Friday 9th, June 2023
canara news

ಉತ್ತರ ಮುಂಬಯಿ ಸಂಸದ ಗೋಪಾಲ ಸಿ.ಶೆಟ್ಟಿ ಅವಿಭಜಿತ ದ.ಕ ಜಿಲ್ಲಾ ಪ್ರವಾಸ

Published On : 26 Apr 2023   |  Reported By : Rons Bantwal


ವಿಧಾನಸಭಾ ಚುನಾವಣಾ ಬಿಜೆಪಿ ಅಭ್ಯಥಿರ್ಗಳ ಪರ ಮತಯಾಚನೆ

ಮುಂಬಯಿ (ಆರ್‍ಬಿಐ), ಎ.26: ಭಾರತೀಯ ಜನತಾ ಪಕ್ಷದ ನೇತಾರ, ಬೃಹನ್ಮುಂಬಯಿಯಲ್ಲಿನ ತುಳು ಕನ್ನಡಿಗರಲ್ಲಿನ ಪ್ರತಿಷ್ಠಿತ ಹಿರಿಯ ರಾಜಕಾರಣಿ, 2023ನೇ ಸಾಲಿನ `ಸಂಸತ್ ರತ್ನ ಪ್ರಶಸ್ತಿ'ಗೆ ಭಾಜನರಾಗಿರುವ ಮುಂಬಯಿ ಉತ್ತರ ಲೋಕಸಭಾ (ಬೋರಿವಿಲಿ) ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಅವರು ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣಾ ಪ್ರಚಾರ ನಿಮಿತ್ತ ಎರಡು ದಿನಗಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ನಡೆಸಿದರು.

ಕಳೆದ ಮಂಗಳವಾರ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿದ್ದ ಸಂಸದ ಗೋಪಾಲ್ ಸಿ.ಶೆಟ್ಟಿ ಅವರನ್ನು ಉಭಯ ಜಿಲ್ಲಾ ಬಿಜೆಪಿ ನಾಯಕರು ಬರಮಾಡಿಕೊಂಡರು. ಬಳಿಕ ನೇರವಾಗಿ ಉಡುಪಿ ಜಿಲ್ಲೆಗೆ ಪ್ರಯಾಣ ಬೆಳೆಸಿ ರೋಡ್ ಶೋ ನಡೆಸಿ ಅಲ್ಲಿನ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯಥಿರ್üಗಳಾದ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಗುರುರಾಜ್ ಗಂಟಿಹೊಳೆ (ಬೈಂದೂರು), ಕಿರಣ್‍ಕುಮಾರ್ ಕೊಡ್ಗಿ (ಕುಂದಾಪುರ), ಯಶಪಾಲ್ ಸುವರ್ಣ (ಉಡುಪಿ), ಗುರ್ಮೆ ಸುರೇಶ್ ಶೆಟ್ಟಿ (ಕಾಪು), ವಿ.ಸುನೀಲ್‍ಕುಮಾರ್ (ಕಾರ್ಕಳ) ಪರ ಮತಯಾಚಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್, ಕಾಪು ಮಾಜಿ ಶಾಸಕ ಲಾಲಾಜಿ ಮೆಂಡನ್, ಮಟ್ಟಾರು ರತ್ನಾಕರ್ ಶೆಟ್ಟಿ, ಎರ್ಮಾಳ್ ರೋಹಿತ್ ಹೆಗ್ಡೆ, ಪ್ರವೀಣ್ ಶೆಟ್ಟಿ ವಕ್ವಾಡಿ ಸೇರಿದತೆ ಗಣ್ಯರನೇಕರು ಸಂಸದರ ಜೊತೆಯಲ್ಲಿದ್ದರು.

ಇಂದಿಲ್ಲಿ ಬುಧವಾರ ಬೆಳಿಗ್ಗೆ ಮೂಲ್ಕಿಯಲ್ಲಿನ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಭೇಟಿಗೈದು ದೇವರ ಆರ್ಶಿವಾದ ಪಡೆದು ಚುನಾವಣಾ ಪ್ರಚಾರಕ್ಕೆ ಚಾಲನೆಯನ್ನಿತ್ತರು. ಸಂಸದರ ಪ್ರವಾಸದುದ್ದಕ್ಕೂ ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು-ಕನ್ನಡಿಗರ ಅಭಿಮಾನಿ ಬಳಗದ ಮುಖ್ಯಸ್ಥ, ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಸಾಥ್ ನೀಡಿದ್ದು, ಮೂಲ್ಕಿ ಸ್ವಾಗತ ಹೊಟೇಲ್ ಸಭಾಗೃಹದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನೊಳಗೊಂಡು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಬಳಿಕ ಮೂಲ್ಕಿ ಕಾರ್ನಾಡು ಅರವಿಂದ್ ಪೂಂಜ, ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರನ್ನು ಭೇಟಿ ಮಾಡಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ನಂತರ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು..

ಸಂಸದರ ಭೇಟಿಯಲ್ಲಿ ಬಂಟ್ವಾಳದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮೂಡಬಿದ್ರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಭುನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ಸುಭಾಷ್ ಶೆಟ್ಟಿ, ಸತೀಶ್ ಅಂಚನ್, ಕೇಶವ ಕರ್ಕೇರ, ರಂಗನಾಥ್ ಶೆಟ್ಟಿ, ಮನೋಹರ್ ಶೆಟ್ಟಿ , ಮುರಳಿದಾರ್ ಭಂಡಾರಿ, ಅಶೋಕ ಶೆಟ್ಟಿ, ಚರಣ್ ಶೆಟ್ಟಿ, ಚೇತನ್ ಶೆಟ್ಟಿ, ರಾಜೇಶ್ ಶೆಟ್ಟಿ, ನವೀನ್ ಶೆಟ್ಟಿ, ಸುಧೀರ್ ಶೆಟ್ಟಿ, ಐಕಳ ದಯಾನಂದ್ ಶೆಟ್ಟಿ, ದಿವಾಕರ್ ಸಾಮಾನಿ, ವಿನೋದ್ ಸಾಲಿಯಾನ್ ಬೆಳ್ಳಾಯರು, ವಿನೋದ್ ಬೊಳ್ಳೂರು, ಹರ್ಷ ರಾಜ್ ಶೆಟ್ಟಿ , ಕಿಶೋರ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ದ.ಕ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಭಾಗೀರಥಿü ಮುರುಲ್ಯ (ಸುಳ್ಯ), ಆಶಾ ತಿಮ್ಮಪ್ಪ (ಪುತ್ತೂರು), ಹರೀಶ್ ಪೂಂಜಾ (ಬೆಳ್ತಂಗಡಿ), ಉಮಾನಾಥ ಕೋಟ್ಯಾನ್ (ಮೂಡಬಿದ್ರೆ), ಉಳೆಪಾಡಿ ರಾಜೇಶ್ ನಾೈಕ್ (ಬಂಟ್ವಾಳ), ಸತೀಶ್ ಕುಂಪಲ (ಮಂಗಳೂರು-ಉಳ್ಳಾಲ), ವೇದವ್ಯಾಸ ಕಾಮತ್ (ಮಂಗಳೂರು ದಕ್ಷಿಣ), ಡಾ| ಭರತ್ ವೈ.ಶೆಟ್ಟಿ (ಮಂಗಳೂರು ಉತ್ತರ) ಪರ ಮತಯಾಚಿಸಿದರು.




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here