Sunday 10th, December 2023
canara news

ಭಯಂದರ್‍ನ ಜಂಜಿರೆ ಧಾರಾವಿ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಗಳ ಸಂರಕ್ಷಣೆ

Published On : 30 Mar 2023   |  Reported By : Rons Bantwal


ಮುಖ್ಯಮಂತ್ರಿ ಏಕನಾಥ್ ಶಿಂಧೆ ಜೊತೆ ಚರ್ಚೆ ನಡೆಸಿದ ರೋಹಿತ್ ಸುವರ್ಣ

ಮುಂಬಯಿ (ಆರ್‍ಬಿಐ), ಮಾ.30: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ವಿೂರಾ ಭಯಂದರ್ ಮುನ್ಸಿಪಲ್ ಕಾಪೆರ್Çರೇಷನ್‍ನ ಮಾಜಿ ಕಾಪೆರ್Çರೇಟರ್ ರೋಹಿತ್ ಎಂ.ಸುವರ್ಣ ನೇತೃತ್ವದ ನಿಯೋಗವು ಕಳೆದ ಬುಧವಾರ ಥಾಣೆ ಜಿಲ್ಲೆಯ ಭಯಂದರ್ ಪಶ್ಚಿಮದ ಚೌಕ್ ಗ್ರಾಮದಲ್ಲಿರುವ ಜಂಜಿರೆ ಧಾರಾವಿ ಕಿಲ್ಲಾವನ್ನು ಸುಂದರಗೊಳಿಸಿ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಗಳ ಸಂರಕ್ಷಣೆ ಗೊಳಿಸುವ ಕುರಿತು ಚರ್ಚೆ ನಡೆಸಿದರು.

ಥಾಣೆ ಮುನ್ಸಿಪಲ್ ಕಾಪೆರ್Çರೇಷನ್‍ನ (ಟಿಎಂಸಿ) ಮಾಜಿ ಮೇಯರ್ ಮೀನಾಕ್ಷಿ (ಪೂಜಾರಿ) ಶಿಂಧೆ ಮುಂದಾಳುತ್ವದಲ್ಲಿ ಮುಖ್ಯಮಂತ್ರಿಗಳ ಸಭೆ ಏರ್ಪಡಿಸಲಾಗಿದ್ದು ಮುಖ್ಯಮಂತ್ರಿಗಳು ಕೂಡಲೇ ಜಿಲ್ಲಾಧಿಕಾರಿ ಅಶೋಕ್ ಶಿಂಗಾರೆ ಜೊತೆ ಮಾತನಾಡಿ ಈ ಯೋಜನೆಗೆ ಸಾಕಷ್ಟು ಹಣವನ್ನು ಮೀಸಲಿಡಲು ಸೂಚಿಸಿದರು.

ಸರ್ಕಾರದ ನಗರಾಭಿವೃದ್ಧಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ, ಕಂದಾಯ ಇಲಾಖೆ, ವಿೂರಾ ಭಯಂದರ್ ಮುನ್ಸಿಪಲ್ ಕಾಪೆರ್Çರೇಷನ್, ವಿೂರಾ ಭಯಂದರ್ ಪೆÇಲೀಸ್ ಕಮಿಷನರ್, ಮಹಾರಾಷ್ಟ್ರ ಮಾರಿಟೈಮ್ ಬೋರ್ಡ್, ಸಂಬಂಧಪಟ್ಟ ಅಧಿಕಾರಿಗÀಳೊಂದಿಗೆ ಜಂಟಿ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ನಿಯೋಗಕ್ಕೆ ಭರವಸೆ ನೀಡಿರುವುದಾಗಿ ನಿಗದಿತ ಸಭೆಯ ಫಲಿತಾಂಶವು ಫಲಪ್ರದವಾಗಿಸಿದೆ ಎಂದು ಜಂಜಿರೆ ಧಾರಾವಿ ಕಿಲ್ಲಾ ರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಹಿತ್ ಸುವರ್ಣ ತಿಳಿಸಿದರು.
More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here