Thursday 20th, June 2024
canara news

ವಾರ್ಷಿಕೋತ್ಸವ ಸಂಭ್ರಮಿಸಿದ ಗುಜರಾತ್ ಬಿಲ್ಲವರ ಸಂಘದ ವಾಪಿ ಘಟಕ

Published On : 03 Feb 2023   |  Reported By : Rons Bantwal


ದಯಾನಂದ ಬೋಂಟ್ರ `ಬಿಲ್ಲವ ಸಾಮ್ರಾಟ್', ಮೋಹನ್ ಸಿ.ಪೂಜಾರಿ`ಬಿಲ್ಲವ ಸಮಾಜ ರತ್ನ'

ಮುಂಬಯಿ (ಆರ್‍ಬಿಐ), ಜ.29: ಗುಜರಾತ್ ಬಿಲ್ಲವರ ಸಂಘ (ರಿ.) ಇದರ ವಾಪಿ ಘಟಕವು ಇಂದಿಲ್ಲಿ ಭಾನುವಾರ ತನ್ನ ವಾರ್ಷಿಕೋತ್ಸವವನ್ನು ವಾಪಿ ಇಲ್ಲಿನ ಜಿಐಡಿಸಿಯ ವಿಐಎ ಸಭಾಗೃಹದಲ್ಲಿ ಅದ್ದೂರಿಯಾಗಿ ಸಂಭ್ರಮಿಸಿತು.

ವಾರ್ಷಿಕೋತ್ಸವದ ಪ್ರಯುಕ್ತ ಸತ್ಯದ ಅಪ್ಪೆ ದೇಯಿ ಬೈದ್ಯೇತಿ ದಿನಾಚರಣಾ ಕಾರ್ಯಕ್ರಮ ಜರುಗಿಸಿದ್ದು ಪೂರ್ವಾಹ್ನ ಗುಜರಾತ್ ಬಿಲ್ಲವರ ಸಂಘದ ಅಧ್ಯಕ್ಷ ವಿಶ್ವನಾಥ ಜಿ.ಪೂಜಾರಿ ಅಧ್ಯಕ್ಷತೆಯಲ್ಲಿ ನೆರವೇರಿದ ಸಭಾ ಕಾರ್ಯಕ್ರಮಕ್ಕೆ ಜಿಬಿಎಸ್ ಗೌರವಾಧ್ಯಕ್ಷ ದಯಾನಂದ ಬೋಂಟ್ರ ಹಾಗೂ ಮಾಜಿ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ದೀಪಹಚ್ಚಿ ಮತ್ತು ಹರೀಶ್ ಜಿ.ಅವಿೂನ್ ಪಿಂಗಾರ ಹರಳಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿüಯಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿೂನ್, ಗೌರವ ಅತಿಥಿsಗಳಾಗಿ ಬಿಸಿಸಿಐ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್, ವಾಪಿ ಕನ್ನಡ ಸಂಘದ ವಿಶ್ವಸ್ಥ ಸದಸ್ಯ ಪಿ.ಎಸ್ ಕಾರಂತ, ತುಳುನಾಡ ಐಸಿರಿ ವಾಪಿ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ, ಗುಜರಾತ್ ಬಿಲ್ಲವರ ಸಂಘದ ಅಹ್ಮದಾಬಾದ್ ಘಟಕಾಧ್ಯಕ್ಷ ಲೋಕಯ್ಯ ಪೂಜಾರಿ, ಬರೋಡಾ ಮಹಿಳಾ ವಿಭಾಗದ ಸಂಚಾಲಕಿ ಸರಿತಾ ಎಸ್.ಪೂಜಾರಿ, ಜಿಬಿಎಸ್‍ನ ವಾಪಿ ಅಧ್ಯಕ್ಷ ಸದಾಶಿವ ಜಿ.ಪೂಜಾರಿ, ಜಿಬಿಎಸ್ ಗೌ| ಪ್ರ| ಕಾರ್ಯದರ್ಶಿ ವಾಸು ವಿ ಸುವರ್ಣ, ಗೌ| ಕೋಶಾಧಿಕಾರಿ ಸುರೇಶ್ ವೈ.ಕೋಟ್ಯಾನ್ ಉಪಸ್ಥಿತರಿದ್ದರು.

