Thursday 25th, April 2024
canara news

ಫೆÇೀರಮ್ ಆಫ್ ಮುಂಬಯಿ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್‍ನಿಂದÀ ಬಜೆಟ್-2023 ವಿಶ್ಲೇಷಣೆ

Published On : 05 Feb 2023   |  Reported By : Rons Bantwal


ಕೇಂದ್ರದ ಬಜೆಟ್ ಜನತೆಯ ಕನಸಿನಂತಿದೆ : ಚಂದ್ರಹಾಸ ಕೆ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.04: ದೇಶದ, ಉದ್ಯಮದ ಅಭಿವೃದ್ಧಿಯಲ್ಲಿ ಬಂಟರಲ್ಲಿನ ಸಿಎಗಳ ಪಾತ್ರ ಹಿರಿದಾಗಿದೆ. ಈ ಬಾರಿಯ ಬಜೆಟ್ ಹಣಕಾಸು ವ್ಯವಸ್ಥೆಯಲ್ಲಿ ಸುಧಾರಣೆ ತರುವಂತಿದೆ. ಇದು 13% ಆದಾಯ ತೆರಿಗೆಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದು, ಬಜೆಟ್ ಶ್ರುತಿ ಮತ್ತು ಶಕ್ತಿಯ ಮೇಲೆ ಕೇಂದ್ರೀಕರಿಸಿದೆ. ಬಜೆಟ್‍ನಲ್ಲಿ ಪ್ರಧಾನಮಂತ್ರಿಗಳ ಆವಾಜ್ ಯೋಜನೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಇದು ರೈಲ್ವೇಯ ಬೆಳವಣಿಗೆ ಮತ್ತು ದೇಶದ ಮೂಲಸೌಕರ್ಯ ಅಭಿವೃದ್ಧಿಯ ಏಳಿಗೆಯಲ್ಲಿ ಹೆಚ್ಚಿನ ಉತ್ತೇಜನವನ್ನು ನೀಡುತ್ತದೆ. ಇದು ರಾಷ್ಟ್ರದ ಜನತೆಯ ಕನಸಿನ ಬಜೆಟ್ ಆಗಿದೆ. ಬೆಳವಣಿಯ ಆಧಾರಿತ ಬಜೆಟ್ ಆಗಿದೆ. ಆಧುನಿಕ ಕಾಲದ ಸೇವಾರ್ಪಣಾ 2023ರ ಬಜೆಟ್ ನಮ್ಮ ಹಿರಿಮೆಯಾಗಿದೆ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.

ಬಂಟ್ಸ್ ಸಂಘ ಮುಂಬಯಿ, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಮತ್ತು ಇಂಡಿಯನ್ ಹೊಟೇಲ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಇವುಗಳ ಸಹಯೋಹದೊಂದಿಗೆ ಇಂದಿಲ್ಲಿ ಶನಿವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದಲ್ಲಿನ ಶ್ರೀ ಮುಕ್ತಾನಂದ ಸ್ವಾಮಿ ಸಭಾಗೃಹದಲ್ಲಿ ಫೆÇೀರಮ್ ಆಫ್ ಮುಂಬಯಿ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಯೋಜಿಸಿದ್ದ ಯೂನಿಯನ್ ಬಜೆಟ್2023 ವಿಶ್ಲೇಷಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಂದ್ರಹಾಸ ಶೆಟ್ಟಿ ಮಾತನಾಡಿದರು.

