Wednesday 4th, October 2023
canara news

ಸಯಾನ್‍ನ ಶ್ರೀಕೃಷ್ಣ ಮಂದಿರದಲ್ಲಿ ಮಂತ್ರಾಲಯಶ್ರೀಗಳಿಂದ ಅನ್ನದಾನ ಸೇವೆಗೆ ಚಾಲನೆ

Published On : 21 Jan 2023   |  Reported By : Rons Bantwal


ಅನ್ನಕ್ಕೆ ಪ್ರಸಾದ ಅನ್ನುವ ಪಾವಿತ್ರ್ಯತೆವಿದೆ : ಮಂತ್ರಾಲಯ ಸುಬುದೇಂದ್ರಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂ¨ಯಿ, ಜ.20: ತುಳುನಾಡ ಭಕ್ತರು ತುಂಬಾ ಸಹೃದಯಿಗಳಾಗಿದ್ದಾರೆ. ಮುಂಬಯಿ ಜನಸಂಖ್ಯೆಯಲ್ಲಿ ಕನ್ನಡಿಗರು ಪ್ರಧಾನರಾಗಿ ಸೇವಾ ನಿರತರಾಗಿದ್ದು, ಕನ್ನಡದ ಕಂಪು, ತುಳುನಾಡಿನ ಹಿರಿಮೆಯ ಜಗದ್ವ್ಯಾಪಿ ಪಸರಿದ ಕರುನಾಡವರು. ಇಲ್ಲಿನ ಸಾಧನೆಗೆ ತುಳು ಕನ್ನಡಿಗರೇ ಮೊದಲಿಗರು. ಶ್ರೀ ಕೃಷ್ಣನ ಅವತಾರ ಕಲಿಯುಗದ ಜನತೆಗೆ ಸಾಮೀಪ್ಯವಾದುದು. ಬೃಹನ್ಮುಂಬಯಿಯಲ್ಲಿ ಇಂತಹ ಪರಮಾತ್ಮ ಶ್ರೀಕೃಷ್ಣನ ದೇವಾಲಯ ಸ್ಥಾಪನೆ ಸ್ತ್ಕರ್ಮದ ಫಲ, ಅನುಗ್ರಹಕ್ಕೆ ಪ್ರೇರಣೆಯಾಗಿದೆ ಎಂದು ಜಗದ್ಗುರು ಶ್ರೀಮದ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.