ಇದೇ ಶುಭಾವಸರದಲ್ಲಿ ದಯಾನಂದ ಬೋಂಟ್ರ ಅವರಿಗೆ `ಗುಜರಾತ್ ಬಿಲ್ಲವ ಸಾಮ್ರಾಟ್', ಮೋಹನ್ ಸಿ.ಪೂಜಾರಿ ಅವರಿಗೆ `ಗುಜರಾತ್ ಬಿಲ್ಲವ ಸಮಾಜ ರತ್ನ', ಹರೀಶ್ ಜಿ.ಅಮೀನ್ ಮತ್ತ್ತು ಶ್ರೀ ಕ್ಷೇತ್ರ ಗೆಜ್ಜೆಗಿರಿ ಗೌರವಾಧ್ಯಕ್ಷ ಜಯಂತ್ ನಡುಬೈಲು ಮತ್ತು ವಸಂತಿ ಪೂಜಾರಿ ಅವರಿಗೆ `ಬಿಲ್ಲವ ಯುವ ಸಾಮ್ರಾಟ್' ಬಿರುದು ಪ್ರದಾನಿಸಿ ಸನ್ಮಾನಿಸಲಾಯಿತು. ಅಂತೆಯೇ ಸಾಧಕರಾದ ಜಿಬಿಎಸ್ ಮಾಜಿ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸೂರತ್, ಜಿಬಿಎಸ್‍ನ ವಾಪಿ ಅಧ್ಯಕ್ಷ ಸದಾಶಿವ ಜಿ.ಪೂಜಾರಿ ಮತ್ತು ವಸಂತಿ ಎಸ್.ಪೂಜಾರಿ ದಂಪತಿ, ಬಿಲ್ಲವರ ಸಂಘ ಪುಣೆ ಇದರ ಮಾಜಿ ಅಧ್ಯಕ್ಷ ಶ್ಯಾಮ ಡಿ.ಸುವರ್ಣ ಮತ್ತು ನೂತನ ಎಸ್.ಸುವರ್ಣ ದಂಪತಿ, ತುಳು ಸಂಘ ಅಂಕಲೇಶ್ವರ್ ಉಪಾಧ್ಯಕ್ಷ ಹರೀಶ್ ವಿ.ಪೂಜಾರಿ ಮತ್ತು ಶೋಭಾ ಎಚ್.ಪೂಜಾರಿ ದಂಪತಿ, ಜಿಬಿಎಸ್‍ನ ವಾಪಿ ಘಟಕದ ಜೊತೆ ಕಾರ್ಯದರ್ಶಿ ಸದಾನಂದ ಎಂ.ಅಂಚನ್ ಅವರ ಪರವಾಗಿ ಸೊಸೆ ಸುಪ್ರಿಯಾ ಅಂಚನ್, ಹೋಟೇಲ್ ಅಸೋಸಿಯೇಶನ್ ವಲ್ಸಾಡ್ ಸದಸ್ಯ ನಾರಾಯಣ ಎಂ.ಅಂಚನ್ ಮತ್ತು ಸರೋಜ ಅಂಚನ್, ಗುಜರಾತ್ ಬಿಲ್ಲವರ ಸಂಘದ ಸದಾನಂದ ಅಂಚನ್ ಪರವಾಗಿ ರೋಹಿತ್ ಎಸ್.ಅಂಚನ್ ಮತ್ತು ಶಕಿಲಾ ಅಂಚನ್ ದಂಪತಿ,ಸಮಾಜ ಸೇವಕ ತನಿಯಪ್ಪ ಬಂಗೇರ ಸಿಲ್ವಾಸಾ ಮತ್ತು ಸೊಸೆ ರತ್ನಾವತಿ ಬಂಗೇರ ಮತ್ತಿತರ ಸಾಧಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಇಂದಿನ ಈ ಕಾರ್ಯಕ್ರಮ ನೋಡುವಾಗ ನಮ್ಮ ಬಂಧು ಬಳಗದ ಸ್ಪೂರ್ತಿ, ಉತ್ಸಾಹದಿಂದ ಹೃದಯದಲ್ಲಿ ನೆಮ್ಮದಿ ಸಂತೋಷವಾಗುತ್ತಿದೆ ಇದು ನಮಗೆ ಅಭಿನಂದನೀಯ ವಿಷಯ. 24 ವರ್ಷಗಳ ಹಿಂದೆ ಹಲವು ಸಮಾಜ ಕಾರ್ಯಕರ್ತರ ಪರಿಶ್ರಮದಿಂದ ಈ ಪರಿಸರದಲ್ಲಿ ಗುಜರಾತ್ ಬಿಲ್ಲವರ ಸಂಘದ ಘಟಕ ಸ್ಥಾಪನೆಯಾಯಿತು. ಈಗ ಅದನ್ನು ತುಂಬಾ ಅರ್ಥಪೂರ್ಣವಾಗಿ ಮುನ್ನಡೆಯಿಸುತ್ತಿರುವ ನಿಮಗೆ ಅಭಿನಂದನೀಯ. ಸಂಸ್ಥೆಯನ್ನು ನಿರ್ಮಿಸಲು ಪರಿಶ್ರಮಗೈದು ಶ್ರೀದೇವರ ಪಾದ ಸೇರಿದ ಎಲ್ಲಾ ದಾನಿಗಳಿಗೆ ಚಿರಶಾಂತಿ ಕೋರಿದರು. ಮುಂದೆಯೂ ನಮ್ಮ ಸಮಾಜ ಒಗ್ಗೂಡಿ ಮುನ್ನಡೆಯಲಿ ಎಂದು ದಯಾನಂದ ಬೋಂಟ್ರ ತಿಳಿಸಿದರು.

