Thursday 25th, April 2024
canara news

ಮೇನಾಲ ಕಾಲೋನಿ-ಜಲಧರ ಕಾಲನಿಗಳ ಸೃಷ್ಟಿಕರ್ತ-ಅದಮ್ಯ ಚೇತನ

Published On : 06 May 2023   |  Reported By : Rons Bantwal


ಮರೆಯಾದ ಕರ್ನಾಟಕ ಕರಾವಳಿಯ ಮೇನಾಲದ ಮಾಣಿಕ್ಯ ಜಲಧರ ಶೆಟ್ಟಿ

ಮುಂಬಯಿ (ಆರ್‍ಬಿಐ), ಮೇ.06: ಜೀವನದಲ್ಲಿ ನಾವು ದುಃಖದಲ್ಲಿದ್ದಾಗ ಕರೆಯದೆ ಹೋಗಬೇಕು. ಸಂತೋಷಕ್ಕೆ ಕರೆದರೆ ಮಾತ್ರ ಹೋಗಬೇಕು. ಕಷ್ಟಕ್ಕೆ ಕೇಳದೆ ಕೊಡಬೇಕು. ಇಷ್ಟಕ್ಕೆ ಕೇಳಿದರಷ್ಟೇ ಕೊಡಬೇಕು. ಇದೆಯೆಂದು ತೋರಿಸ ಬಾರದು. ಇಲ್ಲವೆಂದು ಸಾರಲೂ ಬಾರದು. ಇದ್ದೂ ಇಲ್ಲದಂತೆ ಇರಬೇಕು. ಸತ್ತರೂ ಬದುಕಿದಂತಿರಬೇಕು ಎಬಂತೆ ಬದುಕಿನಲ್ಲಿ ನುಡಿದಂತೆ ನಡೆದು ಬದುಕಿದವರು ಮೇನಾಲ ಎಳ್ನಾಡ್‍ಗುತ್ತು ಜಲಧರ ಶೆಟ್ಟಿ.

ನಾವು ಯಾರದ್ದೋ ಅಭಿಮಾನಿಗಳಾಗುವ ಮೊದಲು ನಮ್ಮೊಳಗಿನ ಒಳ್ಳೆಯತನದ ಅಭಿಮಾನಿಗಳು ಆಗಬೇಕು ಅಂತಹ ಅಭಿಮಾನ ನನಗೆ ಅವರಲ್ಲಿದೆ. ನಾವು ಯಾರದ್ದೋ ಗುಲಾಮರಾಗುವ ಮೊದಲು ನಮ್ಮೊಳಗಿನ ಶ್ರದ್ದೆಗೆ, ಭಕ್ತಿಗೆ ಗುಲಾಮರಾಗಬೇಕು ಅಂತಹ ಭಕ್ತಿ ನನಗೆ ಅವರ ಮೇಲಿದೆ. ಸ್ವಾತಂತ್ರ ್ಯ ಕಾಲದಲ್ಲಿ ಮಹಾತ್ಮ ಗಾಂಧಿಜೀ ಅವರಿಂದ ಪ್ರೇರಿತರಾಗಿ ಹರಿಜನ ಕಾಲನಿಯನ್ನೇ ನಿರ್ಮಿಸಿ ಕೊಟ್ಟವರು.

ತನ್ನ ಭೂಮಿ ಹಾಗೂ ಸ್ವಂತ ಖರ್ಚಿನಿಂದ ಹಲವು ಮನೆಗಳನ್ನು ನಿರ್ಮಿಸಿ ಕೊಟ್ಟವರು, ಯಾವುದೇ ಜಾತಿಯ ಪ್ರಲೋಭನೆಗೆ ಒಳಗಾಗದೆ ದೇವಸ್ಥಾನ, ಮಸೀದಿ, ಚರ್ಚ್ ಅಂತ ಬೇಧ ಭಾವನೆ ತೋರದೆ ತನ್ನ ಆಸ್ತಿಯ ಹಲವು ಭಾಗಗಳನ್ನು ದಾನ ನೀಡಿದವರು. ಕೈ ನೀಡಿ ಬಂದವರಿಗೆ ಇಲ್ಲ ಎನ್ನದೆ ತನ್ನ ಮತ್ತೊಂದು ಕೈಗೆ ತಿಳಿಯದಂತೆ ಕೊಟ್ಟು ಕಳುಹಿಸಿದವರು ಅದಕ್ಕೆ ಅವರೇ ನಿರ್ಮಿಸಿದ ಜಲಧರ ಕಾಲನಿಯೇ ಸಾಕ್ಷಿ.

