Thursday 18th, April 2024
canara news

ಅದಮಾರು ಮಠ ಮುಂಬಯಿ ಶಾಖೆ ; 26ನೇ ವಾರ್ಷಿಕ ರಾಮನವಮಿ ಆಚರಣೆ

Published On : 01 Apr 2023   |  Reported By : Rons Bantwal


ಶರೀರವನ್ನು ಸಾಧನೆಗೆ ಬಳಸಿಕೊಳ್ಳಬೇಕು : ಅದಮಾರು ಈಶಪ್ರಿಯಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಮಾ.30: ರಾಮನನ್ನ ತಿಳಿಸಿಕೊಡುವ ಹನುಮಾನನನ್ನು ಕೂಡಾ ನಾವು ಕೇಳಿಸಿಕೊಳ್ಳಬೇಕು. ರಾಮನ ದರ್ಶನ ಆಗಬೇಕಾದರೆ ಹನುಮಂತನ ಕೃಪೆ ಮುಖ್ಯವಾದುದು. ನಾವು ಶರೀರವನ್ನು ಸಾಧನೆಗೆ ಬಳಸಿಕೊಳ್ಳಬೇಕು. ವೈಕುಂಠ ಯಾತ್ರೆಗೆ ಹೋಗುವಂತಾಗಬೇಕು. ಅದಕ್ಕಾಗಿ ಇಂತಹ ಸಾಧನೆಗೆ ಈ ಶರೀರ ಬಳಸಿಕೊಳ್ಳಬೇಕು. ಶರೀರರಲ್ಲಿ ಸಾಧನೆ ಮಾಡಬೇಕು ಅಂದರೆ ಪ್ರಾಣ ದೇವರ ಅನುಗ್ರಹವಿರಬೇಕು. ರಾಮನ ದರ್ಶನವಾಗಲು ಪ್ರಾಣ ನಿಯಮಕನಾದ ಮುಖ್ಯಪ್ರಾಣರ ಅನುಗ್ರಹ ಬೇಕಾಗಿದೆ. ಸಾಧಕರ ಫಲ ಅವರೊಬ್ಬರಿಗಲ್ಲ ಅವರ ಪರಂಪರೆಗೆ ದೊರಕುತ್ತದೆ ಎಂದು ಉಡುಪಿ ಅದಮಾರು ಮಠದ ಕಿರಿಯ ಯತಿವರ್ಯರಾದ ಶ್ರೀ ಈಶಪ್ರಿಯ ಸ್ವಾಮಿಜಿ ತಿಳಿಸಿದರು.

ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ ಸ್ಥಾಪಿತ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ ಇಂದಿಲ್ಲಿ ಗುರುವಾರ 26ನೇ ವಾರ್ಷಿಕ ರಾಮ ನವಮಿಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ವಿಜೃಂಭನೆಯಿಂದ ಸಂಭ್ರಮಿಸಲ್ಪಟ್ಟಿದ್ದು, ಮಠದಲ್ಲಿ ಪ್ರತಿಷ್ಠಾಪಿತ ಶ್ರೀದೇವರಿಗೆ ಈಶಪ್ರಿಯ ಸ್ವಾಮಿಜಿ ಪೂಜೆ ನೆರವೇರಿಸಿ ಭಗವದ್ಭಕ್ತರನ್ನೊಳಗೊಂಡು ಶ್ರದ್ಧಾಪೂರ್ವಕವಾಗಿ ರಾಮ ನವಮಿ ಸಂಭ್ರಮಿಸಿದರು.