ನನ್ನೊಂದಿಗೆ ನಮ್ಮ ಹಿರಿಯರಾದ ದಯಾನಂದ ಬೋಂಟ್ರ ಮತ್ತು ಮೋಹನ್ ಪೂಜಾರಿ ಅವರು ನಮ್ಮ ಸಮಾಜ ಕೋಡುಗೈದಾನಿಗಳು ಹಾಗೂ ನಮ್ಮ ಸಮಾಜಕ್ಕೆ ಅವರ ಕೊಡುಗೆ ಎಲ್ಲಾ ಕ್ಷೇತ್ರಗಳಲ್ಲು ಅಪಾರ. ಅಂತೆಯೇ ಜಯಂತ್ ನಡುಬೈಲು ಅವರು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿವೃದ್ಧಿಗೆ ದುಡಿದವರು. ಎಲ್ಲಾ ಸನ್ಮಾನಿತರಿಗೆ ನನ್ನ ಅಭಿನಂದನೆಗಳು ಹಾಗೂ ನನಗೆ ಸನ್ಮಾನ ಮಾಡಿದ ತಮಗೆ ಧನ್ಯವಾದಗಳು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಜವಾಬ್ದಾರಿ ನನಗೆ ನೀಡಿದ್ದಾರೆ. ಗುರುಗಳ ತತ್ವದಂತೆ ಅದನ್ನು ಪ್ರಾಮಾಣಿಕವಾಗಿ ಯಾರಲ್ಲಿ ತಾರತಮ್ಯವಿಲ್ಲದೆ ನಡೆಸುತ್ತಿದ್ದೇನೆ. ಮುಂಬಯಿ ಮತ್ತು ಊರಲ್ಲಿ ಶೈಕ್ಷಣಿಕ ಸಹಾಯಹಸ್ತವಾಗಿ ವಿದ್ಯಾಥಿರ್sವೇತನ ನೀಡಿ ನಮ್ಮ ಮಕ್ಕಳಿಗೆ ವಿದ್ಯಾವಂತರಾಗಲು ಸಹಾಯ ಮಾಡುತ್ತಿದ್ದೇವೆ ಎಂದು ಹರೀಶ್ ಅವಿೂನ್ ನುಡಿದರು.