ಇಂದಿಲ್ಲಿ ಶುಕ್ರವಾರ ಸಂಜೆ ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಸಯಾನ್‍ನಲ್ಲಿನ ಗೋಕುಲ ಮಂದಿರಕ್ಕೆ ಚಿತ್ತೈಸಿದ ಮಂತ್ರಾಲಯದ ಶ್ರೀಪಾದರು ಶ್ರೀ ಗೋಪಾಲಕೃಷ್ಣ ದೇವರ ದರ್ಶನ ಪಡೆದು ಬಿಎಸ್‍ಕೆಬಿಎ ಮತ್ತು ಜಿಪಿಟಿ ಉಭಯ ಸಂಸ್ಥೆಗಳಿಂದ ಪುನರಾಭಿವೃದ್ಧಿಸಲ್ಪಟ್ಟ ನೂತನ ನಿರ್ಮಿತ ಗೋಕುಲ ಮಂದಿರ ಹಾಗೂ ಸಂಕೀರ್ಣ ವೀಕ್ಷಿಸಿ ಭಕ್ತರ ಸೇವೆಯನ್ನು ಶ್ಲಾಘಿಸಿ, ಅನ್ನದಾನ ಸೇವಾ ಯೋಜನೆಯ ಕರಪತ್ರ ಬಿಡುಗಡೆಗೊಳಿಸಿ ಅನುಗ್ರಹ ನುಡಿಗಳನ್ನಾಡಿ ಕರ್ಮಭೂಮಿಯಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಕಟ್ಟಿ ಶತಮಾನಗಳನ್ನು ಕಟ್ಟಿರುವುದೇ ಹೆಮ್ಮೆದಾಯಕ. ಪರಮ ಪವಿತ್ರವಾದ ಪರಶುರಾಮನ ಸೃಷ್ಠಿ ತುಳುನಾಡ ಸಮಸ್ತ ಜನತೆಯ ಒಗ್ಗೂಡುವಿಕೆಯಿಂದ ನಿರ್ಮಿತÀ ಗೋಕುಲ ಸಂಕೀರ್ಣ ಮತ್ತು ಶ್ರೀ ಗೋಪಾಲಕೃಷ್ಣ ದೇವರ ಪುನಃರ್ ಪ್ರತಿಷ್ಠೆ ಮಾದರಿ. ಇದು ಶುದ್ಧ ಹೃನ್ಮನಗಳಿಗೆ ಶ್ರದ್ಧಾದಾಯಕ ಕೇಂದ್ರವಾಗಿದ್ದು ಇಲ್ಲಿ ವಿಶೇಷವಾದ ಕಂಪನವಿದ್ದು ಧಾರ್ಮಿಕ ವಾತಾವರಣ ಜಾಗೃತಗಿಳಿಸಿದ ಮಂದಿರವಾಗಿ ದೆ. ಅನ್ನದಾನ ಬಹಳ ವಿಶೇಷವಾಗಿದ್ದು ಇದಕ್ಕೆ ಎಲ್ಲರೂ ಪಾತ್ರದಾರರು. ಹಸಿದವರಿಗೆಲ್ಲರಿಗೂ ಅನ್ನದಾನ ಮಾಡುವುದು ಶಾಸ್ತ್ರದಾಯಕವಾಗಿದ್ದು ಕ್ಷುದ್ಧಿತವರಿಗೆ ಉಣಬಡಿಸುವುದು ಸನಾತನ ಹಿಂದೂ ಸಂಸ್ಕೃತಿಯಾ ಗಿದೆ. ಇದು ಮನವೀಯ ಧರ್ಮಗಳಲ್ಲೂ ಮುಖ್ಯವಾಗಿದ್ದು, ಅನ್ನಕ್ಕೆ ಪ್ರಸಾದ ಅನ್ನುವ ಪಾವಿತ್ರ್ಯತೆವಿದೆ. ಇಂತಹ ವ್ಯವಸ್ಥೆ ಗೋಕುಲದಲ್ಲಿ ನಡೆಸಲುದ್ದೇಶಿಸಿದ್ದು ಧನ್ಯತಾಭಾವವಾಗಿದೆ ಎಂದರು.

ಗೋಕುಲ ಸನ್ನಿಧಿಯಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಅನ್ನದಾನ ಸೇವೆಗೆ ಸುಬುದೇಂದ್ರಶ್ರೀಗಳು ಚಾಲನೆಯನ್ನಿತ್ತು ನೆರೆದ ಸದ್ಭಕ್ತರನ್ನು ಹರಸಿದರು. ಅಂತೆಯೇ ಖಾರ್‍ಘರ್‍ನಲ್ಲಿ ನೂತನವಾಗಿ ನಿರ್ಮಿತÀ ಮಂತ್ರಾಲಯ ಮಠದ ನವಿಮುಂಬಯಿ ಶಾಖೆಯ ಸೇವಾರ್ಪಣಾ ಕಾರ್ಯಕ್ರಮಕ್ಕೆ ಭಕ್ತರನ್ನು ಆಹ್ವಾನಿಸಿದರು.

ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಜಿಕೆಪಿ ಟ್ರಸ್ಟ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಎಸ್‍ಕೆಬಿಎ ಪ್ರಥಮ ಮಹಿಳೆ ವಿಜಯಲಕ್ಷ್ಮೀ ಸುರೇಶ್ ರಾವ್ ಶ್ರೀಪಾದÀವರನ್ನು ತುಳಸೀ ಪುಷ್ಫಹಾರವನ್ನಿತ್ತು ಸುಖಾಗಮನ ಕೋರುತ್ತಾ ಶ್ರೀಕೃಷ್ಣನ ಸನ್ನಿಧಾನÀಕ್ಕೆ ಬರಮಾಡಿಕೊಂಡರು ಮತ್ತು ಶ್ರೀಗಳವರ ಪಾದಪೂಜೆ ಗೈದರು. ಡಾ| ಸುರೇಶ್ ರಾವ್ ಅವರು ಪುನರ್ ಪ್ರತಿಷ್ಠಾಪಿತ ದೇವಸ್ಥಾನ ಮತ್ತು ಸಂಕೀರ್ಣದ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು.

