್ನಲಾಗಿದೆ.

ಸುರೇಶ್ ಶೆಟ್ಟಿ ಬಿಜೆಪಿಯಲ್ಲಿ ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದು, ಜಿಲ್ಲಾ ಉಪಾಧ್ಯಕ್ಷರಾಗಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದುಡಿದವರು. ಕಳೆದ ಬಾರಿ ಟಿಕೆಟ್ ಸಿಗದಿದ್ದರೂ ಬಿಜೆಪಿಯ ಅಭ್ಯಥಿರ್üಯ ಗೆಲುವಿಗೆ ವಿಶೇಷವಾಗಿ ಶ್ರಮಿಸಿದ್ದರು. ಆ ಬಳಿಕವೂ ಪಕ್ಷ ಸಂಘಟನೆ ಮಾಡುತ್ತಾ ಪಕ್ಷನಿಷ್ಠೆ ತೋರಿದವರು.

ಬೆಂಗಳೂರುನಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕರ ಜತೆಗೂ ಉತ್ತಮ ಸಂಬಂಧ, ಸಂಪರ್ಕ ಬೆಳೆಸಿ ಕೊಂಡಿರುವ ಸುರೇಶ್ ಗುರ್ಮೆ ಯಾವುದೇ ಕೆಲಸವನ್ನೂ ಛಲ ತೊಟ್ಟು ಮಾಡುವವರು, ಮಾಡಿಸುವವರು. ಉತ್ತಮ ವಾಗ್ಮಿಯೂ ಆಗಿರುವ ಅವರು ಜನರನ್ನು ತನ್ನ ಮಾತಿನಲ್ಲೇ ಸೆಳೆಯುವ ಶಕ್ತಿ ಹೊಂದಿದವರು.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಗುರ್ಮೆ ಅವರು ನೂರಾರು ವಿದ್ಯಾಥಿರ್üಗಳಿಗೆ ವಿದ್ಯಾಭ್ಯಾಸಕ್ಕೆ ನೆರವಾದವರು. ಮದುವೆ, ವೈದ್ಯಕೀಯ, ಶಿಕ್ಷಣ ಹೀಗೆ ಮನೆಬಾಗಿಲಿಗೆ ಸಹಾಯ ಕೇಳಿಕೊಂಡು ಬಂದವರನ್ನು ಯಾವತ್ತೂ ಅವರು ಬರಿಗೈಯಲ್ಲಿ ಹಿಂದೆ ಕಳುಹಿಸಿದವರಲ್ಲ. ಕಾರ್ಯಕರ್ತರ ಜತೆ ಹಾಗೂ ನಾಯಕರ ಜತೆಯೂ ಉತ್ತಮ ಸಂವಹನ ಮಾಡುವವರು. ಕಾಪು ಕ್ಷೇತ್ರ ಮತ್ತೆ ಬಿಜೆಪಿ ಕೈಯಲ್ಲಿ ಉಳಿಯ ಬೇಕಾದರೆ ಗುರ್ಮೆ ಅವರಿಗೆ ಅವಕಾಶ ನೀಡಬೇಕೆನ್ನುವುದು ಸ್ಥಳೀಯ ಕಾರ್ಯಕರ್ತರ ಜನಾಭಿಪ್ರಾಯವಾಗಿದೆ. ಒಂದೊಮ್ಮೆ ಇವರಿಗೆ ಟಿಕೆಟ್ ಸಿಕ್ಕಿದರೆ ಬಿಜೆಪಿ ಈ ಬಾರಿ ಸುಲಭವಾಗಿ ಕಾಪು ಕ್ಷೇತ್ರದಲ್ಲಿ ಗೆಲ್ಲುವುದು ಖಚಿತ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here