ಜಯಂತ್ ನಡುಬೈಲು ಮಾತನಾಡಿ ಗುಜರಾತ್ ಮಣ್ಣಿನಲ್ಲಿ ಕಾಲು ಇಡುವಾಗ ತುಂಬಾ ಸಂತೋಷವಾಯಿತು. ಹೊಟ್ಟೆಪಾಡಿಗಾಗಿ ಇಲ್ಲಿ ಬಂದು ಉದ್ಯೋಗದ ಜೊತೆಗೆ ಒಂದು ದೊಡ್ಡ ಸಂಘ ಹಟ್ಟಿಕೊಂಡು ನಾವೂ ತಲೆ ಮೇಲೆ ಮಾಡಿ ನಡೆಯುವಂತೆ ಮಾಡಿದ್ದೀರಿ. ಶಿಕ್ಷಣಕ್ಕೆ ಒತ್ತು ನೀಡಿ ನಮ್ಮ ಸಮಾಜವನ್ನು ಮುನ್ನಡೆಸುವುದು ಅಭಿನಂದನೀಯ. ನನಗೆ ಶ್ರೀ ಕ್ಷೇತ್ರಗೆಜ್ಜೆಗಿರಿಯ ಅಭಿವೃದ್ಧಿಯ ಜವಾಬ್ದಾರಿ ನೀಡಿದ್ದು, ಅದನ್ನು ಸಮಾಜದ ಎಲ್ಲಾ ದಾನಿಗಳ ಪೆÇ್ರೀತ್ಸಾಹ ಮತ್ತು ಸಹಕಾರದಿಂದ ಸಮಾಜಕ್ಕೆ ಅರ್ಪಣೆ ಮಾಡಲು ಸಾಧ್ಯವಾಯಿತು. ಬಂಧುತ್ವ ಪ್ರೀತಿಯಿಂದ ಮಾತ್ರ ನಮ್ಮ ಸಮಾಜ ಮುನ್ನಡೆಯುವುದು ಎಂದರು.

ಪುರುಷೋತ್ತಮ ಕೋಟ್ಯಾನ್ ಒಂದು ಸಂಸ್ಥೆಯ ಅಭಿವೃದ್ಧಿಯಾಗಲು ವೇದಿಕೆಯಲ್ಲಿ ಇದ್ದವರ ಪಾತ್ರಕ್ಕಿಂತ ಸಭೆಯಲ್ಲಿ ಕುಳಿತವರ ಸದಸ್ಯರ ಪಾತ್ರ ಮಹತ್ವದು. ತಪ್ಪು ಯಾರಿಂದಲೂ ಆಗಲು ಸಾಧ್ಯವಿದೆ. ಆದರೆ ತಪ್ಪನ್ನು ತಿದ್ದಿಸುವುದು ಸದಸ್ಯರ ಕೆಲಸ. ವೇದಿಕೆಯಲ್ಲಿ ಎಲ್ಲಾ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದು, ಅಭಿನಂದನೀಯ. ಇದು ಬಾರಿ ಗುಜರಾತ್ ಬಿಲ್ಲವರ ಸಂಘ ವಾಪಿ ಕಾರ್ಯಕ್ರಮವಲ್ಲ ಇಡಿ ಗುಜರಾತ್‍ನ ಕಾರ್ಯಕ್ರಮ ಎಂದÀರು.