ಎಫ್‍ಎಂಬಿಸಿಎ ಕಾರ್ಯಾಧ್ಯಕ್ಷ ಸಿಎ| ಹರೀಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಲಿಮಿಟೆಡ್ ಅಧ್ಯಕ್ಷ ಕೆ.ಸಿ ಶೆಟ್ಟಿ, ಇಂಡಿಯಾನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಅಧ್ಯಕ್ಷ ಸುಕೇಶ್ ಶೆಟ್ಟಿ, ಎಫ್‍ಎಂಬಿಸಿಎ ಉಪ ಕಾರ್ಯಾಧ್ಯಕ್ಷ ಸಿಎ| ವಿಶ್ವನಾಥ ಶೆಟ್ಟಿ, ಗೌ| ಕಾರ್ಯದರ್ಶಿ ಸಿಎ| ಜಗದೀಶ್ ಬಿ.ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಸುದೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಿಎ| ರಾಜೇಶ್ ಸಾಗ್ವಿ ಅವರು ನೇರ ತೆರಿಗೆ (ಡೈರೆಕ್ಟ್ ಟೆಕ್ಸ್‍ಸ್) ಮತ್ತು ನ್ಯಾ| ಪ್ರಭಾಕರ ಶೆಟ್ಟಿ ಅವರು ಪರೋಕ್ಷ ತೆರಿಗೆ (ಇನ್‍ಡೈರೆಕ್ಟ್ ಟೆಕ್ಸ್‍ಸ್) ಮೇಲೆ ವಿಶ್ಲೇಷಣೆ ನಡೆಸಿದರು.

ರಾಷ್ಟ್ರದ ಆದಯ ತೆರಿಗೆಯಲ್ಲಿ ಬಾರೀ ಬದಲಾವಣೆ ಆಗಿದ್ದು ಇದು ಪ್ರತೀ ನಾಗರಿಕರಿಗೂ ಅನುಕೂಲಕರವಾಗಿದೆ. ತೆರಿಗೆಯಲ್ಲಿನ ಹೊಸ ವಿಧಾನಗಳು ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ತೆರಿಗೆ ಮಟ್ಟವು ಬಹಳ ಸರಳ ಮತ್ತು ತೀರಾ ಕಡಿಮೆಯಾಗಿದೆ. ಆದ್ದರಿಂದಎಲ್ಲರೂ ಸರಿಯಾದ ಸಮಯಕ್ಕೆ ತೆರಿಗೆ ಭರಿಸಿ ರಾಷ್ಟ್ರದ ಮುನ್ನಡೆಯ ಪಾಲುದಾರರಾಗಬೇಕು ಎಂದು ನೇರ ತೆರಿಗೆ ಬಗ್ಗೆ ಸಿಎ| ರಾಜೇಶ್ ಸಾಗ್ವಿ ಮಾಹಿತಿಯನ್ನಿತ್ತರು.

ನ್ಯಾ| ಪ್ರಭಾಕರ ಶೆಟ್ಟಿ ಐದು ವರ್ಷಗಳ ಹಳೆಯ ಸರಕು ಮತ್ತು ಸೇವಾ ತೆರಿಗೆಯಲ್ಲೂ ಈ ಸಲ ಭಾರೀ ಬದಲಾವಣೆ ಆಗಿದ್ದು ಇದು ಸೇವಾ ಪೂರಕವಾಗಿದೆ. ಜಿಎಸ್ ಟಿ ತಿದ್ದುಪಡಿ ಯಂತೆ ಅಪರಾಧಮುಕ್ತವಾಗಿಸಿ ರುವುದು ಸ್ವಗತಾರ್ಹ ಎಂದು ಪರೋಕ್ಷ ತೆರಿಗೆ ಬಗ್ಗೆ ಮಾಹಿತಿಯನ್ನಿತ್ತರು.

ಕೆ.ಸಿ ಶೆಟ್ಟಿ ಮಾತನಾಡಿ ದೇಶದಲ್ಲಿ ಬರೇ 1% ಜನರು ತೆರಿಗೆ ಪಾವತಿಸುತ್ತಿದ್ದಾರೆ. ಆದರೆ 99% ಜನರು ಬಜೆಟ್‍ನಿಂದ ಪ್ರಭಾವಿತರಾಗಿದ್ದಾರೆ. ಬಜೆಟ್ ದೇಶದ ಅಭಿವೃದ್ಧಿಯ ಸಂಕೇತವಾಗಿದೆ. ಆದ್ದರಿಂದ ಆದಾಯವುಳ್ಳ ವರು ತೆರಿಗೆ ಪಾವತಿಸಿದಾಗಲೇ ರಾಷ್ಟ್ರದ ಸರ್ವೋಭಿವೃದ್ಧಿ ಸಾಧ್ಯ. ನಮ್ಮ ಐಬಿಸಿಸಿಐ ಕೂಡಾ ಇದನ್ನು ಪ್ರೇರೆಪಿಸುತ್ತದೆ ಎಂದರು.