"ಮರದಿಂದ ಕೆಳಬಿದ್ದ ಹೂ ಮತ್ತೆ ಅರಳುವುದಿಲ್ಲ. ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ ಅನ್ನುವಂತೆ ಜಲಧರ ಅವರು ಜಗವ ತೊರೆದರೂ ಕೂಡ ಅವರು ಬಿಟ್ಟು ಹೋದ ಬೇರು ಗಟ್ಟಿಯಾಗಿದೆ ಅನ್ನೋದನ್ನು ಅವರ ಪತ್ನಿ ಮತ್ತು ಮಕ್ಕಳು ಆ ವಿಶ್ವಾಸದ ಸೆಲೆಯನ್ನು ತುಂಬಿದೆ.

21.08.1937 ರಂದು ಜನಿಸಿ ಆತ್ಮವಿಶ್ವಾಸ, ನಂಬಿಕೆ, ಧೈರ್ಯದಿಂದ ಬದುಕಿ ಕಳೆದ ಶುಕ್ರವಾರ 05.05,2023 ರಂದು ತನ್ನ ಈ ಲೋಕದ ಯಾತ್ರೆ ಮುಗಿಸಿ ಸ್ವರ್ಗ ಸೇರಿದ ಜಲಧರ ಶೆಟ್ಟಿ ಅವರ ಬದುಕು ಒಂದು ನಿಜ ಪ್ರೇರಣೆ. ಭೂಮಿಯ ಮೇಲೆ ಯಾರೇನು? ಸಾವಿರಾರು ವರ್ಷ ದೈಹಿಕವಾಗಿ ಬದುಕುವುದಿಲ್ಲ. ಹುಟ್ಟಿದವರಿಗೆಲ್ಲ ಸಾವು ಕಟ್ಟಿಟ್ಟದ್ದೇ. ಸಾವಿನ ಮುಂದೆ ಬಡವ, ಕೃಷಿಕ, ಕೂಲಿಕಾರ, ವ್ಯಾಪಾರಿ, ಶ್ರೀಮಂತ, ಅಧಿಕಾರಿ, ಮಂತ್ರಿ, ಗುರು, ಜಗದ್ಗುರು ಎನ್ನುವ ಅಂತರವಿಲ್ಲ. ಪ್ರತಿಯೊಬ್ಬರೂ ಒಂದಿಲ್ಲೊಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು.

ಹಾಗೆ ಹೋಗುವ ಮುನ್ನ ಏನನ್ನು ಬಿಟ್ಟು ಹೋಗಬೇಕು ಎನ್ನುವ ಅರಿವಿರಬೇಕು. ಬಿಟ್ಟು ಹೋಗಬೇಕಾದ್ದು ವ್ಯಕ್ತಿಗಳಿಸಿದ ಸಂಪತ್ತು, ಭೂಮಿ, ಮನೆ, ವಾಹನ ಇತ್ಯಾದಿ ಬಾಹ್ಯ ವಸ್ತುಗಳನ್ನಲ್ಲ ಬದಲಾಗಿ ಎಷ್ಟು ಜನರ ನೋವು ನಿವಾರಿಸಿದ, ಎಷ್ಟು ಜನರಿಗೆ ಆದರ್ಶ ಪಥ ತೋರಿಸಿದ, ಎಷ್ಟು ಜನರ ಕಣ್ಣೀರು ಒರೆಸಿದ, ಏನೆಲ್ಲ ಸಮಾಜಮುಖಿ ಕಾರ್ಯಗಳನ್ನು ಮಾಡಿದ ಎನ್ನುವುದರ ಮೂಲಕ ಆತ ಸತ್ತರೂ ಬದುಕಲು ಸಾಧ್ಯ. ಹಾಗೆಯೇ ಬದುಕಿದವರು ಮೇನಾಲ ಎಳ್ನಾಡ್ ಗುತ್ತು ಜಲಧರ ಶೆಟ್ಟಿ ಯವರು. ಇವರ ಧರ್ಮಪತ್ನಿ ದೆಬ್ಬೇಲಿ ಗುತ್ತು ಸರೋಜಿನಿ ಶೆಟ್ಟಿ ಮತ್ತು ಮಕ್ಕಳಾದ ಭಾರತಿ , ಆರತಿ , ಮಗ ಕಿಶನ್ ಶೆಟ್ಟಿ ಹಾಗೂ ಸೊಸೆ, ಅಳಿಯಂದಿರು ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

ಕಷ್ಟ ಸುಖಗಳ ನಡುವೆ ಸಾರ್ಥಕ ಜೀವನದ 86 ವರ್ಷ ಬದುಕಿ "ಮೇನಾಲದ ಮಾಣಿಕ್ಯವಾಗಿ" ಇತರರಿಗೂ ಮಾದರಿಯಾಗಿ , ಇಂದು ಬದುಕ ಕೊಂಡಿ ಕಳಚಿ ಮರೆಯಾಗಿದ್ದೀರಿ. ದೇವರು ನಿಮಗೆ ಸ್ವರ್ಗದ ಬಾಗಿಲು ತೆರೆದಿಡಲಿ..! ಪ್ರೀತಿಯ ಕರುಣಿಸಿ ಅಗಲಿದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುವೆ ಎಂದು ಭಾವನಾತ್ಮಕವಾಗಿ ಹಿರಿಯ ಲೇಖಕ ಅಡ್ಯಾರ್ ದಿವಾಕರ ಶೆಟ್ಟಿ ತಿಳಿಸಿದ್ದಾರೆ.