ವಿದ್ಯಾದಾನಕ್ಕಿಂತ ಮಹಾದಾನ ಯಾವುದು ಇಲ್ಲ. ಎಲ್ಲಾ ಸಂಘ ಸಂಸ್ಥೆಗಳು ವಿಧ್ಯೆಗೆ ಬೆಂಬಲ ನೀಡಬೇಕು. ಮನೆಯಲ್ಲಿ ಶೃಂಗಾರ, ಮೊಬೈಲ್, ಸೌಂದರ್ಯವನು ಬಿಟ್ಟು ಅಭ್ಯಾಸದ ಮೇಲೆ ಧ್ಯಾನ ನೀಡಬೇಕು. ವಿದ್ಯೆಯಿಂದ ಮನೆ, ಸಮಾಜ, ದೇಶದ ಉಳಿತು ಎಂದು ಪಿ.ಎಸ್ ಕಾರಂತ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ಬಾಲಕೃಷ್ಣ ಶೆಟ್ಟಿ ಮಾತನಾಡಿ ಸತ್ಯದ ಅಪ್ಪೆ, ತಾಯಿಯ ಸ್ಥಾನ ಈ ಜಗತ್ತಿನಲ್ಲಿ ಯಾರಿಗೂ ನೀಡಲು ಸಾಧ್ಯವಿಲ್ಲ. ಜಾತಿ, ಭಾಷೆ ಆವೆಲ್ಲಾ ಉದ್ಯಮಕ್ಕಾಗಿ ಮಾಡಿದ ವಿಭಜನೆ. ಪೂರ್ವಜರು ಒಂದೊಂದು ಸಮುದಾಯಕ್ಕೆ ಒಂದೊಂದು ಜವಾಬ್ದಾರಿ ನೀಡಿದ್ದು, ಆದು ಮುಂದೆ ಸಮಾಜ ವಿಭಜನೆಯಾಯಿತು. ಭಾಷೆ, ಜಾತಿ, ಪಂಗಡ ಎಲ್ಲವೂ ಸರಿಸಮಾನ. ನಾವೆಲ್ಲಾ ಸಂಗಜೀವಿಗಳು, ನಾವೂ ಸಮಾಜದಲ್ಲಿ ಸಂಘ ಸಂಸ್ಥೆಗಳೊಂದಿಗೆ ಇದ್ದಾಗ ಮಾನಸಿಕ ಸ್ಥಿತಿ ಸಮತೋಲನವಾಗುತ್ತದೆ. ಕೊರೊನಾ ಸಮಯದಲ್ಲಿ ಕೆಲವರ ಮಾನಸಿಕ ಸ್ಥಿತಿಯನ್ನು ನಾವೂ ಕಂಡಿದ್ದು, ಮನುಷ್ಯನಿಗೆ ನಾಲ್ಕು ಮಾತುಗಳನ್ನು ಹಾಡಿದರೆ ಸಾಕು. ಆದರಿಂದ ದೊರೆಯುವ ಸಂತೋಷ ಶ್ರೀಮಂತಿಕೆಯಲ್ಲಿಲ್ಲ. ಅದಕ್ಕಾಗಿ ಸಂಘ ಸಂಸ್ಥೆಗಳ ಅಗತ್ಯವಿದೆ. ಪರಸ್ಪರ ಒಗ್ಗೂಡುವಿಕೆಯಿಂದ ಜೀವನ ಸುಖಮಯವಾಗುವುದು ಎಂದರು.