ಸುಕೇಶ್ ಶೆಟ್ಟಿ ಮಾತನಾಡಿ ಆಹಾರ್ ಹೊಟೇಲು ಉದ್ಯಮವು ಇಂದು ಆಧುನಿಕತೆಯ ಹಾದಿಯಲ್ಲಿ ಸಾಗುತ್ತಿದೆ. ನಮ್ಮ ಹೆಚ್ಚಿನ ವ್ಯಾಪಾರವು ಆ ನಿಯಮಾನುಸಾರವಾಗಿಯೇ ಸಾಗುತ್ತಿದೆ. ಹೊಟೇಲುಗಳಲ್ಲಿ ಬಹುತೇಕವಾಗಿ ನಗದು ವ್ಯವಹಾರವಾಗಿದ್ದರೂ ನಾವು ತೆರಿಗೆಯನ್ನು ಪಾವತಿಸುವಲ್ಲಿ ಸದಾ ಮುನ್ನಡೆಯಲ್ಲಿದ್ದೇವೆ. ಪ್ರಸ್ತುತ ಹೊಟೇಲುಗಳಲ್ಲೂ ಆನ್‍ಲೈನ್ ವ್ಯಾಪಾರವು ಬಹುಪಟ್ಟು ಹೆಚ್ಚಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ಸ್‍ಗಳಾದ ಸಿಎ| ಎನ್.ಬಿ ಶೆಟ್ಟಿ, (ಪರವಾಗಿ ರೋಶ್ನಿ ಶೆಟ್ಟಿ), ಸಿಎ| ಪ್ರಭಾಕರ್ ಬಿ.ಶೆಟ್ಟಿ, ಸಿಎ| ದಯಾಕರ್ ಎ.ಶೆಟ್ಟಿ, ಸಿಎ| ಸದಾಶಿವ ಬಿ.ಶೆಟ್ಟಿ ಕಡಂದಲೆ, ಸಿಎ| ಸುಧೀರ್ ಆರ್.ಎಲ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಸಿಎ| ಐ.ಆರ್ ಶೆಟ್ಟಿ, ಸಿಎ| ಶಂಕರ್ ಬಿ.ಶೆಟ್ಟಿ, ಸಿಎ| ಸಂಜೀವ ಶೆಟ್ಟಿ, ಮಹೇಶ್ ಎಸ್.ಶೆಟ್ಟಿ, ಪ್ರವೀಣ್ ಬಿ.ಶೆಟ್ಟಿ, ಆದರ್ಶ್ ಶೆಟ್ಟಿ, ಐಬಿಸಿಸಿಐ ಎಸ್.ಬಿ ಶೆಟ್ಟಿ, ಜಯ ಸೂಡ, ಶ್ರೀನಾಥ್ ಶೆಟ್ಟಿ, ಕಿಶನ್ ಜೆ.ಶೆಟ್ಟಿ ಎಫ್‍ಎಂಬಿಸಿಎ ಸಮಿತಿ ಸದಸ್ಯ ಸಿಎ| ಶ್ರೀನಿವಾಸ ಶೆಟ್ಟಿ, ಮಾಜಿ ಅಧ್ಯಕ್ಷ ಸಿಎ| ರಮೇಶ್ ಎ.ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸಿಎ| ಹರೀಶ್ ಹೆಗ್ಡೆ ಸ್ವಾಗತಿಸಿ ಪ್ರಸ್ತಾವನೆಗೈದರು. ಸಿಎ| ರಮೇಶ್ ಬಿ.ಶೆಟ್ಟಿ, ಸಿಎ| ಅಶೋಕ್ ಶೆಟ್ಟಿ, ಸಿಎ| ಸುದೇಶ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಸಿಎ| ಜಗದೀಶ್ ಬಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಿಎ| ವಿಶ್ವನಾಥ ಶೆಟ್ಟಿ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here