ಸುಧಾರಣೆಯ ಹರಿಕಾರ, ಗ್ರಾಮೀಣ ಜನತೆಯ ಬದುಕನ್ನು ಚಿಗುರಿಸಿ ಅವರ ಬಾಳ ಉಗಮಕ್ಕೆ ಕಾರಣೀಭೂತರಾದ ಜಲಧರ ಶೆಟ್ಟಿ 1969ರಲ್ಲಿ ಸಚಿವ ವಿಟ್ಲ ದಾಸ್ ಶೆಟ್ಟಿ ಅವರ ಸಹಾಯದಿಂದ ಪರಿಶಿಷ್ಟ ಪಂಗಡಕ್ಕಾಗಿ ಮೇನಾಲ ಕಾಲೋನಿ ಸ್ಥಾಪಿಸಲಾಯಿತು. 1970ರಲ್ಲಿ ಪರಿಶಿಷ್ಟ ಜಾತಿಗಾಗಿ ಜಲಧಾರ ಕಾಲೋನಿಯನ್ನು ಸ್ಥಾಪಿಸಲಾಯಿತು. ಇಂದು ಈ ಕಾಲೋನಿಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಅವರು ಸಾಲ ಮೇಳದ ಸಮಯದಲ್ಲಿ ಸಾಲ ಪಡೆಯಲು ಬೆನ್ನೆಲುಬಾಗಿದ್ದರು ಮತ್ತು ಅಂದಿನ ಸಚಿವ ಬಿ.ಜನಾರ್ಧನ ಪೂಜಾರಿ ಅವರ ಬಿಲ್‍ನೊಂದಿಗೆ ಅದನ್ನು ಕೈಚೆಲ್ಲಿದರು. ಜಲಧಾರ ಕಾಲೋನಿಯಲ್ಲಿ ಮಾರಿಯಮ್ಮ ದೇವಸ್ಥಾನ ಸ್ಥಾಪಿಸಲು ಬೆನ್ನೆಲುಬಾಗಿದ್ದರು. ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರೂವಾರಿಯಾಗಿದ್ದು ಆಡಳಿತ ಮೊಕ್ತೇಸರರಾಗಿ ಅದರ ಎಳ್ಗೆಗಾಗಿ ಅವಿರತ ಶ್ರಮ ವಹಿಸಿದವರು. ಬಂಟರ ಯಾನೆ ನಾಡವರ ಸಂಘ ಮಂಗಳೂರು ಇದರ ಸಂಚಾಲಕರಾಗಿ, ಪಂಚಲಿಂಗೇಶ್ವರ ಶಿಕ್ಷಣ ಟ್ರಸ್ಟ್‍ನ ನಿರ್ದೇಶಕರಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಸತಿಗೃಹದ ಕಿಸಾನ್ ಸೆಲ್‍ನ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅತ್ಯುತ್ತಮ ವ್ಯಕ್ತಿತ್ವದೊಂದಿಗೆ ಪ್ರಗತಿಪರ ಕೃಷಿಕರಾಗಿ, ವಾಗ್ಮಿಯಾಗಿ ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಯಾಗಿ, ರಾಜಕೀಯದ ಮುಂದಾಳುವಾಗಿ ಅವರು ಸಾಮಾಜಿಕ ಆಥಿರ್üಕ ಅಭಿವೃದ್ಧಿಯ ಎಲ್ಲಾ ಅಂಶಗಳಲ್ಲಿ ತಮ್ಮ ದಯೆಯಿಂದ ಕೊನೆಯ ವರೇಗೂ ಪುತ್ತೂರು ಪ್ರದೇಶದ ಪ್ರಧಾನವ್ಯಕ್ತಿ ಆಗಿ ಉಳಿದಿರುವುದು ನಮ್ಮ ಹಿರಿಮೆಯಾಗಿದೆ ಎಂದು ಅವರ ಸುಪುತ್ರ ಮುಂಬಯಿಯಲ್ಲಿನ ಉದ್ಯಮಿ, ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟೀಸ್ ಇದರ ನಿರ್ದೇಶಕ ಕಿಶನ್ ಜೆ.ಶೆಟ್ಟಿ ತನ್ನ ಜನಕನ ಬಗ್ಗೆ ಗೌರವದಿಂದ ಹೇಳಿಕೊಳ್ಳುತ್ತಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here