ಗುಜರಾತ್‍ನ ಮಣ್ಣಿನಲ್ಲಿ ಕಾಲು ಇಡುವಾಗ ಮೊದಲು ಬರುವುದು ವಾಪಿ. ಇಂದು ವಾಪಿಯಲ್ಲಿ ಅಯೋಜಿಸಿದ ಈ ಸಮಾರಂಭವನ್ನು ಅನುಭವಿಸಿ ತುಂಬಾ ಸಂತೋಷವಾಗಿದೆ. ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರಿಗೂ ನನ್ನ ಅಭಿನಂದನೆ. ಮನುಷ್ಯ ಜೀವನದಲ್ಲಿ ಮೂರು ಮಹತ್ವದ ದಿನಗಳು ಹುಟ್ಟು, ಮರಣ ಮತ್ತು ಆದರ ನಡುವೆ ಜೀವಿಸುವ ಜೀವನ ಶೈಲಿ. ಈ ಶೈಲಿ ನಾವೂ ಸಮಾಜಕ್ಕೆ ಮಾಡುವ ಸೇವೆ, ನೀಡುವ ಕೊಡುಗೆ, ಅಲ್ಲದೆ ಇತರರ ಕಣ್ಣೀರು ಒರೆಸುವ ಕಾರ್ಯಕ್ರಮ ಯಾವಾಗಲೂ ಶಾಶ್ವತವಾಗಿರುತ್ತದೆ. ಮನುಷ್ಯ ಜನಿಸುವಾಗ ಸಹಾಯಬೇಕು, ಸಾಯುವಾಗ ಸಹಾಯಬೇಕು, ಹಾಗೇನೆ ಒಂದು ಸಂಘ ನಡೆಯಬೇಕಾದರೆ ಒಬ್ಬರಿಂದ ಇನ್ನೊಬ್ಬರಿಗೆ ಸಹಾಯಬೇಕು. ನಾವೆಲ್ಲರೂ ಒಂದುಗೂಡಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ವಿಶ್ವನಾಥ ಪೂಜಾರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಾಪಿ ಘಟಕದ ಜೊತೆ ಕೋಶಾಧಿಕಾರಿ ಕಿರಣ್ ಎಸ್.ಅಂಚನ್, ಸೌಮ್ಯ ಪ್ರಭಾಕರ್ ಪೂಜಾರಿ, ಎಸ್.ಕೆ ಹಳೆಯಂಗಡಿ, ಕುಂದರ್ ಅಹ್ಮದಾಬಾದ್, ಆನಿಲ್ ಶೆಟ್ಟಿ, ಪ್ರದೀಪ್ ಪೂಜಾರಿ, ಮಹೇಶ್ ಅಮೀನ್, ಅಭಿನಯ ಮಂಟಪದ ಕರುಣಾಕರ ಕೋಟ್ಯಾನ್, ರಿತೇಶ್ ಪೂಜಾರಿ, ಶೀತಲ್ ಶೆಟ್ಟಿ, ಸುಕೇಸ್ ಶೆಟ್ಟಿ, ಜನಾರ್ಧನ ಮೆಲೆಂಡಾ, ಪುಷ್ಪರಾಜ್ ಶೆಟ್ಟಿ, ದಿವಾಕರ ಶೆಟ್ಟಿ. ಕಿಶೋರ್ ಪೂಜಾರಿ, ನಾಗರಾಜ ಶೆಟ್ಟಿ ಗಣೇಶ್ ಶೆಟ್ಟಿ, ಚಂದ್ರಶೇಖರ್ ಪೂಜಾರಿ, ವಾಸು ಸುವರ್ಣ, ರಘರಾಮ ಸಾಲ್ಯಾನ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು, ಅವರನ್ನು ಪುಷ್ಪಗುಚ್ಚ ನೀಡಿ ಗೌರವಿಸಲಾಯಿತು.