ಶ್ರೀ ರಾಮ ನವಮಿಯ ವಿಶೇಷ ಪ್ರವಚನಗೈದು ಭಕ್ತರಲ್ಲಿ ಭಕ್ತಿ ಬರಲು ಮತ್ತು ಸೂಕ್ತ ಪರಿಸರ ನಿರ್ಮಾಣ ಮಾಡಲು ಮೂಲ ಕಾರಣರು ವಿಭುಧೇೀಶ ತೀರರ್ಥರು. ಪ್ರವಚನಕ್ಕೆ ಸೌಂದರ್ಯವನ್ನು ತಂದುಕೊಟ್ಟವರು ಇವರು. ಇಂತಹ ಶುಭಾವಸರದಲ್ಲಿ ವಿಶ್ವಪ್ರಿಯರನ್ನು ಸ್ಮರಣೆ ಮಾಡಿಕೊಳ್ಳುವುದು ಅವಶ್ಯ. ಕ್ರಮೇಣ ಮುಂಬಯಿಯಲ್ಲಿ ವಿಶ್ವಪ್ರಿಯರು ಪ್ರವಚನವನ್ನು ಒಂದು ಯಜ್ಞದಂತೆ ನಡೆಸಿಕೊಂಡು ಬಂದಿರುವುದು ಭಕ್ತರ ಭಾಗ್ಯವಾಗಿದೆ. ಅವರ ಸಾಧನೆಯ ಫಲವಾಗಿ ಸಂಗ್ರಹ ರಾಮಾಯಣದ ಚಿಂತನೆ ಮಾಡಿಕೊಳ್ಳಲು ಸಾಧ್ಯವಾಗಿದೆ. ರಾಮನ ಆದರ್ಶಗಳನ್ನು ಅಳವಡಿಕೊಳ್ಳಲು ಇದು ಪೂರಕವಾಗಿದೆ ಎಂದು ಭಕ್ತರಿಗೆ ಮಂಗಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಅದಮಾರು ಮಠದ ಮುಂಬಯಿ ಶಾಖಾ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಶ್ರೀಪಾದರಿಗೆ ತುಳಸೀ ಹಾರವನ್ನಿತ್ತು ಸಾಂಪ್ರದಾಯಿಕವಾಗಿ ಗೌರವಿಸಿದರು. ಶ್ರೀಪಾದರು ರಾಮ ನವಮಿಯ ಸೇವಾಕರ್ತರಾದ ಪರೇಲ್ ಶ್ರೀನಿವಾಸ್ ಭಟ್, ಸುರೇಶ್ ಭಟ್ ಕುಂಟಾಡಿ, ದಿನೇಶ್ ಕೋಟ್ಯಾನ್, ಅಶೋಕ್ ದೇವಾಡಿಗ, ನಟರಾಜ್ ಪಿ.ಎಸ್, ಗಣೇಶ್ ರಾವ್ ಮತ್ತು ಗಣ್ಯರನ್ನು ಶ್ರೀಪಾದರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಮಮತಾ ರಾವ್, ಮನಿಷಾ ಮರ್ಧಿನಿ ಭಜನಾ ಮಂಡಳಿ, ವಾಗ್ದೇವಿ ಭಜನಾ ಮಂಡಳಿ ಭಜನೆಗೈದರು. ಶ್ರೀನಿವಾಸ ಭಟ್ ಮತ್ತು ಬಳಗ ಹಾಗೂ ಸಾವಿತ್ರಿ ಮತ್ತು ಬಳಗವು ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದವು. ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ದಿನೇಶ್ ಕೋಟ್ಯಾನ್ ಬಳಗವು ಸೆಕ್ಸೋಪೆÇೀನ್ ವಾದನ ನಡೆಸಿದ್ದು, ಸುಕನ್ಯಾ ಭಟ್ ಮತ್ತು ಬಳಗ, ಶ್ವೇತಾ ಪೈ ನೃತ್ಯ ಆಕಾಡೆಮಿಯ ಕಲಾವಿದರು ಭರತನಾಟ್ಯಂ ಸಾದರ ಪಡಿಸಿದರು.

ದಿನಪೂರ್ತಿಯಾಗಿಸಿ ಸಂಭ್ರಮಿಸಲ್ಪಟ್ಟ ಉತ್ಸವದಲ್ಲಿ ವಿದ್ವಾನ್ ವಿಷ್ಣು ಕಾರಂತ್ (ಶ್ರೀ ಸುಬ್ರಹ್ಮಣ್ಯ ಮಠ), ವಿಷ್ಣುತೀರ್ಥ ಸಾಲಿ (ಪೇಜಾವರ ಮಠ), ಗೋಪಾಲ ಭಟ್ ಕಿದಿಯೂರು (ಗೋಕುಲ), ಪುರೋಹಿತರುಗಳಾದ ಅಂಬೋಲಿ ಶ್ರೀಪಾದ್ ಭಟ್, ಶಂಕರ್ ಕಲ್ಯಾಣಿತ್ತಾಯ, ರಾಘವೇಂದ್ರ ಉಡುಪ, ಹರೀಶ್ ಭಟ್ ರೇರೋಡ್, ನಾರಾಯಣ ದೇಸಾಯಿ, ಜನಾರ್ದನ ಅಡಿಗ, ಆರ್.ಎಲ್ ಭಟ್, ಮುಂದಾಳುಗಳಾದ ಸರ್ವಜ್ಞ ಉಡುಪ, ಸಿಎ| ಸುಧೀರ್ ಆರ್.ಎಲ್ ಶೆಟ್ಟಿ, ಶೇಖರ್ ಜೆ.ಸಾಲ್ಯಾನ್ ಸಾಂತಕ್ರೂಜ್, ವಾಣಿ ರಾಜೇಶ್ ರಾವ್, ಮಾ| ಶ್ರೀಷ ಆರ್.ರಾವ್ ಸೇರಿದಂತೆ ಹಲವಾರು ಪುರೋಹಿತರು, ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀರಾಮನನ್ನು ಆರಾಧಿಸಿದರು.

ಬೆಳಿಗ್ಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಗಿದ್ದು ಮಧ್ಯಾಹ್ನ ಮಹಾಪೂಜೆ, ಗಜ ರಥೋತ್ಸವ, ಪಲ್ಲಕ್ಕಿ ಉತ್ಸವ, ರಾತ್ರಿ ಮಂಗಲ ಮಂತ್ರಾಕ್ಷತಾ, ರಾತ್ರಿ ಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ ಉತ್ಸವ ನೆರವೇರಿಸಿ ವಾರ್ಷಿಕ ರಾಮನವವಿ ಸಂಪನ್ನಗೊಂಡಿತು.

 

 

 
More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here