ಗೋಕುಲದ ಆರ್ಚಕ ಗೋಪಾಲ ಭಟ್ ಕಿದಿಯೂರು, ಗುರುಪ್ರಸಾದ್ ಭಟ್ ಶ್ರೀ ದೇವರಿಗೆ ಆರತಿ ಬೆಳಗಿಸಿ ಪೂಜಾಧಿಗಗಳನ್ನು ನೆರವೇರಿಸಿದರು. ಬಿಎಸ್‍ಕೆಬಿಎ ಕಲಾವೃಂದ ಕು| ಪ್ರಿಯಾಂಜಲಿ ರಾವ್ ಮತ್ತು ಬಳಗವು ಭರತನಾಟ್ಯಂ ಪ್ರದರ್ಶಿಸಿದರು. ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಸುರೇಶ್ ರಾವ್ ಶ್ರೀಪಾದರ ಪಾದಪೂಜೆ ನಡೆಸಿದರು.

ವೇದಿಕೆಯಲ್ಲಿ ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಉಪಾಧ್ಯಕ್ಷÀ ವಾಮನ್ ಹೊಳ್ಳಾ, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ನಿವೃತ್ತ ಪ್ರಾಚಾರ್ಯ ಹೆಚ್.ಕೆ ಸುರೇಶ್ ಆಚಾರ್ಯ, ರಾಮಕೃಷ್ಣ ತೆರ್ಕರ್ ಆಸೀನರಾಗಿದ್ದರು.

ಪುರೋಹಿತ ಮುಂಡ್ಕೂರು ಹರಿ ಭಟ್, ಭವಾನಿ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಚೆಲ್ಲಡ್ಕ ಕುಸುಮೋದÀರ ಡಿ.ಶೆಟ್ಟಿ, ಸಿಎ| ಎಂ.ಹೆಚ್ ಮುರಳೀಧರ್, ಸಿಎ| ಸುಧೀರ್ ಆರ್.ಶೆಟ್ಟಿ, ಬಿಎಸ್‍ಕೆಬಿಎ ಉಪಾಧ್ಯಕ್ಷÀ ಅವಿನಾಶ್ ಶಾಸ್ತ್ರಿ, ಖಜಾಂಚಿ ಸಿಎ| ಹರಿದಾಸ ಭಟ್, ಜೊತೆ ಕೋಶಾಧಿಕಾರಿ ಗಣೇಶ್ ಭಟ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೆÇೀತಿ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಕಾರ್ಯದರ್ಶಿ (ಟ್ರಸ್ಟಿ) ಎಸ್.ರಾಮವಿಟ್ಟಲ ಕಲ್ಲೂರಾಯ, ಟ್ರಸ್ಟಿಗಳಾದ ಬಿ. ರಮಾನಂದ ರಾವ್, ಕೃಷ್ಣ ಆಚಾರ್ಯ, ಶೈಲಿನಿ ಎ.ರಾವ್, ಶ್ರೀಪತಿ ಭಟ್, ಗುರುರಾಜ್ ಭಟ್, ಚಂದ್ರಶೇಖರ್ ಭಟ್, ಕಮಲಾಕ್ಷ ಜಿ.ಸರಾಫ್, ಸದಸ್ಯರನೇಕರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ವಿದ್ವಾನ್ ಕೃಷ್ಣರಾಜ ತಂತ್ರಿ ವೇದಘೋಷಣೆಗೈದು ಸ್ವಾಮೀಜಿಗಳವರನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಅನ್ನದಾನ ಸೇವೆಯ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಬಿ.ರಾಮಪ್ರಸಾದ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ವಂದಿಸಿದರು.

 

 

 

 
More News

ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ ಆರನೇ ವಾರ್ಷಿಕೋತ್ಸವ ಸಂಭ್ರಮಿಸಿದ ಗಾಣಿಗ ಸಮಾಜ ಮುಂಬಯಿ
ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ
ಭಾರತ್ ಬ್ಯಾಂಕ್‍ನ 2023-28 ಸಾಲಿನ ನಿರ್ದೇಶಕ ಮಂಡಳಿ ಚುನಾವಣೆ
ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ
ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ

Comment Here