ಸಂಗೀತ ಪೂಜಾರಿ ಮತ್ತು ಚಂದ್ರಿಕಾ ಕೋಟ್ಯಾನ್ ಪ್ರಾರ್ಥನೆಯನ್ನಾಡಿದರು. ಗೌ| ಪ್ರ| ಕಾರ್ಯದರ್ಶಿ ರಮೇಶ್ ಎನ್.ಪೂಜಾರಿ ಸ್ವಾಗತಿಸಿದರು. ವಿಶೇಷ ಸಲಹೆಗಾರ ಭಾಸ್ಕರ್ ಸರಪಾಡಿ ಅತಿಥಿüಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ಅಶೋಕ್ ಕೆ.ಕೋಟ್ಯಾನ್, ಕೋಶಾಧಿಕಾರಿ ಶಿವ ವಿ.ಪೂಜಾರಿ ಸಿಲ್ವಾಸ, ಸಂಚಾಲಕಿ ಸಂಗೀತಾ ಎಸ್. ಪೂಜಾರಿ ಸಿಲ್ವಾಸ ಮತ್ತು ರೋಹಿತ್ ಎಸ್.ಅಂಚನ್, ಚಂದ್ರಶೇಖರ ಪೂಜಾರಿ, ದೇವ್‍ದಾಸ್ ಕರ್ಕೇರ, ಕಿರಣ್ ಅಂಚನ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಮಹಿಳಾ ವಿಭಾಗಧ್ಯಕ್ಷೆ ಚಂದ್ರಿಕಾ ಅಶೋಕ್ ಕೋಟ್ಯಾನ್, ಗೀತಾ ಸಾಲ್ಯಾನ್, ರಘು ಸಾಲ್ಯಾನ್ ವಲ್ಸಾಡ್, ಶಕಿಲಾ ಪೂಜಾರಿ, ವಸಂತಿ ಎಸ್.ಪೂಜಾರಿ, ಸುಮನ್ ಸಿ.ಪೂಜಾರಿ, ಸನ್ಮಾನಿತರನ್ನು ಪರಿಚಯಿಸಿದರು. ಸಚಿನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ಸರಪಾಡಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿಬಿಎಸ್ ಸದಸ್ಯರು ವೈವಿಧ್ಯಮಯ ಮನೋರಂಜನಾ ಕಾರ್ಯಕ್ರ ಮವನ್ನು ಹಾಗೂ ಕರುಣಾಕರ ಕೆ.ಕೋಟ್ಯಾನ್ ನಿರ್ದೇಶನದಲ್ಲಿ ವಿಶುಕುಮಾರ್ ರಚಿತ `ಕೋಟಿ ಚೆನ್ನಯ' ತುಳು ನಾಟಕವನ್ನು ಅಭಿನಯ ಮಂಟಪ ಮುಂಬಯಿ ಕಲಾವಿದರು ಪ್ರದರ್ಶಿಸಿದರು.

 

 

 

 
More News

ಸಂಸದ ಗೋಪಾಲ್ ಸಿ.ಶೆಟ್ಟಿ ಆಯೋಜಿಸಿದ `ಶ್ರೀರಾಮ ಭಂಡಾರ' ಧಾರ್ಮಿಕ ಕಾರ್ಯಕ್ರಮ
ಸಂಸದ ಗೋಪಾಲ್ ಸಿ.ಶೆಟ್ಟಿ ಆಯೋಜಿಸಿದ `ಶ್ರೀರಾಮ ಭಂಡಾರ' ಧಾರ್ಮಿಕ ಕಾರ್ಯಕ್ರಮ
ಭಾರತ್ ಬ್ಯಾಂಕ್ ; ನವೀನ್ ಕುಮಾರ್ ಗುಳಿಬೆಟ್ಟು ವೃತ್ತಿ ನಿವೃತ್ತಿ-ಬೀಳ್ಕೋಡುಗೆ
ಭಾರತ್ ಬ್ಯಾಂಕ್ ; ನವೀನ್ ಕುಮಾರ್ ಗುಳಿಬೆಟ್ಟು ವೃತ್ತಿ ನಿವೃತ್ತಿ-ಬೀಳ್ಕೋಡುಗೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

Comment Here